Asianet Suvarna News Asianet Suvarna News

ನಾಳೆ ಬೆಳಗ್ಗೆ ಏನ್ ತಿಂಡಿ ಮಾಡೋದು? ನಾರಿ ಕಾಡೋ ಚಿಂತೆ..

ಬೆಳಗ್ಗೆ ಏನು ತಿಂಡಿ ಮಾಡೋದು ಎಂಬ ಚಿಂತೆ ಪ್ರತಿ ಮಹಿಳೆಯನ್ನು ಕಾಡೇ ಕಾಡುತ್ತದೆ. ಬ್ರೇಕ್‍ಫಾಸ್ಟ್ ತಯಾರಿ ಮಾಡೋದೇ ಬಹು ಸವಾಲಿನ ಕೆಲಸ ಎಂಬುದನ್ನು ಸಮೀಕ್ಷೆಯೊಂದರಲ್ಲಿ ಪಾಲ್ಗೊಂಡ ಬಹುತೇಕ ಮಹಿಳೆಯರು ಒಪ್ಪಿಕೊಂಡಿದ್ದಾರೆ.

Indian mothers do not like cooking breakfast in Morning
Author
Bangalore, First Published Mar 10, 2020, 12:29 PM IST

ಪ್ರತಿ ಮಹಿಳೆಯನ್ನು ಪ್ರತಿದಿನ ಅತಿಹೆಚ್ಚು ಬಾರಿ ಕಾಡುವ,ಚಿಂತೆಗೀಡು ಮಾಡುವ ಪ್ರಶ್ನೆ‘ನಾಳೆ ಬೆಳಗ್ಗೆ ಏನು ತಿಂಡಿ ಮಾಡೋದು’ಎಂಬುದೇ ಆಗಿರುತ್ತೆ.ಆಕೆ ಉದ್ಯೋಗಸ್ಥೆಯಾಗಿರಲಿ ಅಥವಾ ಗೃಹಿಣಿಯಾಗಿರಲಿ ಬೆಳಗ್ಗಿನ ತಿಂಡಿ ಚಿಂತೆಯಂತು ಕಾಡೇ ಕಾಡುತ್ತದೆ. ದಿನದಲ್ಲಿ ಕನಿಷ್ಠ ಒಂದು ಬಾರಿಯಾದ್ರೂ ಆಕೆ ಈ ಬಗ್ಗೆ ಯೋಚಿಸಿಯೇ ಯೋಚಿಸ್ತಾಳೆ. ಅದರಲ್ಲೂ ರಾತ್ರಿ ಮಲಗುವ ಸಮಯದಲ್ಲಿ ನಾಳೆ ಬೆಳಗ್ಗಿನ ತಿಂಡಿ ಯೋಚನೆ ಆಕೆಯನ್ನು ಕಾಡಿಯೇ ಕಾಡುತ್ತದೆ. ಈ ತಿಂಡಿ ಮಾಡಿದ್ರೆ ಗಂಡನಿಗೆ ಇಷ್ಟವಾಗುತ್ತಾ? ಮಕ್ಕಳು ಖುಷಿಯಿಂದ ತಿನ್ನುತ್ತಾರಾ? ಇದನ್ನು ಮಾಡಲು ಜಾಸ್ತಿ ಸಮಯ ಹಿಡಿದ್ರೆ ಮಕ್ಕಳ ಸ್ಕೂಲ್‍ಗೆ ಲೇಟ್ ಆದ್ರೆ, ಬಾಕ್ಸ್ಗೆ ಹಾಕೊಂಡು ಹೋಗೋಕೆ ಆಗುತ್ತಾ? ಹೀಗೆ ಒಂದು ತಿಂಡಿ ಬಗ್ಗೆ ಹತ್ತಾರು ಆಯಾಮಗಳಲ್ಲಿ ಯೋಚಿಸಿಯೇ ಏನು ಮಾಡೋದು ಎಂಬ ಅಂತಿಮ ನಿರ್ಧಾರಕ್ಕೆ ಬರೋದು. ಇನ್ನು ಕೆಲವು ತಿಂಡಿಗಳಿಗೆ ಹಿಂದಿನ ದಿನವೇ ಸಿದ್ಧತೆ ಮಾಡಿಟ್ಟುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಇಡ್ಲಿ, ದೋಸೆ ಮಾಡಬೇಕಂದ್ರೆ ಆ ದಿನ ಬೆಳಗ್ಗೆ ಎದ್ದು ತಯಾರಿ ನಡೆಸಿದ್ರೆ ಆಗಲ್ಲ. ಬದಲಿಗೆ ಹಿಂದಿನ ದಿನವೇ ಅಕ್ಕಿ, ಬೇಳೆ ನೆನೆ ಹಾಕಬೇಕು, ರುಬ್ಬಿಡಬೇಕು. ಇನ್ನು ಇದೇ ತಿಂಡಿ ಮಾಡಬಹುದು ಎಂದು ನಿರ್ಧರಿಸುವ ಮುನ್ನ ಅದಕ್ಕೆ ಬೇಕಾದ ಎಲ್ಲ ಸಾಮಗ್ರಿಗಳು ಮನೆಯಲ್ಲಿವೆಯೋ ಇಲ್ಲವೋ ಎಂದು ನೋಡಬೇಕು. ಅಬ್ಬಾಬ್ಬ ಎಷ್ಟೆಲ್ಲ ಯೋಚಿಸಬೇಕು ಬೆಳಗ್ಗಿನ ತಿಂಡಿಗೆ ನೋಡಿ! ಬಹುಶಃ ಇದೇ ಕಾರಣಕ್ಕೆ ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಭಾರತದ ಶೇ.80ರಷ್ಟು ಮಹಿಳೆಯರು ಅಡುಗೆ ಮಾಡುವಾಗ ಖುಷಿ ಕೊಡದ ಕ್ಷಣವೆಂದ್ರೆ ಬ್ರೇಕ್‍ಫಾಸ್ಟ್ ಸಿದ್ಧಪಡಿಸುವುದು ಎಂದಿದ್ದಾರೆ. 

