ದಾಳಿಕೋರನನ್ನು ಹಿಡಿದೆ, ಆದರೆ ಇರಿದು ಓಡಿದ: ಪೊಲೀಸರಿಗೆ ನಟ ಸೈಫ್‌ ಹೇಳಿಕೆ

Published : Jan 25, 2025, 07:41 AM IST
ದಾಳಿಕೋರನನ್ನು ಹಿಡಿದೆ, ಆದರೆ ಇರಿದು ಓಡಿದ: ಪೊಲೀಸರಿಗೆ ನಟ ಸೈಫ್‌ ಹೇಳಿಕೆ

ಸಾರಾಂಶ

ನಟ ಸೈಫ್‌ ಅಲಿ ಖಾನ್ ತಮ್ಮ ಮೇಲಿನ ಚಾಕು ದಾಳಿ ಬಗ್ಗೆ ಪೊಲೀಸರಿಗೆ ನೀಡಿರುವ ಹೇಳಿಕೆ ಬಯಲಾಗಿದೆ. ‘ಸ್ಟಾಫ್‌ ನರ್ಸ್‌ ಮೇಲೆ ದಾಳಿ ಮಾಡುತ್ತಿದ್ದ ದಾಳಿಕೋರನನ್ನು ಬಿಗಿಯಾಗಿ ಹಿಡಿದೆ. ಆದರೆ ಅವನು ಚಾಕು ಇರಿದು ನನ್ನ ಕೈಯಿಂದ ತಪ್ಪಿಸಿಕೊಂಡು ಓಡಿದ’ ಎಂದಿದ್ದಾರೆ.

ಮುಂಬೈ (ಜ.25): ನಟ ಸೈಫ್‌ ಅಲಿ ಖಾನ್ ತಮ್ಮ ಮೇಲಿನ ಚಾಕು ದಾಳಿ ಬಗ್ಗೆ ಪೊಲೀಸರಿಗೆ ನೀಡಿರುವ ಹೇಳಿಕೆ ಬಯಲಾಗಿದೆ. ‘ಸ್ಟಾಫ್‌ ನರ್ಸ್‌ ಮೇಲೆ ದಾಳಿ ಮಾಡುತ್ತಿದ್ದ ದಾಳಿಕೋರನನ್ನು ಬಿಗಿಯಾಗಿ ಹಿಡಿದೆ. ಆದರೆ ಅವನು ಚಾಕು ಇರಿದು ನನ್ನ ಕೈಯಿಂದ ತಪ್ಪಿಸಿಕೊಂಡು ಓಡಿದ’ ಎಂದಿದ್ದಾರೆ.

‘ದಾಳಿಕೋರ ನನ್ನ ಮನೆಯೊಳಗೆ ಬಂದಾಗ ಆತನನ್ನು ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಎಲಿಯಮ್ಮ ಫಿಲಿಪ್ ಎದುರಾದರು. ಬೆದರಿಕೆ ಹಾಕಿದಾಗ ಅವರು ಕೂಗಿದರು. ಆಗ ನಾನು ಮತ್ತು ಕರೀನಾ ಬೆಡ್‌ ರೂಂನಿಂದ ಕೆಳಗೆ ಬಂದೆವು. ಆಗ ನಾನು ‘ಕಳ್ಳನನ್ನು’ ಹಿಡಿದುಕೊಂಡೆ. ಆದರೆ ಅಷ್ಟರೊಳಗೆ ಆತ ನನಗೆ ಚಾಕುವಿನಿಂದ ಇರಿದು, ನನ್ನ ಕೈಯಿಂದ ತಪ್ಪಿಸಿಕೊಂಡು ಪರಾರಿಯಾದ’ ಎಂದಿದ್ದಾರೆ. ಎಲಿಯಮ್ಮ ಬಳಿ ಆತ ಫಿಲಿಪ್‌ರಿಂದ 1 ಕೋಟಿ ರು. ಹಣಕ್ಕೆ ಬೇಡಿಕೆಯಿಟ್ಟಿದ್ದ ಎಂದೂ ಸೈಫ್‌ ಹೇಳಿದ್ದಾರೆ.

