ನಮ್ಮದನ್ನೇ (!....?) ಬಳಸಿ ಬಳಸಿ ಸುಂದರವಾಗಿ ಕಾಣಿಸ್ಕೊಳ್ಳಿ: ತಮನ್ನಾ ಬ್ಯೂಟಿ ಟಿಪ್ಸ್‌ ವೈರಲ್!

Published : Jan 24, 2025, 08:29 PM ISTUpdated : Jan 24, 2025, 08:34 PM IST
ನಮ್ಮದನ್ನೇ (!....?) ಬಳಸಿ ಬಳಸಿ ಸುಂದರವಾಗಿ ಕಾಣಿಸ್ಕೊಳ್ಳಿ: ತಮನ್ನಾ ಬ್ಯೂಟಿ ಟಿಪ್ಸ್‌ ವೈರಲ್!

ಸಾರಾಂಶ

ಇಷ್ಟೇ ಆಗಿದ್ದರೆ ಹೇಳಲೇಬೇಕಾದ ಅಗತ್ಯವಿರಲಿಲ್ಲ. ಆದರೆ ಇವೆಲ್ಲವುಗಳಿಗಿಂತ ಭಿನ್ನವಾಗಿ ಮತ್ತೊಂದು ಟಿಪ್ಸ್ ಹೇಳಿದ್ದಾರೆ ನಟಿ ತಮನ್ನಾ ಭಾಟಿಯಾ. ಅದನ್ನು ತಿಳಿದರೆ ಕೆಲವರು ಮೂಗು ಮುರಿಯಬಹುದು, ಇನ್ನೂ ಕೆಲವರು ಅಸಹ್ಯ ಪಡಬಹುದು. ಆದರೆ, ತಮನ್ನಾ..

ಸೌತ್ ಹಾಗು ನಾರ್ತ್ ಎಂಬ ಬೇಧವಿಲ್ಲದೇ ಎರಡೂ ಕಡೆಗಳಲ್ಲಿ ಮಿಂಚಿರುವ ಬ್ಯೂಟಿ ನಟಿ ತಮನ್ನಾ ಭಾಟಿಯಾ. ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಮೂಲಕ ಜಗತ್ಪ್ರಸಿದ್ಧಿ ಪಡೆದಿರುವ ತಮನ್ನಾ (Tamannaah Bhatia) ಅವರು ಇಂದಿಗೂ ಕೂಡ ತಮ್ಮ ಚರ್ಮದ ಕಾಂತಿ ಹಾಗೂ ಫಿಟ್‌ನೆಸ್ ಉಳಿಸಿಕೊಂಡಿದ್ದಾರೆ. ಮಿಲ್ಕಿ ಬ್ಯೂಟಿ ಎಂದೇ ಸಿನಿಪ್ರೇಕ್ಷಕರಿಂದ ಕರೆಸಿಕೊಳ್ಳುವ ನಟಿ ತಮನ್ನಾ ಭಾಟಿಯೂ ಈ ವಯಸ್ಸಿನಲ್ಲೂ ಚರ್ಮದ ಕಾಂತಿ ಹಾಗೇ ಉಳಿಸಿಕೊಂಡಿದ್ದಾರೆ ಹೇಗೆ? 

ಈ ಬಗ್ಗೆ ಸ್ವತಃ ತಮನ್ನಾ ಹೇಳಿಕೊಂಡಿದ್ದಾರೆ. ಮೊಟ್ಟಮೊದಲನೆಯದಾಗಿ ಅವರು ತಮ್ಮ ಆಹಾರದ ವಿಷಯದಲ್ಲಿ ಸಾಕಷ್ಟು ಜಾಗ್ರತೆ ವಹಿಸುತ್ತಾರಂತೆ. ಜೊತೆಗೆ, ಜೇನತುಪ್ಪ, ಶ್ರೀಗಂಧ ಹಾಗೂ ಕಾಫಿಯನ್ನು ಮಿಕ್ಸ್ ಮಾಡಿ ತಮ್ಮ ಚರ್ಮಕ್ಕೆ ಲೇಪಿಸಿಕೊಳ್ಳುತ್ತಾರೆ. ಜೊತೆಗೆ, ಮೊಸರು ಹಾಗೂ ಕಡಲೆಹಿಟ್ಟು ಅವರ ರೆಗ್ಯುಲರ್ ಪೇಸ್‌ಪ್ಯಾಕ್‌ನಲ್ಲಿ ಬಳಕೆ ಆಗುತ್ತದೆ. ಗುಲಾಬಿ ನೀರು, ಅಂದರೆ ರೋಸ್ ವಾಟರ್‌ನಿಂದ ಆಗಾಗ ಮುಖ ತೊಳೆಯುವುದನ್ನು ನಟಿ ತಮನ್ನಾ ಮರೆಯುವುದೇ ಇಲ್ಲವಂತೆ. 