ಇದು #MeToo ಅಲ್ಲ, #MeTime, ನಿಮ್ಮ ಸಮಯ ಎಂಜಾಯ್‌ ಮಾಡಿ

ಏನಿದು ಅಧ್ಯಯನ?
ತಾಯಂದಿರ ಬ್ರೇಕ್‍ಫಾಸ್ಟ್ ದಿನಚರಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ವಿ-ಗಾರ್ಡ್ ಹಾಗೂ ಆನ್‍ಲೈನ್ ಪೋರ್ಟಲ್ ಮಾಮ್ಸ್‍ಪ್ರೆಸ್ಸೋ ಡಾಟ್ ಕಾಮ್ ಜಂಟಿಯಾಗಿ ದೇಶಾದ್ಯಂತ 500 ಮಹಿಳೆಯರ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಕಂಡುಬಂದ ಕೆಲವು ಆಸಕ್ತಿಕರ ಸಂಗತಿಗಳು ಹೀಗಿವೆ:

-ಬೆಳಗ್ಗಿನ ಅವಧಿ ಅತ್ಯಂತ ಬ್ಯುಸಿಯಾಗಿರುತ್ತದೆ. ಈ ಸಮಯದಲ್ಲಿ ಅಡುಗೆಮನೆ ಕೆಲಸಗಳು ದಿನದ ಅತ್ಯಂತ ಒತ್ತಡದಾಯಕ ಸಮಯವಾಗಿದೆ ಎನ್ನುವುದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.84ರಷ್ಟು ಮಹಿಳೆಯರ ಅಭಿಪ್ರಾಯವಾಗಿದೆ.
-ಬ್ರೇಕ್‍ಫಾಸ್ಟ್ ಆಯ್ಕೆಗಳು ಸೀಮಿತವಾಗಿವೆ ಹಾಗೂ ಪ್ರತಿದಿನ ಒಂದೇ ವಿಧದ ತಿಂಡಿ ಮಾಡುವುದರಿಂದ ಮನೆಮಂದಿಗೆಲ್ಲ ಬೋರ್ ಆಗುತ್ತದೆ. ಹೀಗಾಗಿ ಬ್ರೇಕ್‍ಫಾಸ್ಟ್ನಲ್ಲಿ ಸದಾ ವೈವಿಧ್ಯತೆಯನ್ನು ಹುಡುಕಬೇಕಾಗುತ್ತದೆ ಎಂಬ ಅಭಿಪ್ರಾಯವನ್ನು 10ರಲ್ಲಿ 8 ಅಮ್ಮಂದಿರು ಹೊಂದಿದ್ದಾರೆ.

ಹ್ಯಾಪಿ ವುಮನ್ಸ್ ಡೇ ಅಂದ್ರೆ ನಂಗೆ ಸಿಟ್ಟು ಬರೋದ್ಯಾಕೆ?

