ವಜ್ರಕಾಯ ಬ್ಯೂಟಿಯ ಹಾಟ್ ಲುಕ್: ನಭಾ ನಟೇಶ್‌ ಸೊಂಟದ ಮೇಲೆ ನೆಟ್ಟಿಗರ ಕಣ್ಣು!

First Published Jan 25, 2024, 2:30 AM IST

ಸ್ಯಾಂಡಲ್‌ವುಡ್‌ನ ನಾಯಕಿ ನಭಾ ನಟೇಶ್ ಸಿನಿಮಾಗಳಿಗಿಂತಲೂ ಫೋಟೋಶೂಟ್‌ನಲ್ಲಿಯೇ ಹೆಚ್ಚು ಮಿಂಚುತ್ತಿದ್ದಾರೆ. ಹಾಗೆ ಈಗೀನ ಒಂದಷ್ಟು ಫೋಟೋಗಳು ಇದೀಗ ಹೆಚ್ಚು ಗಮನ ಸೆಳೆಯುತ್ತಿವೆ.

ಸ್ಯಾಂಡಲ್‌ವುಡ್‌ ನಟಿ ನಭಾ ನಟೇಶ್ ಸಿನಿಮಾಗಳಲ್ಲಿ ಸದ್ಯ ಹೆಚ್ಚೇನೂ ಆ್ಯಕ್ಟೀವ್ ಇಲ್ಲ ಅನಿಸುತ್ತದೆ. ಆದರೆ ಸಿನಿಮಾ ಹೊರತಾಗಿ ನಭಾ ನಟೇಶ್ ಫೋಟೋ ಶೂಟ್‌ಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ರೀತಿಯ ಡ್ರೆಸ್ ತೊಟ್ಟು ಮಸ್ತ್ ಆಗಿಯೇ ಪೋಸ್‌ ಕೊಡ್ತಾನೇ ಇರ್ತಾರೆ.

ವಜ್ರಕಾಯ ಸಿನಿಮಾದ ಮೂಲಕ ನಭಾ ನಟೇಶ್ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾದರು. ಕನ್ನಡದಲ್ಲಿ ಕೆಲವೇ ಸಿನಿಮಾ ಮಾಡಿದ್ರೂ ಸಹ ಸಖತ್‌ ಫೇಮಸ್‌ ಆದರು. ಸದ್ಯ ಟಾಲಿವುಡ್‌ನಲ್ಲಿ ನಭಾ ಬ್ಯುಸಿಯಾಗಿದ್ದಾರೆ. 

Latest Videos


ತಮ್ಮ ಗ್ಲಾಮರ್ ಶೋ ಮತ್ತು ನಟನೆ ಮೂಲಕ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ ನಭಾ ನಟೇಶ್. ಸದ್ಯ ನಭಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಸ್‌ ವೈರಲ್‌ ಆಗುತ್ತಿವೆ.

ಬ್ಲೂ ಜೀನ್ಸ್‌ ಮತ್ತು ಬ್ಲಾಕ್‌ ಟೀ ಶರ್ಟ್‌ ಧರಿಸಿ ಕ್ಯಾಮರಾಗೆ ವಿವಿಧ ಭಂಗಿಗಳಲ್ಲಿ ಪೋಸ್‌ ನೀಡಿರುವ ನಭಾ ಪಡ್ಡೆಹೈಕ್ಳ ಗಮನ ಸೆಳೆಯುತ್ತಿದ್ದಾರೆ. ನೆಟ್ಟಿಗರು ಸಹ ವಾವ್ ಬ್ಯೂಟಿಫುಲ್, ಸೋ ಹಾಟ್, ಲವ್ ಯೂ ಬೇಬಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

ನಟಿ ನಭಾ ನಟೇಶ್ ತನ್ನ ಮನಮೋಹಕ ಗ್ಲಾಮರ್ ಶೋ ಮತ್ತು ನಟನೆಯಿಂದ ಸೌತ್‌ ಸಿನಿರಂಗದಲ್ಲಿ ಉತ್ತಮ ಕ್ರೇಜ್ ಪಡೆದಿದ್ದಾರೆ. ದೋಚುಕುಂದುವಟೆ, ಸ್ಮಾರ್ಟ್ ಶಂಕರ್, ಸೋಲೋ ಬ್ರತುಕೆ ಸೋ ಬೆಟ್ಟೆರು, ಡಿಸ್ಕೋ ರಾಜಾ, ಅಲ್ಲುಡು ಅದುರ್ಸ್ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.  

ನಭಾ ನಟೇಶ್ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಫೋಟೋಗಳನ್ನು ಹಾಕಲು ಪ್ರಾರಂಭಿಸಿದ್ದಾರೆ. ಸತತ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ಈ ಕನ್ನಡದ ಚೆಲುವೆಗೆ ಈಗ ತೆಲುಗಿನಲ್ಲಿ ಒಂದೂ ಅವಕಾಶ ಸಿಕ್ಕಿಲ್ಲ.

ಇನ್ನು ನಭಾ ನಟೇಶ್ ಹೀರೋಯಿನ್ ರೇಸ್‌ನಲ್ಲಿ ಹಿಂದೆ ಬಿದ್ದಿದ್ದಾರೆ. ಈ ನಡುವೆ ನಡೆದ ಸರ್ಜರಿಯಿಂದ ಸಿನಿಮಾದಿಂದ ದೂರ ಉಳಿಯಬೇಕಾಯಿತು. ಆದರೆ ನಭಾ ಆಗಾಗ ಮಾತ್ರ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

click me!