ಇನ್‌ಫೆಕ್ಷನ್‌ನಿಂದ ದೂರವಿರಲು ಬಳಸಬಹುದಾದ ಐದು ವಸ್ತುಗಳು!
ಇನ್‌ಫೆಕ್ಷನ್ ಹೇಗೆ ಆಗುತ್ತದೆ ಎಂದು ಯೋಚಿಸುವುದಕ್ಕಿಂತ ಇನ್‌ಫೆಕ್ಷನ್ ಆಗದಂತೆ ನಮ್ಮ ಕೈಯಲ್ಲಿ ಏನು ಸಾಧ್ಯವೋ ಅದನ್ನು ಮಾಡುವುದು ಈಗ ಸೂಕ್ತ. ಎಲ್ಲಾ ಕಡೆ ಕೊರೋನಾ ಭಯ ಇರುವ ಈ ಹೊತ್ತಲ್ಲಿ ನಿಮ್ಮ ಬ್ಯಾಗಿನಲ್ಲಿ ಇರಲೇಬೇಕಾದ ಕೆಲವು ವಸ್ತುಗಳ ಪಟ್ಟಿಇಲ್ಲಿದೆ. ಇವುಗಳನ್ನು ಬಳಸಿದರೆ ಇನ್‌ಫೆಕ್ಷನ್‌ನಿಂದ ದೂರ ಇರಬಹುದು.
1. ಆ್ಯಂಟಿ ಬ್ಯಾಕ್ಟೀರಿಯಲ್ ಸೋಪುಗಳು
ಪದೇ ಪದೇ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ ಅಂತ ವೈದ್ಯರು ಈಗ ಹೇಳುತ್ತಲೇ ಇದ್ದಾರೆ. ಹಾಗಾಗಿ ಈಗ ಊಟ ಮಾಡುವ ಮೊದಲು, ಊಟದ ನಂತರ, ವಾಶ್‌ರೂಮಿಗೆ ಹೋಗಿ ಬಂದ ಮೇಲೆ ಹೀಗೆ ಎಲ್ಲಾ ಸಂದರ್ಭದಲ್ಲಿ ಕೈತೊಳೆಯುವುದು ಅವಶ್ಯ. ಸಮಯ ಹೀಗಿರುವಾಗ ಆ್ಯಂಟಿ ಬ್ಯಾಕ್ಟೀರಿಯಲ್ ಸೋಪುಗಳನ್ನು ನಿಮ್ಮ ಜತೆ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು.
ಈ ಟಿಪ್ಸ್ ಪಾಲಿಸಿದ್ರೆ ಕೊರೋನಾ ಸೋಂಕು ಮಕ್ಕಳನ್ನು ತಾಕದು!
2. ವಾಟರ್‌ಲೆಸ್ ಶ್ಯಾಂಪೂ, ಬಾಡಿವಾಶ್
ನಾವು ಬೇರೆ ಊರಿಗೆ ಹೋಗಲೇಬೇಕಾಗಿ ಬಂದಾಗ ವೈರಸ್ ಇದೆ ಅಂತ ಇದ್ದಲ್ಲೇ ಕೂರಲಾಗುವುದಿಲ್ಲ. ಕೆಲವೊಮ್ಮೆ ಹೋಗಲೇಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಕನಿಷ್ಠ ಪಕ್ಷ ಮನೆಯಿಂದ ಆಚೆ ಹೋಗುವ ಸಂದರ್ಭವಾದರೂ ಬರಬಹುದು. ಇಂಥಾ ಸಂದರ್ಭ ಎದುರಾದಾಗ ವಾಟರ್‌ಲೆಸ್ ಶ್ಯಾಂಪೂ, ಬಾಡಿವಾಶ್ ಬಳಸುವುದು ಒಳ್ಳೆಯದು. ಇದೀಗ ನೀರನ್ನು ಬಳಸದೇ ಇರುವ ಶ್ಯಾಂಪೂ, ಬಾಡಿವಾಶ್ ಉತ್ಪನ್ನಗಳು ಮಾರುಕಟ್ಟೆಗೆ ಬಂದಿದೆ. ಅದನ್ನು ಬಳಸಿದರೆ ಇನ್‌ಫೆಕ್ಷನ್ ಆಗದಂತೆ ಸುರಕ್ಷಿತವಾಗಿರಬಹುದು.
