PM Kisan Update: ಈ ರಾಜ್ಯದ ರೈತರಿಗೆ ಸಿಗಲಿದೆ ವರ್ಷಕ್ಕ 9 ಸಾವಿರ ಹಣ? ಯಾವಾಗ ಬರಲಿದೆ 20ನೇ ಕಂತು..

PM Kisan 20th Installment Update:  ಪಿಎಂ ಕಿಸಾನ್ ನಿಧಿ ಯೋಜನೆಯಡಿ, ರೈತರು ಈಗ 20 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಆದರೆ, ಒಂದು ರಾಜ್ಯದ ರೈತರು ವಾರ್ಷಿಕ 6000 ರೂ.ಗಳ ಬದಲಿಗೆ 9000 ರೂ.ಗಳನ್ನು ಪಡೆಯುಲಿದ್ದಾರೆ.

PM Kisan Samman Nidhi Delhi Farmers to Get Rs 9000 in 20th Installment san

PM Kisan Samman Nidhi Yojana Updates: ಕೇಂದ್ರ ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಅದರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಖ್ಯವಾದದ್ದು. ಈ ಯೋಜನೆಯಡಿ ಸರ್ಕಾರ ಪ್ರತಿ ವರ್ಷ ರೈತರಿಗೆ 2000 ರೂಪಾಯಿಗಳನ್ನು ಮೂರು ಕಂತುಗಳ ಮೂಲಕ 6000 ರೂಪಾಯಿ ಆರ್ಥಿಕ ಸಹಾಯ ನೀಡುತ್ತದೆ. ಈ ಯೋಜನೆ ಬಗ್ಗೆ ಒಂದು ದೊಡ್ಡ ಅಪ್ಡೇಟ್ ಬಂದಿದೆ. ಅದರ ಪ್ರಕಾರ ದೆಹಲಿಯ ರೈತರಿಗೆ ಈಗ ಹೆಚ್ಚು ಹಣ ಸಿಗಲಿದೆ.

ದೆಹಲಿಯ ರೈತರಿಗೆ ಪ್ರತಿ ವರ್ಷ 3000 ರೂಪಾಯಿ ಜಾಸ್ತಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೆಹಲಿಯ ರೈತರಿಗೆ ಪ್ರತಿ ವರ್ಷ 6000 ಬದಲು 9000 ರೂಪಾಯಿ ಸಿಗಲಿದೆ. 27 ವರ್ಷಗಳ ನಂತರ 2025ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಸೋಲಿಸಿದ ನಂತರ ಬಿಜೆಪಿ ಸರ್ಕಾರ ರಚಿಸಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ, ರೈತರಿಗೆ ಈ ಲಾಭ ಯಾವಾಗ ಸಿಗಲಿದೆ ಅನ್ನೋದು ಇನ್ನೂ ತಿಳಿದಿಲ್ಲ. ದೆಹಲಿ ಸರ್ಕಾರ ಜನರಿಗೆ ಉಚಿತ ಆರೋಗ್ಯ ಯೋಜನೆಯ ಲಾಭ ನೀಡುತ್ತಿದೆ. ಹಾಗೆಯೇ ಮಹಿಳೆಯರಿಗೆ ಪ್ರತಿ ತಿಂಗಳು 2500 ರೂಪಾಯಿ ನೀಡುವ ಯೋಜನೆಯೂ ಇದೆ.

Latest Videos

ರಾಜಸ್ಥಾನ ಸರ್ಕಾರ ಕೂಡ ರೈತರಿಗೆ 6000ಕ್ಕಿಂತ ಹೆಚ್ಚು ನೀಡುತ್ತದೆ: ರಾಜಸ್ಥಾನದ ಭಜನ್ ಲಾಲ್ ಸರ್ಕಾರ ಕೂಡ ತನ್ನ ರಾಜ್ಯದ ರೈತರಿಗೆ 6000 ರೂಪಾಯಿಗಳ ಜೊತೆಗೆ ಪ್ರತಿ ತಿಂಗಳು 2000 ರೂಪಾಯಿ ಲಾಭ ನೀಡುತ್ತಿದೆ. ಅಂದರೆ ರಾಜಸ್ಥಾನದ ರೈತರಿಗೆ ಪಿಎಂ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ 8000 ರೂಪಾಯಿ ಸಿಗುತ್ತದೆ.

ಪಿಎಂ ಕಿಸಾನ್‌, ಶ್ರಮಯೋಗಿ ಮಾನಧನ್‌.. 2019ರ ಮಧ್ಯಂತರ ಬಜೆಟ್‌ನಲ್ಲಿ ಘೋಷಣೆ ಆಗಿತ್ತು ಈ ಯೋಜನೆಗಳು!

ಯಾವಾಗ ಬರುತ್ತೆ ಪಿಎಂ ಕಿಸಾನ್ ಯೋಜನೆಯ 20ನೇ ಕಂತು: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇಲ್ಲಿಯವರೆಗೆ 19 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಫೆಬ್ರವರಿ 24, 2025 ರಂದು ಬಿಹಾರದ ಭಾಗಲ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 9.80 ಕೋಟಿ ರೈತರ ಖಾತೆಗಳಿಗೆ 22000 ಕೋಟಿ ರೂಪಾಯಿ ವರ್ಗಾಯಿಸಿದ್ದರು. ಇದರ ನಂತರ ಈಗ ರೈತರು 20ನೇ ಕಂತಿಗಾಗಿ ಕಾಯುತ್ತಿದ್ದಾರೆ. 20ನೇ ಕಂತಿನ ಹಣ ಜೂನ್ 2025ರಲ್ಲಿ ಬಿಡುಗಡೆಯಾಗಬಹುದು. ಆದರೆ, ಇದರ ಬಗ್ಗೆ ಇನ್ನೂ ಯಾವುದೇ ನಿಖರವಾದ ದಿನಾಂಕ ನಿಗದಿಯಾಗಿಲ್ಲ. ಪಿಎಂ-ಕಿಸಾನ್ ಯೋಜನೆಯಡಿ ಸರ್ಕಾರ ಇಲ್ಲಿಯವರೆಗೆ ಒಟ್ಟು 3.68 ಲಕ್ಷ ಕೋಟಿ ರೂಪಾಯಿಗಳನ್ನು ರೈತರ ಖಾತೆಗಳಿಗೆ ವರ್ಗಾಯಿಸಿದೆ.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ: ಇ-ಕೆವೈಸಿ ಕಡ್ಡಾಯ; ರಂಗನಾಥ್‌.ಆರ್‌

vuukle one pixel image
click me!