ನಾವು ವಕ್ಫ್ ವಿರುದ್ಧ ಹೋರಾಟ ಮಾಡಿದ್ರೆ ನಿಮಗ್ಯಾಕೆ ಭಯ, ಟೆನ್ಶನ್? ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

By Ravi Janekal  |  First Published Nov 26, 2024, 4:40 PM IST

ಇಲ್ಲಿ ಯಾರೂ ಸಿಎಂ ಆಗೋಕೆ ಹೋರಾಟ ಮಾಡುತ್ತಿಲ್ಲ. ನಾವು ವಕ್ಫ್ ವಿರುದ್ಧ ಹೋರಾಟ ಮಾಡಿದ್ರೆ ನಿಮಗ್ಯಾಕೆ ಭಯ, ಟೆನ್ಶನ್ ಎಂದು ಪರೋಕ್ಷವಾಗಿ ಬಿಎಸ್ ವೈ-ವಿಜಯೇಂದ್ರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.


ಕಲಬುರಗಿ (ನ.26): ಇಲ್ಲಿ ಯಾರೂ ಸಿಎಂ ಆಗೋಕೆ ಹೋರಾಟ ಮಾಡುತ್ತಿಲ್ಲ. ನಾವು ವಕ್ಫ್ ವಿರುದ್ಧ ಹೋರಾಟ ಮಾಡಿದ್ರೆ ನಿಮಗ್ಯಾಕೆ ಭಯ, ಟೆನ್ಶನ್ ಎಂದು ಪರೋಕ್ಷವಾಗಿ ಬಿಎಸ್ ವೈ-ವಿಜಯೇಂದ್ರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಕಲಬುರಗಿಯಲ್ಲಿ ನಡೆದ ವಕ್ಫ ವಿರುದ್ಧದ ಹೋರಾಟದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ವಕ್ಪ್‌ ವಿರುದ್ಧದ ಹೋರಾಟ ಅಧಿಕಾರ, ಅಂತಸ್ತು, ಹುದ್ದೆ ಮೇಲೆ ಕಣ್ಣಿಟ್ಟು ಆರಂಭಿಸಿದ್ದಲ್ಲ. ಇಲ್ಲಿ ಹೋರಾಟದಲ್ಲಿ ಭಾಗಿಯಾಗಿರೋರು ಯಾರೂ ಸ್ವಾರ್ಥಕ್ಕಾಗಿ ಬಂದಿಲ್ಲ.ವಕ್ಪ್‌ ವಿರುದ್ಧ ಜನಜಾಗೃತಿ ಹೋರಾಟ, ಪ್ರಧಾನಿ ಬೆಂಬಲಿಸಿ ಹೋರಾಟ ಮಾಡುತ್ತಿದ್ದೇವೆ.ನಾವು ಮುಖ್ಯಮಂತ್ರಿ ಆಗುವುದಕ್ಕೋಸ್ಕರ ಹೋರಾಟ ಮಾಡುತ್ತಿಲ್ಲ. ನಾವು ವಕ್ಫ್ ವಿರುದ್ಧ ಜನ ಜಾಗೃತಿ ಗಾಗಿ ಹೋರಾಟ ಮಾಡುತ್ತಿದ್ದೇವೆ ಹೊರತು ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ. ಯಾವುದೇ ಕುಟುಂಬವನ್ನು ಮುಗಿಸಲು ನಾವು ಹೋರಾಟ ಮಾಡುತ್ತಿಲ್ಲ. 

