70 ಕೋಟಿ ಬಜೆಟ್, 400 ಕೋಟಿ ಗಳಿಕೆ; 2 ಗಂಟೆ 33 ನಿಮಿಷದ ಚಿತ್ರ ಭಾರತಕ್ಕೆ ಬರಲು 2 ವರ್ಷ ತೊಗೊಂಡಿದ್ಯಾಕೆ?

By Mahmad RafikFirst Published Sep 21, 2024, 6:13 PM IST
Highlights

ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರ ಮೊದಲ ದಿನವೇ ವಿಶ್ವದ 500ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ನೋಡ  ನೋಡುತ್ತಿದ್ದಂತೆ ಚಿತ್ರ 400 ಕೋಟಿಯ ಕ್ಲಬ್ ಸೇರಿತ್ತು. ಇದೀಗ 2 ವರ್ಷದ ಬಳಿಕ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

ಮುಂಬೈ: ಫವಾದ್ ಖಾನ್ ನಟನೆಯ  ಸೂಪರ್ ಹಿಟ್ ಪಾಕಿಸ್ತಾನಿ ಸಿನಿಮಾ "ದಿ ಲೆಜೆಂಡ್ ಆಫ್ ಮೌಲಾ ಜಟ್" ಭಾರತಕ್ಕೆ ಎರಡು ವರ್ಷದ ಬಳಿಕ ಬರುತ್ತಿದೆ. 2 ಗಂಟೆ 33 ನಿಮಿಷದ ಈ ಪಾಕಿಸ್ತಾನಿ ಸಿನಿಮಾ 70 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿ, 400 ಕೋಟಿ ರೂಪಾಯಿ ಗಳಿಸುವ ಮೂಲಕ ಬ್ಲಾಕ್ ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿತ್ತು. ಪಾಕಿಸ್ತಾನ ಸಿನಿಮಾ ಇತಿಹಾಸದಲ್ಲಿಯೇ ಬಿಗ್ ಬಜೆಟ್ ಮತ್ತು ಅದ್ಧೂರಿ ಸಿನಿಮಾ ಎಂಬ ಕೀರ್ತಿಗೆ "ದಿ ಲೆಜೆಂಡ್ ಆಫ್ ಮೌಲಾ ಜಟ್" ಪಾತ್ರವಾಗಿತ್ತು. ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದರೂ ಭಾರತದಲ್ಲಿ ಮಾತ್ರ ರಿಲೀಸ್ ಆಗಿರಲಿಲ್ಲ. ಇದೀಗ ಎರಡು ವರ್ಷದ ಬಳಿಕ ಪಾಕಿಸ್ತಾನಿ ಸೂಪರ್ ಹಿಟ್ ಸಿನಿಮಾ ಭಾರತಕ್ಕೆ ಬಂದಿದೆ. 

"ದಿ ಲೆಜೆಂಡ್ ಆಫ್ ಮೌಲಾ ಜಟ್" ಸಿನಿಮಾ ಪಾಕಿಸ್ತಾನದಲ್ಲಿ 12ನೇ ಅಕ್ಟೋಬರ್ 2022ರಂದು ರಿಲೀಸ್ ಆಗಿತ್ತು. ಚಿತ್ರದ ನಿರ್ದೇಶಕ, ನಿರ್ಮಾಪಕ, ಕಲಾವಿದರು ಹಾಗೂ ತೆರೆ ಹಿಂದಿನ ತಂಡದ ಕಠಿಣ ಪರಿಶ್ರಮದ ಫಲವಾಗಿ ದಿ ಲೆಜೆಂಡ್ ಆಫ್ ಮೌಲಾ ಜಟ್ ಯಶಸ್ವಿಯಾಗಿತ್ತು. ಪಾಕಿಸ್ತಾನದ ಸ್ಟಾರ್‌ಗಳಾದ ಫವಾದ್ ಖಾನ್, ಮಹಿರಾ ಖಾನ್, ಹಮ್ಜಾ ಅಲಿ ಅಬ್ಬಾಸ್, ಹುಮೈಮಾ ಮಲೀಕ್, ಗೌಹರ್ ರಶೀದ್, ಶಮೂನ್, ಶಫಕತ್ ಚೀಮಾ, ಅದ್ನಾನ್ ಜಾಫರ್, ಫಾರಿಸ್ ಸಫಿ, ಅಹ್ಸಾನ್ ಖಾನ್ ಮತ್ತು ಬಾಬರ್ ಅಲಿ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದ ಪಾತ್ರಗಳಿಗೆ ಜೀವ ತುಂಬಿದೆ. ನಾಸಿರ್ ಅದೀಬ್ ಜೊತೆ ಕಥೆ ಬರೆದಿರುವ ಬಿಲಾಲ್ ಲಶಾರಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ರೆ, ಅಮ್ಮಾರಾ ಹಿಕಮತ್ ಮತ್ತು ಅಲಿ ಮುರ್ತಾಜಾ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿದ್ದರು.

