vuukle one pixel image

News Hour: ಮುಸ್ಲಿಂ ಮೀಸಲಾತಿಗಾಗಿ ಸಂವಿಧಾನ ಬದಲಾವಣೆ, ಡಿಸಿಎಂ ಡಿಕೆಶಿ ಮಾತಿಗೆ ದೇಶದಾದ್ಯಂತ ಕಿಡಿ!

Santosh Naik  | Updated: Mar 24, 2025, 11:28 PM IST

ಬೆಂಗಳೂರು (ಮಾ.24): ಮುಸ್ಲಿಂ ಮೀಸಲಾತಿ ಸಮರ್ಥನೆ ವೇಳೆ ಡಿಕೆ ಶಿವಕುಮಾರ್‌ ಹೇಳಿದ ಮಾತು ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಂ ಮೀಸಲಾತಿಗಾಗಿ ಸಂವಿಧಾನ ಬದಲಾವಣೆ ಎಂದು ಅವರು ಹೇಳಿದ್ದು ರಾಷ್ಟ್ರವ್ಯಾಪಿ ಚರ್ಚೆಯಾಗುತ್ತಿದೆ.

ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದು, ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿದೆ. ಇದೆ ವೇಳೆ ಡಿಕೆಶಿ ಹೇಳಿಕೆಯನ್ನು ಮಲ್ಲಿಕಾರ್ಜುನ್‌ ಖರ್ಗೆ ಸಮರ್ಥಿಸಿಕೊಳ್ಳಲು ಹೋಗಿಲ್ಲ.

ಮುಸ್ಲಿಮರಿಗಾಗಿ ಸಂವಿಧಾನ ಬದಲಾವಣೆ, ಡಿಕೆಶಿ ರಾಜಕೀಯದ ಮೇಲೇನು ಪರಿಣಾಮ?

ಡಿಕೆ ಶಿವಕುಮಾರ್‌ ಅವರ ಸಂವಿಧಾನ ಬದಲಾವಣೆ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರು ಕೂಡ ಡಿಕೆಶಿ ಹೇಳಿಕೆಯನ್ನು ಟೀಕಿಸಿದ್ದಾರೆ. ದೇಶದಲ್ಲಿ ಅತಿಹೆಚ್ಚು ಸಲ ಸಂವಿಧಾನ ಬದಲಾವಣೆ ಮಾಡಿರುವುದು ಕಾಂಗ್ರೆಸ್‌ ಎಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.