
ಯಶಸ್ಸು ಎಂಬುದು ತಾನೇ ತಾನಾಗಿ ಒಲಿದು ಬರುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕು. ಬೆಳಗ್ಗೆ ಒಂಬತ್ತರಿಂದ ಐದು ಗಂಟೆವರೆಗೆ ಮಾಡಿ ಮುಗಿಸುವ ಕೆಲಸ ಅದಲ್ಲ. ಯಶಸ್ವೀ ಮಂದಿ ತಮ್ಮ ಕೆಲಸದ ನಿಗದಿತ ಸಮಯದ ನಂತರವೂ ಹೇಗೆ ಕೆಲಸ ಮಾಡುತ್ತಾರೆ ಎಂಬುದರಲ್ಲಿ ಅವರ ಯಶಸ್ಸು ಅಡಗಿದೆ. ಅವರ ಯಶಸ್ಸಿನ ಹಿಂದೆ ಹಗಲು ರಾತ್ರಿಯ ಶ್ರಮ, ಶಿಸ್ತಿದೆ. ಕೆಲಸದ ನಂತರವೂ ಅವರು ಸಂಪೂರ್ಣ ಶ್ರೇಯಸ್ಸಿಗೆ, ಯಶಸ್ಸಿಗಾಗಿ ಎಷ್ಟು ಹೆಚ್ಚುವರಿ ಸಮಯವನ್ನು ಅದಕ್ಕಾಗಿ ಕೊಟ್ಟರು ಎಂಬುದರಲ್ಲಿ ಯಶಸ್ಸಿನ ಗುಟ್ಟು ಅಡಗಿದೆ ಎನ್ನುತ್ತಾರೆ ಬಾಲಿವುಡ್ ಶಹನ್‌ಶಾ ಅಮಿತಾಭ್ ಬಚ್ಚನ್ (Amitabh Bachchan). ಅವರ ಯಶಸ್ಸಿನ ಹಿಂದಿರುವ 8 ಗುಣಗಳನ್ನು ಅಮಿತಾಭ್ ಬಚ್ಚನ್ ಬಿಚ್ಚಿಟ್ಟಿದ್ದಾರೆ.
1) ಯಶಸ್ಸು ಎಂಬುದು ಇದ್ದಕ್ಕಿದ್ದಂತೆ ಮ್ಯಾಜಿಕ್‌ನಂತೆ ಸಂಭವಿಸಲಾರದು. ಅಥವಾ ದಿನಕ್ಕೆ ಇಂತಿಷ್ಟು ಸಮಯ ಮಾತ್ರ ನಾನು ವ್ಯಯಿಸಬಲ್ಲೆ ಎಂಬ ನಿಯಮಾವಳಿಗಳಲ್ಲಿ ಕೆಲಸ ಮಾಡುವ ಮಂದಿಗೂ ಬಾರದು. ಅದಕ್ಕಾಗಿ ಸಮಯದ ಹಂಗು ತೊರೆದು ಕೆಲಸ ಮಾಡುವ, ಕಠಿಣ ಪರಿಶ್ರಮಿ ಮನಸ್ಸು ಬೇಕು. ಜೊತೆಗೆ ಹೊಸ ಕಲಿಕೆ, ವ್ಯಕ್ತಿತ್ವ ವಿಕಸನ ಇವೆಲ್ಲವಕ್ಕೂ ಸದಾ ಸಮಯ ನೀಡಬೇಕು. ನೀವೊಮ್ಮೆ ಯಶಸ್ವೀ ಜನರ ದಿನಚರಿಯ ಮೇಲೆ ಕಣ್ಣಾಡಿಸಿ. ಅವರದ್ದೊಂದು ಶಿಸ್ತುಬದ್ಧ ಜೀವನವಿರುತ್ತದೆ. ಅವರು ಸದಾ ಜ್ಞಾನಕ್ಕಾಗಿ ಹಪಹಪಿಸುವವರು. ಅವರು ಉತ್ತಮ ಓದುಗರೂ ಆಗಿರುತ್ತಾರೆ. ಪುಸ್ತಕಗಳನ್ನು ಓದಿ, ಜ್ಞಾನ ವೃದ್ಧಿಸುವ ಬಗೆಗೆ ಅವರಿಗೆ ನಂಬಿಕೆಯಿರುತ್ತದೆ.
