ಕಾಟೇರ ಸಿನಿಮಾ ಶೈಲಿಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ ಬಿಗ್‌ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಚ್ಚು ನೀಡುವವರೆಗೆ ಸ್ಟೇಷನ್ ಬೇಲ್ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು (ಮಾ.24): ಕಾಟೇರ ಸಿನಿಮಾದಲ್ಲಿ ದರ್ಶನ್ ಹಿಡಿದಿದ್ದ ರೀತಿಯ ಮಚ್ಚು ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿದ್ದ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡಗೆ ಸಂಕಷ್ಟ ಎದುರಾಗಿದೆ. ಇಬ್ಬರನ್ನೂ ಬಸವೇಶ್ವರ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದು, ರೀಲ್ಸ್‌ನಲ್ಲಿ ತೋರಿಸಿದ್ದ ಮಚ್ಚು ಪೊಲೀಸರ ಮುಂದೆ ನೀಡಿದರಷ್ಟೇ ಸ್ಟೇಷನ್ ಬೇಲ್ ನೀಡುವುದಾಗಿ ಕಂಡೀಷನ್ ಹಾಕಿದ್ದಾರೆ. ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ರಜತ್ ಹಾಗೂ ವಿನಯ್ ವಿಚಾರಣೆ ನಡೆದಿದೆ.
ರೀಲ್ಸ್‌ಗೆ ಸಂಬಂಧಪಟ್ಟಂತೆ ಪೊಲೀಸರು ವಿಚಾರಣೆ ನಡೆಸಿ ಸಾಲು ಸಾಲು ಪ್ರಶ್ನೆಗಳನ್ನು ಸೆಲೆಬ್ರಿಟಿಗಳಿಗೆ ಎಸೆದಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿದ್ದರ ಬಗ್ಗೆ ಸಬ್ ಇನ್ಸ್ಪೆಕ್ಟರ್ ಮಾಹಿತಿ ಕಲೆ ಹಾಕಿದ್ದಾರೆ. ಸಮಾಜದಲ್ಲಿ ಯಾವ ಸಂದೇಶ ಕೊಡಲು ಈ ರೀತಿ ಮಾಡಿದ್ದೀರಾ? ಮಚ್ಚು ಹಿಡಿದು ರೀಲ್ಸ್ ಮಾಡಿದರೆ ಸಮಾಜದಲ್ಲಿ ಬೇರೆ ರೀತಿ ಸಂದೇಶ ರವಾನೆಯಾಗುವುದಿಲ್ಲವೇ? ನಿಮಗೆ ಕಾನೂನಿನ ಬಗ್ಗೆ ಅರಿವಿಲಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಇಡೀ ಪ್ರಕರಣವನ್ನು ಪೊಲೀಸರು ಆರ್ಮ್ಸ್ ಆಕ್ಟ್ ಅಡಿ ತನಿಖೆ ಮಾಡುತ್ತಿದ್ದಾರೆ.
ಇದಕ್ಕೆ ವಿನಯ್ ಹಾಗೂ ರಜತ್, 'ಸರ್ ಅದನ್ನ ಸ್ಟುಡಿಯೋದಲ್ಲಿ ಮಾಡಿರುವುದು. ತಮ್ಮ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋಗೋಸ್ಕರ ಮಾಡಿದ್ದು ಎಂದು ಹೇಳಿದ್ದಾರೆ. ಇದು ಪ್ರೊಮೋಷನಲ್ ವಿಡಿಯೋ. ಮಚ್ಚು ಪ್ಲಾಸ್ಟಿಕ್ ಎಂದು ಹೇಳಿದ್ದಾರೆ.
ಇದಕ್ಕೆ ತನಿಖಾಧಿಕಾರಿ, ಯಾವ ರಿಯಾಲಿಟಿ ಶೋ ಪ್ರೋಮೊಷನ್? ಅದರ ದಾಖಲೆ ಏನಿದೆ? ಹಾಗಿದ್ದಲ್ಲಿ ನೀವು ಬಳಸಿದ್ದ ಪ್ಲಾಸ್ಟಿಕ್ ಮಚ್ಚು ತರಿಸಿ ನೋಡೋಣ. ಆ ನಂತರ ಯಾವ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಎಸಿಪಿ ಚಂದನ್, ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ನೇತೃತ್ವದಲ್ಲಿ ಇಬ್ಬರನ್ನೂ ಹಲವು ಗಂಟೆಗಳ ಕಾಲ ಗ್ರಿಲ್ ಹಾಕಲಾಗಿದೆ. ಮಚ್ಚು ತರುವವರೆಗೂ ಠಾಣೆಯಲ್ಲೇ ಇರುವಂತೆ ಸೂಚನೆ ನೀಡಲಾಗಿತ್ತು. ಸಂಜೆಯ ವೇಳೆ ಇಬ್ಬರನ್ನೂ ಅಧಿಕೃತವಾಗಿ ಆರ್ಮ್ಸ್ ಆಕ್ಟ್ ಅಡಿ ಬಂಧನ ಮಾಡಲಾಗಿದೆ.
ಲಾಂಗ್ ಹಿಡಿದು ರೀಲ್ಸ್ ಮಾಡಿದ ಬಿಗ್ ಬಾಸ್ ರಜತ್, ವಿನಯ್ ಗೌಡ; ಇವರ ಮೇಲೆ ಕೇಸ್ ಯಾಕಿಲ್ಲ?
ಈ ರಿಯಾಲಿಟಿ ಶೋ ದಲ್ಲಿ ಬಳಸಿದ್ದ ಮಚ್ಚು ರೀಲ್ಸ್ ಮಾಡಲು ಮಾಡಿದ್ದೇವೆ ಎಂದು ವಿನಯ್ ಹಾಗೂ ರಜತ್ ಹೇಳಿದ್ದು, ನಾಳೆ ಇಬ್ಬರನ್ನೂ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಇಂದು ಪೊಲೀಸ್ ಠಾಣೆಯಲ್ಲೆ ಸೆಲ್‌ನಲ್ಲಿಯೇ ಇಬ್ಬರೂ ದಿನ ಕಳೆಯಲಿದ್ದಾರೆ.
Bigg Boss Kannada ವಿನಯ್ ಗೌಡ, ರಜತ್ ಕಿಶನ್ ವಿರುದ್ಧ ದೂರು ದಾಖಲು! ಏನಾಯ್ತು?