ಈಗಾಗ್ಲೇ ಈ ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಮಾನ್ ಮೇಲೆ ಗಲವು ಬಾರಿ ಅಟ್ಯಾಕ್ ಮಾಡೋ ಪ್ರಯತ್ನ ಆಗಿವೆ. ಸದ್ಯ ಸಲ್ಮಾನ್ಗೆ ಅತ್ಯಾಪ್ತನಾಗಿದ್ದ ಬಾಬಾ ಸಿದ್ದಿಕಿ ಕೊಲೆಯಾದ ಮೇಲಂತೂ ಸಲ್ಮಾನ್ ಎದೆಬಡಿತ ಹೆಚ್ಚಾಗಿದೆ. ಯಾವಾಗ ತನ್ನ ಮೇಲೆ ಅಟ್ಯಾಕ್ ಆಗುತ್ತೋ ಅಂತ..
ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ (baba siddique murder) ಕೊಲೆ ಘಟನೆ ಬಳಿಕ, ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಭದ್ರತೆಯನ್ನ ಹೆಚ್ಚಿಸಲಾಗಿದೆ. ಸರ್ಕಾರದಿಂದಲೇ ಸಲ್ಮಾನ್ಗೆ ವೈ ಪ್ಲಸ್ ಸೆಕ್ಯುರಿಟಿ ನೀಡಲಾಗಿದೆ. ಹಾಗಾದ್ರೆ ಈ ಸೆಕ್ಯುರಿಟಿಯಲ್ಲಿ ಎಷ್ಟು ಸಿಬ್ಬಂದಿ ಇರ್ತಾರೆ..ಏನೆಲ್ಲಾ ಸೇಫ್ಟಿ ಇರುತ್ತೆ.. ಮತ್ತಿದಕ್ಕೆ ಎಷ್ಟು ಕೋಟಿ ಹಣ ವೆಚ್ಚ ಮಾಡಲಾಗ್ತಾ ಇದೆ ಗೊತ್ತಾ..? ಆ ಕುರಿತ ಇನ್ಟ್ರೆಸ್ಟಿಂಗ್ ಡೀಟೇಲ್ಸ್ ಇಲ್ಲಿದೆ ನೋಡಿ..
ಸಲ್ಲುಮಿಯಾ ಸೆಕ್ಯುರಿಟಿಗೆ ಕೋಟಿ ಕೋಟಿ ವೆಚ್ಚ.. ಟೈಗರ್ ಈಗ ಭಾರೀ ದುಬಾರಿ ..!
ಯೆಸ್, ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ಗಿರೋ ಭದ್ರತೆಯನ್ನ ಹೆಚ್ಚಿಸಲಾಗಿದೆ. ಇತ್ತೀಚಿಗೆ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಕೊಲೆ ನಡೆದ ಮೇಲೆ ಸಲ್ಲುಮಿಯಾಗಿದ್ದ ಸೆಕ್ಯುರಿಟಿಯನ್ನ ಮತ್ತಷ್ಟು ಟೈಟ್ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರ ಸಲ್ಮಾನ್ಗೆ ವೈ ಪ್ಲಸ್ ಸೆಕ್ಯುರಿಟಿಯನ್ನ ಒದಗಿಸಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಲಾನ್ ಖಾನ್ ಟಾರ್ಗೆಟ್..!
ಬಾಬಾ ಸಿದ್ದಿಕಿ ಹತ್ಯೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi) ಕೈವಾಡ ಇರೋದು ಖಚಿತವಾಗಿದೆ. ಅಸಲಿಗೆ ಈ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ನ ಹಲವು ವರ್ಷಗಳಿಂದ ಟಾರ್ಗೆಟ್ ಮಾಡಿದೆ. ಬಿಷ್ಣೋಯ್ ಸಮುದಾಯದವಾನಾದ ಲಾರೆನ್ಸ್ ಬಿಷ್ಣೋಯ್ ಕೃಷ್ಣಮೃಗ ಬೇಟೆಯಾಡಿದ ಸಲ್ಮಾನ್ನ ಬೇಟೆಯಾಡ್ತೀನಿ ಅಂತ ಪಣ ತೊಟ್ಟಿದ್ದಾನೆ.
