ಭಾರತ ಚೆನ್ನಾಗಿ ನೋಡಿಕೊಂಡಿಲ್ಲ: ಬರವುದಕ್ಕೂ ಮೊದಲೇ ಇದೇನು ಹೇಳಿಬಿಟ್ರಿ ಟ್ರಂಪ್?
ಭಾರತಕ್ಕೆ ಬರುವ ಮೊದಲೇ ಡೋನಾಲ್ಡ್ ಟ್ರಂಪ್ ವಟವಟ ಅಂತಿದ್ದಾರೆ| ಭಾರತ ತಮ್ಮನ್ನು ಚೆನ್ನಾಗಿ ನೋಡಿಕೊಂಡಿಲ್ಲ ಅಂದ್ರು ಟ್ರಂಪ್| ದ್ವಿಪಕ್ಷೀಯ ವ್ಯಾಪಾರದಲ್ಲಿ ಭಾರತ ಅಷ್ಟೊಂದು ನ್ಯಾಯಯುತವಾಗಿ ವರ್ತಿಸಿಲ್ಲ ಎಂದ ಟ್ರಂಪ್| ದ್ವಿಪಕ್ಷೀಯ ವ್ಯಾಪಾರದಲ್ಲಿ ಅಮೆರಿಕದ ಬಿಗು ನಿಲುವಿನ ಕುರಿತು ಪರೋಕ್ಷ ಸಂದೇಶ| ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಭರವಸೆ ಇದೆ ಎಂದ ಟ್ರಂಪ್|
ವಾಷಿಂಗ್ಟನ್(ಫೆ.19): ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಭೇಟಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಅಮೆರಿಕ ಅಧ್ಯಕ್ಷರ ಭವ್ಯ ಸ್ವಾಗತಕ್ಕೆ ಭಾರತ ಸಜ್ಜಾಗಿ ಕುಳಿತಿದೆ.
ಆದರೆ ಭಾರತಕ್ಕೂ ಬರುವ ಮೊದಲೇ ಭಾರತದ ಕುರಿತು ನಕಾರಾತ್ಮಕ ಹೇಳಿಕೆ ನೀಡಿರುವ ಡೋನಾಲ್ಡ್ ಟ್ರಂಪ್, ದ್ವಿಪಕ್ಷೀಯ ವ್ಯಾಪಾರದಲ್ಲಿ ಅಮೆರಿಕದ ಬಿಗು ನಿಲುವಿನ ಕುರಿತು ಪರೋಕ್ಷ ಸಂದೇಶ ಕಳುಹಿಸಿದ್ದಾರೆ.
ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಮೆರಿಕದೊಂದಿಗೆ ಭಾರತ ಅಷ್ಟು ನ್ಯಾಯಯುತವಾಗಿ ವರ್ತಿಸಿಲ್ಲ ಎಂದು ಹೇಳಿರುವ ಟ್ರಂಪ್, ಅವರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
3 ಗಂಟೆ ಇರಲಿರುವ ಟ್ರಂಪ್‌ಗಾಗಿ 100 ಕೋಟಿ ರೂ. ಖರ್ಚು ಮಾಡಿದ ಸರ್ಕಾರ!
ಈ ಕುರಿತು ವೈಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ದ್ವಿಪಕ್ಷೀಯ ವ್ಯಾಪಾರದಲ್ಲಿ ಅಮೆರಿಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತ ನಮ್ಮನ್ನು ಅಷ್ಟೊಂದು ಸರಿಯಾಗಿ ಉಪಚರಿಸಿಲ್ಲ ಎಂಬುದು ಸತ್ಯ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಭರವಸೆ ಇಟ್ಟು ಹೊಸ ಒಪ್ಪಂದಗಳಿಗೆ ಮುಂದಡಿ ಇಡಲಾಗುವುದು ಎಂದು ಟ್ರಂಪ್ ಹೇಳಿದರು.
ಫೇಸ್ಬುಕ್ ನಂಬರ್ 2 ಮೀಟ್ ಆಗಲು ಉತ್ಸುಕನಾಗಿದ್ದೇನೆ ಎಂದ ನಂಬರ್ 1!
ಭಾರತದೊಂದಿಗೆ ಐತಿಹಾಸಿಕ ವಾಣಿಜ್ಯ ಒಪ್ಪಂದಗಳು ಏರ್ಪಡುವ ಸಾಧ್ಯತೆ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಮುಂದಿನ ಅಧ್ಯಕ್ಷೀಯ ಚುನಾವಣೆಗಳ ಬಳಿಕವಷ್ಟೇ ಈ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ.