
ಮನೆಗೆ ಮಕ್ಕಳು ಬಂದ್ಮೇಲೆ ಅದ್ರ ಸಂಭ್ರಮವೇ ಬೇರೆ. ಬಾಲಿವುಡ್ ಸ್ಟಾರ್ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ (Bollywood star couple Alia Bhatt and Ranbir Kapoor) ಎಲ್ಲರ ಫೆವರೆಟ್. ಆದ್ರೆ ರಾಹಾ ಬರ್ತಿದ್ದಂತೆ ಆಲಿಯಾಗಿಂತ ರಾಹಾ (Raha) ನೋಡಲು ಫ್ಯಾನ್ಸ್ ಆಸಕ್ತಿ ತೋರ್ತಿದ್ದಾರೆ. ರಾಹಾ ಮನೆಯಲ್ಲಿ ಹೇಗಿರ್ತಾಳೆ, ಆಕೆ ದಿನಚರಿ ಏನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗಿದೆ. ಅದಕ್ಕೆ ತಕ್ಕಂತೆ ಆಲಿಯಾ, ಆಗಾಗ ತನ್ನ ಮುದ್ದು ಮಗಳ ಬಗ್ಗೆ ಇಂಟರೆಸ್ಟಿಂಗ್ ವಿಷ್ಯ ಹೇಳ್ತಿರುತ್ತಾರೆ. ಈಹಗ ರಾಹಾ ಕಾರಣಕ್ಕೆ ಆಲಿಯಾ ಹಾಗೂ ರಣಬೀರ್ ಜಗಳ ಮಾಡ್ಕೊಂಡಿದ್ದ ವಿಷ್ಯವನ್ನು ಆಲಿಯಾ ಹೇಳಿದ್ದಾರೆ.
ಇಂಟರ್ವ್ಯೂ ಒಂದರಲ್ಲಿ ಮಾತನಾಡಿದ ಆಲಿಯಾ, ರಾಹಾ ಯಾರ ಹೆಸರನ್ನು ಮೊದಲು ಹೇಳ್ತಾಳೆ ಎನ್ನುವ ಬಗ್ಗೆ ನಮ್ಮಿಬ್ಬರಲ್ಲಿ ಜಗಳ ನಡೆದಿತ್ತು ಎಂದಿದ್ದಾರೆ. ಆಲಿಯಾ ಮಗಳು ರಾಹಾ, ತೊದಲುನುಡಿ ಶುರು ಮಾಡ್ತಿದ್ದಂತೆ ಮನೆಯಲ್ಲಿ ಪಾಪಾ ಹೇಳು ಅಂತ ರಣಬೀರ್, ಮಮ್ಮಾ ಹೇಳು ಅಂತ ಆಲಿಯಾ ಪೀಡಿಸೋಕೆ ಶುರು ಮಾಡಿದ್ರು. ಮೊದಲು ಪಪ್ಪಾ ಅಂತಾಳೆ ನನ್ನ ಮಗಳು ಅಂತ ರಣಬೀರ್ ವಾದಿಸಿದ್ರೆ, ಮೊದಲು ಮಮ್ಮಾ ಅಂತಾಳೆ ಅನ್ನೋದು ಆಲಿಯಾ ವಾದ.
ರಾಹಾ ಮೊದಲು ಕರೆದಿದ್ದು ಯಾರನ್ನ? : ಆಟವಾಡ್ತಿದ್ದ ರಾಹಾ ಒಂದು ದಿನ ಹೆಸರು ಕೂಗಿದ್ದಾಳೆ. ಇದನ್ನು ಕೇಳಿದ ಆಲಿಯಾ ಖುಷಿಯಲ್ಲಿ ಕುಣಿದಿದ್ದಾರೆ. ರಾಹಾ, ಮಮ್ಮಾ ಎನ್ನುತ್ತಿದ್ದಂತೆ ಆಲಿಯಾಗೆ ನಂಬೋಕೆ ಸಾಧ್ಯವಾಗ್ಲಿಲ್ಲ. ರಣಬೀರ್ ಗೆ ತೋರಿಸೋಕೆ ಪ್ರೂಫ್ ಬೇಕಲ್ಲ. ಹಾಗಾಗಿ, ಮಗಳಿಗೆ ಇನ್ನೊಮ್ಮೆ ಮಮ್ಮಾ ಹೇಳು ಅಂತ ಆಲಿಯಾ ರಿಕ್ವೆಸ್ಟ್ ಮಾಡಿದ್ದೇ ಮಾಡಿದ್ದು. ಆದ್ರೆ ರಾಹಾ ಮತ್ತೆ ಹೇಳ್ಲೆ ಇಲ್ಲ. ರಾಹಾ ಮೊದಲು ಮಮ್ಮಾ ಅಂತಾ ಹೇಳಿದ್ದಾಳೆ ಅಂದ್ರೆ ರಣಬೀರ್ ನಂಬ್ತಿಲ್ಲ. ನನ್ನ ಬಳಿ ಯಾವುದೇ ಸಾಕ್ಷ್ಯವಿಲ್ಲ ಎಂದು ಆಲಿಯಾ ಸಂದರ್ಶನದಲ್ಲಿ ಹೇಳ್ಕೊಂಡಿದ್ದಾರೆ. ನಾನು ಆ ಕ್ಷಣದ ಬಗ್ಗೆ ತುಂಬಾ ಸಂತೋಷ ಮತ್ತು ಹೆಮ್ಮೆಪಡುತ್ತೇನೆ. ಹಾಗಾಗಿ ಆ ಕ್ಷಣ ನನಗೆ ಸ್ಪಷ್ಟವಾಗಿ ನೆನಪಿದೆ. ನನ್ನ ಬಳಿ ಅದ್ರ ವಿಡಿಯೋ ಕೂಡ ಇದೆ ಎಂದು ಆಲಿಯಾ ಹೇಳಿದ್ದಾರೆ.
