ಮದುವೆ ನಂತ್ರ ತಂದೆ ಬದಲು ಅಮ್ಮನ ಹೆಸರಿಟ್ಟುಕೊಂಡ ಪ್ರತೀಕ್ ಬಬ್ಬರ್ ! ಅಪ್ಪನ ಬಗ್ಗೆ ಇಷ್ಟೊಂದು ತಾತ್ಸಾರ

ನಟ ಪ್ರತೀಕ್ ಬಬ್ಬರ್ ತಮ್ಮ ಹೆಸರುನ್ನು ಬದಲಿಸಿಕೊಂಡಿದ್ದಾರೆ. ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಮದುವೆಗೆ ರಾಜ್ ಬಬ್ಬರ್ ಅವರನ್ನು ಯಾಕೆ ಆಹ್ವಾನ ನೀಡಿಲ್ಲ ಎಂಬ ಪ್ರಶ್ನೆಗೂ ಉತ್ತರ ನೀಡಿದ್ದಾರೆ. 
 

Prateik Babbar Drops Father Name After Marriage  Opens Up on Family Rift

ನಟ ಪ್ರತೀಕ್ ಬಬ್ಬರ್ (Actor Prateek Babbar) ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ವಿಷ್ಯಕ್ಕೆ  ಚರ್ಚೆಯಲ್ಲಿದ್ದಾರೆ. ಒಂದ್ಕಡೆ ಅವರ ಮದುವೆ ವಿಷ್ಯ ಚರ್ಚೆಯಲ್ಲಿದ್ರೆ ಇನ್ನೊಂದು ಕಡೆ ಅವರು ಜೊತೆ ತಮ್ಮ ಅಪ್ಪನ ಬದಲು ಅಮ್ಮನ ಹೆಸರನ್ನಿಟ್ಟುಕೊಂಡಿದ್ದಾರೆ. ಪ್ರತೀಕ್ ಹೆಸರು ಬದಲಿಸಿಕೊಂಡಿದ್ದು, ಪ್ರತೀಕ್  ರಾಜ್ ಬಬ್ಬರ್ ಬದಲು ಪ್ರತೀಕ್ ಸ್ಮಿತಾ ಪಾಟೀಲ್ (Smita Patil) ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಪ್ರತೀಕ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಪ್ರತೀಕ್, ಗೆಳತಿ ಪ್ರಿಯಾ ಬ್ಯಾನರ್ಜಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಸಮಯದಲ್ಲಿ ಕೌಟುಂಬಿಕ ಗಲಾಟೆ ಬೆಳಕಿಗೆ ಬಂದಿದೆ. ಇದ್ರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇಷ್ಟು ದಿನ ಮೌನವಾಗಿದ್ದ ಪ್ರತೀಕ್ ಹಾಗೂ ಪ್ರಿಯಾ, ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. 

Latest Videos

ಆರು ವರ್ಷದ ನಂತ್ರ ಭಾರತೀಯ ಸಿನಿಮಾಕ್ಕೆ ಹೀರೋಯಿನ್ ವಾಪಸ್, ಬರ್ತಾನೆ ಗಳಿಕೆಯಲ್ಲಿ

ಪ್ರತೀಕ್ ಹೆಸರು ಬದಲಿಸಿಕೊಳ್ಳಲು ಕಾರಣ ಏನು? : ಪ್ರತೀಕ್ ತಮ್ಮ ತಾಯಿ ಸ್ಮಿತಾ ಪಾಟೀಲ್ ಹೆಸರನ್ನು ಇಟ್ಟುಕೊಳ್ಳಲು ಕಾರಣ ಏನು ಎಂಬುದನ್ನು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಹೇಳಿದ್ದಾರೆ. ನಾನು ನನ್ನ ತಾಯಿ ಮತ್ತು ಅವರ ಪರಂಪರೆಯೊಂದಿಗೆ ಸಂಪರ್ಕದಲ್ಲಿರಲು ಇಷ್ಟಪಡುತ್ತೇನೆ. ಅವರ ಗುರುತು ನನ್ನ ಹೆಸರಿನಲ್ಲಿ ಉಳಿಯಬೇಕೆಂದು ನಾನು ಬಯಸುತ್ತೇನೆ. ಜೀವನದಲ್ಲಿ, ನಾನು ನನ್ನ ತಾಯಿಯಂತೆ ಆಗಲು ಬಯಸುತ್ತೇನೆ.  ತಂದೆಯಂತೆ ಅಲ್ಲವೇ ಅಲ್ಲ.  ಇದು ನನ್ನ ಜೀವನದ ಹೊಸ ಅಧ್ಯಾಯದ ಆರಂಭಕ್ಕೆ ಮುನ್ನುಡಿ ಎಂದು ಪ್ರತೀಕ್ ಹೇಳಿದ್ದಾರೆ. 

