ಎಕ್ಸ್ ಗರ್ಲ್‌ಫ್ರೆಂಡ್‌ ಜೊತೆ ಗಂಡನ ಫೋಟೋ: ಎಣ್ಣೆ ಬಿಸಿ ಮಾಡಿ ಗಂಡನ ಖಾಸಗಿ ಭಾಗಕ್ಕೆ ಎರಚಿದ ಪತ್ನಿ

ಕೇರಳದಲ್ಲಿ ಪತ್ನಿಯೊಬ್ಬಳು ಗಂಡನ ಮರ್ಮಾಂಗಕ್ಕೆ ಬಿಸಿ ಎಣ್ಣೆ ಸುರಿದಿದ್ದಾಳೆ. ಗಂಡನ ಮೊಬೈಲ್‌ನಲ್ಲಿ ಮಾಜಿ ಗೆಳತಿಯ ಫೋಟೋ ನೋಡಿದ್ದಕ್ಕೆ ಆಕೆ ಈ ಕೃತ್ಯ ಎಸಗಿದ್ದಾಳೆ. ಗಂಡನ ಸ್ಥಿತಿ ಗಂಭೀರವಾಗಿದೆ.

Photo of husband with ex-girlfriend angry Wife pour heats oil on husband's private parts

ಮಾಜಿ ಗೆಳತಿಯ ಜೊತೆ ಗಂಡನ ಫೋಟೋ ನೋಡಿ ಉರಿದು ಹೋದ ಪತ್ನಿಯೊಬ್ಬಳು ಬಿಸಿ ಎಣ್ಣೆ ಕಾಯಿಸಿ ಗಂಡನ ಮರ್ಮಾಂಗಕ್ಕೆ  ಸುರಿದಿದ್ದು, ಇದರಿಂದ  ಗಂಡ ಗಂಭೀರ ಗಾಯಗೊಂಡಿದ್ದಾನೆ. ದೇವರ ನಾಡು ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್‌ನಲ್ಲಿ ಈ ಘಟನೆ ನಡೆದಿದೆ. ಮೊಬೈಲ್ ಫೋನ್‌ನಲ್ಲಿ ಗಂಡ ಮಾಜಿ ಗರ್ಲ್‌ಫ್ರೆಂಡ್ ಜೊತೆ ಇರುವ ಫೋಟೋ ನೋಡಿದ ಪತ್ನಿಗೆ ಆತ ಆಕೆಯ ಜೊತೆ ಸಂಪರ್ಕದಲ್ಲಿದ್ದುಕೊಂಡು ತನಗೆ ಮೋಸ ಮಾಡುತ್ತಿದ್ದಾನೆ ಎಂಬ ಸಂಶಯದ ಜೊತೆಗೆ ಕೋಪವೂ ನೆತ್ತಿಗೇರಿದೆ. ಇದರಿಂದ ಗಂಡನಿಗೆ ಬುದ್ಧಿ ಕಲಿಸಲು ಮುಂದಾದ ಆಕೆ ಸೀದಾ ಹೋಗಿ ಗ್ಯಾಸ್‌ನಲ್ಲಿ ನೀರು ಮಿಶ್ರಿತ ಎಣ್ಣೆ ಬಿಸಿ ಮಾಡಿದ್ದು, ಬಳಿಕ ಗಂಡನ ಖಾಸಗಿ ಭಾಗಕ್ಕೆ ಎರಚಿದ್ದಾಳೆ. ಇದರಿಂದ ಗಂಡನ ಸ್ಥಿತಿ ಗಂಭೀರವಾಗಿದೆ. ಶೇ. 45ರಷ್ಟು ಸುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಬಿಸಿಎಣ್ಣೆ ಎರಚಿದ್ದರಿಂದ ಗಂಡನ ಎದೆ ಕೈಗಳು, ಮರ್ಮಾಂಗ ಹಾಗೂ ತೊಡೆಯಲ್ಲಿ ಸುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನು ಎರ್ನಾಕುಲಂನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾಗಿ ವರದಿಯಾಗಿದೆ. ಇತ್ತ ಪತಿ ಮೇಲೆ ಈ ರೀತಿಯಾಗಿ ಮಾರಣಾಂತಿಕವಾಗಿ ಕ್ರೌರ್ಯವೆಸಗಿದ ಪತ್ನಿಯ ವಿರುದ್ಧ ದೂರು ದಾಖಲಾಗಿದೆ. ಮಾರ್ಚ್‌ 19ರಂದು ಘಟನೆ ನಡೆದಿದ್ದು, 32 ವರ್ಷದ ವ್ಯಕ್ತಿಯ ತಂದೆ ತಮ್ಮ ಸೊಸೆಯ ವಿರುದ್ಧ ಪೆರುಂಬವೂರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. 

ಬೆಡ್‌ಲ್ಲಿ ಮೂತ್ರ ಮಾಡಿದ್ದಾಳೆಂದು 5 ವರ್ಷ ಮಗಳ ಗುಪ್ತಾಂಗ ರಾಡ್‌ನಿಂದ ಸುಟ್ಟ ಮಲತಾಯಿ!

Latest Videos

ಪತಿಯ ಮೊಬೈಲ್ ನೋಡುತ್ತಿದ್ದ ಪತ್ನಿಗೆ ಅಲ್ಲಿ ಪತಿ ಆತನ ಮಾಜಿ ಗೆಳತಿಯ ಜೊತೆ ಇರುವ ಫೋಟೋ ಸಿಕ್ಕಿದೆ. ಇದರಿಂದ ಬೆಳಗ್ಗೆ 7.30ರ ಸುಮಾರಿಗೆ ಗಂಡ ಹೆಂಡತಿ ಮಧ್ಯೆ ಜಗಳವಾಗಿದೆ. ಇದಾದ ನಂತರ ಮತ್ತಷ್ಟು ಕೋಪಗೊಂಡ ಉಗ್ರಸ್ವರುಪ ತಾಳಿದ ಪತ್ನಿ ಗಂಡನ ಮೇಲೆ ಬಿಸಿಎಣ್ಣೆ ಎರಚಿದ್ದಾಳೆ. ಇದರಿಂದ ಪತಿಯ ಖಾಸಗಿ ಭಾಗ ಹಾಗೂ ಎದೆ ತೊಡೆ ಕೈಗಳಿಗೆ ಗಾಯವಾಗಿದೆ. ಮೊದಲಿಗೆ ಗಾಯಾಳು ಪತಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಎರ್ನಾಕುಲಂನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಆಸ್ಪತ್ರೆಗೆ ದಾಖಲಿಸುವಾಗ ಅಪಘಾತದಲ್ಲಿ ಗಾಯಗೊಂಡಿದ್ದಾಗಿ ಪತಿ ಆರಂಭದಲ್ಲಿ ಅಲ್ಲಿನ ವೈದ್ಯರಿಗೆ ಹೇಳಿದ್ದಾರೆ. ಆದರೆ ನಂತರ ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಇದಾದ ನಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ನಂತರ ಮಹಿಳೆಯ ಬಂಧನ ಸೇರಿದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. 

ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ ಬೋಲ್ಟ್‌ ನಟ್ ತೆಗೆಯಲು ಅಗ್ನಿಶಾಮಕ ಸಿಬ್ಬಂದಿಯ ಕರೆಸಿದ ವೈದ್ಯರು!

 

tags
vuukle one pixel image
click me!