2). ಅವರು ಸದಾ ತಮ್ಮ ದೈಹಿಕ ಆರೋಗ್ಯ, ಫಿಟ್‌ನೆಸ್ ಮೇಲೂ ಗಮನ ಇರುತ್ತದೆ. ಅವರಿಗೆ, ಫಿಟ್‌ನೆಸ್ ನೀಡುವ ಖುಷಿ, ಆರೋಗ್ಯ, ಮಾನಸಿಕ ಸಂತೋಷದ ಅರಿವಿರುತ್ತದೆ. ಅದಕ್ಕಾಗಿ ಒಂದು ಶಿಸ್ತುಬದ್ಧ ಜೀವನಶೈಲಿಯನ್ನು ಪಾಲಿಸುತ್ತಾರೆ. ಮಾನಸಿಕವಾಗಿ ಆರೋಗ್ಯದ ಹಿಂದೆ ದೈಹಿಕ ಆರೋಗ್ಯದ ಕ್ಷಮತೆಯೂ ಇದೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಇವೆಲ್ಲವೂ ಸರಿಯಾಗಿದ್ದರಷ್ಟೇ ಕೆಲಸ ಮಾಡಲು ಉತ್ತೇಜನ ಎಂಬ ಅರಿವೂ ಅವರಿಗಿರುತ್ತದೆ.
3) ಅವರು ಸಂಬಂಧಗಳನ್ನು ಗೌರವಿಸುತ್ತಾರೆ. ಖಾಸಗಿ ಜೀವನ, ವೈಯಕ್ತಿಕ ಜೀವನ, ಹಾಗೂ ಪ್ರೊಫೆಷನಲ್ ಜೀವನ ಇವುಗಳನ್ನು ಸರಿಯಾಗಿ ಹೊಂದಾಣಕೆ ಮಾಡಿಕೊಂಡು ಹೋಗುವ ಕಲೆ ಅವರಿಗೆ ಸಿದ್ಧಿಸಿರುತ್ತದೆ. ಅವರು ಒಂದಿಷ್ಟು ಸಮಯವನ್ನು ಕುಟುಂಬಕ್ಕಾಗಿ ಮೀಸಲಿಟ್ಟಿರುತ್ತಾರೆ. ಅದರಲ್ಲಿ ಸಂತೋಷವನ್ನೂ ಕಾಣುತ್ತಾರೆ.
4) ಇಂಥವರಿಗೆ ಕೆಲವು ಕಾಲ ಎಲ್ಲದರಿಂದ ಹೊರಬಂದು ತಮ್ಮನ್ನು ತಾವು ರೀಚಾರ್ಜ್ ಮಾಡಿಕೊಳ್ಳುವ ಕಲೆಯೂ ಸಿದ್ಧಿಸಿರುತ್ತದೆ. ಸಾಮಾಜಿಕ ಜಾಲತಾಣಗಳು, ಸಾಮಾಜಿಕ ವ್ಯವಹಾರಗಳು ಇವೆಲ್ಲವಕ್ಕೂ ಎಷ್ಟು ಸಮಯ ಕೊಟ್ಟರೆ ಸಾಕು ಎಂಬುದರ ಅರಿವು ಅವರಿಗಿರುತ್ತದೆ. ಹೀಗಾಗಿ, ಅವರು ತಮ್ಮನ್ನು ತಾವು ರಿಚಾರ್ಜ್ ಮಾಡಿಕೊಳ್ಳಲು ಇಂತಹ ವಿಚಾರಗಳಿಗೆ ಎಷ್ಟು ಸಮಯ ಮಾತ್ರ ಕೊಡಬೇಕು ಎಂಬ ಅರಿವುಳ್ಳವರಾಗಿರುತ್ತಾರೆ. ಅತಿಯಾಗಿ ಬಳಸದೆ, ಅಮೋಘವಾಗಿ ಬಳಸುವ ಕಲೆ ಅವರಿಗೆ ಸಿದ್ಧಿಸಿರುತ್ತದೆ.
