ರೇಪ್​ ಕೇಸ್​ನಲ್ಲಿ ಸಿಲುಕಿದ ನಟ ನವಾಜುದ್ದೀನ್ ಸಿದ್ದಿಕಿ: ಪತ್ನಿ ಆಲಿಯಾ ದೂರು

ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಪತ್ನಿ ಆಲಿಯಾ ನಡುವೆ ಕೆಲ ತಿಂಗಳುಗಳಿಂದ ಜಟಾಪಟಿ ನಡೆಯುತ್ತಿದ್ದು, ಅದೀಗ ತಾರಕಕ್ಕೇರಿದೆ. ಪತಿಯ ವಿರುದ್ಧ ಪತ್ನಿ ರೇಪ್​ ಕೇಸ್​​ ದಾಖಲಿಸಿದ್ದಾರೆ. ಪತ್ನಿ ಆಲಿಯಾ ಹೇಳಿದ್ದೇನು? 
 

Nawazuddin Siddiqui wife Aaliya accused him of rape filed complaint against him

ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ತಮ್ಮ ಮೇಲೆ ಹಲ್ಲೆ ಮಾಡಿ ಹಿಂಸೆ ನೀಡುತ್ತಿರುವ ಕುರಿತು ಅವರ ಪತ್ನಿ ಆಲಿಯಾ ಇದಾಗಲೇ ಹಿಂದೊಮ್ಮೆ ಕಥೆ ಹೇಳಿಕೊಂಡು ಕಣ್ಣೀರಿಟ್ಟಿದ್ದರು. ದಂಪತಿ ನಡುವಿನ  ವಿವಾದ ಸದ್ಯ ನಿಲ್ಲುವಂತೆ ಕಾಣುತ್ತಿಲ್ಲ.  ಇದೀಗ ಆಲಿಯಾ ಅವರು ನವಾಜ್ ವಿರುದ್ಧ ಅತ್ಯಾಚಾರ (Rape) ಆರೋಪ ಹೊರಿಸಿ ಮತ್ತೊಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಆಲಿಯಾ ಅವರು ಈ ಕುರಿತು  ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರಿಡುತ್ತಾ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ತಮಗಾಗಿರುವ ನೋವನ್ನು  ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅವರು, ಪತಿ ಮತ್ತು ಅವರ  ಕುಟುಂಬಸ್ಥರು ತಮಗೆ ಮನೆಯಿಂದ ಹೊರಹಾಕಲು ಏನೆಲ್ಲಾ ಮಾಡಬೇಕೋ, ಅದೆಲ್ಲವನ್ನೂ ಮಾಡಿದ್ದಾರೆ. ತಮಗೆ ಆಹಾರ, ಹಾಸಿಗೆ ಮತ್ತು ಕನಿಷ್ಠ ಬಾತ್‌ರೂಮ್‌, ಟಾಯ್ಲೆಟ್ ಹೋಗುವುದಕ್ಕೂ ಸಹ ಅವಕಾಶ ನೀಡುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು. ಇದೀಗ ನೇರಾನೇರ ರೇಪ್​ ಆರೋಪ ಹೊರಿಸಿದ್ದಾರೆ.
 
