ದಕ್ಷಿಣ ಭಾರತದ ಪ್ರಸಿದ್ಧ ನಟ ಕಮಲ್ ಹಾಸನ್ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದಾರೆ. ತಮ್ಮ ಬ್ಯೂಸಿ ಶೆಡ್ಯೂಲ್ ಮಧ್ಯೆಯೂ ಬಿಡುವು ಮಾಡ್ಕೊಂಡು ಎಐ ಕಲಿಕೆಗೆ ನಿರ್ಧರಿಸಿದ್ದಾರೆ. ಈಗಾಗ್ಲೇ ಅಮೆರಿಕಾದಲ್ಲಿ ಅವರ ಅಭ್ಯಾಸ ಶುರುವಾಗಿದೆ.
ಬಹುಭಾಷಾ ನಟ, ದಕ್ಷಿಣ ಭಾರತದ ಪ್ರಸಿದ್ಧ ಆಕ್ಟರ್ (South Indian famous actor), ಚಿತ್ರರಂಗದ ದಂತಕಥೆಯಾಗಿರುವ ಕಮಲ್ ಹಾಸನ್ (Kamal Haasan), ಕಲಿಯೋಕೆ ವಯಸ್ಸು ಮುಖ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಮ್ಮ 69ನೇ ವಯಸ್ಸಿನಲ್ಲಿ ಹೊಸದನ್ನು ಕಲಿಯಲು ಕಮಲ್ ಹಾಸನ್ ಮುಂದಾಗಿದ್ದಾರೆ. ತಂತ್ರಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿರುವ ಖ್ಯಾತ ನಟ, ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಭಾರತೀಯ ಸಿನಿಮಾವನ್ನು ಮುಂದಕ್ಕೆ ಒಯ್ಯುವ ಮಹಾತ್ವಾಕಾಂಕ್ಷೆಯುಳ್ಳವರು. ಅವರು ಈಗ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಕೋರ್ಸ್ ಮಾಡಲು ಅಮೆರಿಕಕ್ಕೆ ತೆರಳಿದ್ದಾರೆ. ಕಮಲ್ ಹಾಸನ್ ಅಮೆರಿಕಾದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕಳೆದ ವಾರವೇ ಅವರು ಅಮೆರಿಕಾಕ್ಕೆ ತೆರಳಿದ್ದಾರೆಂದು ಮೂಲಗಳು ಹೇಳಿವೆ.
ಸಿನಿಮಾ ಶೂಟಿಂಗ್ ಹಾಗೂ ರಾಜಕೀಯ ಎರಡರಲ್ಲೂ ಬ್ಯೂಸಿ ಇರುವ ಕಮಲ್ ಹಾಸನ್, ತಮ್ಮ ಬ್ಯೂಸಿ ಶೆಡ್ಯೂಲ್ ನಲ್ಲಿಯೂ ಕಲಿಕೆಗೆ ಆಸಕ್ತಿ ತೋರಿಸಿದ್ದು ವಿಶೇಷ. ಕಮಲ್ ಹಾಸನ್ ಸುಧಾರಿತ ತಂತ್ರಜ್ಞಾನ ಎಐ ಕರಗತ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಅವರ ಆಪ್ತ ಮೂಲಗಳ ಪ್ರಕಾರ, ಅವರು ಪ್ರೀಮಿಯರ್ ಇನ್‌ಸ್ಟಿಟ್ಯೂಟ್ ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ 90 ದಿನಗಳ ಕೋರ್ಸ್ ಪಡೆದಿದ್ದು, 45 ದಿನಗಳವರೆಗೆ ಅಮೆರಿಕಾದಲ್ಲಿದ್ದು, ತರಬೇತಿ ಪಡೆಯಲಿದ್ದಾರೆ.
ರಾಹಾ ವಿಷ್ಯಕ್ಕೆ ನಡೆದಿತ್ತು ಆಲಿಯಾ – ರಣಬೀರ್ ಮಧ್ಯೆ ಜಗಳ, ರಾಹಾ ಮೊದಲು ಕರೆದಿದ್ದು ಯಾರನ್ನ?
AI ಟೂಲನ್ನು ಈಗಾಗಲೇ ಚಲನಚಿತ್ರೋದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಅನೇಕ ಫಿಲ್ಮ್ ಟೀಂ, ಕೃತಕ ಬುದ್ಧಿಮತ್ತೆ ಬಳಸಿಕೊಂಡು ನಿಧನರಾಗಿರುವ ಆಕ್ಟರ್ ರನ್ನು ಮರುಸೃಷ್ಟಿ ಮಾಡಿದೆ. ಹಾಗೆಯೇ ನಮ್ಮನ್ನಗಲಿರುವ ಗಾಯಕರ ಧ್ವನಿಗಳನ್ನು ಪ್ರೇಕ್ಷಕರಿಗೆ ಮತ್ತೆ ಕೇಳುವಂತೆ ಮಾಡಿದೆ.
