ಮಾಜಿ ಪತ್ನಿ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ ನವಾಜುದ್ದೀನ್ ಸಿದ್ದಿಕಿ!

By Suvarna NewsFirst Published Mar 26, 2023, 5:06 PM IST
Highlights

ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಮಾಜಿ ಪತ್ನಿ ಆಲಿಯಾ ನಡುವೆ ಕೆಲ ತಿಂಗಳುಗಳಿಂದ ಜಟಾಪಟಿ ನಡೆಯುತ್ತಿದ್ದು, ಅದೀಗ ತಾರಕಕ್ಕೇರಿದೆ. ಇದೀಗ ಮಾಜಿ ಪತ್ನಿ ವಿರುದ್ಧ  100 ಕೋಟಿ ರೂ.ಗೆ ಕೇಸ್​ ದಾಖಸಿದ್ದಾರೆ!
 

ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ತಮ್ಮ ಮೇಲೆ ಹಲ್ಲೆ ಮಾಡಿ ಹಿಂಸೆ ನೀಡುತ್ತಿರುವ ಕುರಿತು ಅವರ ಮಾಜಿ ಪತ್ನಿ ಆಲಿಯಾ ಇದಾಗಲೇ ಹಿಂದೊಮ್ಮೆ ಕಥೆ ಹೇಳಿಕೊಂಡು ಕಣ್ಣೀರಿಟ್ಟಿದ್ದರು. ನಂತರ ಆಲಿಯಾ ಅವರು ನವಾಜ್ ವಿರುದ್ಧ ಅತ್ಯಾಚಾರ (Rape) ಆರೋಪ ಹೊರಿಸಿ ಮತ್ತೊಂದು ಪೊಲೀಸ್ ದೂರು ದಾಖಲಿಸಿದ್ದರು.  ಆಲಿಯಾ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರಿಡುತ್ತಾ ಮಾಹಿತಿ ಶೇರ್​ ಮಾಡಿಕೊಂಡಿದ್ದರು.  ಪತಿ ಮತ್ತು ಅವರ  ಕುಟುಂಬಸ್ಥರು ತಮಗೆ ಮನೆಯಿಂದ ಹೊರಹಾಕಲು ಏನೆಲ್ಲಾ ಮಾಡಬೇಕೋ, ಅದೆಲ್ಲವನ್ನೂ ಮಾಡಿದ್ದಾರೆ. ತಮಗೆ ಆಹಾರ, ಹಾಸಿಗೆ ಮತ್ತು ಕನಿಷ್ಠ ಬಾತ್‌ರೂಮ್‌, ಟಾಯ್ಲೆಟ್ ಹೋಗುವುದಕ್ಕೂ ಸಹ ಅವಕಾಶ ನೀಡುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು. ನಂತರ ನೇರಾನೇರ ರೇಪ್​ ಆರೋಪ ಹೊರಿಸಿದ್ದರು. ನವಾಜ್ ನನ್ನ ಮಕ್ಕಳನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆಲಿಯಾ ಕಣ್ಣೀರಿಟ್ಟಿದ್ದರು. 'ಆಗಾಗ್ಗೆ ನವಾಜ್​ ಮಹಾನ್ ವ್ಯಕ್ತಿಯಾಗಲು ಪ್ರಯತ್ನಿಸುತ್ತಾರೆ. ನನ್ನ ಮುಗ್ಧ ಮಗುವನ್ನು ಅಕ್ರಮ ಎಂದು ಕರೆಯುತ್ತಾರೆ. ಅವರ ಹೃದಯಹೀನತೆಯ ಬಗ್ಗೆ ಏನು ಮಾತನಾಡಲಿ' ಎಂದು ನೋವಿನಿಂದ ಹೇಳಿಕೊಂಡಿದ್ದ ಆಲಿಯಾ (Aaliya),  ವರ್ಸೋವಾ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು.

