ಭಾರತ, ಮೋದಿ ಪರ ಮಾತನಾಡುತ್ತಿದ್ದ ೧೨ ಪಾಕಿಸ್ತಾನಿ ಯೂಟ್ಯೂಬರ್‌ಗಳನ್ನು ಗಲ್ಲಿಗೇರಿಸಲಾಗಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಶೋಯೆಬ್ ಚೌಧರಿ ೨೧ ದಿನಗಳ ನಂತರ ಪ್ರತ್ಯಕ್ಷರಾಗಿ, ಪಾಕ್ ಸೇನೆಯ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. ಉಳಿದವರ ಸ್ಥಿತಿ ಅಸ್ಪಷ್ಟ. ಪತ್ರಕರ್ತೆ ಅರ್ಜೂ ಕಾಜ್ಮಿ ಗಲ್ಲಿಗೇರಿಸುವಿಕೆಯ ಸುದ್ದಿಯನ್ನು ತಳ್ಳಿಹಾಕಿದ್ದಾರೆ.
ಪಾಕಿಸ್ತಾನಿ ಯೂಟ್ಯೂಬರ್ ಶೋಯೆಬ್ ಚೌಧರಿ ಮತ್ತು ಸನಾ ಅಮ್ಜದ್ ಸೇರಿದಂತೆ ಭಾರತ ಮತ್ತು ಮೋದಿ ಪರವಾಗಿ ಮಾತನಾಡುವ 12 ಪಾಕಿಸ್ತಾನದ ಯೂಟ್ಯೂಬರ್ಸ್ ಪಾಕಿಸ್ತಾನದ ಸೇನೆ ಗಲ್ಲಿಗೆ ಏರಿಸಿದೆ ಎಂದು ಹಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಯಾಗುತ್ತಿದೆ. ಏಕೆಂದರೆ ಮುಖ್ಯವಾಗಿ ಶೇಯೆಬ್ ಮತ್ತು ಸನಾ ಅವರಿಗೆ ಇರುವ ಲಕ್ಷಾಂತರ ಅಭಿಮಾನಿಗಳ ಪೈಕಿ ಭಾರತೀಯರೇ ಹೆಚ್ಚು. ಇವರ ವಿಡಿಯೋಗಳು ಭಾರತದಲ್ಲಿಯೇ ಹೆಚ್ಚು ವೀಕ್ಷಣೆಗೆ ಒಳಗಾಗುವುದು ಇದೆ. ಪಾಕಿಸ್ತಾನವನ್ನು ಭಾರತದ ಜೊತೆ ಹೋಲಿಕೆ ಮಾಡುತ್ತಾ, ಪಾಕ್ನ ಇಂದಿನ ಸ್ಥಿತಿ, ಶಿಕ್ಷಣದ ಮಟ್ಟ, ಭಾರತದ ಸಾಧನೆ, ಆರ್ಥಿಕ ವ್ಯವಸ್ಥೆ, ಅದರಲ್ಲಿಯೂ ಹೆಚ್ಚಾಗಿ ಪ್ರಧಾನಿ ಮೋದಿ ಅವರ ಆಡಳಿತದ ವೈಖರಿಯನ್ನೇ ಈ ಇಬ್ಬರು ಯೂಟ್ಯೂಬರ್ಸ್ ಪ್ರತಿನಿತ್ಯವೂ ವಿವರಿಸುತ್ತಲೇ ಬಂದಿದ್ದಾರೆ. ಪಾಕಿಸ್ತಾನದ ಕೆಲವು ಜನರು ಕೂಡ, ಇವರಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಭಾರತದ ಗುಣಗಾನ ಮಾಡುವುದೂ ಇದೆ.
ಇವರಿಬ್ಬರನ್ನು ಅನುಸರಿಸಿ ಪಾಕ್ನ ಹಲವು ಯೂಟ್ಯೂಬರ್ಗಳು ಭಾರತದ ಗುಣಗಾನ ಮಾಡುತ್ತಲೇ, ತಮ್ಮ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಆದರೆ ಕಳೆದ 21 ದಿನಗಳಿಂದ ಈ 12 ಯೂಟ್ಯೂಬರ್ಗಳು ಏಕಾಏಕಿ ನಾಪತ್ತೆಯಾಗಿದ್ದಾರೆ! ಅವರ ಒಂದೂ ವಿಡಿಯೋಗಳೂ ಅಪ್ಲೋಡ್ ಆಗದೇ ಇರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತ್ತು. ಕೊನೆಗೆ ಈ 12 ಮಂದಿಯನ್ನೂ ಪಾಕ್ ಸೇನೆ ಗಲ್ಲಿಗೆ ಏರಿಸಿದೆ ಎಂದು ಸುದ್ದಿಯಾಯಿತು. ಬಳಿಕ 12 ಮಂದಿಯನ್ನು ಅಲ್ಲ, ಬದಲಿಗೆ ಶೋಯೆಬ್ ಚೌಧರಿ ಮತ್ತು ಸನಾ ಅವರನ್ನು ಗಲ್ಲಿಗೆ ಏರಿಸಲಾಗಿದೆ ಎಂದೇ ಈಗಲೂ ಸುದ್ದಿಯಾಗುತ್ತಲೇ ಇದೆ.
