ದಕ್ಷಿಣ ಭಾರತದ ಖ್ಯಾತ ನಟನೊಬ್ಬ 3000ಕ್ಕೂ ಹೆಚ್ಚು ನಟಿಯರೊಂದಿಗೆ ಹಾಸಿಗೆ ಹಂಚಿಕೊಂಡ 'ಸಾಧನೆ'ಯನ್ನು ದುಬೈನಲ್ಲಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾನೆ. ಈತನ ಹೆಣ್ಣುಬಾಕತನದ ಬಗ್ಗೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ.
ಆತ ದಕ್ಷಿಣ ಭಾರತದ ಪ್ರಖ್ಯಾತ ಹೀರೋ
ವಯಸ್ಸು 60+ ನಟಿಸಿದ ಚಿತ್ರಗಳ ಸಂಖ್ಯೆ 350ಕ್ಕೂ ಹೆಚ್ಚು.
ಹಿಂದಿಯೂ ಸೇರಿದಂತೆ ದಕ್ಷಿಣದ ಎಲ್ಲ ಭಾಷೆಗಳಲ್ಲೂ ನಟಿಸಿರುವ ಈ ನಟ ಈಗ ಮತ್ತೊಂದು ‘ಸಾಧನೆ’ ಮಾಡಿದ್ದಾರೆ. ಈ ‘ಸಾಧನೆ’ಯ ಸಂಭ್ರಮ ಹಂಚಿಕೊಳ್ಳಲು ದುಬೈನಲ್ಲಿ ಅತಿದೊಡ್ಡ ಪಾರ್ಟಿ ಏರ್ಪಡಿಸಿದರಂತೆ. ತನ್ನ ಇಂಡಸ್ಟ್ರಿಯ ದೊಡ್ಡ, ದೊಡ್ಡವರನ್ನೆಲ್ಲ ಒಂದೆಡೆ ಸೇರಿಸಿ, ಪಾರ್ಟಿ ಮಾಡಿದ್ದಾನೆ. ಈ ನಟನ ಪಾರ್ಟಿ ಬಗ್ಗೆ ಇಡೀ ಇಂಡಸ್ಟ್ರಿಯಲ್ಲಿ ಪಿಸುಪಿಸು ಮಾತುಗಳು ಕೇಳಿಬರ್ತಿವೆ. ಅಷ್ಟಕ್ಕೂ ಆ ನಟ ಮಾಡಿದ ಸಾಧನೆ ಏನು ಅಂತೀರಾ ? ಅವರ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್, ಸ್ಟೇಟ್ ಅವಾರ್ಡ್, ಇಂಟರ್ ನ್ಯಾಷನಲ್ ಅವಾರ್ಡ್ ಸಿಕ್ಕಿದ ಸಾಧನೆ ಅಲ್ಲ. ಮತ್ತಿನ್ನೇನು ಅಂತೀರ ? ಅವರ ಸಾಧನೆ ಕೇಳಿದ್ರೆ ನೀವಲ್ಲ, ಬೇರೆ ಭಾಷೆಯ ಚಿತ್ರರಂಗವೂ ಶಾಕ್ ಆಗುತ್ತೆ..
ತನ್ನ ವೃತ್ತಿ ಬದುಕಿನಲ್ಲಿ (ಹೀರೋ ಆಗಿ) ಸುಮಾರು 3000 ಹುಡುಗಿಯರ ಜತೆ ಹಾಸಿಗೆ ಹಂಚಿಕೊಂಡಿದ್ದಾನೆ. ಅಚ್ಚರಿ, ಆಶ್ಚರ್ಯ, ಶಾಕ್ ಏನಾದರೂ ಸುಳ್ಳಲ್ಲ ಈ ಸುದ್ದಿ. ತನ್ನ ಹೀರೋಯಿಸಮ್ ಬಳಸಿಯೇ ಹೀರೋಯಿನ್ಗಳು, ಸಹನಟಿಯರನ್ನು ಮಂಚಕ್ಕೆಳೆದು ಸುಖಿಸಿದ ಈ ನಟ, ಹೆಣ್ಣುಬಾಕತನವನ್ನೇ ಸಾಧನೆ ಎಂದು ಪರಿಗಣಿಸಿ, ಅದನ್ನು ಸೆಲೆಬ್ರೇಟ್ ಮಾಡಿದ್ದಾನೆ.
