ಆ ನಟನ ಕಾಲಿಗೆ ಏಟಾಯ್ತು, ಯಶ್​ಗೆ ಸ್ಟಾರ್​ ಪಟ್ಟದ ಜೊತೆ ಭಾವಿ ಪತ್ನಿಯೂ ಸಿಕ್ಕರು! ಈ ರೋಚಕ ಕಥೆ ಕೇಳಿ

ಮೊಗ್ಗಿನ ಮನಸ್ಸು ಚಿತ್ರಕ್ಕೆ ಎಂಟ್ರಿ ಕೊಟ್ಟ ರೋಚಕ ಪಯಣದ ಕುರಿತು ಯಶ್​ ಮಾತನಾಡಿದ್ದಾರೆ. ಅದೃಷ್ಟ ಎನ್ನುವುದು ಒಲಿದು ಬಂದರೆ ಹೇಗೆ ಲೈಫ್​ ಚೇಂಜ್​  ಆಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ
 

Yash spoke about the exciting journey that led to his entry into the film Moggina Manasu suc

ರಾಕಿಂಗ್​ ಸ್ಟಾರ್​ ಯಶ್​​ (Yash) ಇಂದು ಕನ್ನಡ ಮಾತ್ರವಲ್ಲದೇ ವಿಶ್ವ ಮಟ್ಟದಲ್ಲಿಯೂ ಬೆಳೆದು ನಿಂತಿದ್ದಾರೆ. ಕೆಜಿಎಫ್​ ಚಿತ್ರದ ಮೂಲಕ ಸ್ಯಾಂಡಲ್​ವುಡ್​​ ಸಿನಿಮಾ ಮಾರುಕಟ್ಟೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಿದ ಯಶ್​,  ನ್ಯಾಷನಲ್​ ಸ್ಟಾರ್​ ಆಗಿ ಹೊಮ್ಮಿದ್ದಾರೆ. ಈ ಮೂಲಕ ಸ್ಯಾಂಡಲ್​​ವುಡ್​ನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬೆಳೆದು ನಿಂತಿರುವ ನಟ ಯಶ್​, ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಏರುವುದು ಸುಲಭದ ಮಾತಲ್ಲ. ಅದರಲ್ಲಿಯೂ ಯಾವುದೇ ಗಾಡ್​ ಫಾದರ್​ ಇಲ್ಲದೇ ಇಂಥದ್ದೊಂದು ಯಶಸ್ಸು ಗಳಿಸುವುದು ಹಲವರಿಗೆ ಕನಸಿನ ಮಾತೇ. ನುರಿತ ಕೌಶಲ, ಅದ್ಭುತ ಅಭಿನಯದ ಪ್ರತಿಭೆ ಏನೇ ಇದ್ದರೂ ಎಷ್ಟೋ ಮಂದಿಗೆ ಚಿತ್ರರಂಗಕ್ಕೆ ಎಂಟ್ರಿ ಸಿಗುವುದೇ ಕಷ್ಟ. ಒಂದೇ ಗಾಡ್​ ಫಾದರ್​ ಇರಬೇಕು ಇಲ್ಲವೇ ಸ್ಟಾರ್​ ಕಿಡ್​ ಆಗಿರಬೇಕು ಎನ್ನುವ ಸ್ಥಿತಿ ಇದೆ. ಆದರೆ ನಟ ಯಶ್​ ಅವರು ಕಷ್ಟದಿಂದ ಹಂತಹಂತವಾಗಿ ಮೇಲೆ ಬಂದವರು.  ರಂಗಭೂಮಿ ತಂಡದಲ್ಲಿ ಇರುವವರಿಗೆ ಚಹಾ ನೀಡುತ್ತಿದ್ದ ಯಶ್​ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರುವುದಾಗಿ ಅವರೇ ಒಮ್ಮೆ ಹೇಳಿದ್ದರು.

