ಉತ್ತರ ಭಾರತೀಯರು ಬೆಂಗಳೂರು ಬಿಟ್ಟು ಹೋದರೆ ಖುಷಿಯಾಗುತ್ತದೆ ಎಂಬರ್ಥದಲ್ಲಿ ವಿಡಿಯೋ ಮಾಡಿರುವ ಸುಗಂಧ ಶರ್ಮಗೆ ಕನ್ನಡ ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ. ಅನುಪಮಾ ಗೌಡ, ಚಂದನ್ ಶೆಟ್ಟಿ, ವರ್ಷ ಬೊಲ್ಲಮ್ಮ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಸೆ.21): ಹಿಂದಿ ಹೇರಿಕೆ ವಿಚಾರವಾಗಿ ಆರಂಭಗೊಂಡ ಉತ್ತರ ಭಾರತೀಯರ ಮೇಲಿನ ದ್ವೇಷ ಈಗಲೂ ರಾಜ್ಯದಲ್ಲಿ ಮುಂದುವರಿಯುತ್ತಿದೆ. ಇನ್ನು ಉತ್ತರ ಭಾರತೀಯರು ಕೂಡ ತಮ್ಮ ಪೋಸ್ಟ್‌ಗಳಲ್ಲಿ ಸ್ಥಳೀಯ ಜನರನ್ನು ಕೆರಳಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಪಂಜಾಬ್ ಮೂಲದ ಯುವಕನ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿತ್ತು. ಈಗ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮನ್ನು ತವು ಡಿಜಿಟಲ್ ಕ್ರಿಯೇಟರ್ ಎಂದು ಕರೆಸಿಕೊಳ್ಳುವ ಕಂಟೆಂಟ್ ಕ್ರಿಯೇಟರ್ ಸುಗಂದ್ ಶರ್ಮ ಸ್ಥಳೀಯ ಜನರನ್ನು ಕೆರಳಿಸುವ ಪ್ರಯತ್ನ ಮಾಡಿದ್ದು, ಇದಕ್ಕೆ ಕನ್ನಡದ ಕಿರುತೆರೆಯ ಹಲವು ಸ್ಟಾರ್‌ಗಳು ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ನಟಿ ನಿರೂಪಕಿ ಅನುಪಮಾ ಗೌಡ, ಚಂದನ್ ಶೆಟ್ಟಿ, ಆರ್‌ಜೆ ಮಯೂರ್, ತಮಿಳು ಸಿನಿಮಾರಂಗದ ಪ್ರಖ್ಯಾತ ನಟಿ ಕರ್ನಾಟಕ ಮೂಲದ ವರ್ಷ ಬೊಲ್ಲಮ ಪ್ರತಿಕ್ರಿಯೆ ನೀಡಿದ್ದು ಆದಷ್ಟು ಬೇಗ ನೀವು ಇಲ್ಲಿಂದ ತೊಲಗಿ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಮಾಡಿರುವ ಸುಗಂಧ ಶರ್ಮ, 'ನೀವು ಯಾವಾಗಲೂ ಹೇಳ್ತಾ ಇರ್ತೀರಿ.. ನೀವು ಉತ್ತರ ಭಾರತೀಯರು ವಾಪಾಸ್ ಹೋಗಿ ಅಂತಾ. ಹಾಗೇನಾದರೂ ನಾವು ನಿಜವಾಗಿಯೂ ಬೆಂಗಳೂರಿನಿಂದ ಎದ್ದು ಹೊರಗೆ ಹೋದರೆ, ನಿಮ್ಮ ಊರು ಪೂರ್ತಿ ಖಾಲಿಯಾಗಿ ಹೋಗುತ್ತದೆ. ಮೊದಲಿಗೆ ನಿಮ್ಮೆಲ್ಲರ ಪಿಜಿಗಳು ಖಾಲಿಯಾಗಿ ಹೋಗುತ್ತದೆ. ಅದರಿಂದ ಸಂಪಾದನೆ ಮಾಡುವ ಹಣ ನಿಮಗೆ ಸಿಗೋದಿಲ್ಲ. ಕೋರಮಂಗಲದ ಎಲ್ಲಾ ಕ್ಲಬ್‌ಗಳು ಖಾಲಿ ಹೊಡಿಯೋಕೆ ಶುರುವಾಗುತ್ತೆ. ಚಂದ ಚಂದನೆಯ ಹುಡುಗಿಯುರು ಪಂಜಾಬಿ ಮ್ಯೂಸಿಕ್‌ಗೆ ಡಾನ್ಸ್ ಮಾಡ್ತಾ ಇರ್ತಾರಲ್ಲ, ಅಂಥವರು ಯಾರೂ ನಿಮಗೆ ನೋಡೋಕೆ ಸಿಗೋದಿಲ್ಲ. ಸ್ವಲ್ಪ ಬುದ್ದಿವಂತಿಕೆಯಿಂದ ಮಾತನಾಡಿ. ಹಾಗೇನಾದರೂ ನಿಮ್ಮ ಆಸೆ ನಿಜವಾಗಿ ಬಿಟ್ಟರೆ, ನಿಮ್ಮೆಲ್ಲಾ ಖುಷಿ ಕೂಡ ಕಳೆದುಹೋಗುತ್ತದೆ. ಬೆಂಗಳೂರಿನಲ್ಲಿ ಬರ ಬರೋಕೆ ಶುರುವಾಗುತ್ತದೆ' ಎಂದು ಹೇಳಿದ್ದಾರೆ.
