ಸಮಂತಾ ಇತ್ತೀಚೆಗೆ ತನ್ನ ಡಿವೋರ್ಸ್ ಬಗ್ಗೆ ಬೋಲ್ಡ್ ಸ್ಟೇಟ್‌ಮೆಂಟ್ ನೀಡುತ್ತಾರೆ. ಜೊತೆಗೆ ಆ ನೋವನ್ನೂ ಹಂಚಿಕೊಳ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಡಿವೋರ್ಸ್ ಬಳಿಕ ತನಗೆ ಬಂದ ಕಾಮೆಂಟ್ಸ್ ಬಗ್ಗೆ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರ ರಿಯಾಕ್ಷನ್ ಹೇಗಿದೆ ನೋಡಿ!
ಸಮಂತಾ ರುತ್ ಪ್ರಭು ಸದ್ಯ ಬಹುಬೇಡಿಕೆಯ ನಟಿ. ಮದುವೆಯ ನಂತರ ಈಕೆ ಸಿನಿಮಾರಂಗದಲ್ಲಿ ಬಹಳ ಚ್ಯೂಸಿ ಆಗಿದ್ದರು. ಆದರೂ ಆ ಟೈಮ್‌ನಲ್ಲಿ 'ಫ್ಯಾಮಿಲಿ ಮ್ಯಾನ್ ೨' ನಂಥಾ ವೆಬ್‌ಸೀರೀಸ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳೋ ಮೂಲಕ ಸುದ್ದಿಯಾದರು. ಆದರೆ ಈ ನಟಿ ತನ್ನ ಪರ್ಸನಲ್ ಲೈಫ್‌ನ ಕಹಿ ಘಟನೆಗಳನ್ನು ಮರೆತಿದ್ದು ಶೇ.೧೦೦ ರಷ್ಟು ಸಿನಿಮಾದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳೋದರ ಮೂಲಕ. ಡಿವೋರ್ಸ್ ಆದ ಆರಂಭದಲ್ಲಿ ಈಕೆಗೆ ಅನಾರೋಗ್ಯದ ಸಮಸ್ಯೆ ಕಾಡಿತು. ಮಾನಸಿಕವಾಗಿ ಬಹಳ ಖಿನ್ನರಾಗಿದ್ದರು. ಒಂದಿಷ್ಟು ಟೈಮ್ ತಗೊಂಡು ಅದರಿಂದ ಹೊರಬಂದು ಸಿನಿಮಾಗಳಲ್ಲಿ ಬ್ಯುಸಿ ಆಗಿ ಬಿಟ್ಟರು. ಸಾಮಾನ್ಯ ಮದುವೆ ಆದ್ಮೇಲೆ ನಟಿಯರಿಗೆ ಬೇಡಿಕೆ ಕಡಿಮೆ ಆಗುತ್ತೆ ಅನ್ನೋ ಮಾತು ಶತಮಾನದ ಹಿಂದಿನಿಂದ ಕೇಳಿ ಬರುತ್ತಿದೆ. ಆದರೆ ಸದ್ಯಕ್ಕೆ ಅದೆಲ್ಲ ಹೋಗಿಬಿಟ್ಟಿದೆ. ಮದುವೆಯಾದ ನಟರಿಗೆ ಹೇಗೆ ಬೇಡಿಕೆ ಇದೆಯೋ ನಟಿಯರಿಗೂ ಅದೇ ರೀತಿ ಬೇಡಿಕೆ ಇದೆ. ಇರಲಿ, ಸಮಂತಾ ವಿಚಾರಕ್ಕೆ ಬಂದರೆ ಮದುವೆ ಆದ್ಮೇಲೆ ಅಲ್ಲ, ಡಿವೋರ್ಸ್‌ನ ಬಳಿಕವೂ ನಟಿಯರಿಗೆ ಬೇಡಿಕೆ ಏನೂ ಕಡಿಮೆ ಆಗಲ್ಲ ಅನ್ನೋದಕ್ಕೆ ಅವರು ಸಾಕ್ಷಿಯ ಹಾಗೆ ಕಾಣ್ತಾರೆ.
ಆರಂಭದಲ್ಲಿ ಈ ಡಿವೋರ್ಸ್ ಬಗ್ಗೆ ಇವರ ಮಾಜಿ ಪತಿ ನಾಗ ಚೈತನ್ಯ ಹಾಗೂ ಸಮಂತಾ ಫ್ಯಾನ್ಸ್ ನಡುವೆ ದೊಡ್ಡ ವಾರ್ ನಡೆದಿತ್ತು ಅಂತ ಹೇಳಬಹುದು. ಇದರಿಂದ ಮನನೊಂದು ಸಮಂತಾ ಕೋರ್ಟಿಗೆ ಹೋಗಿದ್ದೂ ನಡೆಯಿತು. ಆ ಬಳಿಕವೂ ಈ ಸಪರೇಶನ್‌ನಿಂದ ತನ್ನ ಮನಸ್ಸಿಗಾದ ಗಾಯ, ಡಿವೋರ್ಸಿಗಳ ಬಗ್ಗೆ ಸಮಾಜದಲ್ಲಿರುವ ನಿಲುವುಗಳು, ಆಕೆಯನ್ನು ಜನ ಟ್ರೀಟ್ ಮಾಡೋ ರೀತಿ ಬಗ್ಗೆ ಹೇಳುತ್ತಲೇ ಬಂದಿದ್ದರು. ಆದರೆ ಅದೆಲ್ಲ ಪರೋಕ್ಷ ರೀತಿಯಲ್ಲಿತ್ತು. ಆದರೆ ಈಗ ನೇರವಾಗಿಯೇ ಮ್ಯಾಟರ್‌ಗೆ ಬಂದಿದ್ದಾರೆ. ಕೆಲವೊಬ್ಬರ ಮಾತುಗಳು ತನ್ನ ಮನಸ್ಸಿನ ಮೇಲೆ ಮಾಡಿದ ಗಾಯಗಳ ಬಗ್ಗೆ ಈ ನಟಿ ಮಾತನಾಡಿದ್ದಾರೆ.