ದಂಪತಿ ನಡುವಿನ  ವಿವಾದ ಸದ್ಯ ನಿಲ್ಲುವಂತೆ ಕಾಣುತ್ತಿಲ್ಲ.  ಇದೀಗ ಆಲಿಯಾ ಜೊತೆಗೆ  ಅವರ ಸಹೋದರ ಶಾಮಸ್ ನವಾಬ್ ಸಿದ್ದಿಕಿ ಅವರು ಸಾಕಷ್ಟು ಆರೋಪಗಳನ್ನು ನವಾಜುದ್ದೀನ್ ವಿರುದ್ಧ ಮಾಡುತ್ತಿದ್ದರೆ, ಅದೇ ಇನ್ನೊಂದೆಡೆ, ಈಗ  ತಮ್ಮ ಮಾಜಿ ಪತ್ನಿ ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು ಎಂಬುದಾಗಿ ಹೇಳಿರುವ ನವಾಜುದ್ದೀನ್​ ಅವರು,  ಆಲಿಯಾ ಸಿದ್ಧಿಕಿ ಮತ್ತು ತಮ್ಮ ಸಹೋದರ ಶಾಮಸ್ ನವಾಬ್ ಸಿದ್ದಿಕಿ ವಿರುದ್ಧ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದರ ವಿಚಾರಣೆ ಇದೇ ಮಾರ್ಚ್ 30ರಂದು ಬಾಂಬೆ ಹೈಕೋರ್ಟ್‌ನಲ್ಲಿ  ವಿಚಾರಣೆ ನಡೆಯಲಿದೆ. 

ರೇಪ್​ ಕೇಸ್​ನಲ್ಲಿ ಸಿಲುಕಿದ ನಟ ನವಾಜುದ್ದೀನ್ ಸಿದ್ದಿಕಿ: ಪತ್ನಿ ಆಲಿಯಾ ದೂರು

ಸಿದ್ದಿಕಿ  ಅವರ ಸಹೋದರ ಶಾಮಸ್​ ಕುರಿತು ಹೇಳುವುದಾದರೆ, ಇವರು ಸಿದ್ದಿಕಿ ಅವರ ಬಳಿ 2008ರಿಂದಲೂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಸಹೋದರನಿಗೆ ನವಾಜುದ್ದೀನ್ ಕ್ರೆಡಿಟ್ ಕಾರ್ಡ್ಸ್, ಎಟಿಎಂ ಕಾರ್ಡ್ಸ್, ಬ್ಯಾಂಕ್ ಪಾಸ್‌ವರ್ಡ್ಸ್ ನೀಡಿದ್ದರು. ಇದನ್ನೆಲ್ಲಾ ಆತ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ನವಾಜುದ್ದೀನ್​ ಆರೋಪಿಸಿದ್ದಾರೆ. ಮಾತ್ರವಲ್ಲದೇ ತಮ್ಮ ಪತ್ನಿಗೂ ತಮ್ಮ ವಿರುದ್ಧ ಎತ್ತಿ ಕಟ್ಟಿದ್ದಾನೆ ಎಂದಿದ್ದಾರೆ.  ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಆಲಿಯಾಗೆ ಪ್ರತಿ ತಿಂಗಳು 10 ಲಕ್ಷ ರೂ. ನೀಡಲಾಗುತ್ತಿತ್ತು ಹಾಗೂ ಪ್ರೊಡಕ್ಷನ್ ಹೌಸ್ ಆರಂಭಿಸಲು 2.50 ಕೋಟಿ ರೂ. ನೀಡಲಾಗಿತ್ತು. ಆದರೆ ಈ ಹಣವನ್ನೆಲ್ಲ ಅವರು ತಮ್ಮ ಸ್ವಂತಕ್ಕೆ ಬಳಸಿಕೊಂಡು, ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

 ತಮ್ಮ ಸಹೋದರ ಮತ್ತು ಪತ್ನಿ ಸೇರಿ  ಸುಮಾರು 20 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇದಲ್ಲದೆ, 2020ರಲ್ಲಿ ಮ್ಯಾನೇಜರ್ ಹುದ್ದೆಯಿಂದ ಶಮಾಸ್‌ರನ್ನು ತೆಗೆದ ನಂತರ ನವಾಜುದ್ದೀನ್ ಅವರು ಆದಾಯ ತೆರಿಗೆ, ಜಿಎಸ್‌ಟಿ ಮತ್ತು ಇತರ ಸರ್ಕಾರಿ ಇಲಾಖೆಗಳಿಂದ 37 ಕೋಟಿ ರೂಪಾಯಿ ತೆರಿಗೆ ಪಾವತಿಸದ ಕಾರಣಕ್ಕಾಗಿ ಕಾನೂನು ನೋಟಿಸ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ನವಾಜುದ್ದೀನ್​ ಅವರು ಅರ್ಜಿಯಲ್ಲಿ ಹೇಳಿದ್ದು, 100 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶಿಸುವಂತೆ ಕೋರಿದ್ದಾರೆ.
 
