ಸಣ್ಣ ಧೂಳಿನ ಕಣ ಸಿಟ್ಟು ಬರಿಸುತ್ತೆ; ಈ ಸಮಯದಲ್ಲಿ ನಾವು ಮಾಡಬೇಕಾಗಿದ್ದೇನು?
‘ಆ ಮನೆ ನೋಡು, ಮೊದಲು ನಾವಿದ್ದ ಮನೆ ಹಾಗಿಲ್ವಾ.. ಚಿಕ್ಕ ಹಾಲ್‌ನಲ್ಲಿ ಸೋಫಾ, ಟಿವಿ, ಫ್ರಿಡ್ಜ್, ಚೇರು, ಪುಸ್ತಕ ಎಲ್ಲ ಇಡ್ತಿದ್ದೆವಲ್ಲಾ..’ ಅಂದಳವಳು ಗಂಡನ ಕಡೆ ತಿರುಗಿ. ಅವನೂ ಓರೆ ಕಣ್ಣಿಂದ ನೋಡಿದ ಆ ಹಾಲ್‌ನತ್ತ ನೋಡಿದ, ಒಬ್ಬ ಗಂಡಸು ಚೇರ್‌ನಲ್ಲಿ ಕೂತು ಟಿವಿ ನೋಡ್ತಿದ್ದ. ನೆಲದ ಮೇಲೆ ಸೊಪ್ಪು ಹರವಿ ಹಾಕಿಕೊಂಡು ಹೆಂಗಸೊಬ್ಬಳು ಕೂತಿದ್ದಳು. ಸೋಫಾ, ಚೇರ್‌ಗಳು ಪಕ್ಕದಲ್ಲೇ ಬಿಸಿಲಲ್ಲಿ ಒಣಗಿ ಸುಟಿಸುಟಿಯಾಗಿದ್ದ ಹಪ್ಪಳ, ಪುಡಿ ಮಾಡಿಸಿಕೊಂಡು ಬಂದಿದ್ದ ಗೋಧಿ ಹಿಟ್ಟು.
‘ಆ ಲೈಫು, ಅದ್ರಲ್ಲಿದ್ದ ಇಂಟಿಮೆಸಿ ಈಗಿಲ್ಲ ಅನಿಸುತ್ತಪ್ಪಾ..’ ಅಂದಳು ಸೌಮ್ಯಾ.
ಇವರಿಬ್ಬರ ನಡುವೆ ಇಂಥಾ ಮಾತುಗಳು ಆಗಾಗ ಬರುತ್ತಿರುತ್ತವೆ. ನಮ್ಮೆಲ್ಲರ ನಡುವೆಯೂ ಆಗಾಗ ಬರುತ್ತಿರುತ್ತದೆ.
ಸಣ್ಣ ಧೂಳಿನ ಕಣ ಸಿಟ್ಟು ಬರಿಸುತ್ತೆ
- ಚಿಕ್ಕ ಮನೆ ನೋಡಿದಾಗ ಹಿಂದಿನ ನೆನಪಾಗಿ, ಚಿಕ್ಕ ಮನೆಯೊಳಗೆ ಎಷ್ಟುಆಪ್ತವಾಗಿ ಬದುಕುತ್ತಿದ್ದೆವಲ್ಲಾ ಅನಿಸೋದು.
- ದೊಡ್ಡ ಮನೆ ನೋಡಿದಾಗಲೂ ಕಟ್ಟಿದ್ರೆ ಆ ಥರದ ಮನೆಯಲ್ಲಿರಲೂ ಅದೃಷ್ಟಬೇಕು ಅಂತ ವಿಷಾದ.
- ನಮಗೆ ನಾವು ಈಗಿರುವ ಮನೆ ನಮಗೆ ಚಂದ ಕಾಣೋದೇ ಇಲ್ಲ.
ಯೋಗದೊಂದಿಗೆ ಕಿಕ್ ಸ್ಟಾರ್ಟ್ ಆಗಲಿ ದಿನ!
- ಇಡೀ ಮನೆ ನೀಟ್ ಆಗಿದ್ರೂ ಕಣ್ತಪ್ಪಿಸಿ ಕೂತ ಅತಿ ಸಣ್ಣ ಧೂಳಿನ ಕಣ ನಮ್ಮಲ್ಲಿ ಅಸಮಾಧಾನ ಹುಟ್ಟಿಸುತ್ತಿರುತ್ತೆ.
ಈ ಸಮಯದಲ್ಲಿ ನಾವು ಸಾಧಿಸಲೇ ಬೇಕಾದದ್ದು
- ಮೌನಕ್ಕೆ ಜಾಗ ಬಿಡಿ
ಸಣ್ಣ ಪುಟ್ಟಅಸಮಾಧಾನಗಳು, ನೋವು, ಗಂಭೀರ ಸಮಸ್ಯೆ ಹೆಚ್ಚುತ್ತಿರುವ ಕಾಲವಿದು. ದಿನದಲ್ಲಿ ಒಂಚೂರು ಹೊತ್ತು ಮೌನವಾಗಿರೋದು ರೂಢಿಸಿಕೊಳ್ಳಿ. ಅರ್ಧಗಂಟೆಯ ಮೌನ ಎಷ್ಟೋ ಸಮಾಧಾನ ಕೊಡುತ್ತದೆ.