ಈ ಮೋಹಕ ಮೋಹನ, ಹುಡುಗಿಯರನ್ನು ಸಮ್ಮೋಹನಗೊಳಿಸುವಂಥ ಸುಂದರಾಂಗ, ಸ್ಮಾರ್ಟ್, ಟ್ಯಾಲೆಂಟ್ ನಟನಿಗೆ ಹುಡುಗಿಯರು ಮರಳಾಗುವುದು ಸುಳ್ಳೇನಲ್ಲ. ಈತನ ಜತೆ ನಟಿಸಲು ಅವಕಾಶ ಸಿಕ್ಕರೆ ಸಾಕು ತಮ್ಮ ಅದೃಷ್ಟ ಬದಲಾದೀತು ಅನ್ನೊ ನಂಬಿಕೆ, ಆತನೊಂದಿಗೆ ತೆರೆ ಹಂಚಿಕೊಳ್ಳುವುದೇ ಮಹಾಭಾಗ್ಯ ಎಂದುಕೊಳ್ಳುವ ನೂರಾರು ನಟಿಯರು, ಆತನ ಕಣ್ಣ ಇಶಾರೆಗೆ ಹಾಸಿಗೆ ಹಂಚಿಕೊಳ್ಳಲೂ ಹಿಂದೆ ಮುಂದೆ ನೋಡರು. ಅಷ್ಟಕ್ಕೂ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ, ಹೀರೋಯಿನ್ಗಳನ್ನು ಮಂಚಕ್ಕೆ ಕರೆಯವುದು ಹೊಸದೇನಲ್ಲ. ನೀನು ಸಹಕರಿಸಿದರೆ, ಚಾನ್ಸ್ ಎಂಬ ಅನಧಿಕೃತ ನಿಯಮ ಎಲ್ಲ ಚಿತ್ರರಂಗದಲ್ಲೂ ಚಾಲ್ತಿಯಲ್ಲಿದೆ. ಆಕ್ಟ್ ಮಾಡಲು ಚಾನ್ಸ್ ಬೇಕಾದ್ರೆ, ಹೀರೋ, ಡೈರೆಕ್ಟರ್, ಪ್ರೊಡ್ಯೂಸರ್ ಜತೆ ಮಂಚ ಏರಲೇಬೇಕು. ಇದೊಂಥರ ಪ್ಯಾಕೇಜ್ ಸಿಸ್ಟಂ. ಆದ್ರೆ, ಟಾಪ್ ಸ್ಟಾರ್ಗಳು, ಸೂಪರ್ ಸ್ಟಾರ್ಗಳು ಮೊದಲು ಕಣ್ಣು ಹಾಕಿದರೋ, ಆ ಹೀರೋಯಿನ್ ಆ ನಟನ ಸ್ವತ್ತು. ಆತನೇ ಅನುಭವಿಸಬೇಕು, ಮುಗಿಸಬೇಕು. ಆನಂತರವೇ ಇತರರಿಗೆ ಪಾಲು ಅನ್ನೋ ನಿಯಮ ಜಾರಿಯಲ್ಲಿತ್ತಂತೆ.