ಮದುವೆ ತಂದೆಗೆ ಹೋಗಿರಲಿಲ್ಲ ಆಹ್ವಾನ : ಫೆಬ್ರವರಿ 14 ರಂದು ಖಾಸಗಿ ಸಮಾರಂಭದಲ್ಲಿ ಪ್ರತೀಕ್ ಬಬ್ಬರ್, ಪ್ರಿಯಾ ಬ್ಯಾನರ್ಜಿ ಅವರನ್ನು ಮದುವೆ ಆಗಿದ್ದಾರೆ.  ಪ್ರತೀಕ್ ತಮ್ಮ ತಂದೆ ರಾಜ್ ಬಬ್ಬರ್ ಅವರನ್ನು ಮದುವೆಗೆ ಆಹ್ವಾನಿಸಿರಲಿಲ್ಲ. ಇಡೀ ವಿವಾದ ಕೋಲಾಹಲ ಸೃಷ್ಟಿಸಿದ ನಂತರ, ಈಗ ನವವಿವಾಹಿತ ದಂಪತಿ ಈ ಬಗ್ಗೆ ಮೌನ ಮುರಿದಿದ್ದಾರೆ. ರಾಜ್ ಬಬ್ಬರ್ ಜೊತೆ ತನಗೆ ಯಾವುದೇ ಸಂಬಂಧವಿಲ್ಲದ ಕಾರಣ ಯಾವುದೇ ವದಂತಿಗಳಿಂದ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚಿತ್ರರಂಗದಲ್ಲಿ ಮತ್ತೊಂದು ವಿಚ್ಚೇದನ! ಚಂದನ್-ನಿವೇದಿತಾ ಮಾದರಿಯಲ್ಲೇ ಒಟ್ಟಿಗೆ ಬಂದು ಡಿವೋರ್ಸ್ ಅರ್ಜಿ ಹಾಕಿದ ಸ್ಟಾರ್ ದಂಪತಿ!

ಪ್ರಿಯಾ ಪ್ರತಿಕ್ರಿಯೆ ಏನು? : ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಪ್ರಿಯಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.  ಇದ್ರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಇದಕ್ಕೆ ಸಂಬಂಧಿಸಿದ ವಿಷಯಗಳು ಈಗಾಗಲೇ ಇಂಟರ್ನೆಟ್ನಲ್ಲಿ ಲಭ್ಯವಿದೆ. ಆಸಕ್ತ ಜನರು ಅದನ್ನು ಓದಿಕೊಳ್ಳಬಹುದು ಎಂದು ಪ್ರಿಯಾ ಕಡ್ಡಿ ಮುರಿದಂತೆ ಉತ್ತರ ನೀಡಿದ್ದಾರೆ. ಪ್ರತೀಕ್ ಮತ್ತು ನಾನು ಇದರ ಬಗ್ಗೆ ಮೌನವಾಗಿರಲು ನಿರ್ಧರಿಸಿದ್ದೇವೆ ಎಂದು ಪ್ರಿಯಾ ಹೇಳಿದ್ದಾರೆ. ರಾಜ್ ಬಬ್ಬರ್ ಅವರನ್ನು ಮದುವೆಗೆ ಆಹ್ವಾನಿಸಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಿಯಾ, ನಾವು ಏನೂ ಮಾಡಿಲ್ಲ ಎಂದು ಜನರು ಭಾವಿಸಿದ್ದಾರೆ ಆದ್ರೆ ಅವರು ವಾಸ್ತವದಲ್ಲಿ ಕುಟುಂಬವೇ ಆಗಿರಲಿಲ್ಲ. 30 ವರ್ಷಗಳಿಂದ ಮೌನವಾಗಿದ್ದ ಪ್ರಶ್ನೆ ಈಗ ಏಕೆ ಉದ್ಭವಿಸುತ್ತದೆ ಎಂದು ಪ್ರಿಯಾ ಕೇಳಿದ್ದಾರೆ. 

ಮನೆಯಲ್ಲಿ ಮದುವೆ ಆಗಲು ಕಾರಣ ಏನು? :  ಪ್ರತೀಕ್ ಬಬ್ಬರ್ ಬಾಂದ್ರಾದಲ್ಲಿರುವ ಸ್ಮಿತಾ ಪಾಟೀಲ್ ಅವರ ಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದ್ರ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ ಪ್ರತೀಕ್.  ನಾವು ಮನೆಯಲ್ಲೇ ಮದುವೆ ಮಾಡಿಕೊಳ್ಳಲು ಬಯಸಿದ್ದೆವು.  ಅದು ತುಂಬಾ ಅದ್ಭುತ ಅನುಭವವಾಗಿತ್ತು. ಇದು ನನ್ನ ತಾಯಿ ಖರೀದಿಸಿದ ಮೊದಲ ಮನೆ ಮತ್ತು ನನ್ನ ಮನೆ. ಅವರ ಆತ್ಮಕ್ಕೆ ಗೌರವ ಸಲ್ಲಿಸಲು ಇದು ಅತ್ಯುತ್ತಮ ಮಾರ್ಗ ಎಂದು ನಾನು ಭಾವಿಸುತ್ತೇನೆ ಎಂದು ಪ್ರತೀಕ್ ಹೇಳಿದ್ದಾರೆ.   

vuukle one pixel image
click me!