ಎ.ಆರ್.ರೆಹಮಾನ್‌ ಜೊತೆಗಿರುವ ಸಂಬಂಧವೇನು? ವಿಡಿಯೋ ಮೂಲಕ ಸ್ಪಷ್ಟಪಡಿಸಿದ ಮೋಹಿನಿ ಡೇ!

By Suchethana D  |  First Published Nov 26, 2024, 8:38 AM IST

 ಎ.ಆರ್.ರೆಹಮಾನ್‌ ಅವರ   ಮ್ಯೂಸಿಕ್‌ ಟೀಮ್‌ನಲ್ಲಿ ಬಾಸಿಸ್ಟ್‌ ಆಗಿದ್ದ ಮೋಹಿನಿ ಡೇ ನೇರಪ್ರಸಾರದಲ್ಲಿ ಬಂದು ತಮ್ಮ ಮತ್ತು ರೆಹಮಾನ್ ಅವರ ಸಂಬಂಧ ಏನು ಎಂಬ ಬಗ್ಗೆ ತಿಳಿಸಿದ್ದಾರೆ. ಅವರು ಹೇಳಿದ್ದೇನು? 
 


ಸಂಗೀತ ಮಾಂತ್ರಿಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್‌ ರೆಹಮಾನ್ ಹಾಗೂ ಅವರ ಪತ್ನಿ ಸಾಯಿರಾ ಬಾನು ಇತ್ತ  29 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದ ಮಧ್ಯೆಯೇ, ಅತ್ತ ರೆಹಮಾನ್‌ ಅವರ ಮ್ಯೂಸಿಕ್‌ ಟೀಮ್‌ನಲ್ಲಿ ಬಾಸಿಸ್ಟ್‌ ಆಗಿದ್ದ ಮೋಹಿನಿ ಡೇ ಕೂಡ ತನ್ನ ಗಂಡನಿಗೆ ವಿಚ್ಛೇದನ ಘೋಷಿಸಿದ್ದರು. ಮ್ಯೂಸಿಕ್‌ ಕಂಪೋಸರ್‌ ಆಗಿರುವ ಮಾರ್ಕ್‌ ಹಾರ್ಟ್ಸುಚ್‌ನಿಂದ ವಿಚ್ಛೇದನ ಪಡೆದುಕೊಂಡಿರುವುದಾಗಿ ಮೋಹಿನಿ ಡೇ ಸೋಷಿಯಲ್‌ ಮೀಡಿಯಾದಲ್ಲಿ ಘೋಷಿಸಿದ್ದರು.  ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆ ಬೇರೆ ಆಗುತ್ತಿದ್ದೇವೆ ಎಂದು ತಿಳಿಸಿದ್ದರು. ಎಆರ್‌ ರೆಹಮಾನ್‌ ಅವರಿಗೆ ಅವರ ಪತ್ನಿ ಸಾಯಿರಾ ಬಾನು ಡೈವೋರ್ಸ್‌ ನೀಡಿದ ಕೆಲವೇ ಘಂಟೆಗಳಲ್ಲಿ ಮೋಹಿನಿ ಡೇ ಈ ನಿರ್ಧಾರ ಪ್ರಕಟಿಸಿದದರಿಂದ ಇದು ಬೇರೆಯದ್ದೇ ರೀತಿಯಲ್ಲಿ ಸದ್ದು ಮಾಡುತ್ತಿದೆ. ವಿನಾ ಕಾರಣ ಸುಳ್ಳು ಸುದ್ದಿ ಹರಡಬೇಡಿ, ಹರಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರೆಹಮಾನ್ ಅವರು ಕೂಡ ಇದಾಗಲೇ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದರ ನಡುವೆಯೇ, ಮೋಹಿನಿ ಡೇ ಅವರು, ನೇರಪ್ರಸಾರದಲ್ಲಿ ಬಂದು, ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಮತ್ತು ರೆಹಮಾನ್‌ ಅವರ ಸಂಬಂಧ ಏನು ಎಂಬ ಬಗ್ಗೆ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ. ನೋಡಿ, ದಯವಿಟ್ಟು ಇಂಥ ಸುಳ್ಳು ಸುದ್ದಿಗಳನ್ನು ಹರಡಬೇಡಿ.  ಮಾಧ್ಯಮಗಳು ಈ ಎರಡೂ ಘಟನೆಗಳನ್ನು ಒಟ್ಟಿಗೇ ಸೇರಿಸಿ ಸುದ್ದಿ ಹರಡುತ್ತಿರುವುದು ಅಪರಾಧವಾಗಿದೆ.  ನಾನು ಬಾಲ್ಯದಿಂದಲೂ ರೆಹಮಾನ್‌ ಅವರ ಜೊತೆ  ಎಂಟೂವರೆ ವರ್ಷಗಳ ಕಾಲ ಕೆಸಲ ಮಾಡಿದ್ದೇನೆ. ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅಷ್ಟೇ ಅಲ್ಲದೇ ಅವರು ನನ್ನ ತಂದೆಯ ಸಮಾನ. ನನ್ನ ತಂದೆಗಿಂತ ಅವರು ಸ್ವಲ್ಪ ಚಿಕ್ಕವರು. ಆದರೂ ಅವರು ನನ್ನ ಬೆಳವಣಿಗೆಯಲ್ಲಿ ಸಹಕರಿಸಿದವರು. ತಂದೆಯ ರೂಪದವರು ಎಂದಿದ್ದಾರೆ. ಅವರ ಮಗಳಿಗೆ ನನ್ನಷ್ಟೇ ವಯಸ್ಸು ಎಂದಿದ್ದಾರೆ.

