ಒಟ್ಟಿಗೆ ಕಾಣಿಸಿಕೊಂಡ ಕನ್ನಡತಿ ಜೋಡಿ, ರಾನಿ ಸಿನಿಮಾ ಸಕ್ಸಸ್‌ ಖುಷಿಯಲ್ಲೇ ರಂಜನಿ ರಾಘವನ್ ಗುಟ್ಟು ಬಿಚ್ಚಿಟ್ಟ ಕಿರಣ್ ರಾಜ್

Published : Sep 21, 2024, 03:18 PM IST
 ಒಟ್ಟಿಗೆ ಕಾಣಿಸಿಕೊಂಡ ಕನ್ನಡತಿ ಜೋಡಿ, ರಾನಿ ಸಿನಿಮಾ ಸಕ್ಸಸ್‌ ಖುಷಿಯಲ್ಲೇ ರಂಜನಿ ರಾಘವನ್ ಗುಟ್ಟು ಬಿಚ್ಚಿಟ್ಟ ಕಿರಣ್ ರಾಜ್

ಸಾರಾಂಶ

ಕನ್ನಡತಿ ಫೇಮ್ ನ ರಂಜನಿ ರಾಘವನ್ ಮತ್ತು ಕಿರಣ್ ರಾಜ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ರಾನಿ ಸಕ್ಸಸ್ ಖುಷಿಯಲ್ಲಿರುವ ಕಿರಣ್ ರಾಜ್, ಮಾಜಿ ಕೋ ಸ್ಟಾರ್ ರಂಜನಿ ಜೊತೆ ಸಿನಿಮಾ ಅನುಭವ ಹಂಚಿಕೊಂಡಿದ್ದಾರೆ. ಈ ಟೈಂನಲ್ಲಿ ರಂಜನಿ ಗುಟ್ಟೊಂದು ಹೊರಬಿದ್ದಿದೆ.   

ಕಲರ್ಸ್ ಕನ್ನಡದ ಪ್ರಸಿದ್ಧ ಧಾರಾವಾಹಿ ಕನ್ನಡತಿ ಸೀರಿಯಲ್ (Colors Kannada famous serial Kannada serial) ಮುಗಿದು ವರ್ಷಗಳೇ ಕಳೆದ್ರೂ ನಟಿ ರಂಜನಿ ರಾಘವನ್ (Actress Ranjani Raghavan) ಹಾಗೂ ನಟ ಕಿರಣ್ ರಾಜ್ (Actor Kiran Raj) ಜೋಡಿಯನ್ನು ಅಭಿಮಾನಿಗಳು ಈಗ್ಲೂ ಪ್ರೀತಿಸ್ತಾರೆ. ತೆರೆ ಮೇಲೆ ಅಧ್ಬುತವಾಗಿ ನಟಿಸಿದ್ದ ಜೋಡಿ ಈಗ ಬೇರೆ ಬೇರೆ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಕಿರಣ್ ರಾಜ್ ಅಭಿನಯದ ರಾನಿ ಸಿನಿಮಾ (Ronny movie), ಯಶಸ್ವಿಯಾಗಿ ಓಡ್ತಿದ್ದು, ಸ್ಯಾಂಡಲ್ವುಡ್ ಗೆ ಸೂಪರ್ ಹೀರೋ ಸಿಕ್ಕಂತಾಗಿದೆ. ಫ್ಯಾಮಿಲಿ ಕುಳಿತು ನೋಡ್ಬಹುದಾದಂತ ಈ ಸಿನಿಮಾ ಬಗ್ಗೆ ಕನ್ನಡದಿ ಫೇಮ್ ನ ರಂಜನಿ ರಾಘವನ್ ಒಳ್ಳೆ ಮಾತುಗಳನ್ನಾಡಿದ್ರೆ, ರಂಜನಿ ಗುಟ್ಟನ್ನು ಕಿರಣ್ ರಾಜ್ ಬಿಟ್ಕೊಟ್ಟಿದ್ದಾರೆ.

