ಕ್ರಿಕೆಟರ್ ಕೆ ಎಲ್ ರಾಹುಲ್, ಅಥಿಯಾ ಶೆಟ್ಟಿ ಅವರು ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಈ ವಿಷಯವನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ನಟ ಸುನೀಲ್ ಶೆಟ್ಟಿ ಮಗಳು, ಅಥಿಯಾ ಶೆಟ್ಟಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೆ ಎಲ್ ರಾಹುಲ್ ಅವರು ತಂದೆಯಾಗಿ ಬಡ್ತಿ ಪಡೆದಿದ್ದಾರೆ. ನಟಿ ಅಥಿಯಾ ಶೆಟ್ಟಿ, ಕ್ರಿಕೆಟಿಗ ಕೆ ಎಲ್ ರಾಹುಲ್ ಅವರು ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ಇಂದು ಅಥಿಯಾ ಶೆಟ್ಟಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರಂತೆ.
ಅಥಿಯಾ ಶೆಟ್ಟಿ, ಕೆ ಎಲ್ ರಾಹುಲ್ ಮದುವೆಯಲ್ಲಿ ನೂರು ಜನರು!
ಈ ಜೋಡಿ ಕೆಲ ತಿಂಗಳುಗಳ ಹಿಂದೆ ಇನ್ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ ಮೂಲಕ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೆ ಬೇಬಿಬಂಪ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿತ್ತು. 2023ರ ಜನವರಿಯಲ್ಲಿ ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಈ ಜೋಡಿ ಖಾಸಗಿಯಾಗಿ ಮದುವೆಯಾಗಿತ್ತು. 2023 ಜನವರಿ 23 ರಂದು ಇವರ ಮದುವೆಯಾಗಿತ್ತು. ಈ ಮದುವೆಯಲ್ಲಿ ನೂರು ಜನ ಮಾತ್ರ ಭಾಗಿಯಾಗಿದ್ದರು. ಅದಕ್ಕೂ ಮುನ್ನ ಕೆಲ ವರ್ಷಗಳ ಹಿಂದೆ ಈ ಜೋಡಿ ಡೇಟ್ ಮಾಡುತ್ತಿದ್ದರೂ ಕೂಡ ಇವರಿಬ್ಬರು ಮಾತ್ರ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರಲಿಲ್ಲ. ಕೆ ಎಲ್ ರಾಹುಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ನಟಿ ಅಥಿಯಾ ಶೆಟ್ಟಿಗೆ ರೊಮ್ಯಾಂಟಿಕ್ ಆಗಿ ಜನ್ಮದಿನದ ಶುಭಾಶಯ ತಿಳಿಸುವವರೆಗೂ ಇವರಿಬ್ಬರ ಸಂಬಂಧದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.
ಕೆ ಎಲ್ ರಾಹುಲ್ ಜೊತೆ ಮಗಳ ರಿಲೆಷನ್‌ಶಿಪ್ ಬಗ್ಗೆ ಮಾತನಾಡಿದ ಸುನೀಲ್ ಶೆಟ್ಟಿ!
ಮಗುವಿನ ಬಗ್ಗೆ ಈ ಜೋಡಿ ಹೇಳಿದ್ದೇನು?
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇವರಿಬ್ಬರು "ನಮಗೆ ಮುದ್ದಾದ ಆಶೀರ್ವಾದವೊಂದು ಬೇಗನೇ ಬರಲಿದೆ" ಅಂತ ಬರೆದುಕೊಂಡಿದ್ದರು. ಇನ್ನು ಒಂದು ಕೆಟ್ಟ ದೃಷ್ಟಿ ತಡೆಯುವ ಗೊಂಬೆ, ನಕ್ಷತ್ರಗಳ ಜೊತೆಗೆ ಒಂದು ಮಗುವಿನ ಕಾಲುಗಳ ಚಿತ್ರ ಇರುವ ಇಮೋಜಿಯನ್ನು ಕೂಡ ಹಂಚಿಕೊಂಡಿದ್ದರು. ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿದಂತೆ ಅನೇಕರು ಇವರ ಪೋಸ್ಟ್‌ಗೆ ಶುಭಾಶಯಗಳನ್ನು ತಿಳಿಸಿದ್ದರು. ವಾಣಿ ಕಪೂರ್, ಶಿಬಾನಿ ಅಖ್ತರ್, ನಟಿ ರಿಯಾ ಕಪೂರ್, ಇಶಾ ಗುಪ್ತಾ, ಅಹಾನ್ ಶೆಟ್ಟಿ ಮುಂತಾದವರು ಶುಭಾಶಯ ತಿಳಿಸಿದ್ದರು.
ಸ್ಲಿಮ್ ಮುಖಕ್ಕೆ ಸೂಟ್ ಆಗೋ ಕಿವಿಯೋಲೆಗಳಿವು: ಅಥಿಯಾ ಶೆಟ್ಟಿ ಸ್ಫೂರ್ತಿ
ಇನ್ನು ಸುನೀಲ್ ಶೆಟ್ಟಿ ಅವರು ತಾತನಾಗುವ ಖುಷಿಯನ್ನು ಈ ಹಿಂದೆ ಹೊರಹಾಕಿದ್ದರು. ಇನ್ನು ಡೇಟ್ ಮಾಡುತ್ತಿರುವಾಗಲೇ ಮಕ್ಕಳ ಬಗ್ಗೆ ಅವರು ಖುಷಿವ್ಯಕ್ತಪಡಿಸಿದ್ದರು. ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಅವರು ಸದ್ಯ ಸಿನಿಮಾಗಳಿಂದ ದೂರ ಇದ್ದಾರೆ.