ಟಾಲಿವುಡ್ ಸ್ಟಾರ್ ನಟರುಗಳ ನಡುವೆ ನಡೆಯುತ್ತಿದ್ದ ಸೈಲೆಂಟ್ ವಾರ್‌ಗೆ ಅವರಿಬ್ಬರ ಬೆಂಬಲಿಗರು ಹಾಗು ನೆಂಟರಿಷ್ಟರೂ ಸಹ ಸೇರಿಕೊಂಡಿದ್ದರು. ಅವರಿಬ್ಬರ ಅಭಿಮಾನಿಗಳೂ ಕೂಡ ದೋಷಾರೋಪಣೆ ಮಾಡತೊಡಗಿ ಉರಿಯುತ್ತಿದ್ದ ಬೆಂಕಿಗೆ ತಾವೂ ತುಪ್ಪವನ್ನೂ ಹಾಕಿ..
ಟಾಲಿವುಡ್ ಇಂಡಸ್ಟ್ರಿಯಲ್ಲಿ ನಡೆಯುತ್ತಿದ್ದ ಸ್ಟಾರ್ ವಾರ್ ಬಗ್ಗೆ ಹಲವರಿಗೆ ಖಂಡಿತವಾಗಿಯೂ ಗೊತ್ತಿದೆ. ಅದರಲ್ಲೂ ಮುಖ್ಯವಾಗಿ, ಇದೀಗ ಆಂಧ್ರ ಪ್ರದೇಶದ ಡಿಸಿಎಂ ಆಗಿರುವ ನಟ ಪವನ್ ಕಲ್ಯಾಣ್ (Pawan Kalyan) ಹಾಗು ಅವರದೇ ಸೋದರಳಿಯ ಅಲ್ಲು ಅರ್ಜುನ್ (Allu Arjun) ಮಧ್ಯೆ ಸ್ಟಾರ್ ವಾರ್ ಟಾಕ್ ಹಲವು ಸಮಯಗಳಿಂದ ನಡಿತಾ ಇತ್ತು. ಆದರೆ, ಇದೀಗ ಈ ಸಮಸ್ಯೆಗೆ ಸ್ವತಃ ಪವನ್ ಕಲ್ಯಾಣ್ ತೆರೆ ಎಳೆದಿದ್ದಾರೆ. ಕಾರಣ ಅದೇನೇ ಇರಲಿ, ತಾವೇ ಖುದ್ದಾಗಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ 'ನನಗೆ ಯಾರೊಂದಿಗೂ ದ್ವೇಷವಿಲ್ಲಕ' ಎಂದಿದ್ದಾರೆ.
ಪವನ್ ಕಲ್ಯಾಣ್ ಮತ್ತು ಅಲ್ಲು ಅರ್ಜುನ್ ನಡುವೆ ನಡೀತಾ ಇದ್ದ ಮುಸುಕಿನ ಗುದ್ದಾಟಕ್ಕೆ ಕೊನೆಗೂ ತೆರೆಬಿದ್ದಿದೆ. ಅಳಿಯ-ಮಾವ ಮತ್ತೆ ಒಂದಾಗೋ ಸೂಚನೆ ಸಿಕ್ಕಿದೆ. ಇತ್ತೀಚಿಗೆ ಕಾರ್ಯಕ್ರಮವೊಂದರ ವೇದಿಕೆಯಲ್ಲಿ 'ನನಗೆ ಯಾವ ನಟರ ಜೊತೆಗೂ ದುಷ್ಮನಿ ಇಲ್ಲ' ಎಂದಿರೋ ಡಿಸಿಎಂ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಹೆಸರನ್ನೂ ಹೇಳಿದ್ದಾರೆ. ಅಸಲಿಗೆ ಪವನ್ ಕಲ್ಯಾಣ್ ಚುನಾವಣೆಗೆ ನಿಂತ ಹೊತ್ತಲ್ಲಿ ಬೆಂಬಲಕ್ಕೆ ಬಾರದ ಅಲ್ಲು ಅರ್ಜುನ್ ಮೇಲೆ ಮುನಿಸು ಹುಟ್ಟಿಕೊಂಡಿತ್ತು. ಈ ಇಬ್ಬರ ಫ್ಯಾನ್ಸ್ ನಡುವೆವೂ ವಾರ್ ಶುರುವಾಗಿತ್ತು. ಇದೀಗ ಈ ವಾರ್‌ಗೆ ಪವಲ್ ಕಲ್ಯಾಣ್ ತೆರೆ ಎಳೆದಿದ್ದಾರೆ.
ಕೇಳದೇ ನಿಮಗೀಗ ಹಾಡು ಹುಟ್ಟಿದ್ದು ನೈಟಲ್ಲಂತೆ, ಶಂಕರ್ ನಾಗ್ ಬಗ್ಗೆ ಇಳಯರಾಜ ಹೇಳಿದ ಗುಟ್ಟು!
