ಆ ಮೂಲ, ಈ ಮೂಲ ಕೇಳಬಾರ್ದು ಎನ್ನುತ್ತಲೇ ಅಮ್ಮನ ಮಲಗುವ ಕೋಣೆ ರಹಸ್ಯ ತೆರೆದಿಟ್ಟ ವಿನೋದ್‌ ರಾಜ್!

By Suchethana D  |  First Published Nov 26, 2024, 9:50 AM IST

ನಟ ವಿನೋದ್‌ ರಾಜ್ ಅವರು   ಅಮ್ಮ ಲೀಲಾವತಿ ಅವರು ಮಲಗುವ ಕೋಣೆಯ ಪರಿಚಯ ಮಾಡಿಸುತ್ತಲೇ ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. 
 


ಹಲವಾರು ಹಿಟ್‌ ಚಿತ್ರಗಳನ್ನು ನೀಡಿ ಒಂದು ಕಾಲದಲ್ಲಿ ಫೇಮಸ್‌ ಆಗಿದ್ದ  ನಟ ವಿನೋದ್‌ ರಾಜ್  ಅವರು ಈಗ ಒಂಟಿಯಾಗಿದ್ದಾರೆ. ಅಮ್ಮ ಲೀಲಾವತಿಯವರ ಸಾವಿನ ಬಳಿಕ ಒಂಟಿಯಾಗಿ ಮನೆಯಲ್ಲಿ ನೆಲೆಸಿದ್ದಾರೆ. ಲೀಲಾವತಿ ಅವರು ಮಲಗುವ ಕೋಣೆಯನ್ನು ಯಥಾವತ್ತಾಗಿ ಅದೇ ರೀತಿಯಲ್ಲಿ ಇರಿಸಿ, ದೇವರ ಮನೆಯಲ್ಲಿ ಅಮ್ಮನ ಫೋಟೋಗೆ ಅಗ್ರಸ್ಥಾನ ನೀಡಿ ದಿನವೂ ಪೂಜೆ ಸಲ್ಲಿಸುತ್ತಿದ್ದಾರೆ. ಅಷ್ಟು ಖ್ಯಾತ ನಟಿಯಾಗಿದ್ದರೂ, ಸಾಕಷ್ಟು ಆಸ್ತಿ ಇದ್ದರೂ, ಚಿಕ್ಕದೊಂದು ಮಂಚದಲ್ಲಿ ಲೀಲಾವತಿ ಅವರು ಕೊನೆಯವರೆಗೂ ಮಲಗುತ್ತಿದ್ದ ಅಚ್ಚರಿಯ ವಿಷಯವನ್ನೂ ಇದೇ ವೇಳೆ ವಿನೋದ್‌ ರಾಜ್‌ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೇ ಲೀಲಾವತಿಯವರು ಅನಾರೋಗ್ಯಪೀಡಿತರಾಗಿದ್ದ ಸಂದರ್ಭದಲ್ಲಿ ತಂದಿಟ್ಟ ಪಾದುಕೆ, ಕಮಂಡಲ ಎಲ್ಲವನ್ನೂ ಲೀಲಾವತಿ ಅವರು ಮಲಗುತ್ತಿದ್ದ ಮಂಚದ ಮೇಲೆಯೇ ಇರಿಸಿ, ಅದನ್ನೇ ನೋಡುತ್ತಾ ದಿನವೂ ಕಾಲ ಕಳೆಯುತ್ತಿದ್ದಾರೆ. ಅವರ ಕೋಣೆಯಲ್ಲಿ ಡಾ.ರಾಜ್‌ಕುಮಾರ್‍‌ ಜೊತೆ ಲೀಲಾವತಿ ಇದ್ದು, ಅವರು ಶಿಶುವಾಗಿದ್ದ ವಿನೋದ್‌ ರಾಜ್‌ ಅವರನ್ನು ಹಿಡಿದುಕೊಂಡಿರುವುದನ್ನು ನೋಡಬಹುದು.
 

