ಬಂಟಿ ನಿನ್ನ ಸಾಬೂನ್ ಸ್ಲೋನಾ ಎಂದು ಜಾಹೀರಾತು ಮೂಲಕ ಎಲ್ಲರ ಮನೆಗಿದ್ದ ಹುಡುಗಿ ಇದೀಗ ಹಾಟ್ ಬ್ಯೂಟಿಯಾಗಿ ಹಲವು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಅವನೀತ್ ಇದೀಗ ಸೆಟ್‌ನಲ್ಲಿ ನಡೆದ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.
ಮುಂಬೈ(ಮಾ.22) ನಟಿ ಅವನೀತ್ ಕೌರ್ ಬಹುತೇಕರ ಹಾಟ್ ಫೇವರಿಟ್. ಆದರೆ ಇದೀಗ ಅವನೀತ್ ಕೌರ್, ಸೆಟ್‌ನಲ್ಲಿ ಅನುಭವಿಸಿದ ನೋವಿನ ಕತೆಯನ್ನು ಬಿಚ್ಚಿಟ್ಟಿದ್ದಾರೆ. ನಿರ್ದೇಶಕನ ನಡೆ ಆಘಾತ ತಂದಿದ್ದು ಎಂದಿದ್ದಾರೆ. ಇಷ್ಟೇ ಅಲ್ಲ ತಾನು ಆತ್ಮವಿಶ್ವಾಸ ಕಳೆದುಕೊಂಡೆ, ನನ್ನ ಪೋಷಕರನ್ನು ಸೆಟ್ ಒಳಗೆ ಪ್ರವೇಶಿಸಲು ಅನುಮತಿಸಲಿಲ್ಲ ಎಂದು ಹಳೇ ಘಟನೆಯನ್ನು ಮೆಲುಕು ಹಾಕಿದ್ದಾರೆ. ಈ ಘಟನೆ ತಾನು 12 ವರ್ಷದವಳಿದ್ದಾಗ ನಡೆಯಿತು ಎಂದು ಅವನೀತ್ ಕೌರ್ ಹೇಳಿದ್ದಾರೆ. ಅಷ್ಟಕ್ಕೂ ಸೆಟ್‌ನಲ್ಲಿ ನಡೆದ ಘಟನೆ ಏನು?
ಡ್ಯಾನ್ಸ್ ಶೂಟಿಂಗ್ ಮಾಡುವಾಗ ಕೆಲ ಸಮಯದಲ್ಲಿ ಅಲ್ಲಿ ಇಲ್ಲಿ ಮುಟ್ಟುತ್ತಿದ್ದರು. ಈ ಘಟನೆಯನ್ನು ತಾಯಿ ಬಳಿ ಹೇಳಿಕೊಂಡಿದ್ದೆ. ಈ ವೇಳೆ ನನ್ನ ತಾಯಿ ಗುಡ್ ಟಚ್, ಬ್ಯಾಡ್ ಟಚ್ ಕುರಿತು ವಿವರಿಸಿದ್ದರು. ಈ ಬಳಿಕ ನಾನು ಹೆಚ್ಚು ಜಾಗರೂಕತೆಯಿಂದ ಇದ್ದೆ ಎಂದು ಅವನೀತ್ ಕೌರ್ ಹೇಳಿದ್ದಾರೆ. ಇದೇ ವೇಳೆ ನಿರ್ದೇಶಕನ ಅಚ್ಚರಿ ನಡೆಯನ್ನು ಬಿಚ್ಚಿಟ್ಟಿದ್ದಾರೆ.
'ಬಂಟಿ ನಿನ್ನ ಸಾಬೂನು ಸ್ಲೋ ನಾ..' ಎಂದಿದ್ದ ಹುಡುಗಿ ಇಂದು ಹಾಟ್ ಬ್ಯೂಟಿ!
11 ಅಥವಾ 12 ವಯಸ್ಸಿರಬೇಕು. ಈ ವೇಳೆ ತಾನು ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದೆ. ಕೆಲ ವೇದಿಕೆಗಳಿಗೆ ಅವಕಾಶಗಳು ಒದಗಿಬಂದಿತ್ತು. ಎಂಟರ್ಟೆನ್ಮೆಂಟ್ ಕ್ಷೇತ್ರದಲ್ಲಿ ಕೆಲಸ ಮಾಡುವ ಉತ್ಸಾಹ, ಆಸಕ್ತಿ ನನ್ನಲ್ಲಿತ್ತು. ಆದರೆ ನಿರ್ದೇಶಕ ನಡೆ ನನ್ನ ಎಲ್ಲಾ ಆತ್ಮವಿಶ್ವಾಸ ಕುಗ್ಗಿಸಿತ್ತು ಎಂದು ಅವನೀತ್ ಕೌರ್ ಹೇಳಿದ್ದಾರೆ. ಶೂಟಿಂಗ್ ಸೆಟ್‌ಗೆ ಆಗಮಿಸಿದ ಬಳಿಕ ನನಗೆ ನಿರ್ದೇಶಕರು ಕ್ಲಿಷ್ಠ ಪದಗಳು ನಾಲ್ಕರಿಂದ ಐದ ಪಟುಗಳ ಡೈಲಾಗ್ ನೀಡಿದ್ದರು. ಅಂದು ನನ್ನ ವಯಸ್ಸು ಸಣ್ಣದು. ಇದನ್ನು ಓದಿ ಅರ್ಥ ಮಾಡಿಕೊಳ್ಳುವ ಶಕ್ತಿಯೂ ಹೆಚ್ಚಿಲ್ಲ. ಆದರೆ ಈ ಡೈಲಾರ್ ಪುಟಗಳಲ್ಲಿದ್ದ ಕೆಲ ಪದಗಳು ನನಗೆ ಒಗ್ಗುತ್ತಿರಲಿಲ್ಲ. ಇದನ್ನು ಹೇಳಲು ಕಷ್ಟವಾಗುತ್ತಿತ್ತು ಎಂದಿದ್ದಾರೆ.
ಶೂಟಿಂಗ್ ಆರಂಭಗೊಂಡಾಗ ನನ್ನ ಡೈಲಾಗ್ ತಪ್ಪಾಯಿತು. ಪದಗಳು ಬಾಯಿಗೆ ಬರಲೇ ಇಲ್ಲ. ಹೀಗಾಗಿ ಮೂರರಿಂದ ನಾಲ್ಕು ಬಾರಿ ರೀಟೇಕ್ ಆಗಿತ್ತು. ಇದು ನಿರ್ದೇಶಕ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ಹಿಗ್ಗಾಮುಗ್ಗಾ ಝಾಡಿಸಿದ್ದರು. ನಿನ್ನಿಂದ ನಟನೆ ಸಾಧ್ಯವಿಲ್ಲ. ಡೈಲಾಗ್ ಬರವುದಿಲ್ಲ. ನಟನೆ ಗೊತ್ತಿಲ್ಲ. ಹೀಗಿರುವಾಗ ನಮ್ಮ ಸಮಯ ಯಾಕೆ ವ್ಯರ್ಥ ಮಾಡುತ್ತೀರಿ ಎಂದು ಹೇಳಿದ್ದರು. ನಿರ್ದೇಶಕನ ಈ ಮಾತುಗಳು ಆತ್ಮವಿಶ್ವಾಸವನ್ನೇ ಕುಗ್ಗಿಸಿತ್ತು. ಸೆಟ್‌ನಲ್ಲಿ ನನ್ನ ಪೋಷಕರು ಇರಲಿಲ್ಲ. ಸೆಟ್ ಒಳಗೆ ಯಾರಿಗೂ ಪ್ರವೇಶ ನೀಡಿರಲಿಲ್ಲ. ಹೀಗಾಗಿ ಅಳುತ್ತಾ ಕುಳಿತಿದ್ದೆ ಎಂದು ಅವನೀತ್ ಕೌರ್ ಹೇಳಿದ್ದಾರೆ.
ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಗ್ಲಾಮರ್‌ಸ್ ಬಾಲಿವುಡ್ ತಾರೆಯರು