ಸಲ್ಮಾನ್ ಖಾನ್ ಕ್ರೂರ ಹಂದಿ ಎಂದಿದ್ದ ಮಾಜಿ ಲವರ್​ ಸೋಮಿಯಿಂದ ಲಾರೆನ್ಸ್​ ಬಿಷ್ಣೋಯಿಗೆ ಶಾಕಿಂಗ್ ಪತ್ರ! ಏನಿದೆ ಇದರಲ್ಲಿ?

By Suchethana D  |  First Published Oct 17, 2024, 5:06 PM IST

ಸಲ್ಮಾನ್ ಖಾನ್ ಕ್ರೂರಿ, ಆತ ಒಬ್ಬ ಹಂದಿ, ನನ್ನನ್ನು ಕಸದಂತೆ ಬಳಸಿಕೊಂಡ ಎಂದೆಲ್ಲಾ ಹೇಳಿದ್ದ ಮಾಜಿ ಲವರ್​ ಸೋಮಿ ಅಲಿ ಲಾರೆನ್ಸ್​ ಬಿಷ್ಣೋಯಿಗೆ ಪತ್ರ ಬರೆದಿದ್ದಾರೆ. ಏನಿದೆ ಇದರಲ್ಲಿ? 
 


1990 ರ ದಶಕದಲ್ಲಿ ಬುಲಂದ್, ಅಂತಾ ಮತ್ತು ಯಾರ್ ಗದರ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸೋಮಿ ಅಲಿ, ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಎನ್ನುವ ವಿಷಯವೇನೂ ಗುಟ್ಟಾಗಿ ಉಳಿದಿಲ್ಲ.  ಎಂಟು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್​ ಮಾಡಿ ನಂತರ ಸೋಮಿಯನ್ನು ದೂರವಿಟ್ಟಿದ್ದರು ಸಲ್ಮಾನ್​.  ಬಾಲಿವುಡ್​ ಅಂಗಳದಲ್ಲಿ ಸೋಮಿ ಮತ್ತು ಸಲ್ಮಾನ್​ ಸುದ್ದಿ ಹಾಟ್​ ಟಾಪಿಕ್​ (Hot Topic) ಆಗಿದೆ.  ಸಲ್ಮಾನ್​ ಖಾನ್​ ಒಬ್ಬ ಕ್ರೂರ ಮೃಗ, ಹಂದಿ. ನನಗೆ ಚಿತ್ರಹಿಂಸೆ ಕೊಟ್ಟು ಬದುಕನ್ನು ನರಕ ಮಾಡಿದ್ದಾನೆ.  ಹೆಣ್ಣುಮಕ್ಕಳನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಾನೆ ಆತ ಎಂದೆಲ್ಲಾ ಸೋಮಿ ಸಲ್ಮಾನ್ ಖಾನ್ ವಿರುದ್ಧ ಆರೋಪಿಸಿದ್ದರು. ನನ್ನ ಬಳಿ ಆತ ಕ್ಷಮೆ ಕೋರಬೇಕು ಎಂದು ಸೋಷಿಯಲ್​ ಮೀಡಿಯಾದಲ್ಲಿ ಲೈವ್​ ಬಂದು ಹಲವು ಬಾರಿ ಹೇಳಿದ್ದರು.

ಈಗ ಅದೇ ಸೋಮಿ ಅಲಿ, ಸಲ್ಮಾನ್​ ಖಾನ್​ ಹತ್ಯೆಗೆ ಸ್ಕೆಚ್​ ಹಾಕಿರೋ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿಗೆ ಸೋಷಿಯಲ್  ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದಾರೆ ಎನ್ನುವ ಶಾಕಿಂಗ್ ವಿಷ್ಯ ರಿವೀಲ್​ ಆಗಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್​ ಖಾನ್​ ಕ್ಷಮೆ ಕೋರಿಲ್ಲ ಎನ್ನುವ ಕಾರಣಕ್ಕೆ ಅವರ ಹತ್ಯೆಗೆ ಲಾರೆನ್ಸ್​ ಸಂಚು ರೂಪಿಸುತ್ತಲೇ ಇದ್ದಾನೆ. ಇದಾಗಲೇ ಸಲ್ಮಾನ್​ ಖಾನ್​ ನಿಕಟವರ್ತಿ ಎನ್ನುವ ಕಾರಣಕ್ಕೆ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನೂ ಹತ್ಯೆ ಮಾಡಲಾಗಿದೆ. ಇಂತಿಪ್ಪ ಲಾರೆನ್ಸ್ ಬಿಷ್ಣೋಯಿಗೆ ಸೋಮಿ ಅಲಿ ಇನ್​ಸ್ಟಾಗ್ರಾಮ್​ನಲ್ಲಿ ಪತ್ರ ಬರೆದಿರುವ ವಿಷ್ಯ ರಿವೀಲ್​ ಆಗಿದೆ. 