ರಾನಿ ಸಿನಿಮಾ ತೆರೆಕಂಡು ವಾರ ಕಳೆದಿದ್ದು, ಚಿತ್ರದ ಪ್ರಮೋಷನ್ ನಲ್ಲಿ ಕಿರಣ್ ರಾಜ್ ಬ್ಯೂಸಿಯಿದ್ದಾರೆ. ಕನ್ನಡತಿ ರಂಜನಿ ರಾಘವನ್, ರಾನಿ ಚಿತ್ರ ವೀಕ್ಷಣೆ ಮಾಡಿದ್ದು, ಚಿತ್ರದ ಬಗ್ಗೆ ಮಾಜಿ ಕೋ ಸ್ಟಾರ್ ಜೊತೆ ಕಿರಣ್  ಮಾತನಾಡಿದ್ದಾರೆ. ಕಿರಣ್ ಆಕ್ಟಿಂಗ್, ಆಕ್ಷನ್ ಹಾಗೂ ಅವರ ಯಶಸ್ಸಿನ ಹಿಂದಿರುವ ಶ್ರಮದ ಬಗ್ಗೆ ರಂಜನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ಲಿಸರಿನ್ ಬಳಸದೆ ಒಂದು ಕಣ್ಣಾದ್ಮೇಲೆ ಇನ್ನೊಂದು ಕಣ್ಣಿನಲ್ಲಿ ನೀರು ತರಿಸಿದ ಸೀನ್ ಅಧ್ಬುತವಾಗಿದೆ ಎಂದ ರಂಜನಿ, ಸಿನಿಮಾವನ್ನು ಫ್ಯಾಮಿಲಿ ಜೊತೆ ಹೋಗಿ ನೋಡಿ ಅಂತ ವೀಕ್ಷಕರಲ್ಲಿ ಮನವಿ ಮಾಡಿದ್ದಾರೆ.

ವಯಸ್ಸು 70 ಆಗ್ತಿದೆ, ನಿಲ್ಲದ ಹುಮ್ಮಸ್ಸು, ಅಮೆರಿಕದಲ್ಲಿ ಓದ್ತಿದ್ದಾರೆ ಕಮಲ್ ಹಾಸನ್!

ಈ ಮಧ್ಯೆ ಕಿರಣ್ ರಾಜ್, ರಂಜನಿ ನಟನೆ, ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡತಿ ಸಂದರ್ಭದಲ್ಲಿ ರಂಜನಿ, ಏನೆಲ್ಲ ಸರ್ಕಸ್ ಮಾಡ್ತಾ ಇದ್ರು ಎಂಬುದನ್ನು ಕಿರಣ್ ರಾಜ್ ಹೇಳಿದ್ದಾರೆ. ಶೂಟಿಂಗ್ ಗೆ ಬ್ರೇಕ್ ಸಿಗ್ತಾ ಇದ್ದಂತೆ ಮೂರು ಪುಟುಗಳಷ್ಟು ಬರೆಯುತ್ತಿದ್ದ ರಂಜನಿ, ಮರುದಿನ ಅದನ್ನು ಹರಿದು ಮತ್ತೊಂದನ್ನು ಬರೆಯುತ್ತಿದ್ದರು. ಕಥೆ, ಪುಸ್ತಕ ಬರೆಯೋದ್ರಲ್ಲಿ ಅವರ ಶ್ರಮ ಸಾಕಷ್ಟಿದೆ. ಶೂಟಿಂಗ್ ಮಧ್ಯೆಯೇ ಬಿಡುಗಡೆಯಾದ ಅವರ ಕಥೆಡಬ್ಬಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಹೊಸ ಪ್ರಾಜೆಕ್ಟ್ ಜೊತೆ ಅವರು ಬರ್ತಿದ್ದಾರೆ. ಅದೇನೂ ಅನ್ನೋದು ನನಗೆ ಗೊತ್ತು. ಆದ್ರೆ ಹೇಳೋ ಹಾಗಿಲ್ಲ ಎನ್ನುವ ಮೂಲಕ ಅಭಿಮಾನಿಗಳಲ್ಲಿ ಕಿರಣ್ ಕುತೂಹಲ ಹುಟ್ಟಿಸಿದ್ದಾರೆ.

