ವರ್ಕ್​ಔಟ್​ನಲ್ಲಿ ಎಡವಟ್ಟು​: ಗಂಭೀರ ಸಮಸ್ಯೆಯಿಂದ ಬಳಲ್ತಿರೋ ನಟಿ ರಾಕುಲ್​ ಪ್ರೀತ್​- ಆಸ್ಪತ್ರೆಗೆ ದಾಖಲು

Published : Oct 17, 2024, 06:13 PM IST
 ವರ್ಕ್​ಔಟ್​ನಲ್ಲಿ ಎಡವಟ್ಟು​: ಗಂಭೀರ ಸಮಸ್ಯೆಯಿಂದ ಬಳಲ್ತಿರೋ ನಟಿ ರಾಕುಲ್​ ಪ್ರೀತ್​- ಆಸ್ಪತ್ರೆಗೆ ದಾಖಲು

ಸಾರಾಂಶ

ವರ್ಕ್​ಔಟ್​ ಮಾಡುವಾಗ 80 ಕೆ.ಜಿ ತೂಕವನ್ನು ಎತ್ತಿರುವ ಹಿನ್ನೆಲೆಯಲ್ಲಿ ನಟಿ ರಾಕುಲ್​ ಪ್ರೀತ್​ಗೆ ಭಾರಿ ಸಮಸ್ಯೆ ಉಂಟಾಗಿದೆ. ಅಷ್ಟಕ್ಕೂ ಆಗಿದ್ದೇನು?   

ಚಿತ್ರತಾರೆಯರು ತಮ್ಮ ದೇಹವನ್ನು ಫಿಟ್​ ಆಗಿಟ್ಟುಕೊಳ್ಳಲು ಸಾಕಷ್ಟು ವರ್ಕ್​ಔಟ್​ ಮಾಡುತ್ತಾರೆ. ಆದರೆ ಅಗತ್ಯಕ್ಕಿಂತ ಹೆಚ್ಚಿಗೆ ವರ್ಕ್​ಔಟ್​ ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವುದಕ್ಕೆ ಬಹುಭಾಷಾ ನಟಿ ರಾಕುಲ್​ ಪ್ರೀತ್​ ಉದಾಹರಣೆಯಾಗಿದ್ದಾರೆ.  ಕಳೆದ ಕೆಲವು ದಿನಗಳಿಂದ ನಟಿ ರಾಕುಲ್ ಬೆಡ್ ರೆಸ್ಟ್‌ನಲ್ಲಿದ್ದಾರೆ. ಈಕೆಯ ಮತ್ತು ಪರಿಸ್ಥಿತಿ ಸಾಕಷ್ಟು ಗಂಭೀರವಾಗಿದೆ ಎನ್ನಲಾಗಿದೆ. ಇದಕ್ಕೆ ಕಾರಣ,  ಕಳೆದ ವಾರ  ನಟಿ  ವರ್ಕೌಟ್ ಮಾಡುವಾಗ ಮಾಡಿಕೊಂಡ ಎಡವಟ್ಟು. ಅವರು ಬೆಲ್ಟ್ ಧರಿಸದೆ 80 ಕೆಜಿ ಡೆಡ್ ಲಿಫ್ಟ್ ಮಾಡಿದ್ದಾರೆ. ಇದರಿಂದ  ಬೆನ್ನಿನಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ಇಷ್ಟಾದರು ಕೂಡ ತಮ್ಮಿಂದ ಶೂಟಿಂಗ್​ಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ,  ಸತತ 2 ದಿನಗಳ ಕಾಲ ದೇ ದೇ  ಪ್ಯಾರ್ ದೇ-2  ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿ ಎನ್ನಲಾಗುತ್ತಿದೆ. ಕಳೆದ ಮೂರು ದಿನಗಳಿಂದ ನಟಿ  ಫಿಸಿಯೋ ಥೆರಪಿ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂದು ಬಾಲಿವುಡ್​ ಮೂಲಗಳು ಹೇಳಿವೆ.  ಪ್ರತಿ ಬಾರಿಯೂ 3-4 ಗಂಟೆಗಳ ನಂತರ ನೋವು ಮತ್ತೆ ಮರುಕಳಿಸುತ್ತಿದೆ. ದೇಹದ ವಿವಿಧ ಭಾಗಗಳಿಗೆ ಸಾಕಷ್ಟು ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಈ ವರ್ಕ್​ಔಟ್​ ನಂತರ ಹಲವಾರು ನರಗಳು ಜ್ಯಾಮ್ ಆಗಿವೆ. ಬಿಪಿ ಕಡಿಮೆಯಾದ ಹಿನ್ನೆಲೆಯಲ್ಲಿ, ತಲೆ ತಿರುಗಿ ಬಿದ್ದು ಕೆಲ ದಿನ ಬೆಡ್​ರೆಸ್ಟ್​ ಹೇಳಲಾಗಿದೆ. ಇದಾಗಲೇ ಹಲವಾರು ವಿಧದ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ ಎನ್ನಲಾಗಿದೆ. 

