Fact check: ಕುಡುಕರಿಗೆ ಶುಭ ಸುದ್ದಿ, ಬಾರ್, ವೈನ್ ಶಾಪ್ ಓಪನ್, ಕಂಡಿಶನ್ ಅಪ್ಲೈ!

ಕೊರೋನಾ ಮಹಾರಾಕ್ಷಸನ ಅಬ್ಬರದ ನಡುವೆಯೂ ಎಣ್ಣೆ ಅಂಗಡಿ ಓಪನ್/ ಕುಡುಕರಿಗೆ ಗುಡ್ ನ್ಯೂಸ್ ಬಂತಾ?/ ಸುಳ್ಳು ಸುದ್ದಿ ಪ್ರವಾಹದಲ್ಲಿ ಇದು ಒಂದು/ ನಿಮ್ಮ ಮೊಬೈಲ್ ಗೂ ಸಂದೇಶ ಬಂದಿರಬಹುದು

factcheck is it true Karnataka government has reopened liquor shops

ಬೆಂಗಳೂರು(ಮಾ.29) ಕೊರೋನಾ ಮಾರಿಯಿಂದ ಪಾರಾಗಲು ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಯಾರೂ ಹೊರಕ್ಕೆ ಹೋಗುವಂತಿಲ್ಲ ಎಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ. ಆದರೂ ನಮ್ಮ ಜನರು ಕೇಳಬೇಕಲ್ಲ.

ಲಾಕ್ ಡೌನ್ ಮಾಡುವುದಕ್ಕೆ ಮುನ್ನವೇ ಮದ್ಯದ ಅಂಗಡಿಗಳನ್ನು, ವೈನ್ ಶಾಪ್ ಗಳನ್ನು ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಬಂದ್ ಮಾಡಲಾಗೊತ್ತು. ಅಗತ್ಯಕ್ಕಿಂತ ಅಧಿಕ ಜನರು ಒಂದೇ ಕಡೆ ಸೇರುವುದನ್ನು ತಡೆಯುವುದೇ ಇದರ ಉದ್ದೇಶ ಆಗಿತ್ತು. 

ಚೀನಾದಲ್ಲಿ ಬಾವಲಿಯೊಂದಿಗೇ ಸೆಕ್ಸ್: ಕೊರೋನಾ ಹುಟ್ಟಿಗೆ ಇದೇ ಕಾರಣನಾ?

ಒಂದಷ್ಟು ದಿನ ತಡೆದುಕೊಂಡಿದ್ದ ಕುಡುಕರು ಸಿಎಂಗೆ  ಎಣ್ಣೆ ಅಂಗಡಿ ತೆರೆಯುವಂತೆ ಪತ್ರವನ್ನು ಬರೆದು ತಮ್ಮ ಆತಂಕ ತೋಡಿಕೊಂಡಿದ್ದರು. ಆದರೆ ಇದೀಗ ಮತ್ತು ಒಂದು ಹೆಜ್ಜೆ ಮುಂದೆ ಹೋಗಿರುವ ಸುದ್ದಿ ನಮ್ಮ-ನಿಮ್ಮೆಲ್ಲರ ಮುಂದೆ ಬಂದಿದೆ.

ಅಬಕಾರಿ ಇಲಾಖೆಯಿಂದ ಕುಡುಕರಿಗೆ ಗುಡ್ ನ್ಯೂಸ್ ಬಂತಾ? ಹೌದು ಹೀಗೊಂದು ಪ್ರಶ್ನೆ ಉದ್ಭವವಾಗಿದೆ.  ಇವತ್ತು ರಾಜ್ಯದ ಎಲ್ಲಾ ಎಣ್ಣೆ  ಅಂಗಡಿಗಳೂ ಒಪನ್ ಆಗುತ್ತಾ? ಕುಡುಕರಿಗೆ ಅಮಲು ಏರಿಸಿಕೊಳ್ಳಲು ಪರ್ಮಿಶನ್ ಸಿಗುತ್ತಾ?

ಕೊರೋನಾ ವೈರಸ್‌ ಜೀವಿ​ತಾ​ವಧಿ 12 ಗಂಟೆ ನಿಜ​ವೇ?...
 
ಹೀಗೆಲ್ಲಾ ಅಂದುಕೊಂಡು ಎಣ್ಣೆ ಅಂಗಡಿ ಮುಂದೆ ಹೋದರೆ ಲಾಠಿ ಏಟು ತಿನ್ನಬೇಕಾದೀತು ಹುಷಾರ್! ಅಬಕಾರಿ ಇಲಾಖೆಯ ನಕಲಿ ಲೆಟರ್ ಹೆಡ್ ನಲ್ಲಿ ಹರಿದಾಡುತ್ತಿರುವ ಸಂದೇಶವೊಂದು ಸೋಶಿಯಲ್ ಮೀಡಿಯಾದಲ್ಲಿ ಕೊರೋನಾ ವೈರಸ್ ಗಿಂತ ಜೋರಾಗಿಯೇ ಹರಿದಾಡುತ್ತಿದೆ.

ಇವತ್ತು ಎಣ್ಣೆ ಅಂಗಡಿ ಒಪನ್ ಇರುತ್ತೆ. ಎಲ್ಲಾ ವೈನ್ ಶಾಪ್ ಮುಂದೆ ಒಬ್ಬೊಬ್ಬ ಪಿಸಿ ಇರ್ತಾರೆ. ಸೋಶಿಯಲ್ ಡಿಸ್ಟೆನ್ಸ್  ಕಾಯ್ದುಕೊಳ್ಳಬೇಕು. ಅವಧಿ ಮೀರಿ ಅಂಗಡಿ ಒಪನ್ ಇದ್ರೆ ವೈನ್ ಶಾಪ್‌ಮೇಲೆ ಕೇಸ್ ಹಾಕಲಾಗುತ್ತದೆ ಎಂದು ಸಂಪೂರ್ಣ ಸುಳ್ಳನ್ನೇ ತುಂಬಿರುವ ಲೆಟರ್ ಹೆಡ್ ಹರಿದಾಡುತ್ತಿದ್ದು ಎಲ್ಲರ ಮೊಬೈಲ್ ಗೂ ಬಂದಿರಬಹುದು. ನಂಬಲೂ ಮಾತ್ರ ಹೋಗಬೇಡಿ.

ತೆಲಂಗಾಣ ಸರ್ಕಾರದ ಲೆಟರ್ ಹೆಡ್ ನಲ್ಲಿ ಸಂಚಾರ ಮಾಡುತ್ತಿರುವ ಈ ಸುಳ್ಳು ಸುದ್ದಿಯನ್ನು ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು ತನಿಖೆ ಕೈಗೆತ್ತಿಕೊಂಡಿದೆ.

Latest Videos
Follow Us:
Download App:
  • android
  • ios