ಇವರು ಭಾರತದ ಅತ್ಯಂತ ಶ್ರೀಮಂತ ಭಿಕ್ಷುಕರು… ಇವರ ತಿಂಗಳ ಸಂಪಾದನೆ ಕೇಳಿದ್ರೆ ಶಾಕ್ ಆಗ್ತೀರಿ..

Published : Sep 22, 2024, 12:08 AM ISTUpdated : Sep 23, 2024, 08:57 AM IST

ಭಿಕ್ಷುಕರು ಅಂದ್ರೆ ತಿನ್ನಲು ಗತಿ ಇಲ್ಲದ, ಕೈಯಲ್ಲಿ ಹಣ ಇಲ್ಲದ, ಉಳಿದುಕೊಳ್ಳಲು ಮನೆ ಇಲ್ಲದೇ ಜನರ ಮುಂದೆ ಕೈಚಾಚುವ ವ್ಯಕ್ತಿ ಎಂದು ನೀವು ಅಂದುಕೊಂಡಿರುತ್ತೀರಿ. ಆದರೆ ಈ ಭಿಕ್ಷುಕರ ಬಗ್ಗೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.   

PREV
16
ಇವರು ಭಾರತದ ಅತ್ಯಂತ ಶ್ರೀಮಂತ ಭಿಕ್ಷುಕರು… ಇವರ ತಿಂಗಳ ಸಂಪಾದನೆ ಕೇಳಿದ್ರೆ ಶಾಕ್ ಆಗ್ತೀರಿ..

ಭಿಕ್ಷುಕ ಎಂದ ಕೂಡಲೇ ನೆನಪಾಗೋದು ತುಂಬಾ ಬಡತನದಲ್ಲಿರುವ, ಹಳೆಯ ಬಟ್ಟೆ ಧರಿಸಿರುವ, ತಿನ್ನಲು ಗತಿ ಇಲ್ಲದೇ, ಬೀದಿ ಬದಿಯಲ್ಲಿ ಬಿದ್ದಿರುವಂತಹ ವ್ಯಕ್ತಿ. ಆದರೆ ಇವತ್ತು ನಾವು ನಿಮಗೆ ನೀವು ಅಂದುಕೊಂಡಿರೋದಕ್ಕಿಂತ ವಿಭಿನ್ನವಾದ, ನೀವು ಯೋಚನೆ ಮಾಡೋದಕ್ಕೂ ಸಾಧ್ಯ ಇರದಂತಹ ಭಿಕ್ಷುಕರ ಬಗ್ಗೆ ಹೇಳ್ತೀವಿ.ಈ ಭಿಕ್ಷುಕರು (beggars) ದೇಶದ ಅತ್ಯಂತ ಶ್ರೀಮಂತ ಭಿಕ್ಷುಕರು ಅಂದ್ರೆ ನೀವು ನಂಬಲೇಬೇಕು. 
 

26

ಲಕ್ಷ್ಮೀ ದಾಸ್  (Lakshmi Das): 
ಈಕೆ ಭಿಕ್ಷೆ ಬೇಡುವ ಮೂಲಕ ಪ್ರತಿ ತಿಂಗಳು ಸುಮಾರು 35 ಸಾವಿರದಷ್ಟು ಹಣ ಸಂಪಾದನೆ ಮಾಡ್ತಾಳೆ. ಇವರು ಕೊಲ್ಕತ್ತಾದಲ್ಲಿ ಭಿಕ್ಷೆ ಬೇಡುತ್ತಿದ್ದು, 16ನೇ ವಯಸ್ಸಿನಲ್ಲೇ ಇವರು ಭಿಕ್ಷಾಟನೆ ಆರಂಭಿಸಿದ್ದಾರೆ. 

