ಕೇಳದೇ ನಿಮಗೀಗ ಹಾಡು ಹುಟ್ಟಿದ್ದು ನೈಟಲ್ಲಂತೆ, ಶಂಕರ್ ನಾಗ್ ಬಗ್ಗೆ ಇಳಯರಾಜ ಹೇಳಿದ ಗುಟ್ಟು!

By Shriram Bhat  |  First Published Oct 17, 2024, 4:53 PM IST

ಆ ಸಮಯದಲ್ಲಿ ನಡೆದ ಘಟನೆಯನ್ನು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜಾ ಅವರು ಮೈಸೂರಿನ 'ಯುವ ದಸರಾ'ದಲ್ಲಿ ಹಂಚಿಕೊಂಡಿದ್ದಾರೆ. ಶಂಕರ್‌ ನಾಗ್ ಅವರು ರಾತ್ರಿ ಬಂದು ಇಳಯರಾಜಾ ಬಳಿಯಲ್ಲಿ ಮಾತನಾಡಿ..


'ಆಟೋ ರಾಜ' ಚಿತ್ರದ 'ಕೇಳದೆ ನಿಮಗೀಗ..' ಹಾಡನ್ನು ಯಾರು ಮರೆಯಲು ಸಾಧ್ಯ? ಈ ಚಿತ್ರದಲ್ಲಿ ಕನ್ನಡದ ಮೇರು ನಟ-ನಿರ್ದೇಶಕ ಶಂಕರ್‌ನಾಗ್ (Shankar Nag) ಅವರು ನಟಿಸಿದ್ದರು. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಇಳಯರಾಜಾ (Ilaiyaraaja) ಅವರು ಈ ಹಾಡಿಗೆ ಸಂಗೀತ ನೀಡಿದ್ದಾರೆ. ಈ ಹಾಡಿನ ಟ್ಯೂನನ್ನು ಇಳಯರಾಜಾ ಅವರ ಬಳಿ ಮಾಡಿಸಲು ನಿರ್ದೇಶಕರಾದ ವಿಜಯ್ ಜತೆ ಮಾತನಾಡಿಕೊಂಡು ನಟ ಶಂಕರ್‌ ನಾಗ್ ಅವರು ರಾತ್ರಿ ಬಂದಿದ್ದರಂತೆ. ಈ ಸಂಗತಿಯನ್ನು ಇತ್ತೀಚೆಗೆ ಮೈಸೂರು ದಸರಾದಲ್ಲಿ ಇಳಯರಾಜಾ ಅವರು ಬಹಿರಂಗಪಡಿಸಿದ್ದಾರೆ. 

ಶಂಕರ್‌ ನಾಗ್ ಹಾಗೂ ಗಾಯತ್ರಿ ಜೋಡಿಯ 'ಆಟೋ ರಾಜಾ' ಚಿತ್ರವು 1982ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರವನ್ನು ವಿಜಯ್ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ರಾಜನ್‌-ನಾಗೇಂದ್ರ ಹಾಗೂ ಇಳಯರಾಜಾ ಅವರ ಸಂಗೀತ ನಿರ್ದೇಶನವಿತ್ತು. ಈ ಚಿತ್ರದಲ್ಲಿ 'ಕೇಳದೆ ನಿಮಗೀಗ, ಹಾಗೂ 'ನಲಿವಾ ಗುಲಾಬಿ ಹೂವೇ' ಮುಂತಾದ ಸೂಪರ್ ಹಿಟ್ ಗೀತೆಗಳಿದ್ದವು. ಅವುಗಳಲ್ಲಿ, 'ಕೇಳದೆ ನಿಮಗೀಗ..'ಹಾಡಿಗೆ ಚಿ ಉದಯಶಂಕರ್ ಗೀತ ರಚನೆ ಮಾಡಿದ್ದರು. 

Latest Videos

undefined

ಅಪ್ಪು ಫ್ಯಾನ್ಸ್‌ ಪೇಜ್‌ನಲ್ಲಿ ಶಂಕರ್‌ ನಾಗ್, ಏನೆಲ್ಲಾ ಪೋಸ್ಟ್ ಮಾಡಿದಾರೆ ನೋಡಿ!