ನವಾಜ್ ನನ್ನ ಮಕ್ಕಳನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆಲಿಯಾ ಕಣ್ಣೀರಿಟ್ಟಿದ್ದಾರೆ.  'ಆಗಾಗ್ಗೆ ನವಾಜ್​ ಮಹಾನ್ ವ್ಯಕ್ತಿಯಾಗಲು ಪ್ರಯತ್ನಿಸುತ್ತಾರೆ.   ನನ್ನ ಮುಗ್ಧ ಮಗುವನ್ನು ಅಕ್ರಮ ಎಂದು ಕರೆಯುತ್ತಾರೆ. ಅವರ ಹೃದಯಹೀನತೆಯ ಬಗ್ಗೆ ಏನು ಮಾತನಾಡಲಿ' ಎಂದು ನೋವಿನಿಂದ ಹೇಳಿಕೊಂಡಿರುವ ಆಲಿಯಾ (Aaliya),  ವರ್ಸೋವಾ ಪೊಲೀಸ್ ಠಾಣೆಯಲ್ಲಿ ನಾನು ದೂರು ದಾಖಲಿಸಿದ್ದೇನೆ.  ಅತ್ಯಾಚಾರದ ದೂರು ದಾಖಲು ಮಾಡಿದ್ದೇನೆ.  ನನ್ನ ಮುಗ್ಧ ಮಕ್ಕಳನ್ನು ಈ ಹೃದಯಹೀನ ಕೈಗೆ ಸಿಗಲು ನಾನು  ಬಿಡುವುದಿಲ್ಲ' ಎಂದಿದ್ದಾರೆ. ಅದೇ ಇನ್ನೊಂದೆಡೆ ಮಕ್ಕಳನ್ನು ತಮ್ಮ ಸುಪರ್ದಿಗೆ ನೀಡುವಂತೆ ನವಾಜ್​ ಅವರು ಕೋರ್ಟ್​ಗೆ ಕೇಸ್​ ದಾಖಲಿಸಿರುವುದಾಗಿ ಆಲಿಯಾ ಹೇಳಿಕೊಂಡಿದ್ದಾರೆ.  'ಮಕ್ಕಳು ಬೇಕೆಂದು ನವಾಜ್  ನ್ಯಾಯಾಲಯದಲ್ಲಿ (Court)ಪ್ರಕರಣವನ್ನು ದಾಖಲಿಸಿದ್ದಾರೆ. ಅವರು ಮಕ್ಕಳ ಪಾಲನೆಯನ್ನು ಬಯಸುತ್ತಾರೆ. ಆದರೆ ಹುಟ್ಟಿದಾಗಿನಿಂದಲೂ ಇಲ್ಲದ ಮಗುವಿನ ಮೇಲಿನ ಅಕ್ಕರೆ ಈಗ್ಯಾಕೋ ತಿಳಿಯುತ್ತಿಲ್ಲ. ಮಕ್ಕಳ ಲಾಲನೆ ಪಾಲನೆಯಲ್ಲಿ ಸ್ವಲ್ಪವೂ ಶ್ರಮ ವಹಿಸಲಿಲ್ಲ.  ಡಯಾಪರ್ ಬೆಲೆ ಎಷ್ಟು ಮತ್ತು ಹೇಗೆ ಎನ್ನುವುದೂ ಗೊತ್ತಿಲ್ಲ. ಮಕ್ಕಳಿಗೆ 12 ವರ್ಷ ಹೇಗೆ ಆಯಿತು ಎಂಬ ತಿಳಿವಳಿಯೂ ಇಲ್ಲ.  ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಏನೇನುಬೇಕು ಎನ್ನುವುದೂ ತಿಳಿದಿಲ್ಲ.  ಆದರೆ ಈಗ ನನ್ನಿಂದ ಮಕ್ಕಳನ್ನು ದೂರ ಮಾಡಲು ಈ ಕುತಂತ್ರದ ಬುದ್ಧಿ ಉಪಯೋಗಿಸುತ್ತಿದ್ದಾರೆ.  ನನ್ನಿಂದ ಮಕ್ಕಳನ್ನು  ಕಿತ್ತುಕೊಂಡು,  ತಮ್ಮ ಶಕ್ತಿಯಿಂದ ತೋರಿಸಲು ಬಯಸುತ್ತಿದ್ದಾರೆ.  ಎಷ್ಟು ಒಳ್ಳೆಯ ತಂದೆ ಎಂದು ಜನರು ಆಡಿಕೊಳ್ಳಲಿ ಎನ್ನುವುದೇ ಅವರ ಆಸೆ' ಎಂದು ಹೇಳಿದ್ದಾರೆ. 