36

ಸಂಭಾಜಿ ಕಾಳೆ (Sambhaji Kale): 
ಈತ ದಿನಕ್ಕೆ ಸುಮಾರು 1 ಸಾವಿರದಷ್ಟು ಭಿಕ್ಷೆ ಮೂಲಕ ಸಂಪಾದಿಸುತ್ತಾನೆ. ಅಂದ್ರೆ ಪ್ರತಿ ತಿಂಗಳಿಗೆ ಮೂವತ್ತು ಸಾವಿರ ಸಂಪಾದಿಸುತ್ತಾನೆ. ಈತನ ಬ್ಯಾಂಕ್ ನಲ್ಲಿ ಸುಮಾರು 1.5 ಲಕ್ಷ ಹಣವಿದೆ. ಇವರು ಮುಂಬೈನ ಖಾರ್ ನಲ್ಲಿ ಭಿಕ್ಷೆ ಬೇಡುತ್ತಾರೆ. 

46

ಕೃಷ್ಣ ಕುಮಾರ್ ಗೀತೆ  (Krishna Kumar Gite): 
ಭಿಕ್ಷುಕರಾಗಿರುವ ಕೃಷ್ಣ ಕುಮಾರು ಪ್ರತಿದಿನ ಸುಮಾರು 1500ರದಷ್ಟು ದುಡಿಯುತ್ತಾರೆ. ಅಂದರೆ ತಿಂಗಳಿಗೆ ಸುಮಾರು 45 ರಿಂದ 50 ಸಾವಿರದಷ್ಟು ಹಣ ಸಂಪಾದನೆ ಮಾಡ್ತಾರೆ. ಇವರ ಬಳಿ ಐದು ಲಕ್ಷದ ಒಂದು ಅಪಾರ್ಟ್ ಮೆಂಟ್ ಕೂಡ ಇದೆ. ಇವರು ಮುಂಬೈನ ಚರ್ನಿ ರೋಡ್ ನಲ್ಲಿ ಭಿಕ್ಷಾಟನೆ ಮಾಡ್ತಾರೆ.

56

ಸರವತೀಯ ದೇವಿ (Sarvatia Devi):
ಇವರು ತಿಂಗಳಿಗೆ ಬರೋಬ್ಬರಿ 50 ಸಾವಿರ ರೂಪಾಯಿಗಳಿಸುತ್ತಾರೆ.  ಅಷ್ಟೇ ಅಲ್ಲ ವರ್ಷಕ್ಕೆ ನಾಲ್ಕು ಲಕ್ಷ ಮೌಲ್ಯದ ಎರಡು ಜೀವಾ ವಿಮೆಗಳಿಗೆ ಸುಮಾರು 36 ಸಾವಿರ ರೂಪಾಯಿಗಳನ್ನು ಕಟ್ಟುತ್ತಾರೆ. ಇವರು ಬಿಹಾರದ ರಾಜಧಾನಿ ಪಾಟ್ನಾದ ಅಶೋಕ್ ಸಿನಿಮಾ ಬಳಿ ಭಿಕ್ಷಾಟನೆ ಮಾಡ್ತಾರೆ. 

66

ಭರತ್ ಜೈನ್ (Bharat Jain): 
ಇವರನ್ನ ಭಾರತದ ಅಷ್ಟೇ ಅಲ್ಲ ಪ್ರಪಂಚದ ಅತ್ಯಂತ ಶ್ರೀಮಂತ ಭಿಕ್ಷುಕ ಎಂದೇ ಹೇಳಬಹುದು. ಇವರು ತಿಂಗಳಿಗೆ ಬರೋಬ್ಬರಿ 70 ಸಾವಿರ ರೂಪಾಯಿ ಗಳಿಸುತ್ತಾರೆ. ಇವರ ನೆಟ್ ವರ್ತ್ 1 ಮಿಲಿಯನ್ ಡಾಲರ್ ಅಂದ್ರೆ ಸುಮಾರು 27 ಕೋಟಿ ಆಗಿದೆ. ಅಷ್ಟೇ ಅಲ್ಲ ಇವರು ಮುಂಬೈನಲ್ಲಿ 70 ಲಕ್ಷ ಮೌಲ್ಯದ ಎರಡು ಅಪಾರ್ಟ್ ಮೆಂಟ್ ಗಳನ್ನ ಸಹ ಹೊಂದಿದ್ದಾರೆ. ಕಳೆದ 40 ವರ್ಷಗಳಿಂದ ಇವರು ಭಿಕ್ಷೆ ಬೇಡುತ್ತಿದ್ದಾರೆ. 

Read more Photos on
click me!

Recommended Stories