Cine World

ಬಾಲಿವುಡ್‌ನ 10 ಖದರ್ ಖಳನಾಯಕಿಯರು

ಕಳೆದ ಕೆಲವು ವರ್ಷಗಳಲ್ಲಿ, ಮಹಿಳಾ ಖಳನಾಯಕಿ ಪಾತ್ರಗಳುಳ್ಳ ಚಿತ್ರಗಳು ಭಾರಿ ಯಶಸ್ಸು ಕಂಡಿವೆ. 10 ನಟಿಯರು ತಮ್ಮ ನಕಾರಾತ್ಮಕ ಪಾತ್ರಗಳಿಂದಲೂ ಪ್ರಶಂಸೆ ಗಳಿಸಿದ್ದಾರೆ.

ಕಾಜೋಲ್, ಚಿತ್ರ: ಗುಪ್ತ್

ಬಾಬಿ ಡಿಯೋಲ್ ನಟನೆಯ 'ಗುಪ್ತ್' ಚಿತ್ರದಲ್ಲಿ ಕಾಜೋಲ್ ಈಶಾ ದೀವಾನ್ ಎಂಬ ಸರಣಿ ಕೊಲೆಗಾರ್ತಿಯ ಪಾತ್ರ ನಿರ್ವಹಿಸಿದ್ದರು. ಈ ನಟನೆಗಾಗಿ ಅತ್ಯುತ್ತಮ ಖಳನಾಯಕಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು.

ಪ್ರಿಯಾಂಕಾ ಚೋಪ್ರಾ, ಚಿತ್ರ: ಐತ್ರಾಜ್

ಪ್ರಿಯಾಂಕಾ ಚೋಪ್ರಾ 'ಐತ್ರಾಜ್' ಚಿತ್ರದಲ್ಲಿ ತಮ್ಮ ಮಹತ್ವಾಕಾಂಕ್ಷೆಗಾಗಿ ಏನು ಬೇಕಾದರೂ ಮಾಡಬಲ್ಲ ವಿಲನ್ ಆಗಿ ಒಳ್ಳೆಯ ನಟನೆ ಮಾಡಿದ್ದರು  ಸೋನಿಯಾ ರಾಯ್ ಪಾತ್ರ ಹೆಸರಿನ ಪಾತ್ರ ಅದಾಗಿತ್ತು.

ಕೊಂಕಣಾ ಸೇನ್ ಶರ್ಮಾ, ಚಿತ್ರ: ಏಕ್ ಥೀ ಡಾನ್

ಡಾನ್ ಪಾತ್ರದಲ್ಲಿ ಕೊಂಕಣಾ ಸೇನ್ ಶರ್ಮಾ ಪರದೆಯ ಮೇಲೆ ಭಯ ಹುಟ್ಟಿಸಿದರು. ಚಿತ್ರದಲ್ಲಿ ಅವರ ಪಾತ್ರವು ತುಂಬಾ ಭಯಾನಕ ಮತ್ತು ನಿಗೂಢವಾಗಿತ್ತು.

ಶ್ರೀದೇವಿ, ಚಿತ್ರ: ಜುದಾಯಿ & ಲಾಡ್ಲಾ

ಶ್ರೀದೇವಿ 'ಲಾಡ್ಲಾ' ಮತ್ತು 'ಜುದಾಯಿ' ಚಿತ್ರಗಳಲ್ಲಿ ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎರಡೂ ಚಿತ್ರಗಳು ಸೂಪರ್‌ಹಿಟ್ ಆಗಿದ್ದವು, ಇದರಲ್ಲಿ ಅವರ ನಟನೆಗೆ ಒಳ್ಳೆ ಪ್ರಶಂಸೆ ವ್ಯಕ್ತವಾಗಿತ್ತು.

ತಬು, ಚಿತ್ರ: ಅಂಧಾಧುನ್

ತಬು 'ಅಂಧಾಧುನ್' ನಲ್ಲಿ ಸಿಮಿ ಸಿನ್ಹಾ ಪಾತ್ರ ನಿರ್ವಹಿಸಿದರು, ನಿಗೂಢ ಮಹಿಳೆಯ ಈ ನಕಾರಾತ್ಮಕ ಪಾತ್ರವು ಪ್ರೇಕ್ಷಕರ ಸೆಳೆಯಿತು. 'ದೃಶ್ಯಂ' ಸಿರೀಸ್‌ನಲ್ಲು ಅವರು ನಕಾರಾತ್ಮಕ ಪಾತ್ರ ಮಾಡಿದ್ದಾರೆ.

