ಬಾಲಿವುಡ್‌ನ ಟಾಪ್ 10 ಮೋಸ್ಟ್ ಬ್ಯೂಟಿಫುಲ್ ನಟಿಯರಿವರು, ನಿಮಗೆ ಯಾರಿಷ್ಟ?
ದೀಪಿಕಾ, ಕತ್ರಿನಾ, ಆಲಿಯಾ! ಬಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಆಕ್ಟ್ರೆಸಸ್ ಯಾರು? ತಮ್ಮ ಆಕ್ಟಿಂಗ್ ಮತ್ತು ಬ್ಯೂಟಿಯಿಂದ ಎಲ್ಲರ ಮನ ಗೆದ್ದವರ ಬಗ್ಗೆ ತಿಳಿಯಿರಿ.
ದೀಪಿಕಾ, ಕತ್ರಿನಾ, ಆಲಿಯಾ! ಬಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಆಕ್ಟ್ರೆಸಸ್ ಯಾರು? ತಮ್ಮ ಆಕ್ಟಿಂಗ್ ಮತ್ತು ಬ್ಯೂಟಿಯಿಂದ ಎಲ್ಲರ ಮನ ಗೆದ್ದವರ ಬಗ್ಗೆ ತಿಳಿಯಿರಿ.
ದೀಪಿಕಾ ಪಡುಕೋಣೆಯನ್ನು ಅವರ ಸೂಪರ್ ಲುಕ್ ಮತ್ತು ಬೆಂಕಿ ಆಕ್ಟಿಂಗ್‌ಗಾಗಿ ಗುರುತಿಸುತ್ತಾರೆ. ಅವರು 'ಪದ್ಮಾವತ್' ಮತ್ತು 'ಚೆನ್ನೈ ಎಕ್ಸ್‌ಪ್ರೆಸ್' ತರ ಹಿಟ್ ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದಾರೆ. ಪ್ರಸ್ತುತ ಹೆಣ್ಣು ಮಗುವಿನ ತಾಯಿಯಾಗಿದ್ದು, ಆಕೆಯ ಆರೈಕೆಯಲ್ಲಿದ್ದಾರೆ. 39 ವರ್ಷ ವಯಸ್ಸಾಗಿದೆ.
'ಜಿಂದಗಿ ನಾ ಮಿಲೇಗಿ ದೋಬಾರಾ', 'ಏಕ್ ಥಾ ಟೈಗರ್' ತರ ಸೂಪರ್ ಹಿಟ್ ಸಿನಿಮಾಗಳಲ್ಲಿ ಆಕ್ಟ್ ಮಾಡಿರೋ ಕತ್ರಿನಾ ಕೈಫ್ ಆಕ್ಟಿಂಗ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ನಟ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿ ಆರಾಮ ಜೀವನ ನಡೆಸುತ್ತಿದ್ದಾರೆ, ನಟಿಗೆ ಸದ್ಯ 41 ವರ್ಷ ವಯಸ್ಸು.
ಆಲಿಯಾ ಭಟ್ ಕಡಿಮೆ ಟೈಮ್‌ನಲ್ಲಿ ಜನರನ್ನು ತಲುಪಿಸ ನಟಿ . ಅವರ ಬ್ಯೂಟಿಗೆ ಜನರೆಲ್ಲಾ ಫಿದಾ ಆಗಿದ್ದಾರೆ. ಹೆಣ್ಣು ಮಗುವಿನ ತಾಯಿ ಆಗಿದ್ದರೂ 32ರ ಹರೆಯದಲ್ಲೂ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.
ಶ್ರೀಲಂಕಾದ ಜಾಕ್ವೆಲಿನ್ ಫರ್ನಾಂಡಿಸ್ 'ಕಿಕ್' ಮತ್ತು 'ಜುಡ್ವಾ 2' ತರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೋಡೋಕೆ ಸಖತ್ ಆಗಿದ್ದಾರೆ. ಸದ್ಯ ನಟಿಗೆ 39 ವರ್ಷ.