Latest Videos

ದಿ ಲೆಜೆಂಡ್ ಆಫ್ ಮೌಲಾ ಜಟ್ ಸಿನಿಮಾ ಬರೋಬ್ಬರಿ 70 ಕೋಟಿ ಪಾಕಿಸ್ತಾನಿ ರೂಪಾಯಿಯಲ್ಲಿ ನಿರ್ಮಾಣವಾಗಿತ್ತು. ಪಾಕಿಸ್ತಾನದ  ಬಿಗ್ ಬಜೆಟ್ ಚಿತ್ರ ಇದಾಗಿದ್ದು, ಅದ್ಧೂರಿಯಾಗಿ ತೆರೆ ಮೇಲೆ ಮೂಡಿ ಬಂದಿತ್ತು. ಭಾರತವನ್ನು ಹೊರತುಪಡಿಸಿ ಬಿಡುಗಡೆಯಾದ ಎಲ್ಲಾ ದೇಶಗಳ ಚಿತ್ರಮಂದಿರದ ಮುಂದೆ ಹೌಸ್‌ಫುಲ್ ಎಂಬ ಬೋರ್ಡ್ ಕಾಣಿಸುತ್ತಿತ್ತು. ಪಾಕಿಸ್ತಾನ, ಯುಕೆ, ಯುಎಇ, ಸೌದಿ ಅರೇಬಿಯಾ, ನಾರ್ವೆ, ಡೆನ್ಮಾರ್ಕ್, ಬಹ್ರೇನ್, ನೆದರ್ಲ್ಯಾಂಡ್ಸ್, ಓಮನ್, ಜರ್ಮನಿ, ಕುವೈತ್, ಫ್ರಾನ್ಸ್, ಸ್ವೀಡನ್, ಸ್ಪೇನ್, ನ್ಯೂಜಿಲೆಂಡ್, ಸಿಂಗಾಪುರ್ ಮತ್ತು ಮಲೇಷ್ಯಾ ಸೇರಿದಂತೆ ಸುಮಾರು 25 ದೇಶಗಳಲ್ಲಿ 500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ದಿ ಲೆಜೆಂಡ್ ಆಫ್ ಮೌಲಾ ಜಟ್ ಸಿನಿಮಾ ರಿಲೀಸ್ ಆಗಿತ್ತು. ಮೊದಲ ವೀಕೆಂಡ್‌ ಅಂತ್ಯಕ್ಕೆ 51 ಕೋಟಿ ದೋಚಿದ ಚಿತ್ರ, ನೋಡನೋಡುತ್ತಿದ್ದಂತೆ 400 ಕೋಟಿಯ ಕ್ಲಬ್‌ಗೆ ಸೇರ್ಪಡೆಯಾಯ್ತು.

ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...1083 ಕೋಟಿ ಲಾಸ್!

ಫವಾದ್ ಖಾನ್ ಮತ್ತು ಮಹಿರಾ ಖಾನ್ ನಟನೆಯ  ಈ ಚಿತ್ರದ ವಿತರಣಾ ಹಕ್ಕುಗಳನ್ನು ಜೀ ಸ್ಟುಡಿಯೋ ಪಡೆದುಕೊಂಡಿತ್ತು. ಭಾರತ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ವಿವಾದ ಉಂಟಾಗಿದ್ದರಿಂದ  ಸಿನಿಮಾ ಬಿಡುಗಡೆಯನ್ನು ತಾತ್ಕಲಿಕವಾಗು ಮುಂದೂಡಿಕೆ ಮಾಡಲಾಗಿತ್ತು. ಜೀ ಸ್ಟುಡಿಯೋ ಸಹ ಯಾವುದೇ ದಿನಾಂಕವನ್ನು ಅಂತಿಮಗೊಳಿಸಿರಲಿಲ್ಲ. 2022ರಲ್ಲಿ ದೆಹಲಿ ಹಾಗೂ ಪಂಜಾಬ್ ಭಾಗಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಜೀ ಸ್ಟುಡಿಯೋ ಮುಂದಾದ್ರೂ ಯಶಸ್ಸು ಆಗಿರಲಿಲ್ಲ. ಪಾಕಿಸ್ತಾನದ ಚಿತ್ರ ಭಾರತದಲ್ಲಿ ಬಿಡುಗಡೆ ಮಾಡಲು ಭಾರೀ ವಿರೋಧ ವ್ಯಕ್ತವಾಗಿತ್ತು.