Tap to resize

Latest Videos

ಅನುಮತಿ ರಹಿತ ಪ್ರವಾಸ: ಬಸನಗೌಡ ಪಾಟೀಲ್ ಯತ್ನಾಳ್‌ ವಿರುದ್ಧ ದೆಹಲಿಗೆ ದೂರು

ನಮ್ಮ ಟೀಂ ಇರೋರೇ ಮುಂದಿನ ಸಿಎಂ:

ಯಡಿಯೂರಪ್ಪ ಏನಾದ್ರೂ ಹೇಳಲಿ, ವಿಜಯೇಂದ್ರ ಏನಾದ್ರೂ ಹೇಳಲಿ,ಮಾಧ್ಯಮದವರು ಏನಾದ್ರೂ ಬರೆದುಕೊಳ್ಳಲಿ. ಅದಕ್ಕೆ ನಾನು ಉತ್ತರ ಕೊಡುವುದಿಲ್ಲ. ನನ್ನ ಬಗ್ಗೆ ಕಠಿಣ ಕ್ರಮ ಕೈಗೊಳ್ತೇವೆ ಅಂತಾರೆ ಯಾಕೆ ಕೈಗೊಳ್ತಿರಾ? ನಾವು ವಾಲ್ಮೀಕಿ ಹಗರಣದ ಕುರಿತು ಪಾದಯಾತ್ರೆ ಮಾಡೋಣ ಅಂದೇವು. ಅನೌನ ಅವರು ಬರೀ 14 ಪ್ಲಾಟ್ ಕಡೆ ಹೋದ್ರು. ನಮ್ಮ ಹೋರಾಟ ಈಗ ವಕ್ಪ್ ವಿರುದ್ದವೇ ಹೊರತು ಯಾರ ವಿರುದ್ದವೂ ಅಲ್ಲ. ನಾವು ಕಲಬುರಗಿ ಬಳಿಕ ಬೆಳಗಾವಿಯಲ್ಲಿ ಬೃಹತ್ ಹೋರಾಟ ಮುಗಿಸಿ ದೆಹಲಿಗೆ ಹೋಗ್ತೆವೆ. ಡಿ. 3-4 ರಂದು ದೆಹಲಿಗೆ ಹೋಗಿ ವಕ್ಪ್ ವಿರುದ್ದ ವರದಿ ನೀಡ್ತೇವೆ ಎಂದರು. ಇದೇ ವೇಳೆ ಮುಂದೆ ನಮ್ಮ ಈ ತಂಡದಲ್ಲಿದ್ದವರೇ ಸಿಎಂ ಆಗೋದು ಗ್ಯಾರೆಂಟಿ ಎನ್ನುವ ಮೂಲಕ ಮುಂದಿನ ಬಿಜೆಪಿ ಸಿಎಂ ಕುರಿತು ಹೊಸ ಚರ್ಚೆ ಹುಟ್ಟುಹಾಕಿದರು.

ಪ್ರಿಯಾಂಕ್ ಖರ್ಗೆ ವಿರುದ್ಧ ಯತ್ನಾಳ್ ಕಿಡಿ:

ಪ್ರಿಯಾಂಕ್ ಖರ್ಗೆ ಹೇಳ್ತಾರೆ, ತಮ್ಮ ಕುಟುಂಬ ಸುಟ್ಟವರು ಮುಸ್ಲಿಂರಲ್ಲ ರಜಾಕರು ಎಂದು. ಹಾಗಾದ್ರೆ ರಜಾಕರೇನು ಲಿಂಗಾಯತರಾ? ನಾನು ಬರೀ ರಾಹುಲ್ ಗಾಂಧಿ ಮಾತ್ರ ಭಾರಿ ಶಾಣ್ಯಾ ಅಂತ ತಿಳಿದಿದ್ದೆ. ಆದ್ರೆ ಕಲಬುರಗಿಯಲ್ಲೂ ಒಂದು ಅಂತದ್ದೇ ಚೀಜ್ ಇದೆ. ಭಾಯಿ ಭಾಯಿ ಅನ್ನಬೇಕಿರೋದು ಹಿಂದುಗಳಲ್ಲಿರುವ ಒಳ ಜಾತಿಯವರನ್ನೇ ಹೊರತು ಬೇರೆಯವರನ್ನಲ್ಲ. ಹಿಂದೂ-ಮುಸ್ಲಿಂ ಭಾಯಿ ಭಾಯಿ ಅನ್ನುವರಿಗೆ ಚಪ್ಪಲಿಲೇ ಹೊಡೆಯಿರಿ ಎಂದ ಯತ್ನಾಳ್. 