ಇನ್ನು, ನವಾಜುದ್ದೀನ್ ಸಿನಿಮಾಗಳು ರಿಲೀಸ್ ದಿನಾಂಕವನ್ನು ಪೋಸ್ಟ್‌ಪೋನ್ ಮಾಡಿಕೊಳ್ಳಲು ಕೂಡ ಆಲಿಯಾ ಮತ್ತು ಶಾಮಸ್ ಕಾರಣ ಎಂದು ಆರೋಪಿಸಲಾಗಿದೆ. ಅನುಚಿತ ಮತ್ತು ಮಾನಹಾನಿಕರ ವಿಡಿಯೋಗಳು, ಶಾಮಸ್ ಮತ್ತು ಆಲಿಯಾ ಮಾಡಿದ ಪೋಸ್ಟ್‌ಗಳಿಂದಾಗಿ ಸಾರ್ವಜನಿಕವಾಗಿ ಎಲ್ಲಿಯೂ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ನವಾಜುದ್ದೀನ್ ಹೇಳಿದ್ದಾರೆ

ಮೌನ ಯಾವತ್ತು ಶಾಂತಿ ನೀಡಲ್ಲ; ಪತ್ನಿ ಅರೋಪಗಳಿಗೆ ಪ್ರತಿಕ್ರಿಯಿಸಿದ ನವಾಜುದ್ದೀನ್ ಬೆಂಬಲಕ್ಕೆ ಕಂಗನಾ

ಅದೇ ಇನ್ನೊಂದೆಡೆ, 'ಮಕ್ಕಳು ಬೇಕೆಂದು ನವಾಜ್  ನ್ಯಾಯಾಲಯದಲ್ಲಿ (Court) ಪ್ರಕರಣವನ್ನು ದಾಖಲಿಸಿದ್ದಾರೆ. ಈ ಕುರಿತು ತಿಳಿಸಿದ್ದ ಆಲಿಯಾ, 'ಅವರು ಮಕ್ಕಳ ಪಾಲನೆಯನ್ನು ಬಯಸುತ್ತಾರೆ. ಆದರೆ ಹುಟ್ಟಿದಾಗಿನಿಂದಲೂ ಇಲ್ಲದ ಮಗುವಿನ ಮೇಲಿನ ಅಕ್ಕರೆ ಈಗ್ಯಾಕೋ ತಿಳಿಯುತ್ತಿಲ್ಲ. ಮಕ್ಕಳ ಲಾಲನೆ ಪಾಲನೆಯಲ್ಲಿ ಸ್ವಲ್ಪವೂ ಶ್ರಮ ವಹಿಸಲಿಲ್ಲ.  ಡಯಾಪರ್ ಬೆಲೆ ಎಷ್ಟು ಮತ್ತು ಹೇಗೆ ಎನ್ನುವುದೂ ಗೊತ್ತಿಲ್ಲ. ಮಕ್ಕಳಿಗೆ 12 ವರ್ಷ ಹೇಗೆ ಆಯಿತು ಎಂಬ ತಿಳಿವಳಿಯೂ ಇಲ್ಲ.  ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಏನೇನುಬೇಕು ಎನ್ನುವುದೂ ತಿಳಿದಿಲ್ಲ.  ಆದರೆ ಈಗ ನನ್ನಿಂದ ಮಕ್ಕಳನ್ನು ದೂರ ಮಾಡಲು ಈ ಕುತಂತ್ರದ ಬುದ್ಧಿ ಉಪಯೋಗಿಸುತ್ತಿದ್ದಾರೆ.  ನನ್ನಿಂದ ಮಕ್ಕಳನ್ನು  ಕಿತ್ತುಕೊಂಡು,  ತಮ್ಮ ಶಕ್ತಿಯಿಂದ ತೋರಿಸಲು ಬಯಸುತ್ತಿದ್ದಾರೆ.  ಎಷ್ಟು ಒಳ್ಳೆಯ ತಂದೆ ಎಂದು ಜನರು ಆಡಿಕೊಳ್ಳಲಿ ಎನ್ನುವುದೇ ಅವರ ಆಸೆ' ಎಂದು ಹೇಳಿದ್ದರು. 

click me!