ಅಂದಹಾಗೆ ಅದೃಷ್ಟ ಎನ್ನುವುದು ಒಮ್ಮೆ ವ್ಯಕ್ತಿಯ ಬಾಳಲ್ಲಿ ಎಂಟ್ರಿ ಕೊಟ್ಟರೆ, ಯಾವ ರೂಪದಲ್ಲಿಯಾದರೂ ಯಶಸ್ಸು ಸಿಕ್ಕೇಬಿಡುತ್ತದೆ ಎನ್ನುವುದಕ್ಕೆ ಯಶ್​ ಅವರಿಗೆ ಮೊಗ್ಗಿನ ಮನಸ್ಸು ಮೂಲಕ ಸಿನಿಮಾದಲ್ಲಿ ಎಂಟ್ರಿ ಸಿಕ್ಕಿರುವ ಘಟನೆಯೇ ಸಾಕ್ಷಿಯಾಗಿದೆ.  ಇಂದು ಯಶ್​ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿ, ಕೆಜಿಎಫ್ ಸಿನಿಮಾ ಮೂಲಕ  ಮಾರುಕಟ್ಟೆಯನ್ನು ದೊಡ್ಡದಾಗಿ ವಿಸ್ತರಿಸಿಕೊಂಡಿದ್ದರೆ, ಅವರ ಪತ್ನಿ, ನಟಿ ರಾಧಿಕಾ ಕೂಡ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದಕ್ಕೆಲ್ಲ ನಾಂದಿ ಹಾಡಿದ್ದೇ 2008ರಲ್ಲಿ ಬಿಡುಗಡೆಗೊಂಡಿದ್ದ ಮೊಗ್ಗಿನ ಮನಸ್ಸು ಸಿನಿಮಾ. ಯಶ್ ಮತ್ತು ರಾಧಿಕಾ ಒಟ್ಟಿಗೆ ನಟಿಸಿದ್ದ ಮೊದಲ ಸಿನಿಮಾವದು. ಯಶ್​ ಅವರಿಗೆ ಸ್ಟಾರ್​ ಪಟ್ಟವನ್ನು ಕೊಟ್ಟ ಸಿನಿಮಾ ಕೂಡ. ಮೊದಲ ಸಿನಿಮಾದಲ್ಲಿ ಇಬ್ಬರೂ ಅಭಿಮಾನಿಗಳ ಹೃದಯ ಗೆದ್ದರು.  ಕೊನೆಗೆ ಮುಂದೆ ಇವರಿಬ್ಬರೂ ದಂಪತಿಯಾದರು. 

Latest Videos

ಕನ್ನಡ ಸಿನಿಮಾಗಳ ಬಗ್ಗೆ ಬೇಸರ ತೋಡಿಕೊಂಡ ನಟ ಯಶ್​: ಗೋಳೋ ಅನ್ನೋ ಮೊದ್ಲು ಹೀಗೆ ಮಾಡಿ ಅಂದ ನಟ...
  
ಮೊಗ್ಗಿನ ಮನಸು ಸಿನಿಮಾದಲ್ಲಿ ಯಶ್ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ಆದರೀಗ ಯಶ್ ಮಾಸ್ ಹೀರೋ ಆಗಿ ಬೆಳೆದಿದ್ದಾರೆ. ಆದರೆ, ಈ ಚಿತ್ರ ಯಶ್​ ಅವರಿಗೆ ಸಿಗುವ ಹಿಂದೆ ರೋಚಕ ಕಥೆಯೊಂದಿದೆ. ಅದನ್ನು ಈಗ ಯಶ್ ಅವರೇ ಹೇಳಿಕೊಂಡಿದ್ದಾರೆ. ಯೋಗರಾಜ್ ಭಟ್ ಅವರ ಮನದ ಕಡಲು  ಸಿನಿಮಾದ ಟ್ರೈಲರ್  ಲಾಂಚ್ ವೇಳೆ ಬಂದಿದ್ದ ಯಶ್​ ಅವರು, ತಮ್ಮ ಜೀವನದ ಹಲವು ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಇದು ಮೊಗ್ಗಿನ ಮನಸ್ಸಿನ ಸ್ಟೋರಿಯ ಬಗ್ಗೆ. ಈ ಸಿನಿಮಾಕ್ಕೂ ಮುನ್ನ ಯಶ್​ ಅವರು ಜಂಭದ ಹುಡುಗಿ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಮರುವರ್ಷವೇ ಬಿಡುಗಡೆಯಾದ   ಮೊಗ್ಗಿನ ಮನಸು ಇವರಿಗೆ ಅದೃಷ್ಟ ತಂದುಕೊಟ್ಟಿತು. ಇದಕ್ಕೆ ಕಾರಣವಾದದ್ದು, ಈ ಚಿತ್ರದಲ್ಲಿ ನಟಿಸಬೇಕಿದ್ದ ನಟನ ಕಾಲಿಗೆ ಏಟಾಗಿದ್ದು!

