ಉಕ್ರೇನ್‌ನಲ್ಲಿ ಶಾಂತಿ ನೆಲೆಸುವುದಾದರೆ ಅಥವಾ ಉಕ್ರೇನ್ ನ್ಯಾಟೋ ರಾಷ್ಟ್ರಗಳ ಭಾಗವಾದಲ್ಲಿ ರಾಜೀನಾಮೆ ನೀಡಲು ಸಿದ್ಧ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಮಾಡುವ ಮುನ್ನ ಝೆಲೆನ್ಸ್ಕಿ ಈ ಹೇಳಿಕೆ ನೀಡಿದ್ದಾರೆ. ಉಕ್ರೇನ್‌ನ ಭದ್ರತೆಯ ಬಗ್ಗೆ ಗಮನ ನೀಡಿದ್ದೇನೆ, ದಶಕಗಳ ಕಾಲ ಅಧಿಕಾರದಲ್ಲಿರೋದಿಲ್ಲ ಎಂದಿದ್ದಾರೆ.
ನವದೆಹಲಿ (ಫೆ.24): ಉಕ್ರೇನ್‌ನಲ್ಲಿ ಶಾಂತಿ ನೆಲೆಸುವುದಾದರೆ ಅಥವಾ ಉಕ್ರೇನ್ ನ್ಯಾಟೋ ರಾಷ್ಟ್ರಗಳ ಭಾಗವಾದಲ್ಲಿ ಅದಕ್ಕೆ ನನ್ನ ರಾಜೀನಾಮೆ ಬೇಕಿದ್ದರೂ ಕೊಡಲು ಸಿದ್ದ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾನುವಾರ ಹೇಳಿದ್ದಾರೆ. ಅಧ್ಯಕ್ಷ ಟ್ರಂಪ್ ಮತ್ತು ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ನಡುವಿನ ಸಂಭಾವ್ಯ ಶೃಂಗಸಭೆಗೆ ಮುಂಚಿತವಾಗಿ ಅಮೆರಿಕ ಮತ್ತು ರಷ್ಯಾದ ಅಧಿಕಾರಿಗಳು ಯುದ್ಧದ ಕುರಿತು ಮಾತುಕತೆ ನಡೆಸುತ್ತಿರುವಾಗ, ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಮಾಡುವ ಮುನ್ನ ಝೆಲೆನ್ಸ್ಕಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆ ಮಾಡಲು ಹಾಗೇನಾದರೂ ನನ್ನ ಸ್ಥಾನಕ್ಕೆ ನಾನು ರಾಜೀನಾಮೆ ನೀಡಬೇಕಿದ್ದರೂ, ಅದಕ್ಕೆ ನಾನು ಸಿದ್ಧ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. 2019ರಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಲ್ಲಿ ಉಕ್ರೇನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಝೆಲೆನ್ಸ್ಕಿ ಭಾನುವಾರ ಈ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರ ನೀಡಿದರು.
ಹಾಗೇನಾದರೂ ಉಕ್ರೇನ್ ನ್ಯಾಟೋ ರಾಷ್ಟ್ರವಾಗುತ್ತದೆ ಎಂದಾದರೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ಸಿದ್ದ ಎಂದಿದ್ದಾರೆ.ಉಕ್ರೇನ್‌ನ ನಾಯಕ "ಚುನಾವಣೆಗಳಿಲ್ಲದ ಸರ್ವಾಧಿಕಾರಿ" ಎಂಬ ಟ್ರಂಪ್ ಅವರ ಹೇಳಿಕೆಯನ್ನು ಝೆಲೆನ್ಸ್ಕಿ ತಳ್ಳಿಹಾಕಿದರು. 2024ರಲ್ಲಿ ಉಕ್ರೇನ್‌ನ ಚುನಾವಣೆಯನ್ನು ಮುಂದೂಡಿಕೆ ಮಾಡಿದ ಬೆನ್ನಲ್ಲಿಯೇ ಟ್ರಂಪ್ ಈ ಹೇಳಿಕೆ ನೀಡಿದ್ದರು.
ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಅದರೆ, ಸರ್ವಾಧಿಕಾರಿಯಾಗಿದ್ದರೆ ಅಸಮಾಧಾನ ಆಗುತ್ತಿತ್ತು. ಉಕ್ರೇನ್ ಭದ್ರತೆಯ ಬಗ್ಗೆ ನಾನು ಗಮನ ನೀಡಿದ್ದೇನೆ. ನಾನೇನು ದಶಕಗಳ ಕಾಲ ಅಧಿಕಾರದಲ್ಲಿರೋದಿಲ್ಲ ಎಂದು ತಿಳಿಸಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ಯುದ್ಧದಿಂದಾಗಿ ಉಕ್ರೇನ್‌ನ ಸಂವಿಧಾನವು "2022 ರಲ್ಲಿ ಪರಿಚಯಿಸಲಾದ ಮತ್ತು ಜಾರಿಯಲ್ಲಿರುವ ಸಮರ ಕಾನೂನಿನ ಸಮಯದಲ್ಲಿ ರಾಷ್ಟ್ರೀಯ ಚುನಾವಣೆಗಳನ್ನು ಅನುಮತಿಸುವುದಿಲ್ಲ" ಎಂದು ಅಟ್ಲಾಂಟಿಕ್ ಕೌನ್ಸಿಲ್ ಥಿಂಕ್ ಟ್ಯಾಂಕ್ ತಿಳಿಸಿದೆ. ಇನ್ನೊಂದೆಡೆ NATO ದಲ್ಲಿ ಉಕ್ರೇನ್‌ನ ಸಂಭಾವ್ಯ ಸದಸ್ಯತ್ವವು ವರ್ಷಗಳಿಂದ ಕೈವ್ ಮತ್ತು ಮಾಸ್ಕೋ ಅಧಿಕಾರಿಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ.
ರಷ್ಯಾ ಸಂಘರ್ಷ: ಉಕ್ರೇನ್ ಶಾಂತಿ ಸಮ್ಮೇಳನಕ್ಕೆ ಭಾರತಕ್ಕೆ ಜೆಲೆನ್‌ಸ್ಕಿ ಆಹ್ವಾನ
ಪುಟಿನ್ ಈ ವಿಷಯವನ್ನು ಭಾಗಶಃ ತನ್ನ ಪಡೆಗಳು ಉಕ್ರೇನ್‌ನ ಮೇಲೆ ಆಕ್ರಮಣ ಮಾಡುವುದನ್ನು ಸಮರ್ಥಿಸಿಕೊಳ್ಳಲು ಬಳಸಿಕೊಂಡರು, ಆದರೆ ಝೆಲೆನ್ಸ್ಕಿ NATO ಸದಸ್ಯತ್ವವನ್ನು ತನ್ನ ದೇಶದ ದೀರ್ಘಕಾಲೀನ ಭದ್ರತೆಯ ಅತ್ಯಗತ್ಯ ಖಾತರಿಯಾಗಿ ನೋಡಿದ್ದಾರೆ. ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಉಕ್ರೇನ್ NATO ಗೆ ಸೇರುವುದು ರಷ್ಯಾದೊಂದಿಗೆ "ಮಾತುಕತೆಯ ಇತ್ಯರ್ಥದ ವಾಸ್ತವಿಕ ಫಲಿತಾಂಶ" ಅಲ್ಲ ಎಂದು ಹೇಳಿದ್ದಾರೆ.
'ಯುದ್ಧದಲ್ಲಿ ಮಕ್ಕಳ ಸಾವು ಸಹಿಸಲಾಗದು..' ಝೆಲೆನ್ಸ್ಕಿ ಭೇಟಿ ಮಾಡಿದ ಬಳಿಕ ಪಿಎಂ ಮೋದಿ ಮಾತು!