Tap to resize

Latest Videos

ಮಾಜಿ ಪತಿ ಎ.ಆರ್. ರೆಹಮಾನ್‌ ಕುರಿತು ಮೌನ ಮುರಿದ ಸಾಯಿರಾ: ದನಿ ಸಂದೇಶದಲ್ಲಿ ಹೇಳಿದ್ದೇನು?
 
ಈ ರೀತಿಯ ಭಾವನಾತ್ಮಕ ವಿಷಯಗಳ ಬಗ್ಗೆ ಜನರಿಗೆ ಗೌರವ, ಸಹಾನುಭೂತಿ  ಇಲ್ಲದಿರುವುದನ್ನು ನೋಡಿ ತುಂಬಾ ನೋವಾಗುತ್ತಿದೆ.  ಜನರ ಮನಸ್ಥಿತಿ ನೋಡಿ  ಬೇಸರವಾಗುತ್ತದೆ. ಎ.ಆರ್‍‌ ಅವರು  ದಂತಕಥೆ, ಹೆಚ್ಚಾಗಿ ನನಗೆ ತಂದೆ ಸ್ವರೂಪರು. ನಾನು ಜೀವನದಲ್ಲಿ ಅನೇಕ ರೋಲ್ ಮಾಡೆಲ್‌ಗಳನ್ನು ಹೊಂದಿದ್ದೇನೆ ಮತ್ತು ನನ್ನ ವೃತ್ತಿಜೀವನ ಮತ್ತು ಪಾಲನೆಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ಹಲವು ತಂದೆ ಸ್ವರೂಪಿಗಳು ಇದ್ದಾರೆ, ಅವರಲ್ಲಿ ಎಆರ್‍‌ ಕೂಡ ಒಬ್ಬರು ಎಂದಿದ್ದಾರೆ.  ಮಾಧ್ಯಮಗಳು ಇಂಥ ಸುಳ್ಳುಸುದ್ದಿ ಹರಡುವ ಮೂಲಕ ಒಬ್ಬ ವ್ಯಕ್ತಿಯ  ಮನಸ್ಸು ಮತ್ತು ಜೀವನದ ಮೇಲೆ ಬೀರುವ ಪ್ರಭಾವವನ್ನು ಅರ್ಥಮಾಡಿಕೊಳ್ಳುವುದಿಲ್ಲ. ದಯವಿಟ್ಟು ಸಂವೇದನಾಶೀಲರಾಗಿರಿ. ನಾನು ಯಾರಿಗೂ ಯಾವುದೇ ವಿವರಣೆಗಳನ್ನು ನೀಡಬೇಕಾಗಿರಲಿಲ್ಲ. ಆದರೆ, ಪ್ರತಿನಿತ್ಯ ಬಿತ್ತರವಾಗುತ್ತಿರುವ ಸುದ್ದಿ ನೋಡಿ ನೋವಾಗುತ್ತಿದೆ.  ದಯವಿಟ್ಟು ಸುಳ್ಳು ಹೇಳುವುದನ್ನು ನಿಲ್ಲಿಸಿ  ನಮ್ಮ ಗೌಪ್ಯತೆಯನ್ನು ಗೌರವಿಸಿ ಎಂದಿದ್ದಾರೆ ಮೋಹಿನಿ. 

ಈ ಹಿಂದೆ ಅವರು ವಿಚ್ಛೇದನ ಘೋಷಿಸಿದ್ದ ಸಂದರ್ಭದಲ್ಲಿ,  'ಭಾರವಾದ ಹೃದಯದಲ್ಲಿ ನಾನು ಹಾಗೂ ಮಾರ್ಕ್‌ ಬೇರೆ ಬೇರೆ ಆಗುತ್ತಿರುವುದನ್ನು ಘೋಷಿಸುತ್ತಿದ್ದೇವೆ. ಮೊದಲನೆಯದಾಗಿ, ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಬದ್ಧತೆ ಎನ್ನುವಂತೆ ಇದು ನಮ್ಮ ನಡುವಿನ ಪರಸ್ಪರ ಒಪ್ಪಿಗೆಯ ನಿರ್ಧಾರವಾಗಿದೆ. ನಾವಿಬ್ಬರೂ ಅದ್ಭುತ ಸ್ನೇಹಿತರಾಗಿ ಮುಂದುವರಿಯಲಿದ್ದೇವೆ. ಆದರೆ, ನಾವು ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತೇವೆ ಮತ್ತು ಪರಸ್ಪರ ಒಪ್ಪಂದದ ಮೂಲಕ ಬೇರ್ಪಡುವುದು ಮುಂದುವರೆಯಲು ಉತ್ತಮ ಮಾರ್ಗವಾಗಿದೆ ಎಂದು ನಾವಿಬ್ಬರೂ ನಿರ್ಧರಿಸಿದ್ದೇವೆ' ಎಂದು ಬರೆದುಕೊಂಡಿದ್ದರು. ವಿಚ್ಛೇದನದ ಹೊರತಾಗಿಯೂ, ಮೋಹಿನಿ ಮತ್ತು ಮಾರ್ಕ್ ತಮ್ಮ ಅಭಿಮಾನಿಗಳಿಗೆ ಮಾಮೊಗಿ ಮತ್ತು ಮೋಹಿನಿ ಡೇ ಗ್ರೂಪ್ಸ್‌ ಸೇರಿದಂತೆ ಯೋಜನೆಗಳಲ್ಲಿ ಸಹಕರಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದರು.

ಸಿಂಗಲ್ಲೂ ಅಲ್ಲ, ರಿಲೇಷನ್‌ನಲ್ಲೂ ಇಲ್ಲ! ಮಲೈಕಾ ಅರೋರಾ ಹೊಸ ಪೋಸ್ಟ್‌ಗೆ ಫ್ಯಾನ್ಸ್‌ ಸುಸ್ತು...

click me!