ಯಾದಗಿರಿ[ನ.6]: ಡಿಸೆಂಬರ್ ತಿಂಗಳ ನಂತರ ಸಿಎಂ ಬಿ.ಎಸ್. ಯಡಿಯೂರಪ್ಪ ಹುದ್ದೆ ಖಾಲಿಯಾಗಲಿದೆ ಎಂದು ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರು ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಭಾರತೀಯ ಜನತಾ ಪಕ್ಷದಲ್ಲಿ ಪಕ್ಷದಲ್ಲಿ ಕ್ಷೇಮ ವಿಲ್ಲ. ಯಡಿಯೂರಪ್ಪನವರಿಗೆ ಹೈಕಮಾಂಡ್ ಎರಡು ತಿಂಗಳು ಗ್ರೇಸ್ ಪಿರೇಡ್ ಕೊಟ್ಟಿದ್ದಾರೆ. ಬಿಜೆಪಿ ಹೈ ಕಮಾಂಡ ಯಡಿಯೂರಪ್ಪನವರನ್ನ ಕೆಳಗಿಳಿಯುವಂತೆ ಸೂಚಿಸಿದೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿಮ್ಮನ್ನು ಗೌರವಯುತವಾಗಿ ನಿಮ್ಮನ್ನ ಕೇರಳದ ರಾಜ್ಯಪಾಲರನ್ನಾಗಿಸುತ್ತೇವೆ ಎಂದು ಯಡಿಯೂರಪ್ಪನವರಿಗೆ ಹೈಕಮಾಂಡ್ ತಿಳಿಸಿದೆ.  ಬಿಎಸ್ ವೈ ಅವರ ಪುತ್ರ ವಿಜಯೇಂದ್ರರನ್ನ ಎಮ್ ಎಲ್ ಸಿ ಮಾಡಿ ಮಂತ್ರಿ ಸ್ಥಾನ ನೀಡಲಿದ್ದಾರೆ ಎಂದು ಹೇಳಿದ್ದಾರೆ. 

ನವೆಂಬರ್ 06ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;