'ಕಬೀರ್ ಸಿಂಗ್' ಮತ್ತು 'ಶೇರ್ಷಾ'ದಲ್ಲಿ ಅವರ ಪಾತ್ರಗಳಿಗೆ ಗುರುತಿಸಿಕೊಂಡಿರೋ ಕಿಯಾರಾ ಬ್ಯೂಟಿಗೆ ಎಲ್ಲರೂ ಫಿದಾ ಆಗಿದ್ದಾರೆ. ನೋಡಿದ್ರೆ ಉಸ್ಸಪ್ಪಾ ಅನ್ನಬೇಕು ಅಷ್ಟೇ. ಕಿಯಾರಾ ತಮ್ಮ ಪತಿ ಸಿದ್ಧಾರ್ಥ್ ಜೊತೆಗೆ ಫೆಬ್ರವರಿ 28 ರಂದು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಘೋಷಿಸಿದರು. ನಟಿಗೆ ಈಗ 33 ವರ್ಷ.
'ಪಿಕೆ' ಮತ್ತು 'ಸುಲ್ತಾನ್' ತರ ಸಿನಿಮಾಗಳಿಂದ ಜನರ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿರೋ ಅನುಷ್ಕಾ ಶರ್ಮಾಗೆ ಎಲ್ಲರೂ ಫಿದಾ ಆಗಿದ್ದಾರೆ. ನೋಡೋಕೆ ಸಖತ್ ಆಗಿದ್ದಾರೆ. ಕ್ರಿಕೆಟಿಗ ಕೊಹ್ಲಿ ಪತ್ನಿ ಜೊತೆಗೆಎರಡು ಮಕ್ಕಳ ತಾಯಿಯಾಗಿದ್ದರೂ ಸೌಂದರ್ಯ ಮಾತ್ರ ಕುಂದಿಲ್ಲ. ಸದ್ಯ 36 ವರ್ಷ.
ಶ್ರದ್ಧಾ ಕಪೂರ್ 'ಆಶಿಕಿ 2' ಮತ್ತು 'ಬಾಗಿ' ತರ ಸಿನಿಮಾಗಳಲ್ಲಿ ಆಕ್ಟ್ ಮಾಡಿ ಜನರ ಮನಸ್ಸನ್ನು ಗೆದ್ದಿದ್ದಾರೆ. ನೋಡೋಕೆ ಸಖತ್ ಆಗಿದ್ದಾರೆ. 38 ವರ್ಷದ ನಟಿ ತಮ್ಮ ಸೌಂದರ್ಯವನ್ನು ಉಳಿಸಿಕೊಂಡು ಬಂದಿದ್ದಾರೆ.
ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ ಆಕ್ಟಿಂಗ್ ಜೊತೆಗೆ ಅವರ ಬ್ಯೂಟಿಗೂ ಎಲ್ಲರೂ ಫಿದಾ ಆಗಿದ್ದಾರೆ. ಅವರ ಮೈಬಣ್ಣದಿಂದಲೇ ಮಿಲ್ಕಿ ಬ್ಯೂಟಿ ಎಂದೇ ಹೆಸರು ಪಡೆದುಕೊಂಡಿದ್ದಾರೆ. ನಟಿಗೆ ಈಗ 35 ವರ್ಷ.
ಹುಮಾ ಖುರೇಶಿ
ತನ್ನ ಬ್ಯೂಟಿ ಮತ್ತು ಪವರ್‌ಫುಲ್ ಆಕ್ಟಿಂಗ್‌ಗೆ ಗುರುತಿಸಿಕೊಂಡಿರೋ ಹುಮಾ 'ಗ್ಯಾಂಗ್ಸ್ ಆಫ್ ವಾಸೇಪುರ್' ತರ ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದಾರೆ. ಸದ್ಯ ನಟಿಗೆ 38 ವರ್ಷ ವಯಸ್ಸು.
ಮಾಧುರಿ ದೀಕ್ಷಿತ್
ಮಾಧುರಿ ದೀಕ್ಷಿತ್ 'ದಿಲ್ ತೋ ಪಾಗಲ್ ಹೈ' ತರ ಸಿನಿಮಾಗಳಲ್ಲಿ ಆಕ್ಟ್ ಮಾಡಿ ಬಾಲಿವುಡ್‌ನ ಐಕಾನ್ ಆಗಿದ್ದಾರೆ. ನೋಡೋಕೆ ಸಖತ್ ಆಗಿದ್ದಾರೆ. ಹಿರಿಯ ನಟಿ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆಂಬುದೇ ಆಶ್ಚರ್ಯ. ಅವರಿಗೀಗ 57 ವರ್ಷ.