ಸೈಫ್‌ ದಾಳಿಕೋರನ ಫೇಸ್‌ ರಿಕಗ್ನಿಷನ್‌ಗೆ ಪೊಲೀಸರ ನಿರ್ಧಾರ: ನಟ ಸೈಫ್‌ ಅಲಿಖಾನ್‌ಗೆ ಇರಿತ ಪ್ರಕರಣದ ಆರೋಪದಲ್ಲಿ ಬಂಧಿತನಾಗಿರುವ ಶೆಹಜಾದ್‌ ಮತ್ತು ಸಿಸಿಟೀವಿಯಲ್ಲಿರುವ ವ್ಯಕ್ತಿ ಇಬ್ಬರು ಬೇರೆ ಎಂದು ಆತನ ತಂದೆ ಆರೋಪಿಸಿದ ಬೆನ್ನಲ್ಲೇ ಪೊಲೀಸರು ದಾಳಿಕೋರನ ಮುಖ ಗುರುತಿಸುವಿಕೆ ಪರೀಕ್ಷೆ ನಡೆಸುವುದಾಗಿ ಕೋರ್ಟಿಗೆ ಹೇಳಿದ್ದಾರೆ. ಇದರ ಬೆನ್ನಲ್ಲೇ ಆತನ ಪೊಲೀಸ್‌ ಕಸ್ಟಡಿಯನ್ನು ಕೋರ್ಟ್ ಜ.29ರವರೆಗೆ ವಿಸ್ತರಿಸಿದೆ. ಪೊಲೀಸರ ಬಂಧನದಲ್ಲಿರುವ ಶೆಹಜಾದ್‌ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಪೊಲೀಸರು 7 ದಿನಗಳ ಕಾಲಕಸ್ಟಡಿ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದರು.

ಸೈಫ್ ಅಲಿ ಖಾನ್ ಮೇಲೆ ದಾಳಿ ಆಗಿದ್ದೇ ಡೌಟ್: ನಟನನ್ನು ಕಸಕ್ಕೆ ಹೋಲಿಸಿದ ಸಚಿವ ರಾಣೆ

ಸೈಫ್‌ ಕರೆತಂದಿದ್ದು ಸ್ನೇಹಿತ ಜೈದಿ: ನಟ ಸೈಫ್‌ ಅಲಿ ಖಾನ್‌ ಅವರ ದೇಹದ 5 ಕಡೆ ಗಾಯಗಳಾಗಿದ್ದವು ಎಂದು ತನ್ನ ವರದಿಯಲ್ಲಿ ಹೇಳಿರುವ ಲೀಲಾವತಿ ಆಸ್ಪತ್ರೆ, ಅವರನ್ನು ಸ್ನೇಹಿತ ಅಫ್ಸರ್‌ ಜೈದಿ ಅಬರಿ ಆಟೋರಿಕ್ಷಾದಲ್ಲಿ ಕರೆತಂದಿದ್ದರು ಎಂದಿದೆ. ಈ ಮೂಲಕ ಸೈಫ್‌ ಕಿರಿಯ ಮಗ ತೈಮುರ್‌, ಅವರನ್ನು ಆಸ್ಪತ್ರೆಗೆ ಕರೆತಂದಿದ್ದ ಎಂಬ ವರದಿಗಳನ್ನು ಪರೋಕ್ಷವಾಗಿ ತಳ್ಳಿಹಾಕಿದೆ. ಗುರುವಾರ ರಾತ್ರಿ ವೈದ್ಯಕೀಯ ವರದಿ ವರದಿ ಬಿಡುಡೆ ಮಾಡಿರುವ ಆಸ್ಪತ್ರೆ, ‘ಸೈಫ್‌ ಬೆನ್ನು, ಮಣಿಕಟ್ಟು, ಕುತ್ತಿಗೆ, ಭುಜ ಮತ್ತು ಮೊಣಕೈಯಲ್ಲಿ 5 ಸ್ಥಳಗಳಲ್ಲಿ ಇರಿಯಲಾಗಿತ್ತು ಮತ್ತು ಅವರ ಸ್ನೇಹಿತ ಅಫ್ಸರ್ ಜೈದಿ ಅವರು ಆಟೋರಿಕ್ಷಾದಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆತಂದರು’ ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