ಚಂದ್ರನ ಅತ್ಯಂತ ಸಮೀಪದ ಫೋಟೋ ಸೆರೆಹಿಡಿಯುವಲ್ಲಿ ಯಶಸ್ವಿಯಾದ ಚಂದ್ರಯಾನ-2 ಆರ್ಬಿಟರ್| ಹೈ ರೆಸಲ್ಯೂಶನ್ ಕ್ಯಾಮೆರಾ (OHRC)ದಿಂದ ಚಂದ್ರನ ಮೇಲ್ಮೈ ಚಿತ್ರಗಳ ಸೆರೆ| ಚಂದ್ರನ ಆಯ್ದ ಪ್ರದೇಶಗಳ ಸ್ಥಳಾಕೃತಿ ಅಧ್ಯಯನಕ್ಕೆ ಪೂರಕ ಫೋಟೋಗಳು| ಚಂದ್ರನ ಮೇಲ್ಮೈನಿಂದ 100 ಕಿಮೀ ಎತ್ತರದಿಂದ ಫೋಟೋ ಕ್ಲಿಕ್ಕಿಸಿರುವ ಆರ್ಬಿಟರ್| ಚಂದ್ರನ ದಕ್ಷಿಣ ಧ್ರುವದಲ್ಲಿರುವ ಬೊಗುಸ್ಲಾವ್ಸ್ಕಿ ಕುಳಿಗಳನ್ನು ಸೆರೆ ಹಿಡಿದ OHRC|

ನವದೆಹಲಿ(ಅ.05):ಚಂದ್ರಯಾನ-2 ಯೋಜನೆಯ ಸಾಫಲ್ಯ-ವೈಫಲ್ಯಗಳ ಕುರಿತು ಖಗೋಳ ವಿಜ್ಞಾನ ಜಗತ್ತಿನಲ್ಲಿ ಚರ್ಚೆ ನಡೆಯುತ್ತಲೇ ಇದೆ. ಈ ಮಧ್ಯೆ ಚಂದ್ರಯಾನ-2 ನೌಕೆಯ ಆರ್ಬಿಟರ್ ಚಂದ್ರನ ಅತ್ಯಂತ ಸಮೀಪದ ಫೋಟೋ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ಚಂಧ್ರಯಾನ-2 ಆರ್ಬಿಟರ್ ತನ್ನ ಹೈ ರೆಸಲ್ಯೂಶನ್ ಕ್ಯಾಮೆರಾ (OHRC)ದಿಂದ ಚಂದ್ರನ ಮೇಲ್ಮೈ ಚಿತ್ರಗಳನ್ನು ಸೆರೆಹಿಡಿದಿದ್ದು, ಈ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ.

Scroll to load tweet…

ಚಂದ್ರನ ಮೇಲ್ಮೈನಿಂದ 100 ಕಿಮೀ ಎತ್ತರದಿಂದ ಫೋಟೋ ಕ್ಲಿಕ್ಕಿಸಿರುವ ಆರ್ಬಿಟರ್, ಚಂದ್ರನ ಆಯ್ದ ಪ್ರದೇಶಗಳ ಸ್ಥಳಾಕೃತಿ ಅಧ್ಯಯನಕ್ಕೆ ಪೂರಕವಾಗಿ ಫೋಟೋಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿರುವ ಬೊಗುಸ್ಲಾವ್ಸ್ಕಿ ಕುಳಿಗಳನ್ನು OHRC ಸೆರೆ ಹಿಡಿದಿದೆ. ಇದು ಸುಮಾರು 14 ಕಿ.ಮೀ ವ್ಯಾಸ ಮತ್ತು 3 ಕಿ.ಮೀ ಆಳವಾಗಿವೆ. ಚಂದ್ರನ ಮೇಲ್ಮೈಯಲ್ಲಿ ಅಸಂಖ್ಯ ಕುಳಿಗಳು ಹಾಗೂ ಬೃಹತ್ ಬಂಡೆಗಳಿರುವುದು ಈ ಫೋಟೋಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ.