ಸಾಯಿ ಪಲ್ಲವಿ ದಿನಕ್ಕೆರಡು ಲೀಟರ್‌ ಈ ಪಾನೀಯ ಕುಡೀತಾರಂತೆ!

ಮಲಯಾಳಂ ನಟಿ ಸಾಯಿ ಪಲ್ಲವಿ ನೈಸರ್ಗಿಕ ಸೌಂದರ್ಯ ಮತ್ತು ಸರಳತೆಗೆ ಹೆಸರುವಾಸಿ. ಆಕೆ ಮೇಕಪ್ ಇಲ್ಲದೆ ನಟಿಸುವುದರ ಬಗ್ಗೆ ಮತ್ತು ಆರೋಗ್ಯಕರ ಜೀವನಶೈಲಿಗೆ ನೀಡುವ ಮಹತ್ವದ ಬಗ್ಗೆ ನಿಮಗೆ ಗೊತ್ತೇ ಇದೆ. ಈಗ ಆಕೆಯ ಎನರ್ಜಿ ಸೀಕ್ರೆಟ್‌ ಪೇಯದ ಬಗ್ಗೆಯೂ ಇಲ್ಲಿ ತಿಳಿಯಿರಿ!

Sai Pallavi drinks two liters of coconut water daily and her other practices bni

ಮಲಯಾಳಂ ಮೂಲದ ನಟಿ ಸಾಯಿ ಪಲ್ಲವಿ ತನ್ನ ನೈಸರ್ಗಿಕ ಸೌಂದರ್ಯ ಮತ್ತು ಸರಳ ಜೀವನಶೈಲಿಗೆ ಹೆಸರುವಾಸಿ. ಆಕೆಯ ಮೊಡವೆ ಮುಖ, ಮೇಕಪ್ ಇಲ್ಲದ ನೋಟ ಆಕೆಯ ಸೌಂದರ್ಯವನ್ನು ಕಡಿಮೆ ಮಾಡಿಲ್ಲ ಬದಲಾಗಿ ಹೆಚ್ಚಿಸಿವೆ. ವಿಶೇಷವಾಗಿ 'ಪ್ರೇಮಂ' ಚಿತ್ರದಲ್ಲಿ ಆಕೆ ಮಾಡಿದ ಮೋಡಿ. ಅದು ಅವರ ನೈಸರ್ಗಿಕ ಮೋಡಿ. ಸಾಯಿ ಪಲ್ಲವಿ ಎಲ್ಲ ಪ್ರಸಾಧನ ಸಾಮ್ರಿಗಳಿಂದ ಮುಕ್ತಳು ಮತ್ತು ಮೇಕಪ್ ಇಲ್ಲದೆಯೇ ಉತ್ತಮವಾಗಿ ನಟಿಸುತ್ತಾಳೆ. ಸಾಂಪ್ರದಾಯಿಕ ಉಡುಗೆಗೇ ಆದ್ಯತೆ ನೀಡುವಾಕೆ. ಚಿತ್ರದಲ್ಲಿ ಗ್ಲಾಮರ್ ಅನ್ನು ಮಿತಿಯಲ್ಲಿಡುತ್ತಾರೆ. ಇತ್ತೀಚೆಗೆ ಆಕೆ ನಾಗ ಚೈತನ್ಯ ಅವರೊಂದಿಗೆ ನಟಿಸಿದ 'ಥಂಡೆಲ್' ಜನಮೆಚ್ಚುಗೆ ಹಾಗೂ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದೆ. 

‘ಥಂಡೆಲ್’ ಚಿತ್ರದ ಪ್ರಚಾರದ ಸಮಯದಲ್ಲಿ ಸಹನಟ ನಾಗ ಚೈತನ್ಯ ಅವರು ಸಾಯಿ ಪಲ್ಲವಿ ಬಗ್ಗೆ ಒಂದು ವಿಷಯ ಬಹಿರಂಗಪಡಿಸಿದರು. ಆಕೆ ಪ್ರತಿದಿನ ಕನಿಷ್ಠ ಐದು ಲೀಟರ್ ಎಳನೀರು ಕುಡಿಯುತ್ತಾಳೆ ಎಂದು ತಮಾಷೆಯಾಗಿ ಕಾಲೆಳೆದರು. ಸಾಯಿ ಪಲ್ಲವಿ ಈ ಹೇಳಿಕೆಯನ್ನು ಕೇಳಿ ನಕ್ಕಳು. ಅಷ್ಟೊಂದು ಹೆಚ್ಚಿಲ್ಲ. ಆದರೂ  ನಿಯಮಿತವಾಗಿ ಸುಮಾರು ಎರಡು ಲೀಟರ್ ಎಳನೀರನ್ನು ಸೇವಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಅಂದರೆ ಸಾಯಿ ಪಲ್ಲವಿ ನ್ಯಾಚುರಲ್‌ ಚೆಲುವು ಹಾಗೂ ಬಾಡಿ ಫಿಟ್‌ನೆಸ್‌ ಇದೇ ಕಾರಣ ಇರಬಹುದಾ ಅಂತ ಆಕೆಯ ಅಭಿಮಾನಿಗಳಿಗೆ ಸಂಶಯಕ್ಕೆ ಇದೀಗ ಕಾರಣವಾಗಿದೆ.  

