ಸದ್ಗುರು ಜಗ್ಗಿ ವಾಸುದೇವ್‌ ಕೂಡ ನಾಗಾ ಸಾಧು! ಇಲ್ಲಿದೆ ನೋಡಿ ವಿಡಿಯೋ

ಸದ್ಗುರು ಜಗ್ಗಿ ವಾಸುದೇವ್ ಅವರು ಕೂಡ ನಾಗಾ ಸಾಧು ಆಗಿದ್ದರಂತೆ! ಹಾಗೆಂದು ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ. ಸದ್ಗುರುಗಳ ಜೀವನ, ಆಧ್ಯಾತ್ಮಿಕ ಸಾಧನೆಗಳ ಹಿನ್ನೆಲೆಯಲ್ಲಿ ಅವರ ನಾಗಾ ಜೀವನದ ಬಗ್ಗೆ ತಿಳಿಯುವ ಪ್ರಯತ್ನವಿದು. 

was Sadhguru Jaggi Vasudev a Naga Sadhu viral video says truth bni

ನಾಗಾ ಸಾಧುಗಳ ಬಗ್ಗೆ ಚಿತ್ರವಿಚಿತ್ರವಾದ ವಿವರಗಳು, ಅವರ ರೂಪ ಸ್ವಭಾವಗಳ ಬಗೆಗಿನ ನಾನಾ ಕತೆಗಳು ಕುಂಭಮೇಳದ ಸಂದರ್ಭದಲ್ಲಿ ವೈರಲ್‌ ಆದವು. ನಾಗಾ ಸಾಧುಗಳಲ್ಲದ ಅನೇಕ ಯತಿಗಳು, ಸಾಧು ಸಂತರು ಕೂಡ ಕುಂಭ ಮೇಳಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಿದ್ದನ್ನು ನೀವು ಕಂಡಿದ್ದೀರಿ. ಸದ್ಗುರು ಜಗ್ಗಿ ವಾಸುದೇವ ಅವರು ಕೂಡ ಕುಂಭಮೇಳದಲ್ಲಿ ಹಲವು ದಿನ ಇದ್ದರು. ಅದೇ ಸಂದರ್ಭದಲ್ಲಿ ಅವರು ಶಾಹಿ ಸ್ನಾನ ಮಾಡಿದ್ದರು. ಇದೇ ಸಂದರ್ಭದಲ್ಲಿ ಅವರು ನೀಡಿದ ಒಂದು ಸಂದರ್ಶನದಲ್ಲಿ, ತಾವು ಕೂಡ ಒಂದೊಮ್ಮೆ ನಾಗಾ ಸಾಧು ಆಗಿದ್ದೆ ಎಂದು ಹೇಳುವ ವಿಡಿಯೋ ಒಂದು ಇದೀಗ ವೈರಲ್‌ ಆಗಿದೆ. 

ಅದರಲ್ಲಿ ಇನ್‌ಫ್ಲುಯೆನ್ಸರ್‌ ಒಬ್ಬರು ಸದ್ಗುರುವನ್ನು ಪ್ರಶ್ನೆ ಮಾಡುತ್ತಾರೆ- "ನಾಗಾ ಸಾಧುಗಳು ವಿಶಿಷ್ಟ, ವಿಲಕ್ಷಣವಾಗಿರುತ್ತಾರೆ. ಅವರ ಜೊತೆ ಹೆಚ್ಚು ಮಾತಾಡೋಕೆ ಆಗೋಲ್ಲ. ಅವರು ಹೇಳ್ಕೊಳೋ ಥರ ನಿಗೂಢವಾಗಿ, ಎಲ್ಲೋ ಹಿಮಾಲಯದಲ್ಲಿ ಅವರು ಇರೋದಾ? ಅವರ್ಯಾಕೆ ಹೀಗಿರ್ತಾರೆ?" ಅಂತ. ಅದಕ್ಕೆ ಸದ್ಗುರು ನೀಡಿದ ಉತ್ತರ ಇದು- "ಅವರು ಮಾತಾಡೋಕೆ ಇರೋರಲ್ಲ. ನಾನೂ ಒಮ್ಮೆ ನಾಗಾ ಆಗಿದ್ದೆ. ಅವರು ಹಾಗಿದ್ದಾರೆ, ನಾನು ಈ ಹೊರಜಗತ್ತಿಗಾಗಿ ಸ್ವಲ್ಪ ಹೆಚ್ಚು ಡಿಪ್ಲೊಮ್ಯಾಟಿಕ್‌ ಆಗಿದ್ದೇನೆ. ಆದರೆ ನನ್ನ ಒಳಗೆ ಏನೂ ಬದಲಾವಣೆ ಆಗಿಲ್ಲ. ನಾನೂ ಅವರೂ ಒಂದೇ. ಆದಿಯೋಗಿಯೇ ಸ್ವತಃ ನಾಗಾ ಸಾಧು. ಅವನ ಕುತ್ತಿಗೆಯಲ್ಲಿ ನಾಗನನ್ನು ನೋಡಿದ್ದೀರಲ್ಲ? ನಾವೆಲ್ಲ ಒಂದೇ" ಅಂತ. 