ಹೌದು. ಈ ಚಿತ್ರಕ್ಕೆ ಬೇರೆಯವರು ನಾಯಕನಾಗಿದ್ದರಂತೆ. ಆದರೆ ಅವರ ಕಾಲಿಗೆ ಏಟಾಗಿದ್ದರಿಂದ ಕೊನೆಯ ಘಳಿಗೆಯಲ್ಲಿ ಮೊಗ್ಗಿನ ಮನಸ್ಸಿಗೆ ನಾಯಕನಾಗುವ ಅದೃಷ್ಟ ಯಶ್​ ಪಾಲಿಗೆ ಒದಗಿ ಬಂದಿತ್ತು. ಈ ಬಗ್ಗೆ ಇದೀಗ ಯಶ್​ ರಿವೀಲ್​ ಮಾಡಿದ್ದಾರೆ.  'ಮೊಗ್ಗಿನ ಮನಸು ಸಿನಿಮಾ ಅದಾಲೇ ಅನೌನ್ಸ್ ಆಯ್ತು. ಅದರಲ್ಲಿ ರಾಧಿಕಾ ನಟಿಸ್ತಿರೋ ವಿಷಯ ನನಗೆ ಗೊತ್ತಿತ್ತು. ಅದಕ್ಕಾಗಿ ಆಕೆಗೆ  ಗುಡ್​​ ಲಕ್ ಎಂದು ಕೂಡ ಹೇಳಿದ್ದೆ. ಅದಾಗಲೇ  ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿತ್ತು. ಇನ್ನೇನು ಲಾಸ್ಟ್ ಶೆಡ್ಯೂಲ್ ಮಾತ್ರ ಇತ್ತು. ಅಷ್ಟರಲ್ಲಿ ಆ ಸಿನಿಮಾಕ್ಕಾಗಿ ನನಗೆ ಕಾಲ್ ಬಂತು. ಅದಾಗಲೇ ಸಿನಿಮಾ ಮುಕ್ಕಾಲು ಭಾಗ ಮುಗಿದು ಹೋಗಿದ್ದರಿಂದ ಅಷ್ಟಾಗಿ ಕೇರ್​ ಮಾಡಲಿಲ್ಲ' ಎಂದಿದ್ದಾರೆ ಯಶ್​. ಆಮೇಲೆ ಮತ್ತೊಮ್ಮೆ ಕಾಲ್​ ಬಂದು ನನಗೆ ನಟಿಸುವಂತೆ ಕೇಳಲಾಯಿತು. ನನಗೆ ತಮಾಷೆ ಮಾಡ್ತಿದ್ದಾರೆ ಎನ್ನಿಸಿತು.  ರಾಧಿಕಾಗೆ ಕಾಲ್ ಮಾಡಿ ಕೇಳಿದೆ. ಆಗಲೇ ಗೊತ್ತಾಗಿದ್ದು, ಇದು ಸೀರಿಯಸ್​ ವಿಷಯ ಎಂದು. ನಾಯಕನಾಗಿ ನಟಿಸಬೇಕಿದ್ದ ನಟನ  ಕಾಲಿಗೆ ಏಟಾಗಿತ್ತು. ಅವರ ಪಾತ್ರದಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತ್ತು ಎಂದು ಆ ದಿನವನ್ನು ನೆನಪಿಸಿಕೊಂಡು, ಅಂದು ತಮಗೆ ಆ ಅವಕಾಶ ನೀಡಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿನ ಪಾತ್ರಕ್ಕಾಗಿ ಯಶ್ ಅವರಿಗೆ  ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು. 

ಸನ್ನಿ ಲಿಯೋನ್​ ಹೆಸ್ರು ಹೇಳ್ತಿದ್ದಂತೆಯೇ ಯಶ್​ ಸೈಲೆಂಟ್​ ಆಗಿದ್ಯಾಕೆ? ವೈರಲ್​ ವಿಡಿಯೋದಲ್ಲಿನ ಗಮ್ಮತ್ತು ನೋಡಿ!

 

vuukle one pixel image
click me!