ಆ ಸಮಯದಲ್ಲಿ ನಡೆದ ಘಟನೆಯನ್ನು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜಾ ಅವರು ಮೈಸೂರಿನ 'ಯುವ ದಸರಾ'ದಲ್ಲಿ ಹಂಚಿಕೊಂಡಿದ್ದಾರೆ. ಶಂಕರ್‌ ನಾಗ್ ಅವರು ರಾತ್ರಿ ಬಂದು ಇಳಯರಾಜಾ ಬಳಿಯಲ್ಲಿ ಮಾತನಾಡಿ, ಸಿನಿಮಾದ ಸಂದರ್ಭ ವಿವರಿಸಿ 'ಕೇಳದೆ ನಿಮಗೀಗ..' ಹಾಡನ್ನು ಮಾಡಿಸಿಕೊಂಡಿದ್ದರು ಎಂಬುದು ನಿಜವಾಗಿಯೂ ದಿವಂಗತ ಶಂಕರ್‌ ನಾಗ್ ಅವರ ಕೆಲಸದ ಮೇಲಿನ ಪ್ರೀತಿ ಹಾಗೂ ಬದ್ಧತೆಯನ್ನು ತೋರಿಸುತ್ತದೆ. 

ಆಟೋ ರಾಜಾ ಚಿತ್ರಕ್ಕೆ ಶಂಕರ್‌ ನಾಗ್ ಅವರು ನಾಯಕರಾಗಿದ್ದರು. ಆದರೆ ಮೂಲತಃ ಅವರೊಬ್ಬ ನಿರ್ದೇಶಕರೂ ಆಗಿದ್ದರಿಂದ ತಮ್ಮ ಚಿತ್ರದ ನಿರ್ದೇಶಕರೊಂದಿಗೆ ಒಡನಾಟ ಇಟ್ಟುಕೊಂಡು, ಚಿತ್ರವನ್ನು ಉತ್ತಮವಾಗಿಸುವಲ್ಲಿ ಸದಾ ನಿರತರಾಗಿರುತ್ತಿದ್ದರಂತೆ ಶಂಕರ್‌ ನಾಗ್. ಈ ಬಗ್ಗೆ ಹಲವರು ಹೇಳಿಕೊಂಡಿದ್ದಾರೆ. ಅದೇ ರೀತಿ, ಇಳಯರಾಜಾ ಅವರು ಕೂಡ ಶಂಕರ್‌ ನಾಗ್ ಅವರ ಕೆಲಸದ ಮೇಲಿದ್ದ  ಪ್ರೀತಿಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಬುಟ್ಟಿಗೆ ಹಾಲಿವುಡ್ ಹುಡುಗ ನಿಕ್ ಜೋನಾಸ್‌ ಜಾರಿ ಬಿದ್ದಿದ್ದು ಹೇಗೆ?

ಏನೇ ಇದ್ದರೂ ವಿಧಿಯಾಟದ ಮುಂದೆ ಯಾರೂ ಏನೂ ಮಾಡಲಾಗುವುದಿಲ್ಲ ಎಂಬ ಮಾತಿನಂತೆ, ಮೇರು ವ್ಯಕ್ತಿತ್ವದ ಕನ್ನಡದ ನಟ-ನಿರ್ದೇಶಕ ಶಂಕರ್‌ ನಾಗ್ ಅವರು ಕೇವಲ 35ನೇ ವಯಸ್ಸಿನಲ್ಲೇ ವಿಧಿವಶರಾದರು. ದಾವಣಗೆರೆ ಬಳಿ ಕಾರು-ಲಾರಿ ಅಪಘಾತದಲ್ಲಿ ದುರ್ಮರಣ ಕಂಡ ಶಂಕರ್‌ ನಾಗ್ ಅವರು ಅಷ್ಟರಲ್ಲೇ ಬಹಳಷ್ಟು ಸಾಧನೆ ಮಾಡಿದ್ದರು. 1978 ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಶಂಕರ್‌ ನಾಗ್ ಅವರು 1990 ರಲ್ಲಿ ವಿಧಿವಶರಾಗಿದ್ದು, ಕೇವಲ 12 ವರ್ಷಗಳಲ್ಲಿ 83 ಸಿನಿಮಾಗಳನ್ನು ಮಾಡಿದ್ದು ನಿಜವಾಗಿಯೂ ಗ್ರೇಟ್ ಸಾಧನೆಯೇ ಆಗಿದೆ. 

click me!