5) ಕೇವಲ ಹಣವೊಂದೇ ಎಲ್ಲವೂ ಅಲ್ಲ ಎಂಬುದು ಅವರಿಗೆ ತಿಳಿದಿರುತ್ತದೆ. ಯಶಸ್ಸಿನ ರುಚಿ, ಹಾಗೂ ತಾವು ಪಡೆದುದನ್ನು ಮರಳಿಸುವ ಕಲೆಯೂ ಅವರಿಗೆ ತಿಳಿದಿರುತ್ತದೆ. ತಾವೂ ಬೆಳೆದು ಇತರರನ್ನೂ ಬೆಳೆಸುವ ಚಾಕಚಕ್ಯತೆಯೂ ಅವರಿಗೆ ಒಲಿದಿರುತ್ತದೆ. ಇಂತಹ ವಿಶೇಷ ಗುಣಗಳೇ ಅವರನ್ನು ದೊಡ್ಡವರನ್ನಾಗಿಸಿರುತ್ತದೆ.
6) ತಪ್ಪುಗಳಾದಾಗ, ಸೋತಾಗ ಅವು ಅಳುತ್ತಾ ಕೂರುವುದಿಲ್ಲ. ಇವು ಅವರನ್ನು ಅಧೀರರನ್ನಾಗಿಸುವುದಿಲ್ಲ. ಬದಲಾಗಿ, ಸೋಲನ್ನು ಮೆಟ್ಟಿಲಾಗಿ ಸ್ವೀಕರಿಸಿ ತಪ್ಪುಗಳನ್ನು ತಿದ್ದಿಕೊಂಡು, ಎಡವಿದ ಹಾದಿಯಿಂದ ಪಾಠ ಕಲಿತು ಮುನ್ನಡೆಯುತ್ತಾರೆ. ಆ ಮೂಲಕ ಯಶಸ್ಸು ಸಾಧಿಸುತ್ತಾರೆ.
ಕಂಗನಾ ವಿರುದ್ಧ ಕೇಸ್, ಹೈಕೋರ್ಟ್ ನಿಂದ ನೋಟಿಸ್
7) ತಮ್ಮ ಕ್ರಿಯಾಶೀಲತೆಯನ್ನು ಇವರು ಪೋಷಿಸುತ್ತಾರೆ. ಅದರ ಬೆಳವಣಿಗೆಗೆ ಶ್ರಮಿಸುತ್ತಾರೆ. ಕ್ರಿಯಾತ್ಮಕವಾಗಿ ಎಲ್ಲದರಲ್ಲಿ, ಎಲ್ಲರ ಜೊತೆ ತೊಡಗಿಕೊಳ್ಳುತ್ತಾರೆ. ಹೊಸ ಹೊಸ ಸಾಧ್ಯತೆಗಳತ್ತ ತಮ್ಮ ಬಾಹುಗಳನ್ನು ಚಾಚುತ್ತಾರೆ. ಹೊಸ ಕಲಿಕೆಗಳಲ್ಲಿ ಆಸಕ್ತಿ ತೋರಿಸಿ ಮಗುವಾಗಿ ಕಲಿಯುತ್ತಾರೆ.
8) ತಮ್ಮ ಆರೋಗ್ಯದ ಕಾಳಜಿ ಮಾಡಿಕೊಳ್ಳುವುದು ಅವರಿಗೆ ಮುಖ್ಯವಾಗಿರುತ್ತದೆ. ಆರೋಗ್ಯವೇ ಭಾಗ್ಯ ಎಂಬುದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಅದಕ್ಕಾಗಿ ಅವರು ಎಂದಿಗೂ ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಆರೋಗ್ಯ ಸರಿಯಾಗಿದ್ದರೆ ಎಲ್ಲವೂ ಎಂಬ ಸತ್ಯದ ಜೊತೆಗೆ ಒಂದು ನಂಬಿಕೆಯ ತಳಹದಿಯ ಮೇಲೆ ಅವರ ಕೆಲಸ ಸಾಗುತ್ತದೆ. ಇಂಥವರಿಗೆ ಯಶಸ್ಸು ಒಲಿಯಲು ಹಿಂದೆ ಮುಂದೆ ನೋಡಲಾರದು. ಯಶಸ್ಸಿಗೆ ಕಠಿಣ ಪರಿಶ್ರಮವೇ ಮೆಟ್ಟಿಲು ಎಂಬುದನ್ನು ನೆನಪಿಡಿ.
ಮುರಿದ ಕಾಲಲ್ಲೇ ಕುಂಟುತ್ತ ಸ್ಟೇಜ್‌ಗೆ ಬಂದಿದ್ಯಾಕೆ ರಶ್ಮಿಕಾ? ಹಿಂದಿದೆ ದೊಡ್ಡ ನಿರ್ಧಾರ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.