ನವಾಜುದ್ದೀನ್ ಸಿದ್ದಿಕಿ ವಿರುದ್ಧ ಮಾಡಿದ ಆರೋಪಗಳೆಲ್ಲ ಸುಳ್ಳು; ಮನೆ ಕೆಲಸದವಳ ಬಹಿರಂಗ ಕ್ಷಮೆ

'ಅವನು ಒಳ್ಳೆಯ ತಂದೆಯಲ್ಲ, ಆದರೆ ತಾಯಿಯಿಂದ (Father) ತನ್ನ ಮಗುವನ್ನು ಕಸಿದುಕೊಳ್ಳುವ ಹೇಡಿ ತಂದೆ, ಈ ವಿಶ್ವದಲ್ಲಿ  ಎಲ್ಲಕ್ಕಿಂತ ದೊಡ್ಡ ಶಕ್ತಿ ಮೇಲಿದೆ ಎಂದು ಅವರಿಗೆ ತಿಳಿದಿಲ್ಲ,  ಹಣದಿಂದ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ. ಏನು ಬೇಕಾದರೂ ಮಾಡಿಕೊಳ್ಳಿ.  ನನ್ನ ಮಕ್ಕಳನ್ನು ನನ್ನಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ನಾನು ನಿಮ್ಮ ಹೆಂಡತಿಯಲ್ಲ ಎಂದು ಎಲ್ಲರ ಮುಂದೆ ಹೇಳಿದಿರಿ. ಆದರೆ ನಾನು ಯಾವಾಗಲೂ ನಿಮ್ಮನ್ನು ನನ್ನ ಗಂಡನೆಂದು ಪರಿಗಣಿಸಿದ್ದೇನೆ. ನೀವು ನನ್ನನ್ನು ನಿಮ್ಮಂತೆ ಪರಿಗಣಿಸುತ್ತೀರಿ ಎಂಬ ಭ್ರಮೆಯಲ್ಲಿದ್ದೆ.  ನನ್ನ ಯೌವನದ  40 ವರ್ಷಗಳ  ಅತ್ಯಮೂಲ್ಯ ಸಮಯವನ್ನು ನಿಮಗಾಗಿ ನೀಡಿದ್ದೇನೆ, ಈಗ ನೀವು ನನ್ನ ಮಕ್ಕಳನ್ನು ನನ್ನಿಂದ ಕಸಿದುಕೊಳ್ಳುತ್ತೀರಿ' ಎಂದು ಆಲಿಯಾ ಕಣ್ಣೀರು ಹಾಕಿದ್ದಾರೆ.
 
ಆಲಿಯಾ ಈ ಹಿಂದೆ ನವಾಜ್ ಮತ್ತು ಅವರ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ತನ್ನ ಆಹಾರ, ಹಾಸಿಗೆ ಮತ್ತು ಸ್ನಾನಗೃಹದ ಬಳಕೆಯನ್ನು ಸಹ ನಿಷೇಧಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅದೇ ಸಮಯದಲ್ಲಿ, ಆಲಿಯಾ ತನ್ನ ಮೊದಲ ಪತಿ ವಿನಯ್ ಭಾರ್ಗವ್ (Vinay Bhargav) ಜೊತೆ ಸಂಬಂಧ ಹೊಂದಿರುವುದಾಗಿ  ನವಾಜ್ ಅವರ ವಕೀಲರು ಆರೋಪಿಸಿದ್ದಾರೆ. 

ಜಾತಿ ನೋಡಿ ಮದುವೆಯಾಗಬೇಡ; ವಿಡಿಯೋದಿಂದ ನವಾಜುದ್ದೀನ್ ಸಿದ್ಧಿಕಿ ಬಣ್ಣ ಬಯಲು ಮಾಡಿದ ಪತ್ನಿ

 

Latest Videos
Follow Us:
Download App:
  • android
  • ios