Latest Videos

ಎಳನೀರಿನ ಆರೋಗ್ಯ ಪ್ರಯೋಜನಗಳು ನಮಗೆ ಗೊತ್ತೇ ಇವೆ. ಆದರೆ ಇದರ ಅತಿಯಾದ ಸೇವನೆಯು ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು. ಆದರೆ ಸಾಯಿ ಪಲ್ಲವಿ ಅವರ ಎರಡು ಲೀಟರ್ ಎಳನೀರಿನ ಸೇವನೆಯು ಸುರಕ್ಷಿತ ಮಿತಿಯೊಳಗೇ ಇದೆ. ಇದು ಆರೋಗ್ಯಕರ ಮತ್ತು ನೈಸರ್ಗಿಕ ಜೀವನಶೈಲಿಗೆ ಅವರ ಬದ್ಧತೆಗೆ ಪೂರಕವಾಗಿದೆ ಎನ್ನಬಹುದು. 

ಸಾಯಿ ಪಲ್ಲವಿ ಮುಖಕ್ಕೆ ಯಾವುದೇ ಕೃತಕ ಬಣ್ಣ ಹಚ್ಚುವುದಿಲ್ಲ. ಆಕೆ ಜೇನುತುಪ್ಪ ಮತ್ತು ಅರಿಶಿನವನ್ನು ಬಳಸಿಕೊಂಡು ಸಾಂಪ್ರದಾಯಿಕ ಚರ್ಮದ ಆರೈಕೆ ಕ್ರಮಗಳನ್ನು ಅನುಸರಿಸುತ್ತಾಳೆ. ಸೌಂದರ್ಯಕ್ಕೆ ನೈಸರ್ಗಿಕ ವಿಧಾನವನ್ನು ಅಳವಡಿಸಿಕೊಳ್ಳುತ್ತಾಳೆ. ಸಾಯಿ ಪಲ್ಲವಿ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಂದರ್ಶನಗಳಲ್ಲಿ ಮೇಕಪ್ ಇಲ್ಲದೆ ಕಾಣಿಸಿಕೊಳ್ಳುತ್ತಾರೆ. ಸಾಯಿ ಮತ್ತು ನಿವಿನ್ ಪೌಲಿ ಅಭಿನಯದ 'ಪ್ರೇಮಂ' ಚಿತ್ರದಲ್ಲಿ ಇವರ ಮಲರ್ ಪಾತ್ರವು ಅವರ ನೈಸರ್ಗಿಕ ಮೋಡಿ ಮತ್ತು ಸ್ಪಷ್ಟವಾಗಿ ಅವರ ನಟನಾ ಕೌಶಲ್ಯದಿಂದಾಗಿ ಪ್ರೇಕ್ಷಕರಿಂದ ಗುರುತಿಸಲ್ಪಟ್ಟಿತು.

ಒಂದು ಸಂದರ್ಶನದಲ್ಲಿ ಆಕೆ, ಸ್ಕ್ರೀನ್‌ ಮೇಲೆ ಮೇಕಪ್ ಇಲ್ಲದ ನೋಟವನ್ನು ಪ್ರಚಾರ ಮಾಡುವುದರಿಂದ ಹೇಗೆ ನಿರಾಳ ಅನಿಸುತ್ತದೆ ಎಂದು ಅವರು ಹೇಳಿದ್ದಾರೆ. ಅನೇಕ ನಿರ್ದೇಶಕರು ಆಕೆಗೆ ಆರಂಭದಲ್ಲಿ ಲಘು ಮೇಕಪ್ ಮಾಡಿಕೊಳ್ಳುವಂತೆ ಸೂಚಿಸಿದರಂತೆ. ಆದರೆ ಆಕೆ ಯಾವುದೇ ಮೇಕಪ್ ಇಲ್ಲದೆ ನಟಿಸಿದಳು. ನಂತರ ನೋಡಿದ ಅದೇ ನಿರ್ದೇಶಕರು, ಆಕೆ ಮಾಡಿದ್ದು ಸರಿಯಾಗಿದೆ ಎಂದರಂತೆ. 

