Asianet Suvarna News Asianet Suvarna News

Fact Check| ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿದ ಮನೆಮದ್ದು!

ಪಾಂಡೀಚೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ರಾಮು ಎಂಬವರು ಕೊರೋನಾ ಸೋಂಕು ಗುಣಪಡಿಸುವ ಮನೆಮದ್ದೊಂದನ್ನು ಕಂಡುಹಿಡಿದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಮನೆಮದ್ದನ್ನು ಒಪ್ಪಿಕೊಂಡಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ

Fact Check Age Old Home Remedy Peddled As Coronavirus Cure Found By Indian Student
Author
Bangalore, First Published Jul 16, 2020, 4:03 PM IST

ಪಾಂಡೀಚೇರಿ(ಜು.16): ಹಲವು ದೇಶಗಳು ಕೊರೋನಾ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಲು ಶತಪ್ರಯತ್ನ ಮಾಡುತ್ತಿವೆ. ಈ ನಡುವೆ ಪಾಂಡೀಚೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ರಾಮು ಎಂಬವರು ಕೊರೋನಾ ಸೋಂಕು ಗುಣಪಡಿಸುವ ಮನೆಮದ್ದೊಂದನ್ನು ಕಂಡುಹಿಡಿದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಮನೆಮದ್ದನ್ನು ಒಪ್ಪಿಕೊಂಡಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅದರಲ್ಲಿ ‘ ಭಾರತೀಯ ವಿದ್ಯಾರ್ಥಿ, ಪಾಂಡೀಚೇರಿ ವಿಶ್ವವಿದ್ಯಾಲಯದ ರಾಮು ಎಂಬವರು ಕೊರೋನಾ ವಿರುದ್ಧ ನೂತನ ಮನೆಮದ್ದನ್ನು ಕಂಡುಹಿಡಿದಿದ್ದಾರೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಸಹ ಒಪ್ಪಿಕೊಂಡಿದೆ. ಒಂದು ಚಮಚ ಕಾಳುಮೆಣಸಿನ ಪುಡಿ, ಎರಡು ಚಮಚ ಜೇನುತುಪ್ಪವನ್ನು ಶುಂಠಿಯ ರಸದ ಜೊತೆ ಸೇರಿಸಿ ಸತತ ೫ ದಿನ ಸೇವಿಸುವುದರಿಂದ ಕೊರೋನಾ ಸೋಂಕಿತರು ೧೦೦% ಗುಣಮುಖರಾಗಿತ್ತಾರೆ. ಇಡೀ ಜಗತ್ತು ಈ ಮನೆಮದ್ದನ್ನು ಒಪ್ಪಿಕೊಂಡಿದೆ. 2020ರಲ್ಲಿ ಕೇಳುತ್ತಿರುವ ಶುಭಸುದ್ದಿ ಇದು’ ಎಂದು ಹೇಳಲಾಗಿದೆ.

ಆದರೆ ಬೂಮ್‌ಲೈವ್ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಬೂಮ್ ಪಾಂಡೀಚೇರಿ ವಿವಿ ಕುಲಪತಿ ಗುರ್ಮೀತ್ ಸಿಂಗ್ ಅವರನ್ನೇ ಸಂಪರ್ಕಿಸಿ ಸ್ಪಷ್ಟನೆ ಪಡೆದಿದೆ. ಅವರು, ‘ಇದು ಸುಳ್ಳು ಸುದ್ದಿ. ನಮ್ಮ ಯಾವ ವಿದ್ಯಾರ್ಥಿಯೂ ಕೊರೋನಾ ವಿರುದ್ಧ ಲಸಿಕೆ/ ಔಷಧ ಅಭಿವೃದ್ಧಿಪಡಿಸಿಲ್ಲ’ ಎಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈ ಔಷಧವನ್ನು ಅನುಮೋದಿಸಿದೆ ಎಂಬುದೂ ಸುಳ್ಳು.

Follow Us:
Download App:
  • android
  • ios