ಇದನ್ನೇ ಅಸ್ತ್ರವಾಗಿಸಿಕೊಂಡ ಆ ನಟ, 3000 ನಟಿಯರನ್ನು ಸದ್ದಿಲ್ಲದೇ ತಿಂದು ತೇಗಿಬಿಟ್ಟಿದ್ದಾನೆ. ಹೊರಗಿನ ಜಗತ್ತಿಗೆ ಸಭ್ಯ ಗೃಹಸ್ಥ, ಸಂಸ್ಥಾರಸ್ಥ, ಜಂಟಲ್ ಮ್ಯಾನ್ ಎಂದೆಲ್ಲ ಬಿರುದಾಂಕಿತ, ಒಳಗೆ ಹೆಣ್ಣುಬಾಕ. ಮೇಕಪ್ ನಲ್ಲಿ ಆತನ ನಿಜ ಮುಖವಾಡ ಬಯಲಾಗಿಯೇ ಇಲ್ಲ. ಅವಕಾಶ ಕೇಳಿ ಬರುವ, ಅವಕಾಶ ಸಿಕ್ಕ ಪ್ರತಿಭಾವಂತ ಹೀರೋಯಿನ್ಗಳೂ, ಈತನ ಪ್ರಭಾವಕ್ಕೆ ಬಗ್ಗಲೇ ಬೇಕು. ಮೈ ಒಪ್ಪಿಸಲೇಬೇಕು. ನಟಿಯಾಗುವ ನೂರಾರು ಕನಸು ಹೊತ್ತು ಬಂದ ಅದೆಷ್ಟು ಹೆಣ್ಣು ಮಕ್ಕಳು, ಅನಿವಾರ್ಯವಾಗಿ, ವ್ಯವಸ್ಥೆಗೆ ವಿರುದ್ಧವಾಗಿ ಬದುಕಲಾರದೇ, ಇಂಥವರಿಗೆ ಸುಲಭ ಹಣ್ಣಾಗಿ ಬಿಡುತ್ತಾರೆ. ಇಂಥ ನೂರಲ್ಲ, ಸಾವಿರ ನಟಿಯರು, ಈತನ ಬಲೆಗೆ ಬಿದ್ದಿದ್ದಾರೆ.
ಮದುವೆಯಾಗಿದ್ರೂ ಕೂಡ ಖ್ಯಾತ ನಟಿ ಜೊತೆ ಲಿವ್ -ಇನ್ ರಿಲೇಶನ್’ಶಿಪಲ್ಲಿದ್ರು ಈ ಸೂಪರ್ ಹಿಟ್ ಡೈರೆಕ್ಟರ್!
ಆದರೆ, ಒಬ್ಬರೇ ಒಬ್ಬರು ಈತನ ವಿರುದ್ಧ ದನಿ ಎತ್ತಿಲ್ಲ. ಅಷ್ಟರ ಮಟ್ಟಿಗೆ ಈತ ಪ್ರಭಾವಶಾಲಿ. 350 ಚಿತ್ರ 3000+ ನಟಿಯರು. ಈತ ನಟಿಸಿದ ಚಿತ್ರಗಳಿಗಿಂತ ಸಂಭೋಗಿಸಿದ ನಟಿಯರ ಸಂಖ್ಯೆಯೇ ಹೆಚ್ಚಿದೆಯಲ್ಲ ಅಂತ ಆತನ ಇಂಡಸ್ಟ್ರಿಯವರು ಹೊಟ್ಟೆಕಿಚ್ಚು ಪಡ್ತಿದ್ದಾರಂತೆ. ವಿದೇಶದಲ್ಲಿ ಆತ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗಿಯಾಗಿದ್ದವರಲ್ಲಿ ಬಹುತೇಕರಿಗೆ ಪಾರ್ಟಿ ಹಿಂದಿನ ಕಾರಣವೇ ತಿಳಿದಿರಲಿಲ್ಲವಂತೆ. ಗೊತ್ತಿದ್ದವರು ಮೀಸೆಯಡಿ ಹುಸಿನಕ್ಕರಂತೆ. ಹಾ..! ಪಾರ್ಟಿ ಮುಗಿದ ಮೇಲೂ ನಟನ ಆಟ ಮುಂದುವರಿಯಿತಂತೆ. ಹೊಸ ಸಿನಿಮಾ, ಹೊಸ ಹೀರೋಯಿನ್. ನಟನ ಆಟ ಮಾತ್ರ ಹಳೆಯದು..!
ಖ್ಯಾತ ನಟನಿಂದ ಗರ್ಭಿಣಿಯಾದ ನಟಿ; 2 ಕೋಟಿ ರೂ ಕೊಟ್ಟು ಕೈತೊಳೆದುಕೊಂಡ ದೊಡ್ಡಮನೆತನದ ಆ ಹೀರೋ ಯಾರು?