ಈ ಇಬ್ಬರು ಟಾಲಿವುಡ್ ಸ್ಟಾರ್ ನಟರುಗಳ ನಡುವೆ ನಡೆಯುತ್ತಿದ್ದ ಸೈಲೆಂಟ್ ವಾರ್‌ಗೆ ಅವರಿಬ್ಬರ ಬೆಂಬಲಿಗರು ಹಾಗು ನೆಂಟರಿಷ್ಟರೂ ಸಹ ಸೇರಿಕೊಂಡಿದ್ದರು. ಅಷ್ಟೇ ಅಲ್ಲ, ಅವರಿಬ್ಬರ ಅಭಿಮಾನಿಗಳೂ ಕೂಡ ದೋಷಾರೋಪಣೆ ಮಾಡತೊಡಗಿ ಉರಿಯುತ್ತಿದ್ದ ಬೆಂಕಿಗೆ ತಾವೂ ತುಪ್ಪವನ್ನೂ ಹಾಕಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದ್ದರು. ಆದರೆ ಈಗ ಸ್ವತಃ ಪವನ್ ಕಲ್ಯಾಣ್ ಒಂದು ಹೆಜ್ಜೆ ಮುಂದೆ ಹೋಗಿ, 'ಯಾರೊಂದಿಗೂ ದ್ವೇಷವಿಲ್ಲ ನನಗೆ..' ಎಂದುಬಿಟ್ಟಿದ್ದಾರೆ. ಇನ್ಮುಂದೆ ಈ ಸ್ಟಾರ್ ವಾರ್ ಈ ಮೂಲಕ ಅಂತ್ಯ ಕಾಣಬಹುದು ಎನ್ನಬಹುದು.
ಪವನ್ ಕಲ್ಯಾಣ್ ಹಾಗು ಅಲ್ಲು ಅರ್ಜುನ್ ಮಧ್ಯೆ ಯಾವತ್ತೂ ಸರಿ ಇರಲಿಲ್ಲ ಎಂಬುದು ಟಾಲಿವುಡ್ ಸಿನಿಉದ್ಯಮ ಬಲ್ಲ ಎಲ್ಲರಿಗೂ ಗೊತ್ತು. ಮೇಲ್ನೋಟಕ್ಕೆ ಅವರಿಬ್ಬರೂ ಇತ್ತೀಚೆಗೆ ಕಿತ್ತಾಡಿಕೊಂಡಂತೆ ಕಂಡರೂ ನಿಜವಾಗಿ ನೋಡಿದರೆ, ಯಾವತ್ತೂ ಅವರಿಬ್ಬರು ಅನ್ಯೋನ್ಯವಾಗಿ ಇರಲೇ ಇಲ್ಲ ಎಂಬ ಸಂಗತಿ ಗುಟ್ಟೇನೂ ಅಲ್ಲ. ಏಕೆಂದರೆ, ಪುಷ್ಪಾ ಸಿನಿಮಾ ಪ್ರಮೊಶನ್ ಸಮಯದಲ್ಲಿ, ಅಥವಾ ಪುಷ್ಪಾ 2 ಸಿನಿಮಾದ ಶೂಟಿಂಗ್ ಸಮಯದಲ್ಲಿ, ಆ ಸಿನಿಮಾ ಬಗ್ಗೆ ಪವನ್ ಕಲ್ಯಾಣ್ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದ್ದರು.
ಪ್ರಿಯಾಂಕಾ ಚೋಪ್ರಾ ಬುಟ್ಟಿಗೆ ಹಾಲಿವುಡ್ ಹುಡುಗ ನಿಕ್ ಜೋನಾಸ್ ಜಾರಿ ಬಿದ್ದಿದ್ದು ಹೇಗೆ?
ಕಾಡುಗಳ್ಳರೂ ಕೂಡ ಇತ್ತೀಚೆಗೆ ಹೀರೋಗಳಂತೆ ಮೆರೆಯುತ್ತಿದ್ದಾರೆ ಎಂಬ ಪವನ್ ಕಲ್ಯಾಣ್ ಹೇಳಿಕೆ, ಪುಷ್ಮಾ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಮಾಡಿರುವ 'ಶ್ರೀಗಂಧ ಕಳ್ಳ'ನ ಪಾತ್ರದ ಬಗ್ಗೆಯೇ ಹೇಳಿದ್ದು ಎಂಬುದು ಬಹುತೇಕರಿಗೆ ಅರ್ಥವಾಗಿತ್ತು. ಅದರಲ್ಲೂ ಅದನ್ನು ಸ್ಪಷ್ಟವಾಗಿಯೇ ಅರ್ಥ ಮಾಡಿಕೊಂಡ ಅಲ್ಲು ಅರ್ಜುನ್ ಮಾವ, ಆ ಬಗ್ಗೆ ಪವನ್ ಕಲ್ಯಾಣ್ ಅವರು ವೈಯಕ್ತಿಕವಾಗಿ ಅಲ್ಲು ಅರ್ಜುನ್ ಬಳಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ, ಆಗ ಪವನ್ ಕಲ್ಯಾಣ್ ಕ್ಷಮೆಯನ್ನೂ ಕೇಳಿರಲಿಲ್ಲ, ಅವರ ಮಾತಿಗೆ ಪ್ರತಿಕ್ರಿಯೆ ಸಹ ನೀಡಿರಲಿಲ್ಲ.