ಆಲಿಯಾ – ರಣಬೀರ್ ಗೆ ಮಗಳು ರಾಹಾ ಸರ್ವಸ್ವವಾಗಿದೆ. ತಮ್ಮ ಬಹುತೇಕ ಸಮಯವನ್ನು ರಾಹಾ ಜೊತೆ ಕಳೆಯಲು ಜೋಡಿ ಬಯಸ್ತಿದ್ದಾರೆ. ರಾಹಾಗೆ ಮೊದಲು ಆದ್ಯತೆ ನೀಡ್ತಿರೋ ಕಾರಣ, ನನಗೆ ಟೈಂ ಸಿಗ್ತಿಲ್ಲ ಎಂದು ಆಲಿಯಾ ಹೇಳಿದ್ದಾರೆ. ಮಗು ಜನಿಸಿದ ದಿನವನ್ನು ನೆನಪು ಮಾಡಿಕೊಂಡ ಆಲಿಯಾ, ಇದೊಂದು ಅಮೂಲ್ಯ ಕ್ಷಣ ಎಂದಿದ್ದಾರೆ. ರಾಹಾ ಹುಟ್ಟಿದ ದಿನ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಅವಿಸ್ಮರಣೀಯ ದಿನ. ಅವಳು ಮೊದಲ ಬಾರಿ ಮಾತನಾಡಿದಾಗ ನನಗೆ ದೇವರು ಮಾತನಾಡ್ತಿರುವ ಅನುಭವವಾಯ್ತು. ಇದು ಭಾವನಾತ್ಮಕವಾಗಿತ್ತು ಎಂದು ಆಲಿಯಾ ಹೇಳಿದ್ದಾರೆ.
ಕಾವೇರಿಗೆ ಒಲಿದ 'ಜನ ಮೆಚ್ಚಿದ ಮಂಥರೆ' ಪಟ್ಟ..' ಫ್ಯಾನ್ಸ್ ಹೇಳ್ತಿದ್ದಾರೆ.. ವಜ್ರೇಶ್ವರಿಗೆ ಬರ್ಬೇಕಿತ್ತು!
ಕೆಲ ದಿನಗಳ ಹಿಂದೆ ಮುಂಬೈ ಏರ್ಪೋರ್ಟ್ ನಲ್ಲಿ ಆಲಿಯಾ ಹಾಗೂ ರಣಬೀರ್ ಜೊತೆ ರಾಹಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ಲು. ಅಜ್ಜಿ ನೀತಾ ಕಪೂರ್ ಕೂಡ ಅಲ್ಲಿದ್ರು. ಅಜ್ಜಿ ನೋಡ್ತಿದ್ದಂತೆ ಕ್ಯೂಟ್ ಆಗಿ ರಿಯಾಕ್ಟ್ ಮಾಡಿದ್ದ ರಾಹಾ ಧ್ವನಿಯನ್ನು ಅದೇ ಮೊದಲ ಬಾರಿ ಎಲ್ಲರೂ ಕೇಳಿದ್ರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಾಹಾ ಎಲ್ಲಿ ಹೋದ್ರೂ ಪಾಪರಾಜಿಗಳ ಕಣ್ಣು ಆಕೆ ಮೇಲಿರುತ್ತದೆ. ಆಲಿಯಾ ಹಾಗೂ ರಣಬೀರ್ ಮದುವೆಯಾದ ಎಂಟು ತಿಂಗಳಿಗೆ ರಾಹಾ ಜನಿಸಿದ್ದಾಳೆ. ಇದೇ ನವೆಂಬರ್ 6 ಬಂದ್ರೆ ರಾಹಾ ಎರಡನೇ ವರ್ಷಕ್ಕೆ ಕಾಲಿಡಲಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.