ಎ.ಆರ್.ರೆಹಮಾನ್ ಜೊತೆಗಿರುವ ಸಂಬಂಧವೇನು? ವಿಡಿಯೋ ಮೂಲಕ ಸ್ಪಷ್ಟಪಡಿಸಿದ ಮೋಹಿನಿ ಡೇ!
ಸಮಂತಾ ಅವರ 'ಸಿಟಾಡೆಲ್ ಹನಿಬನ್ನಿ' ವೆಬ್‌ಸೀರೀಸ್ ತಕ್ಕಮಟ್ಟಿಗೆ ಹೆಸರನ್ನಂತೂ ಮಾಡಿತು. ಆದರೆ ಇದರ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಅದರಲ್ಲೂ ಸಮಂತಾ ಬೋಲ್ಡ್‌ನೆಸ್ ಬಗ್ಗೆ ಒಂದಿಷ್ಟು ಮಂದಿ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡಿದ್ದೂ ಆಯ್ತು. ಇಲ್ಲಿ ಅಂತಲ್ಲ, 'ಫ್ಯಾಮಿಲಿ ಮ್ಯಾನ್' ಸಿನಿಮಾದಲ್ಲೂ ಸಮಂತಾ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದೇ ಇವರ ಫ್ಯಾಮಿಲಿ ಬಿರುಕಿಗೂ ಕಾರಣವಾಯ್ತು ಎಂಬಂಥಾ ಮಾತುಗಳೆಲ್ಲ ಕೇಳಿಬಂದವು. ಇರಲಿ, ಈಗ ಮ್ಯಾಟರ್ ಅದಲ್ಲ, ಸಮಂತಾ ಡಿವೋರ್ಸ್ ನಂತರ ಹೆಣ್ಮಕ್ಕಳಿಗೆ ಯಾವೆಲ್ಲ ಬಗೆಯ ಟಾರ್ಚರ್‌ಗಳು ಎದುರಾಗುತ್ತವೆ ಅನ್ನೋದರ ಬಗ್ಗೆ ಹೇಳಿದ ಮಾತು.
ಈಗ ಮಾಜಿ ಪತಿ ಕ್ಯಾರೇ ಅನ್ನದೆ ಸಮಂತಾಗೆ ಡಿವೋರ್ಸ್ ಕೊಟ್ಟ ಕೆಲವೇ ದಿನಗಳಲ್ಲಿ ಶೋಭಿತಾ ಧೂಲಿಪಾಲ ಜೊತೆಗೆ ಡೇಟಿಂಗ್ ಶುರು ಮಾಡ್ಕೊಂಡು ಬಿಟ್ರು. ಆದರೆ ಈಕೆ ಮಾತ್ರ ಬಹುಕಾಲದ ನೋವಲ್ಲೇ ಇದ್ರು. ಇದೀಗ ತನ್ನ ನೋವಿನ ಬಗ್ಗೆ ಬೋಲ್ಡ್ ಆಗಿ ಮಾತಾಡಿದ್ದಾರೆ. 'ಮದುವೆಯಿಂದ ಹೊರಬಂದ ಮೇಲೆ ನನ್ನನ್ನ ಯೂಸ್ಡ್, ಸೆಕೆಂಡ್ ಹ್ಯಾಂಡ್ ಅಂತೆಲ್ಲ ಕರೆಯುತ್ತಿದ್ದರು. ಸಾರ್ವಜನಿಕವಾಗಿ ನೋವಾಗುವ ರೀತಿ ನಡೆದುಕೊಳ್ತಾ ಇದ್ರು. ಆರಂಭದಲ್ಲಿ ಬಹಳ ನೋವನುಭವಿಸಿದೆ. ಆಮೇಲೆ ಅದರಿಂದ ಹೊರಬಂದು ಸದ್ಯ ನೆಮ್ಮದಿಯಿಂದ ಬದುಕು ಸಾಗಿಸೋದರ ಕಡೆ ಗಮನ ನೀಡ್ತಿದ್ದೀನಿ' ಅಂದಿದ್ದಾರೆ. ಸಮಂತಾ ಈ ಮಾತಿಗೆ ಬಹಳ ಮಂದಿ ರಿಯಾಕ್ಟ್ ಮಾಡಿದ್ದಾರೆ. ಆಕೆ ಅನುಭವಿಸಿದ ನೋವನ್ನು ತಾವೂ ಅನುಭವಿಸಿರೋದಾಗಿ ಕೆಲವರು ಹೇಳಿದರೆ, ಇನ್ನೂ ಕೆಲವರು ಆಕೆ ಅದ್ಭುತವಾಗಿ ಲೈಫ್ ಲೀಡ್ ಮಾಡೋದೇ ಇದರಿಂದ ಹೊರಬರುವ ಬೆಸ್ಟ್ ಉಪಾಯ ಅಂದಿದ್ದಾರೆ.
ಹೀರೋಯಿನ್ ಕೈಗೆ ಉಗಿದು ಓಡುತ್ತಿದ್ದ ಅಮೀರ್‌ಖಾನ್! ಇದ್ಯಾಕಂತೆ ಗೊತ್ತಾ?