Latest Videos

ಸದ್ಗುರು ಉತ್ತರ ಕುತೂಹಲ ಮೂಡಿಸಿದೆ. ಸದ್ಗುರು ಯಾವಾಗ ನಾಗ ಸಾಧು ಆಗಿದ್ದಿರಬಹುದು ಎಂಬ ಕುತೂಹಲವನ್ನು ಹುಟ್ಟುಹಾಕಿದೆ. ಈಗ ಸದ್ಗುರು ಆಗಿರುವ ಜಗದೀಶ್ ಅಥವಾ ‘ಜಗ್ಗಿ’ ವಾಸುದೇವ್ ಅವರ ಜನ್ಮ ಡಿಸೆಂಬರ್ 3, 1957ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ಆಯಿತು. ಇವರು ತೆಲುಗು ಕುಟುಂಬಕ್ಕೆ ಸೇರಿದವರು. ಅವರು ಚಿಕ್ಕಂದಿನಿಂದಲೂ ಪ್ರತಿಯೊಂದು ವಸ್ತು, ವಿಷಯವನ್ನು ಬಹಳ ಸೂಕ್ಷ್ಮವಾಗಿ ನೋಡುತ್ತಿದ್ದರು ಮತ್ತು ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತಿದ್ದರು. ಜಗ್ಗಿ ವಾಸುದೇವ್ ಅವರ ಬೆಳೆದು ದೊಡ್ಡವರಾಗುತ್ತಿದ್ದಂತೆ ಅವರ ಮನಸ್ಸಿನಲ್ಲಿ ಇನ್ನೂ ಹೆಚ್ಚಿನ ಪ್ರಶ್ನೆಗಳು ಮೂಡತೊಡಗಿದವು. ಚಿಕ್ಕ ವಯಸ್ಸಿನಲ್ಲೇ ಅವರು ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದರು. 11 ನೇ ವಯಸ್ಸಿನಲ್ಲಿಯೇ ಅವರು ಯೋಗ ಗುರು ರಾಜೇಂದ್ರ ಭಾವ ಜೀ ಮಹಾರಾಜ್ ಅವರ ಬಳಿ ಯೋಗ ಕಲಿಯಲು ಆರಂಭಿಸಿದರು. 12 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಸದ್ಗುರು ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಪದವಿ ಪಡೆದ ನಂತರ ಇವರು ಕೋಳಿ ಫಾರ್ಮ್, ಇಟ್ಟಿಗೆ ನಿರ್ಮಾಣದ ಉದ್ಯಮ ಆರಂಭಿಸಿ ಸಕ್ಸಸ್‌ಫುಲ್ ಬ್ಯುಸಿನೆಸ್ ಮನ್ ಕೂಡ ಆದರು.