ವೈರಲ್ ವಿಡಿಯೋ: ಹೆಂಗಸ್ರು ವಿಶ್ರಾಂತಿ ತಗೊಳ್ಳೋಕೆ ಶುರು ಮಾಡಿದ್ರೆ ಗಂಡಸು ಜಾತಿಗೆ...

ಇಷ್ಟೇ ಆಗಿದ್ದರೆ ಹೇಳಲೇಬೇಕಾದ ಅಗತ್ಯವಿರಲಿಲ್ಲ. ಆದರೆ ಇವೆಲ್ಲವುಗಳಿಗಿಂತ ಭಿನ್ನವಾಗಿ ಮತ್ತೊಂದು ಟಿಪ್ಸ್ ಹೇಳಿದ್ದಾರೆ ನಟಿ ತಮನ್ನಾ ಭಾಟಿಯಾ. ಅದನ್ನು ತಿಳಿದರೆ ಕೆಲವರು ಮೂಗು ಮುರಿಯಬಹುದು, ಇನ್ನೂ ಕೆಲವರು ಅಸಹ್ಯ ಪಡಬಹುದು. ಆದರೆ, ತಮನ್ನಾ ಅದನ್ನು ತಾವು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅದನ್ನು ಹುಡುಕಿಕೊಂಡು ಅಂಗಡಿಗೆ ಹೋಗಬೇಕಾಗಿಲ್ಲ, ಅಡುಗೆಮನೆಯನ್ನೂ ಜಾಲಾಡಬೇಕಿಲ್ಲ! ಯಾರನ್ನೂ ಕಾಡಬೇಕಿಲ್ಲ ಬೇಡಬೇಕಿಲ್ಲ! ಹಾಗಿದ್ದರೆ ಅದೇನು?

ಹೌದು, ನಟಿ ತಮನ್ನಾ ಭಾಟಿಯಾ ಹೇಳಿರುವ ಸೌಂದರ್ಯ ಸಲಹೆ ಎಲ್ಲರ ಬಳಿಯೂ ಇರುವಂಥದ್ದು. ಹೊಳೆಯುವ, ಕಾಂತಿ ಹೊಂದಿರುವ ಚರ್ಮದ ಒಡತಿ ತಮನ್ನಾ ಬೆಳಿಗ್ಗೆ ಎದ್ದ ಕೂಡಲೇ ತಮ್ಮ ಎಂಜಲನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರಂತೆ. 'ಬೆಳಿಗ್ಗೆ ಬೆಳಿಗ್ಗೆ ಮುಖಕ್ಕೆ ಉಗುಳು ಹಚ್ಚುವುದು ಕೆಲವರಿಗೆ ವಿಚಿತ್ರ ಎನಿಸಬಹುದು. ಆದರೆ ಅಪ್ಲೈ ಮಾಡಿ ನೋಡಿ, ಅದರ ಪ್ರಯೋಜನ ಪಡೆದ ಬಳಿಕ ನೀವೇ ಆಶ್ಚರ್ಯ ಪಡುತ್ತೀರಿ. ಅಷ್ಟಕ್ಕೂ ನಮ್ಮದೇ ಎಂಜಲು ತಾನೇ?' ಎಂದಿದ್ದಾರೆ ನಟಿ ತಮನ್ನಾ. 

ಮತ್ತೆ ಮದ್ವೆ ಆಗ್ತಾರೆ ಚಂದನ್ ಶೆಟ್ಟಿ, ಅವರೇ ಹೊಸ ಪಾರ್ಟನರ್, ಆವತ್ತು ಮದ್ವೆ..!

ನಟಿ ತಮನ್ನಾ ಭಾಟಿಯಾ ಹೇಳಿಕೆಗೆ ಕೆಲವರು ಮುಸಿಮುಸಿ ನಕ್ಕಿದ್ದರೆ ಇನ್ನು ಕೆಲವರು ಥ್ಯಾಂಕ್ಸ್ ಹೇಳಿದ್ದಾರೆ. ಹಲವರು 'ನಮ್ಮದೇ ಎಂಜಲು ಹಚ್ಚಿ ನೋಡಲು ಸಮಸ್ಯೆಯೇನು? ಖಂಡಿತ ನೀವು ಹೇಳಿದ ಟಿಪ್ಸ್ ಫಾಲೋ ಮಾಡಿ ನೋಡ್ತೀವಿ ರಿಸಲ್ಟ್ ..' ಎಂದಿದ್ದಾರೆ. ಒಟ್ಟಿನಲ್ಲಿ, ತಮನ್ನಾ ಸೌಂದರ್ಯಕ್ಕೆ ಮಾರು ಹೋಗದವರು ಕಡಿಮೆ. ಆದರೆ, ಅವರು ಹೇಳಿರುವ ಟಿಪ್ಸ್ ಫಾಲೋ ಮಾಡಿದ್ರೆ ಅವರಂತೆ ಚರ್ಮ ಲಕಲಕ ಹೊಳೆಯುತ್ತಾ? ಗೊತ್ತಿಲ್ಲ, ಟ್ರೈ ಮಾಡಿ ನೋಡಿ.. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!