ದಿ ಲೆಜೆಂಡ್ ಆಫ್ ಮೌಲಾ ಜಟ್ ಚಿತ್ರತಂಡ 2019ರಲ್ಲಿ ಸಿನಿಮಾ ಬಿಡುಗಡೆ ಮಾಡೋದಾಗಿ 2018ರಲ್ಲಿಯೇ ಘೋಷಣೆ ಮಾಡಿಕೊಂಡಿತ್ತು. ಆದ್ರೆ ಇದಕ್ಕೂ ಮೊದಲು ಪಾಕಿಸ್ತಾನದಲ್ಲಿ 1979ರ ವೇಳೆ "ಮೌಲಾ ಜಟ್" ಎಂಬ ಸಿನಿಮಾ ರಿಲೀಸ್ ಆಗಿತ್ತು. ದಿ ಲೆಜೆಂಡ್ ಆಫ್ ಮೌಲಾ ಜಟ್ ಸಿನಿಮಾದ ಫಸ್ಟ್ ಲುಕ್ ರಿವೀಲ್‌ಗೊಂಡ ಬೆನ್ನಲ್ಲೇ "ಮೌಲಾ ಜಟ್" ಕಾಪಿರೈಟ್ ಪ್ರಕರಣವನ್ನು ದಾಖಲಿಸಿತ್ತು. ಈ ಪ್ರಕರಣ ಎರಡು ವರ್ಷ ನಡೆದ ಕಾರಣ ದಿ ಲೆಜೆಂಡ್ ಆಫ್ ಮೌಲಾ ಜಟ್ ಸಿನಿಮಾ 2022ರಲ್ಲಿ ಬಿಡುಗಡೆಯಾಯ್ತು. 

ದಿ ಲೆಜೆಂಡ್ ಆಫ್ ಮೌಲಾ ಜಟ್ ಮೂವಿ ಯೂನಸ್ ಮಲೀಕ್ ಅವರ "ಮೌಲಾ ಜಟ್" ಆಧಾರಿತ ಚಿತ್ರವಾಗಿದೆ. ಮೌಲಾ ಜಟ್ (ಫವಾದ್ ಖಾನ್) ಮತ್ತು ನೂರಿ ಜಟ್ (ಹಮಾಜ್ ಅಲಿ ಅಬ್ಬಾಸಿ) ನಡುವಿನ ವೈರತ್ವದ ಕಥೆಯನ್ನು ಚಿತ್ರ ಒಳಗೊಂಡಿದೆ. ಈ ವೈರತ್ವದ ಸುತ್ತವೇ ಸಿನಿಮಾ ಸಾಗುತ್ತದೆ. ತೆರೆಕಂಡ ಎಲ್ಲಾ ದೇಶಗಳಲ್ಲಿ ಚಿತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಹಾಗಾಗಿ ಭಾರತದಲ್ಲಿಯೂ ಅತ್ಯತ್ತುಮ ಪ್ರದರ್ಶಣ ಕಾಣುವ ಸಾಧ್ಯತೆಗಳಿವೆ. ಭಾರತದಲ್ಲಿ 2ನೇ ಅಕ್ಟೋಬರ್ 2024ರಂದು ರಿಲೀಸ್ ಆಗಲಿದೆ ಎಂಬ ಅಧಿಕೃತ ಮಾಹಿತಿ ಹೊರಬಂದಿದೆ.

20 ಕೋಟಿ ಗಳಿಸಲು ಸಹ ವಿಫಲವಾದ 200 ಕೋಟಿಯ ಚಿತ್ರ- ದೊಡ್ಡ ದೊಡ್ಡ ಸ್ಟಾರ್‌ಗಳಿದ್ರೂ ಹೀನಾಯ ಸೋಲು!

click me!