ಕಲಾ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ವಿನೋದ್‌ ರಾಜ್ ತಮ್ಮ ಬದುಕಿನ ಕೆಲವು ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಲೀಲಾವತಿ ಅವರ ಪತಿ ಯಾರು ಎಂಬ ಬಗ್ಗೆ ಚಿತ್ರರಂಗದಲ್ಲಿ ಮೊದಲಿನಿಂದಲೂ ಸುದ್ದಿಗಳು ಹರಡುತ್ತಲೇ ಇದೆ. ವಿನೋದ್‌ ರಾಜ್ ಅವರಿಗೂ ಅಪ್ಪನ ಬಗ್ಗೆ ಪ್ರಶ್ನೆಗಳ ಸುರಿಮಳೆಯೇ ಆಗುತ್ತಿರುವುದು ಹೊಸ ವಿಷಯವೇನಲ್ಲ. ಈ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ವಿನೋದ್‌ ರಾಜ್. ನದಿ ಮೂಲ, ಋಷಿ ಮೂಲ, ಹೆಣ್ಣಿನ ಮೂಲ ಹುಡುಕಬಾರದು ಅಂತಾರೆ. ಪದೇ ಪದೇ ಇಂಥ ಪ್ರಶ್ನೆಗಳನ್ನು ಎದುರಿಸಿದ್ದೇನೆ. ನನ್ನ ಮೂಲ ಯಾವುದು ಎನ್ನವುದು ಮುಖ್ಯವಲ್ಲ, ಬದಲಿಗೆ ನಾನು ಯಾವ ರೀತಿಯಲ್ಲಿ ಸಮಾಜಮುಖಿ ಕೆಲಸ ಮಾಡುತ್ತೇನೆ ಎನ್ನುವುದು ಮುಖ್ಯ. ಈ ಭೂಮಿ ಮೇಲೆ ನಾನ್ಯಾಕೆ ಬಂದೆ ಅನ್ನೋದು ಮುಖ್ಯ ಎನ್ನುತ್ತಲೇ ಮತ್ತೆ ಅಪ್ಪನ ವಿಷಯವನ್ನು ಕೆದುಕಲಿಲ್ಲ ವಿನೋದ್‌ ರಾಜ್ ಅವರು. ಅಲ್ಲಿಯೇ ಇದ್ದ ಅಮ್ಮ ಲೀಲಾವತಿ ಮತ್ತು ಡಾ.ರಾಜ್‌ಕುಮಾರ್‍‌ ಅವರ ಫೋಟೋವನ್ನು ತೋರಿಸಿ ಇವರು ನಮ್ಮ ದೊಡ್ಡೋವರು ಎಂದು ಹೇಳಿದ್ದಾರೆ. ಇದೇ ವೇಳೆ, ಯಾವ ಮೂಲ ಹುಡುಕುವುದು ಸರಿಯಲ್ಲ. ಕಾಂಟ್ರವರ್ಸಿಗೆಲ್ಲ ನಾನು ಕಿವಿಗೊಡುವವನಲ್ಲ. ಜನ ಏನು ಕಮೆಂಟ್‌ ಮಾಡ್ತಾರೆ ಎನ್ನುವುದು ನನಗೆ ಮುಖ್ಯವಲ್ಲ ಎಂದು ಹೇಳಿದ್ದಾರೆ.

Tap to resize

Latest Videos

ತಾಂಡವ್‌ ಕ್ರೂರತನಕ್ಕೆ ಕಾರಣ ತಿಳಿಸುತ್ತಲೇ ಪ್ರತಿ ಪೋಷಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ನಟ ಸುದರ್ಶನ್!
  
 ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾತನಾಡಿರುವ ಅವರು, ನೋಡಿ ನಮ್ಮ ನಮ್ಮ ನಡುವೆ  ಸಾಕಷ್ಟು ಜಾತಿಗಳಿವೆ. ಹಾಗೆಂದು ಅವರೆಲ್ಲವೂ  ಅವರವರ ಮೂಲ ಹುಡುಕಿಕೊಂಡು ಹೋದರೆ, ಯಾರೂ ಉದ್ಧಾರ ಆಗೋಕೆ ಆಗಲ್ವಲ್ಲ ಎಂದು ಪ್ರಶ್ನಿಸಿದ್ದಾರೆ. ಮೂಲ ಯಾವುದೇ ಆಗಿದ್ದರೂ, ಕೊನೆಗೆ ಸೇರುವುದು  ಆ ಗೋವಿಂದನ, ಇಲ್ಲವೇ ಅಲ್ಲಾಹುನ ಅಥವಾ  ಯೇಸು ಪಾದ ಅಷ್ಟೇ.  ನಾವು ಕುಡಿಯಲು ಹೋಗುವುದು ಆ ನೀರನ್ನು ಮಾತ್ರ. ಅಷ್ಟೇ ಬೇಕಿರುವುದು ಎಲ್ಲರಿಗೂ ಎನ್ನುವ ಮೂಲಕ ತಮ್ಮ ಅಪ್ಪನ ಬಗ್ಗೆ ಕೇಳುವವರಿಗೆ ಇನ್ನೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಅಮ್ಮ ಮಲಗುತ್ತಿದ್ದ ಚಿಕ್ಕ ಮಂಚದ ವಿಷಯವನ್ನೂ ತೆರೆದಿಟ್ಟಿದ್ದಾರೆ. ಅಂಥ ದೊಡ್ಡ ನಟಿ, ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ ಆಳಿದ ನಟಿ ಇಷ್ಟು ಚಿಕ್ಕ ಮಂಚದಲ್ಲಿ ಮಲಗುವುದು ನಿಜಕ್ಕೂ ನಂಬುವುದು ಸಾಧ್ಯವಿಲ್ಲ ಎಂದೇ ಎಲ್ಲರೂ ಅಂದುಕೊಳ್ಳಬಹುದು. ಆದರೆ ಲೀಲಾವತಿ ಅವರು ಬದುಕಿನ ಕೊನೆಯವರೆಗೂ ಅಲ್ಲಿಯೇ ಇದ್ದುದು ಮಾತ್ರ ಸತ್ಯ! 

ಇದಾಗಲೇ ವಿನೋದ್‌ ರಾಜ್‌ ಅವರು, ಸಮಾಜಮುಖಿ ಕಾರ್ಯ ಕೈಗೊಂಡಿದ್ದಾರೆ.  ಇತ್ತೀಚಿಗೆ ಸುಡು ಬಿಸಿಲಿನಲ್ಲೇ ನಿಂತು, ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೇ ರಸ್ತೆ ರಿಪೇರಿ ಕೆಲಸ ಮಾಡಿಸಿದ್ದರು.  ಬೆಂಗಳೂರು ನಗರದ ನೆಲಮಂಗಲದ ಕರೆಕಲ್ ಕ್ರಾಸ್​ನಿಂದ ಸೋಲದೇವನಹಳ್ಳಿವರೆಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿಸಿದ್ದರು. ವಿನೋದ್‌ ರಾಜ್‌ ತಾವೇ ಸ್ವತಃ ನಿಂತು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ರಿಪೇರಿ ಕೆಲಸ ಮಾಡಿಸಿದ್ದರು. ಇದೀಗ ಸೋಲದೇವನಹಳ್ಳಿಯ ಮನೆಯ ಬಳಿ   ಲೀಲಾವತಿ ಅವರ ಸ್ಮಾರಕ ನಿರ್ಮಿಸಿದ್ದಾರೆ. ಇದು ಕೂಡ ಸ್ವಂತ ಖರ್ಚಿನಲ್ಲಿ. ಈ ವಿಷಯವನ್ನೂ ಅವರು ತಿಳಿಸಿದ್ದಾರೆ.  ನನಗೆ ಆಗುವವರೆಗೂ ಈ ಸ್ಮಾರಕವನ್ನು ನಿರ್ವಹಣೆ ಮಾಡುತ್ತೇನೆ.  ಮುಂದೊಂದು ದಿನ ಈ ಸ್ಮಾರಕ ನಿರ್ವಹಣೆ ನನ್ನ ಕೈಯಿಂದ ಸಾಧ್ಯವಾಗದಿದ್ದರೆ,  ಸರ್ಕಾರಕ್ಕೆ ಹಸ್ತಾಂತರಿಸುತ್ತೇನೆ.  ಈ ಸ್ಮಾರಕ ನಿರ್ವಹಣೆಗೆ ಎಷ್ಟು ಖರ್ಚಾಗಬಹುದೋ ಅದಿಷ್ಟನ್ನು ನಾನು ಕೊಟ್ಟೇ ಹೋಗುವೆ. ಸರ್ಕಾರದ ದುಡ್ಡು ನಮಗೆ ಬೇಡ ಎಂದಿದ್ದಾರೆ. 

ನನ್ನ ಜಾತಕದಲ್ಲಿ ಕಟನಿ ಯೋಗ, ಮದ್ವೆಯಾದ್ರೆ ತೊಂದ್ರೆ ಎನ್ನುತ್ತಲೇ ನೋವು ಬಿಚ್ಚಿಟ್ಟ ಊರ್ವಶಿ ರೌಟೇಲಾ !

click me!