ಯಾರ ಕನಸ ಕನ್ಯೆಯೋ... ಎಂದು ಸುಧಾರಾಣಿ ಪೋಸ್​: ಪ್ಲೀಸ್​ ಮಗು ತೆಗೆಸಿ ಅಂತಿರೋ ಫ್ಯಾನ್ಸ್​!

ಅಂದಹಾಗೆ, ಬಾಲಿವುಡ್​ ನಟಿ ರಾಕುಲ್​ ಪ್ರೀತ್​ ಸಿಂಗ್​ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.  ಬಾಲಿವುಡ್​ನ  `ಯಾರಿಯಾಂ' ಚಿತ್ರದಿಂದ  ಫೇಮಸ್​ ಆದ ರಾಕುಲ್​, ಕನ್ನಡದ ಗಿಲ್ಲಿ (Gilli) ಚಿತ್ರದಲ್ಲಿ ನಟಿಸಿದ್ದಾರೆ.  ಕಳೆದ ವರ್ಷ ಸದ್ದು ಮಾಡಿದ್ದ ಡ್ರಗ್ಸ್​ ಕೇಸ್​ನಲ್ಲಿಯೂ ಈಕೆಯ ಹೆಸರು ಥಳಕು ಹಾಕಿಕೊಂಡಿತ್ತು. ನೋಟಿಸ್​ ಕೂಡ ಜಾರಿಯಾಗಿತ್ತು.  ನಟಿ ರಾಕುಲ್ ಪ್ರೀತ್ ಸಿಂಗ್ ಕೊನೆಯದಾಗಿ ಅಜಯ್ ದೇವಗನ್ (Ajay Devagan) ಜೊತೆ ರನ್ ವೇ 34 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಛತ್ರಿವಾಲಿ ಜೊತೆಗೆ ಆಯುಷ್ಮಾನ್ ಖುರಾನ ನಟನೆಯ ಡಾಕ್ಟರ್ ಜಿ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಥ್ಯಾಂಕ್ ಗಾಡ್, ಅಕ್ಷಯ್ ಕುಮಾರ್ ಜೊತೆ ಮಿಷನ್ ಸಿಂಡ್ರೆಲಾ ಸಿನಿಮಾಗಳಲ್ಲಿ ನಟಿಸಿದ್ದಾರೆ. 

 ಈ ಹಿಂದೆ ನಟಿ,  ಸೆಕ್ಸ್​ ಎಜುಕೇಷನ್​ ಕುರಿತು ಮಾತನಾಡಿ ಸುದ್ದಿಯಾಗಿದ್ದರು.  ಶಾಲಾ ಮಟ್ಟದಲ್ಲಿಯೇ ಲೈಂಗಿಕತೆಯ ಅರಿವು ಮೂಡಿಸುವ ಶಿಕ್ಷಣ ಮಕ್ಕಳಿಗೆ ಬೇಕು ಎನ್ನುವುದು ಕೆಲವರ ವಾದವಾಗಿದ್ದರೆ, ಇನ್ನು ಕೆಲವರು ಇದನ್ನು ವಿರೋಧಿಸುವವರೂ ಇದ್ದಾರೆ. ಕೆಲವು ದೇಶಗಳಲ್ಲಿ ಸೆಕ್ಸ್​ ಎಜುಕೇಷನ್​ ಶಾಲಾ ಹಂತದಲ್ಲಿಯೇ ಕಲಿಸಲಾಗುತ್ತದೆ. ಆದರೆ ಭಾರತದಲ್ಲಿ ಇದರ ಬಗ್ಗೆ ಮಾತನಾಡುವುದಕ್ಕೂ ಮುಜುಗರ ಪಡುವ ಸ್ಥಿತಿ ಇದೆ. ಇದೇ ಕಾರಣಕ್ಕೆ ಹದಿಹರೆಯದವರಲ್ಲಿ ಸೆಕ್ಸ್​ ಕುರಿತು ತಪ್ಪು ತಿಳಿವಳಿಕೆಗಳಿಂದ ಎಡವಟ್ಟು ಆಗುತ್ತಿದೆ ಎನ್ನುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಲೈಂಗಿಕತೆಯ (Sexual Intercource) ಬಗ್ಗೆ ಮುಕ್ತವಾಗಿ ಮಾತನಾಡಬೇಕು ಎನ್ನುವುದು ನಟಿಯ ಆಶಯವಾಗಿದೆ. 

ಸಲ್ಮಾನ್ ಖಾನ್ ಕ್ರೂರ ಹಂದಿ ಎಂದಿದ್ದ ಮಾಜಿ ಲವರ್​ ಸೋಮಿಯಿಂದ ಲಾರೆನ್ಸ್​ ಬಿಷ್ಣೋಯಿಗೆ ಶಾಕಿಂಗ್ ಪತ್ರ! ಏನಿದೆ ಇದರಲ್ಲಿ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!