Tap to resize

Latest Videos

undefined

ಸಲ್ಮಾನ್​ ಖಾನ್​ ತಂದಿಟ್ಟ ಸಂಕಷ್ಟ? ಆಪ್ತ ಬಾಬಾ ಸಿದ್ಧಿಕಿ ಅಂತ್ಯಕ್ರಿಯೆಯೂ ಶಾರುಖ್​ಗೆ ಹೋಗಲಾಗದ ಸ್ಥಿತಿ...

ಲಾರೆನ್ಸ್​ ಬಿಷ್ಣೋಯಿಯನ್ನು ಭಯ್ಯಾ ಅಂದ್ರೆ ಸಹೋದರ... ಎಂದು ಸಂಬೋಧಿಸಿರುವ ಸೋಮಿ ಅಲಿ, ಲಾರೆನ್ಸ್​ ಜೊತೆ ಮಾತನಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.  ಝೂಮ್​ ಕಾಲ್​ನಲ್ಲಿ ಆತನ ಜೊತೆ  ಮಾತನಾಡಬೇಕಾಗಿದೆ ಎಂದು ಹೇಳಿದ್ದು ಫೋನ್ ನಂಬರ್ ಕೂಡಾ ಕೇಳಿದ್ದಾರೆ. ನಮಸ್ತೆ ಲಾರೆನ್ಸ್ ಭಾಯ್. ನೀವು ಜೈಲಿನಿಂದ ಕೆಲವರ ಜೊತೆ ಝೂಮ್ ಕಾಲ್​ನಲ್ಲಿ ಮಾತನಾಡುತ್ತೀರಿ ಎಂಬ ವಿಷಯವನ್ನು ನಾನು ಕೇಳಿದ್ದೇನೆ, ನೋಡಿದ್ದೇನೆ. ಅದೇ ರೀತಿ ನನಗೂ  ಮಾತನಾಡಬೇಕಿದೆ. ಇದು ಹೇಗೆ ಸಾಧ್ಯ ಎಂದು ಹೇಳಿ ಎಂದು ಕೇಳಿದ್ದಾರೆ. ಜೊತೆಗೆ, ಜಗತ್ತಿನಲ್ಲಿಯೇ ನಾನು ತುಂಬಾ ಇಷ್ಟಪಡುವ ಸ್ಥಳ ರಾಜಸ್ಥಾನ. ನನಗೆ ನಿಮ್ಮ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಬೇಕಿದೆ ಎಂದು ಅದರಲ್ಲಿ ಅವರು ಕೇಳಿಕೊಂಡಿದ್ದಾರೆ!  ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದು ಕೂಡ ಪಬ್ಲಿಸಿಟಿಯ ಸ್ಟಂಟ್​ ಎಂದು ಹಲವರು ಹೇಳುತ್ತಿದ್ದರೆ, ಸಲ್ಮಾನ್​ನನ್ನು ಮುಗಿಸಲು ಈಕೆಯೂ ಕೈಜೋಡಿಸಿರಬೇಕು ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸಲ್ಮಾನ್​ ಖಾನ್​ ಕ್ಷಮೆ ಕೋರಲಿಲ್ಲ, ಅವರ ಪರವಾಗಿ ಬಹುಶಃ ಈಕೆಯೇ ಕ್ಷಮೆ ಕೋರಿ ಅಲ್ಲಿಗೆ ಈ ವಿವಾದವನ್ನು ಮುಗಿಸಲು ಪ್ರಯತ್ನಿಸುತ್ತಿರಬೇಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಷಯ ಸದ್ಯ ಸಾಕಷ್ಟು ಕೋಲಾಹಲ ಸೃಷ್ಟಿಸಿದೆ. 

