ಪ್ರೀತಿಸಿದವರನ್ನು ಬೇರೆ ಮಾಡಿ ಇನ್ನೊಬ್ಬರಿಗೆ ಮದುವೆ ಆಮಡಿದ್ರೆ ಎಲ್ಲರ ಜೀವನ ಹಾಳು ಎನ್ನುವ ಮಾತೊಂದಿದೆ. ಇದಕ್ಕೆ ಅನೇಕ ಉದಾಹರಣೆ ಕೂಡ ನಮ್ಮ ಮುಂದಿದೆ. ಇಂಥದ್ದೇ ಘಟನೆಯಲ್ಲಿ ಅಮಾಯಕನೊಬ್ಬ ಬಲಿಯಾಗಿದ್ದಾನೆ.
ಮದುವೆ (Marriage)ಯಾಗಿ ಸುಖ ಸಂಸಾರ ನಡೆಸಬೇಕು ಎಂಬ ಆಸೆಯಲ್ಲಿ ಆತನಿದ್ದ. ಪತ್ನಿ ಜೊತೆ ಹೊಸ ಬಾಳಿನ ಬಗ್ಗೆ ಬೆಟ್ಟದಷ್ಟು ಕನಸು ಕಂಡಿದ್ದ. ಮದುವೆ ಆದ್ಮೇಲೆ ತನ್ನ ಜೀವನವೇ ಬದಲಾಗುತ್ತೆ ಎನ್ನುವ ನಂಬಿಕೆಯಲ್ಲಿದ್ದ. ಮದುವೆ ಸಂಭ್ರಮ ಮನೆಯಲ್ಲಿ ಮಾಸಿರಲಿಲ್ಲ, ಆಗ್ಲೇ ಯಮಲೋಕ ಸೇರಿದ್ದಾನೆ. ಮದುವೆಯಾದ 15 ದಿನಕ್ಕೆ ವರನ ಹತ್ಯೆ (murder) ನಡೆದಿದೆ. ಯಾರದ್ದೋ ಪ್ರೀತಿ, ಸೇಡಿಗೆ ಪಾಪದ ಯುವಕ ಬಲಿಯಾಗಿದ್ದಾನೆ.
ಘಟನೆ ಉತ್ತರ ಪ್ರದೇಶ (Uttar Pradesh) ದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ. ದಿಲೀಪ್ ಹತ್ಯೆಯಾದ ವ್ಯಕ್ತಿ. ಹತ್ಯೆ ಸ್ಕೆಚ್ ಹಾಕಿದ್ದು ಮತ್ತ್ಯಾರೂ ಅಲ್ಲ ದಿಲೀಪ್ ಮಡದಿ ಪ್ರಗತಿ. ಆಕೆ ತನ್ನ ಪ್ರೇಮಿ ಅನುರಾಗ್ ಜೊತೆ ಸೇರಿ ದಿಲೀಪ್ ಕಥೆ ಮುಗಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾರ್ಚ್ 5, 2025ರಂದು ದಿಲೀಪ್ ಹಾಗೂ ಪ್ರಗತಿ ಮದುವೆ ನಡೆದಿತ್ತು. ಮೈನ್‌ಪುರಿಯ ಉದ್ಯಮಿ, 24 ವರ್ಷದ ದಿಲೀಪ್, ಔರೈಯಾದ ಫಾಫುಂಡ್ ನಿವಾಸಿ ಪ್ರಗತಿಯನ್ನು ಮದುವೆ ಆಗಿದ್ದ. ಆದ್ರೆ ಪ್ರಗತಿ ಮನಸ್ಸು ದಿಲೀಪ್ ಮೇಲೆ ಇರಲಿಲ್ಲ. ಪ್ರಗತಿ, ಅನುರಾಗ್ ನನ್ನು ಪ್ರೀತಿ ಮಾಡ್ತಿದ್ದಳು. ಕಳೆದ ನಾಲ್ಕು ವರ್ಷಗಳಿಂದ ಪ್ರಗತಿ ಹಾಗೂ ಅನುರಾಗ್ ಪ್ರೀತಿಯಲ್ಲಿದ್ರು. ಆದ್ರೆ ಅವರ ಮದುವೆಗೆ ಮನೆಯವರು ಒಪ್ಪಿರಲಿಲ್ಲ. ದಿಲೀಪ್ ಜೊತೆ ಪ್ರಗತಿ ಮದುವೆಯನ್ನು ಒತ್ತಾಯದಿಂದ ಮಾಡಿಸಿದ್ದರು. ದಿಲೀಪ್ ಗೆ ಇದ್ಯಾವ ವಿಷ್ಯವೂ ತಿಳಿದಿರಲಿಲ್ಲ. ಮನೆಯವರ ದ್ವೇಷ ಹಾಗೂ ಪ್ರಗತಿ ಪ್ರೀತಿಯ ಹುಚ್ಚಾಟಕ್ಕೆ ದಿಲೀಪ್ ಸಾಯುವಂತಾಗಿದೆ.
ಕಾಟೇರನ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ರಜತ್, ವಿನಯ್‌ಗೆ ಬಾಂಬೆ ಕಟ್ ಹಾಕಿ ಕೂರಿಸಿದ ಪೊಲೀಸ್!
ಅನುರಾಗ್ ಪ್ರೀತಿಯಲ್ಲಿದ್ದ ಪ್ರಗತಿ, ಆತನಿಗಾಗಿ ಯಾವುದೇ ಕೆಲಸ ಮಾಡಲು ಸಿದ್ಧವಿದ್ದಳು. ಅನುರಾಗ್ ಕೂಡ ಪ್ರಗತಿಗಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ರೆಡಿ ಇದ್ದ. ಅನುರಾಗ್ ಹಾಗೂ ಪ್ರಗತಿ ಮದುವೆಗೆ ಅಡ್ಡಿಯಾಗಿದ್ದು ಮನೆಯವರು, ಪ್ರಗತಿ ಮದುವೆ ನಂತ್ರ ಪ್ರೀತಿಗೆ ಅಡ್ಡಲಾಗಿದ್ದು ದಿಲೀಪ್. ಹಾಗಾಗಿ ದಿಲೀಪ್ ನನ್ನು ಜೀವನದಿಂದ ದೂರ ಮಾಡಿದ್ರೆ ಕೆಲಸ ಸುಲಭ ಎಂದು ಪ್ರಗತಿ ಹಾಗೂ ಅನುರಾಗ್ ಭಾವಿಸಿದ್ರು. ದಿಲೀಪ್ ನನ್ನು ಮುಗಿಸಲು ಇಬ್ಬರೂ ನಿರ್ಧರಿಸಿದ್ರು.
ಮಾರ್ಚ್ 19ರಂದು ದಿಲೀಪ್ ಮುಗಿಸಲು ಮುಹೂರ್ತ ಸಿದ್ಧವಾಗಿತ್ತು. ದಿಲೀಪ್ ಗೆ ಗುಂಡು ಹಾರಿಸಿ ಹತ್ಯೆ ಮಾಡಲಾಯ್ತು. ಪ್ರಗತಿ ಹಾಗೂ ಅನುರಾಗ್, ದಿಲೀಪ್ ಹತ್ಯೆಗೆ ಶೂಟರ್ (shooter) ಗೆ ಹಣ ನೀಡಿದ್ರು. ಎರಡು ಲಕ್ಷ ರೂಪಾಯಿಗೆ ಸುಪಾರಿ ನೀಡಲಾಗಿತ್ತು. ಮದುವೆ ಟೈಂನಲ್ಲಿ ಉಡುಗೊರೆ ರೂಪದಲ್ಲಿ ಸಿಕ್ಕ ಹಣವನ್ನೇ ಪ್ರಗತಿ, ದಿಲೀಪ್ ಹತ್ಯೆಗೆ ಖರ್ಚು ಮಾಡಿದ್ಲು. ಈ ಹಣವನ್ನು ಪ್ರಗತಿ ಅನುರಾಗ್ ಗೆ ನೀಡಿದ್ದಳು. ಅನುರಾಗ್ ಶೂಟರ್ ಗೆ ನೀಡಿದ್ದ.
ಇನ್‌ಸ್ಟಾಗ್ರಾಮ್ ಸುಂದರಿ ಬಲೆಗೆ ಬಿದ್ದ ರೌಡಿಶೀಟರ್ ಸೂರ್ಯ ಕಬಾಬ್ ತಿನ್ನುತ್ತಲೇ ಹೆಣವಾದ!
ಮಾರ್ಚ್ 19 ರಂದು, ಔರೈಯಾದ ಸಹಾರ್ ಪೊಲೀಸ್ ಠಾಣೆ ಪ್ರದೇಶದ ಪಾಲಿಯಾ ಗ್ರಾಮದ ಬಳಿ ಗೋಧಿ ಹೊಲದಲ್ಲಿ ದಿಲೀಪ್ ಗಂಭೀರ ಸ್ಥಿತಿಯಲ್ಲಿ ಬಿದ್ದಿದ್ದ. ಆತನನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷ್ಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ದಿಲೀಪ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲ ನೀಡಲಿಲ್ಲ. ಆಸ್ಪತ್ರೆಯಲ್ಲಿ ದಿಲೀಪ್ ಕೊನೆ ಉಸಿರೆಳೆದಿದ್ದಾನೆ. ಸಿಸಿಟಿವಿ ಚೆಕ್ ಮಾಡಿದಾಗ, ಅಪರಿಚಿತನೊಬ್ಬನ ಬೈಕ್ ಮೇಲೆ ದಿಲೀಪ್ ಹೋಗ್ತಿರೋದು ಪತ್ತೆಯಾಗಿತ್ತು. ಆತನನ್ನು ಬೆನ್ನು ಹತ್ತಿದಾಗ ಅನುರಾಗ್ ಹಾಗೂ ಪ್ರಗತಿ ಸಿಕ್ಕಿ ಬಿದ್ರು. ಪೊಲೀಸ್ ಮುಂದೆ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ಪ್ರಗತಿ, ಅನುರಾಗ್ ಜೊತೆ ಶೂಟರ್ ನನ್ನು ಪೊಲೀಸರು ಬಂಧಿಸಿದ್ದಾರೆ.