ಎಐ ಟೂಲ್ ಗೆ ಎಲ್ಲ ಕ್ಷೇತ್ರದಲ್ಲೂ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಇದೆ. ಎಐ ಟೂಲ್ ಬಗ್ಗೆ ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಉತ್ತಮ ಸಂಬಳ ನೀಡಿ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗ್ತಿದೆ. ಇದಕ್ಕೆ ಬೇಡಿಕೆ ಹೆಚ್ಚಾದಂತೆ ಕಲಿಕೆಯುವವರ ಹಾಗೂ ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಕಮಲ್ ಹಾಸನ್ ಮುಂಬರುವ ಸಿನಿಮಾಗಳಲ್ಲಿ ಎಐ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಈ ಹಿಂದೆ ಕಮಲ್ ಹಾಸನ್, ತಮ್ಮ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಹಲವು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಿದ್ದರು.
ಕಮಲ್ ಹಾಸನ್, ಕಲ್ಕಿ 2898 AD ನಲ್ಲಿ ಯಾಸ್ಕಿನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕಾಗಿ ಅವರ ನೋಟವನ್ನು VFX ಸಹಾಯದಿಂದ ರಚಿಸಲಾಗಿದೆ. ಚಿತ್ರದ ಮುಂದಿನ ಪಾರ್ಟ್ ನಲ್ಲಿಯೂ ಕಮಲ್ ಹಾಸನ್ ದೊಡ್ಡ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ಕಮಲ್ ಹಾಸನ್ ಕೈನಲ್ಲಿ ಅನೇಕ ಪ್ರಾಜೆಕ್ಟ್ ಇದೆ. ಅವರು ಇಂಡಿಯಾ 2 ನಲ್ಲಿ ಜನರಲ್ ಆಗಿ ನಟಿಸಿದ್ದಾರೆ. ಇದಲ್ಲದೆ ಮಣಿರತ್ನಂ ನಿರ್ದೇಶನದ ಥಗ್ ಲೈಫ್ ನಲ್ಲಿ ಕಮಲ್ ಹಾಸನ್ ಕೆಲಸ ಮಾಡುತ್ತಿದ್ದಾರೆ. ಕಮಲ್ ಹಾಸನ್, ಸಲ್ಮಾನ್ ಖಾನ್ ಅವರೊಂದಿಗೆ ಅಟ್ಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಜನವರಿ 2025 ರಲ್ಲಿ ಪ್ರಾರಂಭವಾಗಲಿದೆ.
ಮತ್ತೊಮ್ಮೆ ಹಾಟ್ ಅವತಾರದಲ್ಲಿ ಕಾಣಿಸ್ಕೊಂಡು ಪಡ್ಡೆಗಳ ನಿದ್ದೆ ಕೆಡಿಸಿದ ಪೂನಂ ಪಾಂಡೆ…
ಹೊಸ ತಂತ್ರಜ್ಞಾನದ ಮೇಲೆ ಕಮಲ್ ಹಾಸನ್ ಆಸಕ್ತಿ : ಕಳೆದ ವರ್ಷ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಮಲ್ ಹಾಸನ್, ನನಗೆ ಹೊಸ ತಂತ್ರಜ್ಞಾನದ ಬಗ್ಗೆ ತುಂಬಾ ಆಸಕ್ತಿ ಇದೆ. ನನ್ನ ಚಲನಚಿತ್ರಗಳಲ್ಲಿ ಹೊಸ ತಂತ್ರಜ್ಞಾನದ ಬಳಕೆಯನ್ನು ನೀವು ಆಗಾಗ್ಗೆ ನೋಡಿರ್ಬಹುದು. ಸಿನಿಮಾ ನನ್ನ ಜೀವನ. ನನ್ನ ಎಲ್ಲಾ ಗಳಿಕೆಯನ್ನು ವಿಭಿನ್ನ ರೀತಿಯಲ್ಲಿ ಚಲನಚಿತ್ರಗಳಿಗೆ ಹಾಕ್ತಿದ್ದೆನೆ. ನಾನು ಕೇವಲ ನಟ ಅಲ್ಲ, ನಿರ್ಮಾಪಕ ಕೂಡ ಎಂದಿದ್ದರು. ಕಮಲ್ ಹಾಸನ್, ತಮ್ಮ ಚಿತ್ರಗಳಲ್ಲಿ ಹೊಸ ಪ್ರಯೋಗ ಮಾಡಲು ತಮ್ಮ ಗಳಿಕೆಯನ್ನು ಬಳಸ್ತಿದ್ದಾರೆ.