ನನಗೆ ಯಾವ ನಟರ ಜೊತೆಗೂ ದುಷ್ಮನಿ ಇಲ್ಲ ಅಂದ್ರು ಪವನ್ ಕಲ್ಯಾಣ್; ಇಲ್ಲ ಅಂದ್ಮೇಲೆ ಹೇಳಿದ್ಯಾಕೆ..?
ಈಗಾಗ್ಲೇ ಈ ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಮಾನ್ ಮೇಲೆ ಗಲವು ಬಾರಿ ಅಟ್ಯಾಕ್ ಮಾಡೋ ಪ್ರಯತ್ನ ಆಗಿವೆ. ಸದ್ಯ ಸಲ್ಮಾನ್ಗೆ ಅತ್ಯಾಪ್ತನಾಗಿದ್ದ ಬಾಬಾ ಸಿದ್ದಿಕಿ ಕೊಲೆಯಾದ ಮೇಲಂತೂ ಸಲ್ಮಾನ್ ಎದೆಬಡಿತ ಹೆಚ್ಚಾಗಿದೆ. ಯಾವಾಗ ತನ್ನ ಮೇಲೆ ಅಟ್ಯಾಕ್ ಆಗುತ್ತೋ ಅಂತ ಜೀವಭಯದಿಂದ ಸಲ್ಮಾನ್ ತತ್ತರಿಸಿ ಹೋಗಿದ್ದಾರೆ.
25 ಭದ್ರತಾ ಸಿಬ್ಬಂದಿ, 4 NSG ಕಮಾಂಡೋ, ಬುಲೆಟ್ ಪ್ರೂಫ್ ಕಾರ್:
ಹೌದು ಸದ್ಯ ಸಲ್ಮಾನ್ಗೆ ಮಹಾರಾಷ್ಟ್ರ ಸರ್ಕಾರ ನೀಡಿರೋ ವೈ ಪ್ಲಸ್ ಸೆಕ್ಯೂರಿಟಿ 25 ಭದ್ರತಾ ಸಿಬ್ಬಂದಿಯನ್ನ ಒಳಗೊಂಡಿದೆ. ಇದ್ರಲ್ಲಿ 4 ಜನ ಎನ್.ಎಸ್.ಜಿ ಕಮಾಂಡೋಸ್ ಇರ್ತಾರೆ. ಅತ್ಯಾಧುನಿಕ ರೈಫಲ್ ಹೊಂದಿರೋ ಇವರು ಅದೆಂಥಾ ಅಟ್ಯಾಕ್ ನಡೆದರೂ ಎದುರಿಸಿ, ರಕ್ಷಿಸಬಲ್ಲ ನೈಪುಣ್ಯ ಹೊಂದಿರ್ತಾರೆ.
ಇನ್ನೂ ಸಲ್ಮಾನ್ ಬಳಿ ಕೋಟಿ ಬೆಲೆಬಾಳುವ ಬುಲೆಟ್ ಪ್ರೂಫ್ ಕಾರ್ ಇದೆ. ದುಬೈನಿಂದ ಇಂಪೋರ್ಟ್ ಮಾಡಿಕೊಂಡಿರೋ ಈ ಹೈಸೆಕ್ಯೂರಿಟಿ ಕಾರ್ನಲ್ಲೇ ಸಲ್ಮಾನ್ ಸಂಚರಿಸ್ತಾರೆ. ಇನ್ನೂ ಅವರ ಭದ್ರತಾ ಸಿಬ್ಬಂದಿಗೂ ಬುಲೆಟ್ ಪ್ರೂಫ್ ಕಾರ್ ನೀಡಲಾಗಿದೆ.
ಸಲ್ಮಾನ್ ಭದ್ರತೆಗೆ ತಗಲುವ ವೆಚ್ಚ 3 ಕೋಟಿಗೂ ಹೆಚ್ಚು..!