ಇದಕ್ಕೆ ಹಲವು ಪ್ರಮುಖ ವ್ಯಕ್ತಿಗಳು ಕಾಮೆಂಟ್ ಮಾಡಿದ್ದಾರೆ. 'ನೀವು ಇದನ್ನು ಕೂಲ್ ಅಂತಾ ಅಂದುಕೊಂಡರೆ, ಅದು ತಪ್ಪು. ಇದು ಕೂಲ್ ಅಲ್ಲ. ನಿಮಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರೋದೇ ಬೆಂಗಳೂರು. ಹಾಗೇನಾದರೂ ನೀವು ಬೆಂಗಳೂರನ್ನು ಬಿಟ್ಟರೆ ನಮ್ಮ ಊರಿಗೆ ಏನೂ ವ್ಯತ್ಯಾಸ ಆಗೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಗೊತ್ತಿರೋದು ಏನೆಂದರೆ, ನೀವು ಬೆಂಗಳೂರನ್ನು ಬಿಟ್ಟು ಹೋಗೋದಿಲ್ಲ. ಯಾಕೆ ಅನ್ನೋದು ನಿಮಗೆ ಗೊತ್ತು' ಎಂದು ನಿರೂಪಕಿ ಅನುಪಮಾ ಗೌಡ ಕಾಮೆಂಟ್ ಮಾಡಿದ್ದಾರೆ. ಇನ್ನು ಸಂಗೀತ ನಿರ್ದೇಶಕ ಹಾಗೂ ರಾಪರ್ ಚಂದನ್ ಶೆಟ್ಟಿ, ಪ್ಲೀಸ್ ನೀವು ಹೊರಡಿ ಎಂದು ಕಾಮೆಂಟ್ ಮಾಡಿದ್ದಾರೆ. ಗಾಯಕಿ ಐಶ್ವರ್ಯ ರಂಗರಾಜನ್ 'ಅಕ್ಕಂಗೆ ಡೀಲು ಆಗಿದೆ.. ನಡಿ ನಡಿ..' ಎಂದು ಕಾಮೆಂಟ್ ಮಾಡಿದ್ದಾರೆ.
'ಯಾಕೋ ನಿಮ್ಮ ಆಫರ್ ಸಖತ್ ಆಗಿ ಕಾಣುವಂತಿದೆ. ಆದಷ್ಟು ಬೇಗ ಬೆಂಗಳೂರನ್ನು ಬಿಡಿ' ಎಂದು ತಮಿಳು ಸಿನಿಮಾರಂಗದ ಖ್ಯಾತ ನಟಿ ಕರ್ನಾಟಕದ ಮೂಲದ ವರ್ಷ ಬೊಲ್ಲಮ ಕಾಮೆಂಟ್ ಮಾಡಿದ್ದಾರೆ. 'ಕೋರಮಂಗಲ ಕ್ಲಬ್‌ನಲ್ಲಿ ರಾ ಎಣ್ಣೆ ಕುಡಿದಿರುವ ಸೈಡ್ ಎಫೆಕ್ಟ್ ಇದು' ಎಂದು ಡಿಜಿಟಲ್ ಕ್ರಿಯೇಟರ್ ಹಾಗೂ ಜೋಡಿ ನಂ.1 ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಿದ್ದ ಗಣೇಶ್ ಕಾರಂತ್ ಕಾಮೆಂಟ್ ಮಾಡಿದ್ದಾರೆ.
'ಹ್ಹ.ಹ್ಹ.ಹ್ಹ. ಈ ರೀಲ್‌ಗೆ ನೀವು ವೀವ್ಸ್ ಪಡೆದುಕೊಳ್ಳುತ್ತಿರುವ ನಡುವೆಯೂ ಇಂಥ ಸ್ಟೇಟ್‌ಮೆಂಟ್‌ಗಳು ಮಾಡುತ್ತಿರುವುದೇ ವಿಪರ್ಯಾಸ. ನನ್ನ ನಂಬಿ ನಿಮಗೆ ನಿಜಕ್ಕೂ ಸಹಾಯ ಬೇಕಾಗಿದೆ. ಈಗ ನೀವು ಏನು ಹೇಳಿದ್ದೀರಿ ಅಲ್ಲವೇ ಅದನ್ನು ಗಂಭೀರವಾಗು ಪರಿಗಣಿಸಿ, ನಮ್ಮ ನಗರವನ್ನು ತೊರೆಯಿಸಿ. ನಾವೆಲ್ಲರೂ ತುಂಬಾ ಖುಷಿಯಾಗಿರುತ್ತೇವೆ ಎಂದು ಆರ್‌ಜೆ ಮಯೂರ್ ರಾಘವೇಂದ್ರ ಕಾಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ 11: ಸ್ವರ್ಗ-ನರಕದ ಮಧ್ಯೆ ಸ್ಪರ್ಧಿಗಳು!