1984ರಲ್ಲಿ ಸದ್ಗುರು ಅವರಿಗೆ ವಿಜ್ಜಿ ಎನ್ನುವವರ ಜೊತೆ ವಿವಾಹವಾಯ್ತು. ವಿವಾಹವಾದ 6 ವರ್ಷದ ಬಳಿಕ 1990 ರಲ್ಲಿ ಅವರಿಗೆ ಒಬ್ಬ ಮಗಳೂ ಜನಿಸಿದಳು. ಅವಳಿಗೆ ರಾಧೆ ಎಂದು ನಾಮಕರಣ ಮಾಡಲಾಯ್ತು. 1997ರಲ್ಲಿ ಸದ್ಗುರು ಅವರ ಧರ್ಮಪತ್ನಿ ಇಹಲೋಕ ತ್ಯಜಿಸಿದರು. ಸದ್ಗುರು ಅವರಿಗೆ 25 ವರ್ಷವಾದಾಗ ಅವರು ಒಮ್ಮೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದರು. ಅಲ್ಲಿನ ಎತ್ತರದ ಕಲ್ಲುಬಂಡೆಯ ಮೇಲೆ ಕುಳಿತ ಅವರು ಧ್ಯಾನಾಸಕ್ತರಾದರು. ಅವರು ಧ್ಯಾನದಲ್ಲಿ ಎಷ್ಟು ತಲ್ಲೀನರಾದರೆಂದರೆ ಅದು ಅವರನ್ನು ಸಮಾಧಿ ಸ್ಥಿತಿಗೆ ತಲುಪಿಸಿತ್ತು. ಹಾಗೆ ಸಮಾಧಿ ಸ್ಥಿತಿಯಲ್ಲಿ ನಾಲ್ಕು ಗಂಟೆ ಕಳೆದಿದ್ದರು. ಇದಾದ ಕೆಲವು ದಿನಗಳಲ್ಲಿ ಅವರು 13 ದಿನಗಳ ಕಾಲ ಸಮಾಧಿ ಸ್ಥಿತಿಯನ್ನು ತಲುಪಿದ್ದರು. ಸಮಾಧಿ ಸ್ಥಿತಿಯ ಅದ್ಭುತ ಅನುಭವ ಸದ್ಗುರು ಅವರ ಜೀವನವನ್ನೇ ಬದಲಾಯಿಸಿತು. ಇದಾದ ನಂತರ ಅವರು ತಮ್ಮ ವ್ಯವಹಾರಗಳನ್ನೆಲ್ಲ ಬಿಟ್ಟು ತಮ್ಮ ಅನುಭವ, ಜ್ಞಾನ ಮತ್ತು ವಿಚಾರಧಾರೆಗಳನ್ನು ಜನರಲ್ಲಿ ಬಿತ್ತಲು ಆರಂಭಿಸಿದರು. 

ಚಾಟ್‌ಜಿಪಿಟಿ ಹಿಂದಿಕ್ಕಿ ದಾಖಲೆ ಬರೆದ ಸದ್ಗುರು ಮಿರಾಕಲ್ ಮೈಂಡ್ ಆ್ಯಪ್, ಏನಿದೆ ಇದರಲ್ಲಿ?

ಈಗ ಪ್ರಶ್ನೆ ಇರೋದು ಅಂದರೆ, ಸದ್ಗುರು ನಾಗಾ ಸಾಧುಗಳ ಹಾಗೆ ಮೈಯಲ್ಲಿ ಬಟ್ಟೆ ಇಲ್ಲದೆ ಹಿಮಾಲಯದಲ್ಲಿ ಸಾಧನೆ ಮಾಡಿದ್ದಾರಾ? ಇದಕ್ಕೆ ಉತ್ತರ ಸದ್ಗುರುಗಳೇ ನೀಡಬೇಕಷ್ಟೆ. ಆದರೆ ಹೀಗೊಂದು ಉತ್ತರ ನೀಡಬಹುದು- ನಾಗಾ ಸಾಧು ಎಂದರೆ ನಗ್ನವೇ ಆಗಿರಬೇಕಿಲ್ಲ. ಅಥವಾ ಹಿಮಾಲಯದಲ್ಲೂ ಸಾಧನೆ ಮಾಡಿರಬೇಕೆಂದೇನಿಲ್ಲ. ಆಧ್ಯಾತ್ಮಿಕ ಸಿದ್ಧಿಗಳು ಎಲ್ಲಿದ್ದರೂ ಸಾಧಕನಿಗೆ ಒದಗಿ ಬರಬಲ್ಲವು ಎಂದು ಜ್ಞಾನಿಗಳು ಹೇಳುತ್ತಾರೆ. ಶ್ರೀ ರಾಮಕೃಷ್ಣ ಪರಮಹಂಸರಿಗೆ ಕೋಲ್ಕತ್ತಾದ ಒಂದು ಗದ್ದೆ ಬಯಲಿನಲ್ಲಿ, ಶ್ರೀ ರಮಣ ಮಹರ್ಷಿಗಳಿಗೆ ಅರುಣಾಚಲಂನ ಒಂದು ಬೆಟ್ಟದಲ್ಲಿ ಜ್ಞಾನೋದಯ ಆಗಿತ್ತು. ಸನಾತನ ಆಧ್ಯಾತ್ಮಿಕ ಸಾಧನೆಯನ್ನು ತೀವ್ರವಾಗಿ ಕೈಗೊಳ್ಳುವ ಸಾಧಕರನ್ನು ನಾಗಾ ಎಂದೇ ಭಾವಿಸಬಹುದು. 

ಕರ್ಮ ಸಿದ್ಧಾಂತ ಗುಟ್ಟು ರಟ್ಟಾಯ್ತು..: ಇವುಗಳೇ ನಿಮ್ಮ ಪುನರ್ಜನ್ಮವನ್ನು ನಿರ್ಧರಿಸುವ ಅಂಶಗಳು!


 

vuukle one pixel image
click me!