ಕಮಲಹಾಸನ್‌ ಡೈವೋರ್ಸ್‌ ಕೊಟ್ಟಾಗ ಅವಳ ಬಳಿ ಇದ್ದದ್ದು ಬರೀ 60 ರೂಪಾಯಿ!

Published : Jan 24, 2025, 08:52 PM ISTUpdated : Jan 25, 2025, 07:45 AM IST
ಕಮಲಹಾಸನ್‌ ಡೈವೋರ್ಸ್‌ ಕೊಟ್ಟಾಗ ಅವಳ ಬಳಿ ಇದ್ದದ್ದು ಬರೀ 60 ರೂಪಾಯಿ!

ಸಾರಾಂಶ

ಈ ನಟಿ ವಿವಾಹಿತ ಸೂಪರ್‌ಸ್ಟಾರ್ ಒಬ್ಬನನ್ನು ಪ್ರೀತಿಸುತ್ತಿದ್ದಳು. ಅವನ ಹೆಸರು ಕಮಲ್‌ಹಾಸನ್.‌ ಮದುವೆಗೆ ಮುಂಚೆಯೇ ಆಕೆ ಗರ್ಭಿಣಿಯಾದಳು. 2 ಹೆಣ್ಣು ಮಕ್ಕಳ ತಾಯಿಯಾದಳು. ಕೊನೆಗೆ ಆ ಸೂಪರ್‌ಸ್ಟಾರ್‌ ಜೊತೆಗೆ ಸಂಬಂಧ ಕಡಿದುಕೊಂಡಾಗಿ ಅವಳ ಬಳಿ ಇದ್ದದ್ದು 60 ರೂಪಾಯಿ ಮಾತ್ರ! 

ಇದು ದಕ್ಷಿಣ ಭಾರತದ ಖ್ಯಾತ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ ಮತ್ತು ಅವರ ಜೊತೆಗಿದ್ದ ನಟಿ ಸಾರಿಕಾ ಕತೆ. ಹಿರಿಯ ನಟಿ ಸಾರಿಕಾ ಏಳನೇ ವಯಸ್ಸಿನಲ್ಲೇ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆಕೆಯ ಮೊದಲ ಚಿತ್ರ ಹಮ್‌ರಾಜ್. ದಿವಂಗತ ಚಲನಚಿತ್ರ ನಿರ್ಮಾಪಕ ಬಿ.ಆರ್. ಚೋಪ್ರಾ ಅವರ ಈ ಫಿಲಂ 1967ರಲ್ಲಿ ಬಂತು. ಆಶೀರ್ವಾದ್, ಸತ್ರಕಂ, ಬಾಲಕ್ ಔರ್‌ ಬೇಟಿಯಂತಹ ಇತರ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ 1975ರಲ್ಲಿ ಕಾಗಜ್ ಕಿ ನಾವೋದಲ್ಲಿ ವಯಸ್ಕ ನಟಿಯಾಗಿ ಪಾದಾರ್ಪಣೆ ಮಾಡಿದರು. ಇಷ್ಟು ವರ್ಷಗಳಲ್ಲಿ ಸಾರಿಕಾ ಅವಳ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಬಹಳಷ್ಟು ಎತ್ತರ ಬೆಳೆದಿದ್ದಳು. ಆದರೆ ಸೂಪರ್‌ಸ್ಟಾರ್ ಕಮಲ್ ಹಾಸನ್‌ ಜೊತೆ ಬದುಕಲು ಶುರು ಮಾಡಿದ ಬಳಿಕ ಏನೇನೋ ಆಯಿತು. 

