ಟ್ರಾನ್ಸ್‌ಫಾರ್ಮೇಶನ್ ಅಂದ್ರೆ ಇದೇನಾ? ಕಲಾವಿದೆ ಎನಿಸಿಕೊಳ್ಳುವತ್ತ ಹಾಟ್ ನಟಿ ಸನ್ನಿ ಲಿಯೋನ್ ಜರ್ನಿ!

First Published Aug 2, 2024, 5:09 PM IST

ಬಹಳಷ್ಟು ಜನರಂತೆ ನಟಿ, ಕಲಾವಿದೆ ಎನಿಸಿಕೊಳ್ಳಬೇಕು, ತಾವೂ ಕೂಡ ಕತ್ತಲೆ ಜಗತ್ತಿನಿಂದ ಬೆಳಕಿನ ಜಗತ್ತಿನಲ್ಲಿ ಉತ್ತಮ ಅಭಿನೇತ್ರಿ ಎಂದು ಗುರುತಿಸಿಕೊಳ್ಳಬೇಕು ಎಂಬುದು ನಟಿ ಸನ್ನಿ ಲಿಯೋನ್ ಅವರ ಅಭಿಲಾಷೆಯಂತೆ. ಅವರ ಆ ಆಸೆ ಕೈಗೂಡಲು ಪೂರಕವಾದ ಪಾತ್ರಗಳನ್ನು..

ಮೊದಲೆಲ್ಲಾ ವಯಸ್ಕರ ಚಿತ್ರನಟಿ ಎಂಬ ಅಪಖ್ಯಾತಿ ಹೊಂದಿದ್ದ ಹಾಟ್ ಸ್ಟಾರ್ ಸನ್ನಿ ಲಿಯೋನ್ (Sunny Leone) ಈಗ ನಟಿಯಾಗಿ ಬದಲಾಗಿದ್ದಾರೆ. ಅವರ ಪ್ರಕಾರ ಮುಂದೆ ಅವರು ಕಲಾವಿದೆ ಎನಿಸಿಕೊಳ್ಳುವ ತರಾತುರಿಯಲ್ಲಿ ಇದ್ದಾರಂತೆ. 

ನಟಿ ಸನ್ನಿ ಲಿಯೋನ್ ಹಲವು ವರ್ಷಗಳಿಂದ ಪಡ್ಡೆ ಹುಡುಗರ ಕನಸಿನ ಕನ್ಯೆಯಾಗಿದ್ದವರು. ಸನ್ನಿ ಲಿಯೋನ್ ಫೋಟೋಗಳಿಗಾಗಿ,  ವೀಡಿಯೋಗಳಿಗಾಗಿ ಇಂಟರ್ನೆಟ್‌ನಲ್ಲಿ ಹುಡುಕುವವರ ಸಂಖ್ಯೆ ಬಹಳಷ್ಟಿದೆ.

Latest Videos


ನಟಿ ಸನ್ನಿ ಲಿಯೋನ್ ಮುಖ ದರ್ಶನ ಆದರೂ ಸಾಕು, ಅಂದು ಪಡ್ಡೆಗಳಿಗೆ ರಾತ್ರಿ ಊಟ ಸೇರದು, ಮಧ್ಯರಾತ್ರಿ ಆದರೂ ನಿದ್ದೆ ಬಾರದು. ಅಂಥ ಸನ್ನಿ ಲಿಯೋನ್ ಈಗ ಭಾರತದ ಸಿನಿಮಾ ನಟಿಯಾಗಿ ಬದಲಾಗುತ್ತಿದ್ದಾರೆ. ಒಂದಾದ ಮೇಲೆ ಮತ್ತೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

ಸನ್ನಿ ಮೊದಲು ಹಾಟ್ ಸ್ಟಾರ್ ನಟಿ ಪಟ್ಟದಲ್ಲಿದ್ದವರು ಈಗ ನಟಿಯಾಗಿ ಬದಲಾಗಿದ್ದಾರೆ. ಭಾರತದಲ್ಲಿ ನಾರ್ತ್-ಸೌತ್ ಬೇಧವಿಲ್ಲದೇ ಸನ್ನಿ ಲಿಯೋನ್ ಸಿನಿಮಾಗಳಲ್ಲಿ ಸಿಕ್ಕ ಯಾವುದೇ ಆಫರ್ ಬಿಟ್ಟುಕೊಡದೇ ನಟಿಸುತ್ತಿದ್ದಾರೆ. 

ಬಹಳಷ್ಟು ಜನರಂತೆ ನಟಿ, ಕಲಾವಿದೆ ಎನಿಸಿಕೊಳ್ಳಬೇಕು, ತಾವೂ ಕೂಡ ಕತ್ತಲೆ ಜಗತ್ತಿನಿಂದ ಬೆಳಕಿನ ಜಗತ್ತಿನಲ್ಲಿ ಉತ್ತಮ ಅಭಿನೇತ್ರಿ ಎಂದು ಗುರುತಿಸಿಕೊಳ್ಳಬೇಕು ಎಂಬುದು ನಟಿ ಸನ್ನಿ ಲಿಯೋನ್ ಅವರ ಅಭಿಲಾಷೆಯಂತೆ. ಅವರ ಆ ಆಸೆ ಕೈಗೂಡಲು ಪೂರಕವಾದ ಪಾತ್ರಗಳನ್ನು ಹುಡುಕುತ್ತಿದ್ದಾರೆ ಸನ್ನಿ. 

