ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಕತ್ತಿಯಿಂದ ಕೊಚ್ಚಿ ನಾಲ್ವರನ್ನು ಕೊಲೆ ಮಾಡಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಗಿರೀಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
ಕೊಡಗು (ಮಾ.28): ಅತ್ಯಂತ ಭೀಕರ ಎನಿಸುವ ಪ್ರಕರಣ ನಡೆದಿದ್ದು, ಕತ್ತಿಯಿಂದ ಕಡಿದು ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.ಕರಿಯ, ಗೌರಿ, ನಾಗಿ, 6 ವರ್ಷದ ಕಾವೇರಿ ಹತ್ಯೆಗೀಡಾದ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಗಿರೀಶ್ ಎನ್ನುವ ವ್ಯಕ್ತಿಯಿಂದ ಈ ಭೀಕರ ಕೃತ್ಯ ನಡೆದಿದೆ ಎನ್ನಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೇಗೂರಿನಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದು, ನಾಲ್ವರ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದಿದ್ದಾರೆ.
ಬೇಗೂರು ಕಾಫಿ ತೋಟದ ಲೈನ್ ಮನೆಯಲ್ಲಿ ನಾಲ್ವರ ಹತ್ಯೆ ನಡೆದಿದೆ. 75 ವರ್ಷದ ಕರಿಯ, 70 ವರ್ಷದ ಗೌರಿ, 35 ವರ್ಷದ ನಾಗಿ ಹಾಗೂ 5 ವರ್ಷದ ಕಾವೇರಿ ಹತ್ಯೆಯಾದವರು. ಕೊಲೆ ಆರೋಪಿ ಗಿರೀಶ್‌ಗೆ 35 ವರ್ಷವಿರಬಹುದು ಎನ್ನಲಾಗಿದೆ. ಗಿರೀಶ್ ಹತ್ಯೆಯಾದ ನಾಗಿಯ ಮೂರನೇ ಪತಿ ಎನ್ನಲಾಗಿದೆ. ಕಾಫಿ ಬೆಳೆ ವಿಷಯದಲ್ಲಿ ಹತ್ಯೆ ಮಾಡಿರುವ ಮಾಹಿತಿ ಇದೆ. ಮನೆಯಲ್ಲಿದ್ದ ಕಾಫಿ ಬೆಳೆಗಾಗಿ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ರಾಮರಾಜನ್ ಭೇಟಿ ನೀಡಿದ್ದಾರೆ.
ವೃದ್ಧ ದಂಪತಿ ₹6 ಲಕ್ಷ ಕೊಟ್ಟರೂ ಬೆದರಿಕೆ ನಿಲ್ಲಿಸದ ಸೈಬರ್ ವಂಚಕರು; ಮಾನಕ್ಕೆ ಹೆದರಿ ಪ್ರಾಣವನ್ನೇ ಬಿಟ್ಟರು!
ನಾಲ್ವರನ್ನು ಹತ್ಯೆ ಮಾಡಿರುವ ಗಿರೀಶ್ ಎಸ್ಕೇಪ್ ಆಗಿದ್ದಾನೆ. ನಿನ್ನೆ ರಾತ್ರಿಯೇ ಹತ್ಯೆ ಮಾಡಿರುವ ಸಾಧ್ಯತೆ ಇದೆ. ಹತ್ಯೆಗೀಡಾದ ಕರಿಯ, ಕುಟುಂಬದವರನ್ನು ಬೆಳಿಗ್ಗೆ ಕೆಲಸಕ್ಕೆ ಕರೆಯಲು ಹೋದಾಗ ಹತ್ಯೆ ಬೆಳಕಿಗೆ ಬಂದಿದೆ. ಗ್ರಾಮದ ವ್ಯಕ್ತಿಯೊಬ್ಬರು ಕೆಲಸಕ್ಕೆ ಕರೆಯಲು ಹೋದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಬೆಂಗಳೂರು 2025ರ ಬೆಸ್ಟ್ ಇಡ್ಲಿ, ದೋಸೆ, ಫಿಲ್ಟರ್ ಕಾಫಿ ಪ್ರಶಸ್ತಿ ಪ್ರದಾನ! ಯಾರಿಗೆ ಯಾವ ಅವಾರ್ಡ್ ಸಿಕ್ತು ನೋಡಿ!