Nov 25, 2024, 11:21 PM IST
ಕರ್ನಾಟಕದಲ್ಲಿ ವಕ್ಪ್ ಬಡಿದಾಟ ಜೋರಾಗಿದೆ. ಅಸಲಿ ವಿಷಯವನ್ನೇ ಬಿಟ್ಟಿರುವ ಕಾಂಗ್ರೆಸ್ ಹಾಗೂ ಬಿಜೆಪಿ, ಇದೀಗ ಯಾರು ಹೆಚ್ಚು ನೋಟಿಸ್ ಕೊಟ್ಟಿದ್ದಾರೆ ಅನ್ನೋದು ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಅಂಕಿ ಅಂಶಗಳನ್ನು ನೀಡಿದ್ದು, ಬಿಜೆಪಿ ಕಾಲದಲ್ಲೇ ಹೆಚ್ಚು ನೋಟಿಸ್ ನೀಡಲಾಗಿದೆ ಎಂದಿದೆ. ಈ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಆರೋಪ ಪ್ರತ್ಯಾರೋಪ ಮಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ನಡೆಸುತ್ತಿರುವ ವಕ್ಫ್ ಹೋರಾಟ ಸೊರಗಿದೆ. ಒಂದೆಡೆ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಂಡಾಯ ನಾಯಕರ ಹೋರಾಟ, ಇತ್ತ ಬಿವೈ ವಿಜಯೇಂದ್ರ ಬಳಗದ ನಡುವಿನ ಹೋರಾಟ ತೀವ್ರಗೊಂಡಿದೆ.