ಅಮಿತಾಭ್‌ ಸೊಂಪಾದ ಕೂದಲ ರಹಸ್ಯ ಇದಾ? ಸತ್ಯ ರಿವೀಲ್‌ ಮಾಡೇ ಬಿಟ್ಟರು ವೈದ್ಯರು!

By Suchethana D  |  First Published Nov 26, 2024, 5:01 PM IST


ಅಮಿತಾಭ್‌ ಬಚ್ಚನ್‌ ಅವರ ಸೊಂಪಾದ ಕೂದಲ ಹಿಂದೆ ಇರೋ ರಹಸ್ಯ ಎಂಥದ್ದು? ಸತ್ಯ ರಿವೀಲ್‌ ಮಾಡೇಬಿಟ್ಟರು ವೈದ್ಯರು!


ಅಮಿತಾಭ್​ ಬಚ್ಚನ್​ (Amitabh Bachchan) ಬಾಲಿವುಡ್​ ಕಂಡ ಅಪರೂಪದ ನಟ. ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದಿಂದ ಹಿಡಿದು ಈ 82ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ.  ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ.  80ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್​ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್​ ಬಚ್ಚನ್​ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಕೌನ್​ ಬನೇಗಾ ಕರೋರ್​ಪತಿ. ಇವೆಲ್ಲಾ ಅವರ ಎನರ್ಜಿಗೆ ಸಾಕ್ಷಿಯಾಗಿದೆ. ಹಾಗಿದ್ದರೆ ಅವರ ಸೋಂಪಾದ ಕೂದಲಿನ ರಹಸ್ಯ ಏನು? 

ಇವರು ಯಾವ ಎಣ್ಣೆ ಉಪಯೋಗಿಸುತ್ತಾರೆ? ಇದು ರಿಯಲ್ಲಾ, ರೀಲಾ, ವಿಗ್ಗಾ, ಟೋಪನ್ನಾ, ಹೇರ್‍‌ ಪ್ಲಾಂಟೇಷನ್ನಾ... ಹೀಗೆ ಹಲವಾರು ಮಂದಿ ನಟನೆ ಕೂದಲಿನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇದೀಗ ಸತ್ಯ ಕೊನೆಗೂ ರಿವೀಲ್‌ ಆಗಿದೆ. ತಲೆಗೂದಲಿನ ಕಸಿ ತಜ್ಞ  ಡಾ. ಗೌರಂಗ್ ಕೃಷ್ಣ ಈಗ ಅಮಿತಾಭ್‌ ಅವರ ಸೋಂಪಾದ ಕೂದಲಿನ ರಹಸ್ಯವನ್ನು ಬಯಲು ಮಾಡಿದ್ದಾರೆ. ಅಂದಹಾಗೆ ಅಮಿತಾಭ್ ಅವರ ತಲೆಯ ಮೇಲೆ ಇರುವುದು ಅಸಲಿ ಕೂದಲು ಅಲ್ಲ. ಅವರಿಗೆ ನೆತ್ತಿಯ ಮೇಲೆ ಕೂದಲು ಇಲ್ಲ. ಆದರೆ ಅವರದ್ದು  ಹೇರ್ ಪ್ಯಾಚ್‌. ಇಷ್ಟು ದಟ್ಟವಾಗಿರುವ ಕೂದಲು  ಶಸ್ತ್ರ ಚಿಕಿತ್ಸೆ ಅಥವಾ  ಕೂದಲು ಕಸಿ ಮಾಡುವುದರಿಂದ ಬರುವುದಿಲ್ಲ. ಇದು ಹೇರ್‍‌ ಪ್ಯಾಚ್‌ ಅಂದರೆ  ವಿಗ್ ಪ್ಯಾಚ್‌ನಿಂದ ಮಾತ್ರ ಬರಲು ಸಾಧ್ಯ ಎನ್ನುವ ಸತ್ಯವನ್ನು ವೈದ್ಯರು ರಿವೀಲ್ ಮಾಡಿದ್ದಾರೆ.

Latest Videos

undefined

ಅನುಷಾ ಜೊತೆಗಿನ ಸಂಬಂಧ ಎಂಥದ್ದು? ಮದುವೆ ಮುರಿದು ಬಿದ್ದದ್ದು ಯಾಕೆ? ಬಿಗ್‌ಬಾಸ್‌ ಧರ್ಮ ಓಪನ್ ಮಾತು ಕೇಳಿ...
 
ಬಹುತೇಕ ಮಂದಿ ವಿಗ್‌ ಪ್ಯಾಚ್‌ಗೆ ಹೋಗುವ ಕಾರಣವನ್ನೂ ಅವರು ನೀಡಿದ್ದಾರೆ. ಕೂದಲು ಉದುರಿದರೆ ಅಥವಾ ಸಂಪೂರ್ಣ ಬೆಳವಣಿಗೆ ನಿಂತುಹೋದರೆ   ಕಸಿ ಮಾಡಿಸಿಕೊಳ್ಳುವ ಜನರು ಇದ್ದಾರೆ. ಆದರೆ ಇದಕ್ಕೆ ಹಲವರು ಒಪ್ಪುವುದಿಲ್ಲ ಎಂದಿರುವ ವೈದ್ಯರು ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಆಪರೇಷನ್‌ಗೆ ಕೆಲವರು  ವೈದ್ಯಕೀಯವಾಗಿ ಫಿಟ್ ಆಗಿರುವುದಿಲ್ಲ, ಮತ್ತೆ ಕೆಲವರು ಇದಕ್ಕೆ ಅಂಜುತ್ತಾರೆ. ಕನಿಷ್ಠ ಮೂರು ದಿನವಾದರೂ ಸಂಪೂರ್ಣ ರಜೆಯ ಮೇಲೆ ಇರಬೇಕು ಎನ್ನುವ ಕಾರಣಕ್ಕೆ ಟೈಮ್‌ ಅಡ್ಜಸ್ಟ್‌ ಮಾಡಿಕೊಳ್ಳಲು ಕೆಲವರು ಹಿಂದೇಟು ಹಾಕುತ್ತಾರೆ. ಇದಕ್ಕಿಂತ ಮುಖ್ಯವಾಗಿ ಈಗ ಎಲ್ಲರಿಗೂ ಇನ್‌ಸ್ಟೆಂಟ್‌ ಬೇಕು. ಯಾವುದೇ ಕೆಲಸ ಮಾಡಿದ ತಕ್ಷಣ ರಿಸಲ್ಟ್‌ ಬೇಕು. ಶಸ್ತ್ರಚಿಕಿತ್ಸೆ ಹಾಗೆ ಆಗುವುದಿಲ್ಲ. ಆದ್ದರಿಂದ ವಿಗ್‌ ಪ್ಯಾಚ್‌ಗೆ ಮೊರೆ ಹೋಗುತ್ತಾರೆ ಎಂದು ಅವರು ತಿಳಿಸಿದ್ದಾರೆ.
 
 ಅಂದಹಾಗೆ ಕೂದಲು ಬರುವುದಕ್ಕೆ ನಾನು ಶಸ್ತ್ರಚಿಕತ್ಸೆಗಳು ಇವೆ. ಅಡೆನೊಸಿನ್, ಅಡೆನೊಸಿನ್, ಲೇಸರ್ ಲೈಟ್ ಥೆರಪಿ ಹೀಗೆ ಹಲವಾರು ಬಗೆಗಳು ಇವೆ. ಈ ಎಲ್ಲಾ ಆಪರೇಷನ್‌ ಮಾಡಿಸಿದರೆ,  ಕೂದಲು ಉದುರುವಿಕೆಯನ್ನು ನಿಧಾನವಾಗಿ,  ಹೊಸ ಕೂದಲು ವೇಗದಲ್ಲಿ ಬರುತ್ತವೆ. ಆದರೆ ಹೇರ್‍‌, ವಿಗ್‌ ಪ್ಯಾಚ್‌ಗಳಿಂದ ಕೂಡಲೇ ಸೋಂಪಾದ ಕೂದಲು ಪಡೆಯಬಹುದು. ಹೇರ್ ಪ್ಯಾಚ್ ಎಂದರೆ, ಎಲ್ಲಿ ಕೂದಲು ಉದುರಿವೆಯೋ  ಆ ಸ್ಥಳದಲ್ಲಿ ಪ್ಯಾಚ್ ಮಾಡಲಾಗುತ್ತದೆ.  

ಮೇಕಪ್ಪೂ ಇಲ್ದೇ, ಎಣ್ಣೆ ತಲೆಯಲ್ಲೇ, ಮನೆ ಬಟ್ಟೆಯಲ್ಲೇ ಫಿಲ್ಮ್‌ಫೇರ್ ಪ್ರಶಸ್ತಿ ಸ್ವೀಕರಿಸಿದ ನಟಿ! ವಿಡಿಯೋ ವೈರಲ್‌

 
 
 
 
 
 
 
 
 
 
 
 
 
 
 

A post shared by Podcast Pub (@podcast.pub)

click me!