ಅಂದಹಾಗೆ  ಮೂಲತಃ ಪಾಕಿಸ್ತಾನಿ (Pakistani) ನಟಿಯಾಗಿರುವ ಸೋಮಿ ಅಲಿ ಹುಟ್ಟಿದ್ದು ಕರಾಚಿಯಲ್ಲಿ.  ಸೋಮಿ 16ನೇ ವಯಸ್ಸಿನಲ್ಲಿಯೇ ಸಲ್ಮಾನ್ ಖಾನ್‌ ಅಭಿಮಾನಿಯಾಗಿದ್ದರಂತೆ. ಸಲ್ಮಾನ್​ ಖಾನ್​ರನ್ನು ಹುಚ್ಚು ಹುಚ್ಚಾಗಿ ಪ್ರೀತಿಸುತ್ತಿದ್ದ ಈಕೆ ಅವರನ್ನು ಮದುವೆಯಾಗುವುದಕ್ಕಾಗಿಯೇ ಅಮೆರಿಕದಿಂದ ಬಂದಿದ್ದೆ ಎಂದಿದ್ದಾರೆ. ಕೊನೆಗೂ ಅವರ ಆಸೆ ಈಡೇರಿದ್ದು, ಸಲ್ಮಾನ್‌ರೊಂದಿಗೆ ತೆರೆ ಹಂಚಿಕೊಂಡರು. 1993ರಲ್ಲಿ ಕ್ರಿಶನ್‌ ಅವತಾರ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಬಂದ ಸೋಮಿ, ಅದಾದ ಬಳಿಕ ಅಂತ್‌, ಯಾರ್‌ ಗದ್ದಾರ್‌, ತೀಸರಾ ಕೌನ್‌, ಆವೋ ಪ್ಯಾರ್‌ ಕರನೇ, ಆಂದೋಲನ್‌ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 1993ರಿಂದ 1999ರ ವರೆಗೂ ಇವರು ರಿಲೇಷನ್‌ಶಿಪ್‌ (Relationship) ನಲ್ಲಿದ್ದರು. 'ಸಲ್ಮಾನ್​ ಖಾನ್​ ತನ್ನನ್ನು ಬೇಕೆಂದ ಹಾಗೆಲ್ಲಾ ಬಳಸಿಕೊಂಡ, ಅತ್ಯಾಚಾರ ಮಾಡಿದ, ಸಿಗರೇಟ್‌ನಿಂದ ಸುಟ್ಟು ಖುಷಿಪಡುತ್ತಿದ್ದ, ನನ್ನ ಮೇಲೆ ಮದ್ಯವನ್ನು ಸುರಿದಿದ್ದ.  ಹಲ್ಲೆ ನಡೆಸಿದ್ದ. ಆತನ ಹೊಡೆತದಿಂದ ಗಾಯಗಳಾಗಿದ್ದವು' ಎಂದು ಅವರು ಹೇಳಿದ್ದರು. ಆತನಿಗೆ ಹಲವಾರು ಅಫೇರ್‌ಗಳಿವೆ. ಆದರೂ ನನ್ನನ್ನು ಬಳಸಿಕೊಂಡ' ಎಂದಿದ್ದರು. 

ಭಾರತದ ಬಿಲೇನಿಯರ್​ ಯುವತಿ ಉಗಾಂಡಾದಲ್ಲಿ ಅಕ್ರಮ ಬಂಧನ? ಮಲ-ರಕ್ತ ತುಂಬಿದ ಕೊಠಡಿಯಲ್ಲಿ ಶತ ಕೋಟಿ ಒಡತಿ!

 
 
 
 
 
 
 
 
 
 
 
 
 
 
 

A post shared by Somy Ali (@realsomyali)

click me!