ನಾಗಾರ್ಜುನ ಅಕ್ಕಿನೇನಿ ಇಂದ ಪ್ರಭಾಸ್ ವರೆಗೆ: ನಟರೊಂದಿಗಿನ ಅಫೇರ್ ಬಗ್ಗೆ ಮಾತನಾಡಿದ ಅನುಷ್ಕಾ ಶೆಟ್ಟಿ!

“ನಾನು ಕೋಪಗೊಂಡಾಗ ಅಥವಾ ನಾಚಿಕೆಪಡುವಾಗ ನನ್ನ ಕೆನ್ನೆಗಳು ಕೆಂಪಾಗುತ್ತವೆ. ಅವರು ಆ ನೈಸರ್ಗಿಕ ಅಭಿವ್ಯಕ್ತಿಯನ್ನು ಇಷ್ಟಪಟ್ಟರು. ಸ್ಟುಡಿಯೋ ದೀಪಗಳು ನನ್ನ ಕಣ್ಣುಗಳನ್ನು ಚಿಕ್ಕದಾಗಿ ಕಾಣುವಂತೆ ಮಾಡುವುದರಿಂದ ನಾನು ಸಾಮಾನ್ಯವಾಗಿ ಐಲೈನರ್ ಅನ್ನು ಧರಿಸುತ್ತೇನೆ. ವಿರಾಟ ಪರ್ವಂನಲ್ಲಿ ನಾನು ಅದನ್ನೂ ಮಾಡಲಿಲ್ಲ. ನಾನು ನನ್ನ ಮುಖವನ್ನು ತೊಳೆದುಕೊಂಡು ಕಾಣಿಸಿಕೊಂಡೆ. ಇದು ನಾನು ಅನುಭವಿಸಿದ ಅತ್ಯಂತ ಮುಕ್ತತೆಯಾಗಿತ್ತು” ಎಂದು ಅವರು ಹೇಳಿದರು.

ಕಾರ್ಯಕ್ರಮಗಳಲ್ಲಿ ತಮ್ಮ ಸರಳ ಡ್ರೆಸ್ಸಿಂಗ್ ಶೈಲಿಯ ಬಗ್ಗೆ ಮಾತನಾಡಿದ ಅವರು, ಸಾಂಪ್ರದಾಯಿಕ ಸೀರೆಗಳನ್ನು ಇಷ್ಟಪಡುತ್ತೇನೆ. ಗ್ಲಾಮರ್ ವಿಷಯಕ್ಕೆ ಬಂದಾಗ ನಾನು  ಯಾವಾಗಲೂ ಕೆಲವು ಮಿತಿಗಳನ್ನು ಕಾಯ್ದುಕೊಂಡಿದ್ದೇನೆ ಎಂದು ವಿವರಿಸಿದರು. ಅನಗತ್ಯವಾಗಿ ದೇಹದ ಭಾಗಗಳನ್ನು ಕಾಣಿಸುವುದಿಲ್ಲ. ಕತೆಗೆ ಅಗತ್ಯವಾದರೆ ಸ್ವಲ್ಪ ಮಾತ್ರ ದೇಹ ತೋರಿಸಲು ಓಕೆ. ಆದರೆ ಕತೆ ಒಪ್ಪಿಕೊಳ್ಳುವಾಗಲೇ ಈ ಬಗ್ಗೆ ವಿವರವಾಗಿ ಮಾತನಾಡಿ ಒಪ್ಪಂದ ಮಾಡಿಕೊಂಡಿರುತ್ತೇನೆ ಎನ್ನುತ್ತಾರೆ.

ಇವಳು ಗ್ಲಾಮರ್​ಗೆ ಮಾತ್ರ ಲಾಯಕ್ ಅಂದ್ರು, ಕಟ್ ಮಾಡಿದ್ರೆ ಸ್ಟಾರ್ ಹೀರೋಗಳಿಗೆ ಸರಿಸಮಾನ ಕ್ರೇಜ್!
 

vuukle one pixel image
click me!