3. ಸ್ಯಾನಿಟೈಸರ್ಸ್
ಈಗ ಎಲ್ಲಾ ಆಫೀಸುಗಳಲ್ಲೂ ಸ್ಯಾನಿಟೈಸರ್ಸ್ ಇಡಲಾಗುತ್ತಿದೆ. ಆಫೀಸಿನಿಂದ ಹೊರಗೆ ಹೋಗಿ ಬಂದವರು ಸ್ಯಾನಿಟೈಸರ್ಸ್ ಕೈಗೆ ಹಚ್ಚಿಯೇ ಒಳಗೆ ಬರಬೇಕು ಅನ್ನುವ ಅಘೋಷಿತ ಪದ್ಧತಿ ಜಾರಿಯಲ್ಲಿದೆ. ಅದು ಒಳ್ಳೆಯದು ಕೂಡ. ಯಾರೋ ಕೆಮ್ಮಿದರೂ ಯಾರೋ ಸೀನಿದರೂ ಒಮ್ಮೆ ಸ್ಯಾನಿಟೈಸರ್ಸ್ ಕೈಗೆ ಹಚ್ಚಿಕೊಂಡರೆ ಯಾವ ಕಿರಿಕಿರಿಯೂ ಇರುವುದಿಲ್ಲ. ನೀರು ಬಳಸದೆ ಈ ಉತ್ಪನ್ನ ಬಳಸಬಹುದಾದ್ದರಿಂದ ಎಲ್ಲಿ ಬೇಕಾದರೂ ಈ ಉತ್ಪನ್ನ ಬಳಸಬುಹುದು.
4. ಟಿಶ್ಯೂ ಪೇಪರ್‌ಗಳು
ಕೊರೋನಾ ಬಗ್ಗೆ ನೀವು ತಿಳಿದುಕೊಂಡ ಈ ನಂಬಿಕೆಗಳು ಸುಳ್ಳು!
ನಿಮಗೆ ಸೀನು, ಕೆಮ್ಮು ಬರುತ್ತಿದ್ದರೆ ಅದನ್ನು ತಡೆಯಲಿಕ್ಕಂತೂ ಆಗುವುದಿಲ್ಲ. ಹತ್ತು ಜನ ಇದ್ದಾಗ ನೀವು ಸೀನಿದರೆ ಅಥವಾ ಕೆಮ್ಮಿದರೆ ಅವರೆಲ್ಲರೂ ಹೆದರುತ್ತಾರೆ. ಹಾಗಾಗಬಾರದು ಎಂದಾದರೆ ಟಿಶ್ಯೂ ಪೇಪರ್ ಜತೆಯಲ್ಲಿ ಇಡುವುದು ಒಳ್ಳೆಯದು. ಟಿಶ್ಯೂ ಪೇಪರ್ ಹಿಡಿದು ಸೀನಿದರೂ ಏನೂ ತೊಂದರೆ ಇರುವುದಿಲ್ಲ.
5. ಮಾಸ್ಕುಗಳು
ಮಾಸ್ಕುಗಳು ಇನ್‌ಫೆಕ್ಷನ್‌ನಿಂದ ದೂರವಿರಲು ತುಂಬಾ ಬಳಕೆಯಲ್ಲಿರುವ ವಿಧಾನ. ಬಳಸಿ ಬಿಸಾಕುವ ಮಾಸ್ಕುಗಳನ್ನು ಧರಿಸಿದರೆ ತಮಗೂ ತೊಂದರೆಯಿಲ್ಲ, ಬೇರೆಯವರಿಗೂ ತೊಂದರೆ ಇರಲ್ಲ.