-ನಾವು ಸಿದ್ಧಪಡಿಸುವ ಬ್ರೇಕ್‍ಫಾಸ್ಟ್ ಬಗ್ಗೆ ನಮಗೇ ತೃಪ್ತಿಯಿಲ್ಲ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಅಮ್ಮಂದಿರು ಹೇಳಿಕೊಂಡಿದ್ದಾರೆ. ಅದರಲ್ಲೂ ಶೇ.30ರಷ್ಟು ತಾಯಂದಿರು ನಾಳೆ ಬ್ರೇಕ್‍ಫಾಸ್ಟ್ಗೆ ಏನು ತಿಂಡಿ ಮಾಡಬೇಕೆಂದು ಯೋಚಿಸಿ ನಿರ್ಧರಿಸುವುದು ಅತ್ಯಂತ ದೊಡ್ಡ ಸವಾಲಿನ ಹಾಗೂ ಕಡಿಮೆ ಖುಷಿ ನೀಡುವ ಕೆಲಸ ಎಂದಿದ್ದಾರೆ. 
-ಬ್ರೇಕ್‍ಫಾಸ್ಟ್ ಸಿದ್ಧಪಡಿಸಲು ಕುಟುಂಬ ಸದಸ್ಯರಿಂದ ಹೆಚ್ಚಿನ ಸಹಾಯ ದೊರಕಿದರೆ ಚೆನ್ನಾಗಿತ್ತು ಎಂಬುದು ಶೇ.8ರಷ್ಟು ಮಹಿಳೆಯರ ಬಯಕೆಯಾಗಿದೆ.ಇನ್ನು 10ರಲ್ಲಿ 8 ತಾಯಂದಿರು ಬ್ರೇಕ್‍ಫಾಸ್ಟ್ ಸೇರಿದಂತೆ ಎಲ್ಲ ಅಡುಗೆ ಕೆಲಸವನ್ನು ಒಬ್ಬರೇ ನಿಭಾಯಿಸುತ್ತಾರೆ. ಒಂದು ವೇಳೆ ಅವರಿಗೆ ಅಡುಗೆ ಕೆಲಸದಲ್ಲಿ ಸಹಾಯ ದೊರಕಿದರೂ ಅದು ಅತ್ಯಂತ ಕಡಿಮೆ ಪ್ರಮಾಣದ್ದು.
-ಭಾರತದಲ್ಲಿ 10ರಲ್ಲಿ 8 ಮಹಿಳೆಯರು ಅಡುಗೆಮನೆ ಕೆಲಸಗಳಲ್ಲಿ ಪತಿ ಸಹಾಯ ನಿರೀಕ್ಷಿಸುತ್ತಿರುವುದನ್ನು ಈ ಸಮೀಕ್ಷೆ ಬಹಿರಂಗಪಡಿಸಿದೆ.

ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿಗಾಗಿ ಹಂಬಲಿಸಿದ್ದು ಇದಕ್ಕಾ?

ಬ್ರೇಕ್‍ಫಾಸ್ಟ್ ಟೆನ್ಷನ್‍ಗೆ ಬ್ರೇಕ್ ಹಾಕಲು ಹೀಗೆ ಮಾಡಿ
-ಬ್ರೇಕ್‍ಫಾಸ್ಟ್ಗೆ ಸಂಬಂಧಿಸಿ ವಾರದ ವೇಳಾಪಟ್ಟಿ ಸಿದ್ಧಪಡಿಸಿ. ಅಂದ್ರೆ ಸೋಮವಾರದಿಂದ ಭಾನುವಾರದ ತನಕ ಪ್ರತಿದಿನ ಇಂಥದ್ದೇ ತಿಂಡಿ ಮಾಡಬೇಕು ಎಂಬುದನ್ನು ಒಂದು ಚೀಟಿಯಲ್ಲಿ ಬರೆದು ಅಡುಗೆಮನೆಯಲ್ಲಿ ಕಣ್ಣಿಗೆ ಕಾಣುವಂತೆ ಎಲ್ಲಾದರೂ ತೂಗು ಹಾಕಿ.ಇದರಿಂದ ನಾಳೆ ಏನು ಮಾಡೋದು ಎಂದು ತಲೆಕೆಡಿಸಿಕೊಳ್ಳುವುದು ತಪ್ಪುತ್ತದೆ.
-ಇಡೀ ವಾರದ ಬ್ರೇಕ್‍ಫಾಸ್ಟ್ ತಿಂಡಿಗಳಿಗೆ ಅಗತ್ಯವಾಗಿರುವ ಸಾಮಗ್ರಿಗಳು ಮನೆಯಲ್ಲಿರುವಂತೆ ವ್ಯವಸ್ಥೆ ಮಾಡಿಟ್ಟುಕೊಳ್ಳಿ.
-ಇಡ್ಲಿ, ದೋಸೆಗೆ ಹಿಂದಿನ ದಿನವೇ ಅಗತ್ಯವಾದ ತಯಾರಿ ನಡೆಸಿ.
-ಜಾಸ್ತಿ ಸಮಯ ಹಿಡಿಯುವ ತಿಂಡಿಗಳನ್ನು ಮಾಡುವ ದಿನ ಬೆಳಗ್ಗೆ ಎಂದಿಗಿಂತ ಸ್ವಲ್ಪ ಬೇಗವೇ ಎದ್ದೇಳಿ. ಇಲ್ಲವೆ ಹಿಂದಿನ ದಿನ ರಾತ್ರಿಯೇ ಅಗತ್ಯ ತಯಾರಿ ಮಾಡಿಟ್ಟುಕೊಳ್ಳಿ. ಇದರಿಂದ ಬೆಳಗ್ಗೆ ಹೆಚ್ಚಿನ ಒತ್ತಡ ಸೃಷ್ಟಿಯಾಗೋದಿಲ್ಲ. 

Follow Us:
Download App:
  • android
  • ios