ರಂಜನಿ ಈ ಬಾರಿ ದೊಡ್ಡದಾಗಿ ಏನೂ ಮಾಡ್ತಿದ್ದು, ನಮಗೂ ಕೆಲಸ ನೀಡುವ ಸಾಧ್ಯತೆ ಇದೆ ಎಂದು ಕಿರಣ್ ಹೇಳಿದ್ದಾರೆ. ಅಷ್ಟೇ ಅಲ್ಲ, ದಸರಾ ಸಂದರ್ಭದಲ್ಲಿ ಅವರೇ ತಮ್ಮ ಪ್ರಾಜೆಕ್ಟ್ ಬಗ್ಗೆ ಹೇಳ್ತಾರೆ ಎಂದಿದ್ದಾರೆ ಕಿರಣ್ ರಾಜ್. ಈ ಮಾತನ್ನು ಕೇಳಿದ ರಂಜನಿ, ಹೌದು ಎಂದು ತಲೆ ಅಲ್ಲಾಡಿಸಿದ್ದಲ್ಲದೆ, ಶೀಘ್ರದಲ್ಲಿ ಸಿಕ್ರೇಟ್ ರಿವೀಲ್ ಮಾಡೋದಾಗಿ ಹೇಳಿದ್ದಾರೆ.ಈಗಾಗಲೇ ಎರಡು ಪುಸ್ತಕ ಬಿಡುಗಡೆ ಮಾಡಿ, ಒಂದಿಷ್ಟು ಸಿನಿಮಾದಲ್ಲಿ ಬ್ಯುಸಿಯಿರುವ ರಂಜನಿ, ಸದಾ ಹೊಸತನವನ್ನು ಬಯಸುವವರು. ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಅವರ ಮತ್ತೊಂದು ಕಾದಂಬರಿ ಬರ್ತಿದೆಯಾ ಇಲ್ಲ ಮತ್ತೊಂದು ಹೊಸ ಕೆಲಸ ಶುರು ಮಾಡಲಿದ್ದಾರಾ ಎಂಬುದು ಪ್ರಶ್ನೆಯಾಗಿದೆ.

ರಾಹಾ ವಿಷ್ಯಕ್ಕೆ ನಡೆದಿತ್ತು ಆಲಿಯಾ – ರಣಬೀರ್ ಮಧ್ಯೆ ಜಗಳ, ರಾಹಾ ಮೊದಲು ಕರೆದಿದ್ದು ಯಾರನ್ನ?

ಯುಟ್ಯೂಬ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡು, ಸಿನಿಮಾ, ಪ್ರಾಜೆಕ್ಟ್ ಬಗ್ಗೆ ಮಾತನಾಡಿದ ರಂಜನಿ ರಾಘವನ್ ಮತ್ತು ಕಿರಣ್ ರಾಜ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮಿಸ್ ಯು ಹರ್ಷಾ – ಭುವಿ ಎಂದಿದ್ದಾರೆ. ಅಲ್ಲದೆ ಈ ಎರಡು ಜೋಡಿಯ ಮುಂದಿನ ಕೆಲಸಕ್ಕೆ ಅಭಿಮಾನಿಗಳು ಶುಭಕೋರಿದ್ದಾರೆ. ಕಿರುತೆರೆಯಲ್ಲಿ ಮನೆ ಮಗನಾಗಿ ಕಾಣಿಸಿಕೊಂಡಿದ್ದ ಕಿರಣ್ ರಾಜ್, ರಾನಿಯಲ್ಲಿ ಆಕ್ಷನ್ ಸ್ಟಾರ್ ಆಗಿ ಮಿಂಚಿದ್ದಾರೆ. ಕಿರಣ್ ರಾಜ್ ನಟನೆಗೆ ಫುಲ್ ಮಾರ್ಕ್ಸ್ ಬಿದ್ದಿದ್ದು, ಸ್ಯಾಂಡಲ್ವುಡ್ ಗೆ ಮಾಸ್ ಹಿರೋ ಸಿಕ್ಕಂತಾಗಿದೆ ಎಂದು ಅಭಿಮಾನಿಗಳು ಹೇಳ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?