ಕಮಲ್‌ ಹಾಸನ್‌ಗೆ ಆಗಲೇ ಮದುವೆ ಆಗಿತ್ತು. ವಾಣಿ ಗಣಪತಿ ಆತನ ಮೊದಲ ಪತ್ನಿ. ವಾಣಿ ಜೊತೆಗಿದ್ದಾಗಲೇ ಸಾರಿಕಾ ಜೊತೆಗೆ ಕಮಲ್‌ ಅಫೇರ್‌ ಬೆಳೆಸಿದ. 1990ರ ದಶಕದ ಆರಂಭದಲ್ಲೇ ಅವರು ಗಾಢವಾದ ಸಂಬಂಧವನ್ನು ಹೊಂದಿದ್ದರು. ಆಗಲೇ ಮೊದಲ ಮಗು ಶ್ರುತಿ ಹಾಸನ್‌ ಜನಿಸಿದ್ದು ಕೂಡ. ಅಂದರೆ ಮೊದಲ ಮಗು ಪಡೆದಾಗ ಸಾರಿಕಾಗೆ ಇನ್ನೂ ಮದುವೆ ಆಗಿರಲಿಲ್ಲ. ಆದರೆ ಇವರ ಸಂಬಂಧ ಜಗಜ್ಜಾಹೀರಾಗಿತ್ತು. 2000ರಲ್ಲಿ ಕಮಲ್, ತಾನು ವಿವಾಹಿತನಾಗಿದ್ದುದರಿಂದ ಸಾರಿಕಾ ಜೊತೆಗಿನ ತಮ್ಮ ಸಂಬಂಧವನ್ನು ಹಲವು ಬಾರಿ ಕೊನೆಗೊಳಿಸಲು ಪ್ರಯತ್ನಿಸಿದ್ದೆ ಎಂದು ಒಪ್ಪಿಕೊಂಡ. 

ಆದರೆ ವಿಧಿ ಬೇರೆಯೇ ಬಗೆಯಿತು. ಸಾರಿಕಾ ಆಗಲೇ ಮದುವೆಯಾಗದೆ ಕಮಲ್‌ ಮಗುವನ್ನು ಪಡೆದಿದ್ದಳು. ಕಮಲ್ ಹಾಸನ್ ತನ್ನ ಮೊದಲ ಪತ್ನಿ ವಾಣಿ ಗಣಪತಿಗೆ ವಿಚ್ಛೇದನ ನೀಡಿದ.‌ ನಂತರ ಸಾರಿಕಾಳನ್ನು ವಿವಾಹವಾದ. 1991ರಲ್ಲಿ ಅವರ ಎರಡನೇ ಮಗಳು ಅಕ್ಷರಾ ಜನಿಸಿದಳು. ಆದರೂ ಅವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರೂ 2002ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಬೇರೆಯಾದರು. ಇದಕ್ಕೂ ಮುನ್ನ ಸಾರಿಕಾ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಗೌತಮಿ ಜೊತೆಗೆ ಕಮಲ್‌ ಅಫೇರ್‌ ಹೊಂದಿದ್ದಾನೆ ಎಂದು ಗೊತ್ತಾದಾಗ ಸಾರಿಕಾ ಸಿಟ್ಟಿನಿಂದ ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಜಿಗಿದಿದ್ದಳು. ತೀವ್ರವಾಗಿ ಗಾಯಗೊಂಡು 3 ತಿಂಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಯಿತು. ಇದರ ನಂತರ, ಸಾರಿಕಾ ಕಮಲ್ ಹಾಸನ್ ಅವರಿಂದ ದೂರವಾದಳು ಮತ್ತು ಇಬ್ಬರೂ 2004 ರಲ್ಲಿ ಬೇರ್ಪಟ್ಟರು.

ವಿಚ್ಛೇದನದ ನಂತರ ಸಾರಿಕಾ ತನ್ನ ವೃತ್ತಿಜೀವನವನ್ನು ಮೊದಲಿನಿಂದ ಪುನರಾರಂಭಿಸಬೇಕಾಯಿತು. ಸಿಮಿ ಗರೆವಾಲ್ ಜೊತೆಗಿನ ಅವರ ಹಳೆಯ ಸಂದರ್ಶನವೊಂದರಲ್ಲಿ ಸಾರಿಕಾ ಹೇಳೀದ ಪ್ರಕಾರ, ಡೈವೋರ್ಸ್‌ ಆಗಿ ಕಮಲ್‌ ಬಳಿಯಿಂದ ದೂರ ಹೊರಟಾಗ ಅವಳ ಬಳಿ ಇದ್ದದ್ದು ಕೇವಲ 60 ರೂ. ಮತ್ತು ಒಂದು ಹಳೆಯ ಕಾರು ಮಾತ್ರ. "ನಾನು ನನ್ನ ಮತ್ತು ನನ್ನ ತಾಯಿಗೆ ಪ್ರಾಮಾಣಿಕವಾಗಿ ಒಳ್ಳೆಯದು ಅನಿಸಿದ್ದನ್ನು ಮಾಡಿದೆ. ಅದನ್ನು ಮಾಡಲೇಬೇಕಿತ್ತು. ಇದು ಬಹಳಷ್ಟು ನೋವಿನ ನಂತರದ ನಿರ್ಧಾರ. ರಾತ್ರೋರಾತ್ರಿ ಅಂಥ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ನಾನು 60 ರೂಪಾಯಿ ಮತ್ತು ನನ್ನ ಕಾರಿನೊಂದಿಗೆ ಹೊರಟೆ” ಎಂದು ಅವಳು ಹೇಳಿಕೊಂಡಿದ್ದಳು.

ಯಶಸ್ವಿಯಾಗೋಕೆ ಈ 8 ಗುಣಗಳು ಇರಬೇಕಂತೆ, ಅಮಿತಾಭ್‌ ಬಚ್ಚನ್‌ ಹೇಳ್ತಾರೆ ಕೇಳಿ

ಈ ಕುರಿತ ಪ್ರಶ್ನೆಯನ್ನು ಸಿಮಿ ಗರೆವಾಲ್‌ ಅವರು ಇನ್ನೊಂದು ಸಂದರ್ಶನದಲ್ಲಿ ಕಮಲ ಹಾಸನ್‌ಗೆ ಕೇಳಿದ್ದರು. ನಿಮ್ಮ ಹಿಂದಿನ ಹೆಂಡತಿ ಸಾರಿಕಾಗೆ ಆರ್ಥಿಕವಾಗಿ ಏಕೆ ಸಹಾಯ ಮಾಡಲಿಲ್ಲ ಎಂದು ಕಮಲ್ ಅವರನ್ನು ಕೇಳಿದ್ದರು. “ನಾನು ಅವಳ ಜೊತೆಗಿದ್ದಾಗ ಗಮನಿಸಿದ್ದೆ- ಆಕೆಗೆ ಸಹಾನುಭೂತಿ ಅಂದರೆ ಇಷ್ಟವಿರಲಿಲ್ಲ. ಆಕೆಗೆ ಆ ಸಹಾನುಭೂತಿ ಬೇಕಾಗಿರಲಿಲ್ಲ. ನಿನಗೆ ಸಹಾಯ ಬೇಕೇ ಎಂದು ನನ್ನಂತಹ ಯಾರಾದರೂ ಕೇಳಿದರೆ ಅದು ತುಂಬಾ ಅವಮಾನಕರವೆಂದು ಅವಳು ಭಾವಿಸುತ್ತಿದ್ದಳು" ಹೀಗಾಗಿ ನನ್ನಿಂದ ಯಾವುದೇ ರೀತಿಯ ಆರ್ಥಿಕ ಸಹಾಯವನ್ನು ತೆಗೆದುಕೊಳ್ಳಲು ಸಾರಿಕಾ ನಿರಾಕರಿಸಿದ್ದಳು ಎಂದು ಕಮಲ್ ಹೇಳಿದ್ದರು. 

ಸಾರಿಕಾ ಮತ್ತೆ 2020ರಲ್ಲಿ ಅಮೆಜಾನ್ ಪ್ರೈಮ್ ವೆಬ್ ಸರಣಿ ಮಾಡರ್ನ್ ಲವ್ ಮುಂಬೈ ಮೂಲಕ ಸಿನಿಮಾಗೆ ಪುನರಾಗಮನ ಮಾಡಿದರು. ಅವರು ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ ಸೂರಜ್ ಬಾರ್ಜಾತ್ಯಾ ಅವರ ಊಂಚಾಯಿ. 

ನಮ್ಮದನ್ನೇ (!....?) ಬಳಸಿ ಬಳಸಿ ಸುಂದರವಾಗಿ ಕಾಣಿಸ್ಕೊಳ್ಳಿ: ತಮನ್ನಾ ಬ್ಯೂಟಿ ಟಿಪ್ಸ್‌ ವೈರಲ್!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?