ಹೌದು ಮೂಲಗಳ ಪ್ರಕಾರ ಸಲ್ಮಾನ್ ಖಾನ್ಗೆ ನೀಡಲಾಗೋ ವೈ ಪ್ಲಸ್ ಸೆಕ್ಯೂರಿಟಿಗೆ ತಿಂಗಳಿಗೆ ಕನಿಷ್ಟ 15 ಲಕ್ಷ ಖರ್ಚಾಗುತ್ತೆ. ಜೊತೆಗೆ ಮನೆಗೆ ನೀಡಿರೋ ಭದ್ರತಾ ದಳದ ಸಂಬಳ, ಮನೆ ಬಳಿ ಅಳವಡಿಸರೋ ಎಐ ಸೆಕ್ಯೂರಿಟಿ ಕ್ಯಾಮರಾ.. ಎಲ್ಲಾ ಸೇರಿದ್ರೆ ವರ್ಷಕ್ಕೆ ಮೂರು ಕೋಟಿ ಸಲ್ಮಾನ್ ಭದ್ರತೆ ಖರ್ಚಾಗ್ತಾ ಇದೆಯಂತೆ.
ಇಷ್ಟೆಲ್ಲಾ ವೆಚ್ಚವನ್ನ ಸರ್ಕಾರವೇ ಭರಿಸ್ತಾ ಇದೆ. ಕಲಾವಿದನೊಬ್ಬನಿಗೆ ರಕ್ಷಣೆ ಕೊಡೋದು ಸರ್ಕಾರದ ಕರ್ತವ್ಯ. ಸೋ ಸರ್ಕಾರವೇ ಇದರ ಹೊಣೆ ಹೊತ್ಯಿದ್ದು ವರ್ಷಕ್ಕೆ ಮೂರು ಕೋಟಿ ಸಾರ್ವಜನಿಕರ ತೆರಿಗೆ ಹಣ ಈ ಫಿಲ್ಮಿ ಟೈಗರ್ ರಕ್ಷಣೆಗೆ ಬಳಕೆಯಾಗ್ತಾ ಇದೆ.
ಕೇಳದೇ ನಿಮಗೀಗ ಹಾಡು ಹುಟ್ಟಿದ್ದು ನೈಟಲ್ಲಂತೆ, ಶಂಕರ್ ನಾಗ್ ಬಗ್ಗೆ ಇಳಯರಾಜ ಹೇಳಿದ ಗುಟ್ಟು!
ಈ ಹಣದ ಲೆಕ್ಕ ಒತ್ತಟ್ಟಿಗಿರಲಿ. ಇಷ್ಟೆಲ್ಲಾ ಭಯ ಇಟ್ಕೊಂಡು, ಭದ್ರತೆಯನ್ನ ಜೊತೆಗಿಟ್ಟುಕೊಂಡು ಸಲ್ಮಾನ್ ಅದ್ಹೇಗೆ ಸಿನಿಮಾಗಳಲ್ಲಿ ಕೆಲಸ ಮಾಡ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಸದ್ಯ ಬಿಗ್ ಬಾಸ್ ನಲ್ಲಿ ಬ್ಯುಸಿಯಾಗಿರೋ ಸಲ್ಮಾನ್ ಸಿಕಂದರ್ ಸಿನಿಮಾದಲ್ಲಿ ನಟಿಸೋಕೆ ಸಜ್ಜಾಗ್ತಾ ಇದ್ದಾರೆ. ಆದ್ರೆ ಭದ್ರತೆಯ ಕೋಟೆಯೊಳಗೆ ಬಂಧಿಯಾಗಿದ್ದುಕೊಂಡೇ ಸಲ್ಮಾನ್ ನಟನೆ ಮಾಡಬೇಕಿದೆ. ಕಾಡುವ ಜೀವಭಯದ ನಡುವೆಯೂ ತೆರೆ ಮೇಲೆ ಟೈಗರ್ ತರಹ ಘರ್ಜಿಸಬೇಕಿದೆ.