- ಸಮಾಧಾನದಿಂದ ನೆಮ್ಮದಿ
ಇದೊಂಥರ ಕೊಂಡಿಯ ಹಾಗೆ. ಉದ್ವೇಗಕ್ಕೊಳಗಾದ ಮನಸ್ಸು ತಹಬಂದಿಗೆ ಬಂತು, ಸಮಾಧಾನಗೊಂಡಿತು ಅಂದರೆ ನೆಮ್ಮದಿ ತಾನೇ ತಾನಾಗಿ ಬರುತ್ತೆ.
- ಒಪ್ಪಿಕೊಂಡರೆ ಆನಂದ ಹೆಚ್ಚು
ನಮ್ಮ ಮನೆಯ ಇಂದಿನ ಸ್ಥಿತಿಯನ್ನು ಒಪ್ಪಿಕೊಳ್ಳೋಣ. ಕಷ್ಟಒಂದಾದರೆ ಪರಿಹಾರಗಳು ನೂರಾರು ಇರುತ್ತವೆ. ಆ ಬಗ್ಗೆ ಚಿಂತಿಸಿದಾಗ ಒಂದಿಲ್ಲೊಂದು ನಮ್ಮನ್ನು ಮೇಲಕ್ಕೆತ್ತುತ್ತದೆ.
- ಹ್ಯಾಪಿಯಾಗಿರಿ, ಐಡಿಯಾ ಹೊಳೆಯುತ್ತೆ
ಖುಷಿಯಾಗಿದ್ದಾಗ ಏನೇನೆಲ್ಲಾ ಐಡಿಯಾಗಳು ಬರುತ್ತವೆ. ದುಃಖ ಅವುಗಳನ್ನೆಲ್ಲ ಬ್ಲಾಕ್ ಮಾಡುತ್ತೆ. ಆಧ್ಯಾತ್ಮ ಹೇಳುವ ಒಂದು ನಿರ್ಲಿಪ್ತ ಸ್ಥಿತಿಗೆ ತಲುಪಿದರೆ ನೀವು ಈ ಸಂಕಟ, ನೋವಗಳನ್ನು ಮೀರೋದು ಸಾಧ್ಯವಾಗುತ್ತೆ.
ಆಸ್ತಮಾ ಮಂದಿ ಏನು ಮಾಡಬೇಕು; ಇದು ಹುಡುಗಾಟಿಕೆ ಟೈಮ್ ಅಲ್ಲ!
ಧ್ಯಾನ ನಿಮ್ಮ ಸಹಾಯಕ್ಕೆ ಬರುತ್ತೆ
ನಿಮ್ಮ ಉಸಿರಲ್ಲೇ ಗಮನ ಕೇಂದ್ರೀಕರಿಸಿ. ಬಳಿಕ ಒಂದು ಕಡೆ ಮನಸ್ಸನ್ನು ಸ್ಥಿರವಾಗಿರಿಸಿ. ಎಷ್ಟುಹೊತ್ತು ಸಾಧ್ಯವೋ ಅಷ್ಟುಹೊತ್ತು ಏನನ್ನೋ ಯೋಚಿಸದೆ ಮನಸ್ಸನ್ನು ನಿಯಂತ್ರಿಸಿ. ಯೋಚನೆಗಳು ಬರಬಹುದು, ನೀವು ಅದಕ್ಕೆ ಪ್ರತಿಕ್ರಿಯೆ ನೀಡಬೇಡಿ. ಒಂದು ಹಂತದ ಬಳಿಕ ಇದರಲ್ಲಿ ಇಚ್ಛಾಶಕ್ತಿ ಮೇಲುಗೈ ಸಾಧಿಸುತ್ತದೆ. ಆ ಕ್ಷಣದಲ್ಲಿ ಸಾಕಷ್ಟುಹೊತ್ತು ಇದ್ದು ಹೊರಬಂದರೆ ಮನಸ್ಸು ಪ್ರಶಾಂತವಾಗಿರುತ್ತದೆ. ಲೋಕದ ಯಾವ ಘಟನೆಗಳೂ ನಿಮ್ಮನ್ನು ಕಾಡುವುದಿಲ್ಲ. ಎಂಥಾ ಸ್ಥಿತಿಗೂ ನಿಮ್ಮ ಆನಂದ ಕಿತ್ತುಕೊಳ್ಳಲು ಸಾಧ್ಯವಾಗುವುದಿಲ್ಲ.