ಉರ್ಮಿಳಾ ಮಾತೋಂಡ್ಕರ್, ಚಿತ್ರ: ಕೌನ್

ಉರ್ಮಿಳಾ 'ಕೌನ್' ಚಿತ್ರದಲ್ಲಿ ಸೈಕೋ ಕಿಲ್ಲರ್ ಪಾತ್ರ ನಿರ್ವಹಿಸಿದ್ದರು, ಸಿನಿಮಾದಲ್ಲಿ ಅವರು ಹಲವಾರು ಕೊಲೆಗಳನ್ನು ಮಾಡುತ್ತಾರೆ.

ಅನು ಅಗರ್ವಾಲ್, ಚಿತ್ರ: ಕ್ಲಾಸಿಕ್

ಅನು ಅಗರ್ವಾಲ್ 'ಆಶಿಕಿ' ಚಿತ್ರದಿಂದ ಭಾರಿ ಜನಪ್ರಿಯತೆ ಗಳಿಸಿದ್ದರು. 'ಕ್ಲಾಸಿಕ್' ಚಿತ್ರದಲ್ಲಿ ಅವರು ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ವಿದ್ಯಾ ಬಾಲನ್, ಚಿತ್ರ: ಇಷ್ಕಿಯಾ

ವಿದ್ಯಾ ಬಾಲನ್ 'ಇಷ್ಕಿಯಾ' ಚಿತ್ರದಲ್ಲಿ ಕೃಷ್ಣ ಎಂಬ ಖದರ್ ಮಹಿಳೆಯ ಪಾತ್ರ ನಿರ್ವಹಿಸಿದರು, ಅವರು ಕೈಯಲ್ಲಿ ಕುಡುಗೋಲು ಹಿಡಿದು ಯಾರನ್ನಾದರೂ ಕೊಲ್ಲಲು ಓಡುವ ದೃಶ್ಯವಿದೆ.

ಸಿಮಿ ಗರೆವಾಲ್, ಚಿತ್ರ: ಕರ್ಜ್

ಸಿಮಿ ಗರೆವಾಲ್ ಸುಭಾಷ್ ಘೈ ಅವರ ಚಿತ್ರದಲ್ಲಿ ಕಾಮಿನಿ ಪಾತ್ರ ನಿರ್ವಹಿಸಿದ್ದರು, ಅವರು ತಮ್ಮ ಗಂಡನನ್ನು ಕೊಲ್ಲುವ ದೃಶ್ಯವಿದೆ.

ಸುರ್ವೀನ್ ಚಾವ್ಲಾ, ಚಿತ್ರ: ಹೇಟ್ ಸ್ಟೋರಿ 2

ಖಳನಾಯಕಿಯ ಪಾತ್ರವು ಸುರ್ವೀನ್ ಚಾವ್ಲಾ ಅವರಿಗೆ ಹೊಸ ಗುರುತನ್ನು ನೀಡಿತು.

ಶಾರುಖ್ ಖಾನ್ ಚಿತ್ರಕ್ಕೆ ₹1 ಕೋಟಿಯೂ ಬರಲಿಲ್ಲ; ತೋಪೆದ್ದು ಹೋದ ನಿರ್ಮಾಪಕ!

ನಿರ್ದೇಶಕರ ವೃತ್ತಿಜೀವನವನ್ನೇ ಕೊನೆಗೊಳಿಸಿದ ತಾಜ್ ಮಹಲ್ !

ರವೀನಾ ಟಂಡನ್ ಪುತ್ರಿಯ ಹೊಸ ಫೋಟೋ ಸಖತ್ ವೈರಲ್

ಮೈಸೂರಿನ ಮಾಜಿ ಸೊಸೆ ಬರ್ತಡೇ; ಇಲ್ಲಿವೆ ನೋಡಿ ತರಹೇವಾರಿ ಪೋಷಾಕು!