ಬಿಎಸ್‌ವೈ ಹೇಳಿಕೆಗೆ ಯತ್ನಾಳ್ ವ್ಯಂಗ್ಯ:

ಉಪಚುನಾವಣೆಯ ಸೋಲು ಎಲ್ಲರೂ ಹೊರಬೇಕು ಎಂಬ ಯಡಿಯೂರಪ್ಪ ಹೇಳಿಕೆ ಪ್ರತಿಕ್ರಿಯಿಸಿದ ಯತ್ನಾಳ್ ಅವರು, ಚುನಾವಣೆ ಗೆದ್ದರೆ ಅವರು ಹೊರಬೇಕು, ಸೋತರೆ ನಾವು ಹೊರಬೇಕು. ಹಿರಿಯರು ಹೇಳಿದ್ದಾರೆ ಅದನ್ನ ನಾವೆಲ್ಲ ಕೇಳಬೇಕು ಎಂದು ಬಿಎಸ್‌ವೈ ಹೇಳಿಕೆಗೆ ವ್ಯಂಗ್ಯವಾಡಿದರು. 

ಬಿಜೆಪಿ ಒಳಗೇ ವಕ್ಫ್‌ ಸಮರ: ಯತ್ನಾಳ್ ಬಣದ ಬೀದರ್ ಹೋರಾಟದಲ್ಲಿ ಸಂಘರ್ಷ, ಉದ್ವಿಗ್ನ ಸ್ಥಿತಿ

ನಾವ್ ಪಕ್ಷದಲ್ಲೇ ಇದ್ದೇವೆ, ಭಾರತ್ ಮಾತಾ ಕಿ ಜೈ, ನರೇಂದ್ರ ಮೋದಿಗೆ ಜೈ ಅಂತೇವೆ. ನಮ್ಮ ಮೇಲೆ ಇವರು ಏಕೆ ಕ್ರಮ ಕೈಗೊಳ್ಳುತ್ತಾರೆ ? ನೀವು ಮಾಧ್ಯಮದವರು ಹೀಗೆ ಹೇಳ್ತಿರ್ತಿರಿ. ಕಲ್ಬುರ್ಗಿಯಲ್ಲಿ ಇವತ್ತು ನಮ್ಮ ಪಕ್ಷದ ಬಹಳಷ್ಟು ಮುಖಂಡರು ನಮ್ಮ ಜೊತೆ ಬರಲಿಕ್ಕಿಲ್ಲ. ಈಗ ರಾಜಕುಮಾರ್ ಪಾಟೀಲ್ ತೇಲ್ಕೂರ ಬಂದಿದ್ದಾರೆ ಮುಂದೆ ಒಬ್ಬೊಬ್ಬರೇ ನಮ್ಮ ಜೊತೆ ಬರುತ್ತಾರೆ. ಮುಂದೆ ಟಿಕೆಟ್ ಕೊಡುವ ಅಧಿಕಾರ ನಮಗೆ ಬರುತ್ತೆ. ಹೈಕಮಾಂಡ್ ಗೆ ನನ್ನ ವಿರುದ್ದ ಪತ್ರ ಬರೆಯುತ್ತಿರುವುದು ಹೊಸದೇನೂ ಅಲ್ಲ. ನನ್ನ ವಿರುದ್ದ ನೀಡಿರುವ ದೂರುಗಳೇ ಒಂದು ರೂಮ್ ತುಂಬಿವೆ. ಆದರೆ ಏನು ಮಾಡಕ್ಕಾಗಿಲ್ಲ ಎಂದು ತಿರುಗೇಟು ನೀಡಿದರು.

click me!