ಆದರೆ, ಅವರಿಷ್ಟದಂತೆ ಅಂದುಕೊಂಡ ಪಾತ್ರಗಳು ಬರುತ್ತಿಲ್ಲವಂತೆ. ಆದರೆ, ಸದ್ಯಕ್ಕೆ ಬಂದ ಪಾತ್ರಗಳು ಸದ್ಯಕ್ಕೆ ಇರುವ ಅವರ ಇಮೇಜನ್ನು ಹಂತಹಂತವಾಗಿ ಬದಲಾಯಿಸಿ ಉತ್ತಮ ಕಲಾವಿದೆಯಾಗುವ ದಿಕ್ಕಿನಲ್ಲಿ ಕರೆದೊಯ್ಯಲು ಸಹಾಯಕ ಆಗುತ್ತಿವೆ ಎನಿಸಿದೆಯಂತೆ. 

ಕೆನಡಾದಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿದ್ದ ಸನ್ನಿ ಲಿಯೋನ್ ಅವರು ತಾವು ಶ್ರೀಮಂತೆ ಆಗಲು ವಯಸ್ಕರ ಸಿನಿಮಾ ನಟಿಯಾಗಿ ಬದಲಾದರು. ಆದರೆ, ಒಂದು ಹಂತದಲ್ಲಿ ದುಡ್ಡು ಎಲ್ಲವೂ ಅಲ್ಲ, ಜೀವನ ಹಾಗು ಸಮಾಜದಲ್ಲಿ ಗೌರವ ಮುಖ್ಯ ಎನಿಸಿದೆಯಂತೆ.  

ಅದೊಂದು ದಿನ ತಾವಿನ್ನು ಕತ್ತಲ ಕೋಣೆಯಲ್ಲಿ ಅಡಲ್ಟ್‌ ಸಿನಿಮಾ ಮಾಡುವುದಿಲ್ಲ ಎಂದು ಘೋಷಿಸಿ ಅಲ್ಲಿಂದ ಹೊರಗೆ ಬಂದುಬಿಟ್ಟರು ಹಾಟ್ ನಟಿ ಸನ್ನಿ ಲಿಯೋನ್. ಇದೇ ಇಂದು ಸನ್ನಿ ಲಿಯೋನ್ ಇಂದು ಯಶಸ್ವಿ ನಟಿಯಾಗಿರುವ ಗುಟ್ಟು ಎನ್ನಬಹುದು!

ಇತ್ತೀಚೆಗೆ ನಟಿ ಸನ್ನಿ ಲಿಯೋನ್ ಅವರು ಮುಖ್ಯ ಪೋಷಕ ಪಾತ್ರಗಳಲ್ಲಿ ನಟಿಸಿ ಬಹಳಷ್ಟು ಜನಮನ್ನಣೆ ಪಡೆಯುತ್ತಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ನಟ ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಯು/ಐ' ಸಿನಿಮಾದಲ್ಲಿ ಸಹ ಒಂದು ಮುಖ್ಯ ಪಾತ್ರದಲ್ಲಿ  ನಟಿಸುತ್ತಿದ್ದಾರೆ ಸನ್ನಿ ಲಿಯೋನ್. 

ಈ ಮೊದಲು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು ಸನ್ನಿ ಲಿಯೋನ್. ಆದರೆ, ಈಗ ಗಟ್ಟಿತನದ ಪಾತ್ರಗಳನ್ನೂ ಪೋಷಣೆ ಮಾಡಿ ಪ್ರಶಂಸೆ ಪಡೆಯುವಷ್ಟು ಬೆಳೆದಿದ್ದಾರೆ. 

ಏಕೆಂದರೆ, ಸನ್ನಿ ಲಿಯೋನ್ ಅವರಿಗೆ ಈಗ ತಮ್ಮ ಬ್ಯಾಡ್ ಇಮೇಜ್ ಇನ್ನೂ ಹೆಚ್ಚು ಬದಲಾಯಿಸಬೇಕಿದೆಯಂತೆ. ಮೊಬೈಲ್, ಲ್ಯಾಪ್ ಟಾಪ್ ತುಂಬಾ ಆಕೆಯದೇ ಫೋಟೋಗಳ ಪೋಲ್ಡರ್ ಗಳಲ್ಲಿ ಸನ್ನಿ ಲಿಯೋನ್ ಪೋಟೋ, ವಿಡಿಯೋ ಇಟ್ಟುಕೊಂಡವರೂ ಇದ್ದಾರೆ. 

click me!