ಆದರೆ ಇದರ ನಡುವೆಯೇ, ಶೋಯೆಬ್ ಅವರು 21 ದಿನಗಳ ಬಳಿಕ ಇಂದು ನೇರಪ್ರಸಾರದಲ್ಲಿ ಕಾಣಿಸಿಕೊಂಡಿದ್ದು, ಪಾಕ್ ಸೇನೆ ತಮಗೆ ನೀಡಿರುವ ಕಿರುಕುಳಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಉಳಿದವರು ಏನಾದರೂ ಎನ್ನುವ ಮಾಹಿತಿ ಇನ್ನೂ ಇಲ್ಲ! ಇದೀಗ ಶೋಯೆಬ್ ಅವರು, ತಮ್ಮ ಯೂಟ್ಯೂಬ್ ಚಾನೆಲ್ ದಿ ರಿಯಲ್ ಎಂಟರ್‌ಟೈನ್‌ಮೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತೀವ್ರ ಕೋಪದಲ್ಲಿ ಇರುವ ಅವರು, ಕಳೆದ 21 ದಿನಗಳಲ್ಲಿ ತನಗೆ ಸಂಭವಿಸಿದ ಹಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ.
ಸಿಕ್ಕಿಬೀಳಬಾರ್ದೆಂದು ಅಮೂಲ್ಯ ವಸ್ತುಗಳ ಇಲ್ಲೆಲ್ಲಾ ಅಡಗಿಸ್ತಾರಾ? ಈ ವೈರಲ್ ವಿಡಿಯೋ ನೋಡಿದ್ರೆ ಸುಸ್ತಾಗೋಗ್ತೀರಾ!
ಪಾಕಿಸ್ತಾನ ಪೊಲೀಸರು ರಾತ್ರಿ 2 ಗಂಟೆಗೆ ತಮ್ಮ ಮನೆಗೆ ನುಗ್ಗಿ ಕರೆದುಕೊಂಡು ಹೋದರು. ಅಂದು ಕರೆದುಕೊಂಡು ಹೋಗಿರುವ ರೀತಿ ನೋಡಿ, ಮತ್ತೆ ವಾಪಸ್ ಬರುವೆ ಎನ್ನುವ ಸೂಚನೆ ಕಾಣಿಸಲಿಲ್ಲ. ಅಂದೇ ನನ್ನ ಅಂತ್ಯವಾಗುತ್ತದೆ ಎಂದು ಅಂದುಕೊಂಡಿದ್ದೆ. ಆದರೆ ನಾನು ವಾಪಸ್ ಬಂದಿದ್ದೇನೆ. ನನ್ನನ್ನು ಸಾಯಿಸಿದರು, ನನ್ನ ಶವ ಸಿಕ್ಕಿದೆ, ಗಲ್ಲಿಗೆ ಏರಿಸಿದರು ಎಂಬೆಲ್ಲಾ ಸುದ್ದಿ ಹರಿದಾಡುತ್ತಿರುವುದನ್ನು ನಾನು ನೋಡಿದ್ದೇನೆ. ಆದರೆ ಸದ್ಯದ ಸ್ಥಿತಿಯಲ್ಲಿ ಬದುಕಿದ್ದೇನೆ. ಹಾಗೆಂದು ನಾನು ಸುಮ್ಮನೇ ಕುಳಿತುಕೊಳ್ಳುವವನು ಅಲ್ಲ. ಪಾಕಿಸ್ತಾನಿ ಸೇನೆ ಮತ್ತು ಪೊಲೀಸ್ ಆಡಳಿತವನ್ನು ಖಂಡಿಸುವುದನ್ನು ಮುಂದುವರೆಸುತ್ತೇನೆ. ಪಾಕಿಸ್ತಾನಿ ಸೇನೆ ಏನಾದರೂ ತಪ್ಪು ಮಾಡಿದಾಗಲೆಲ್ಲಾ ಅದನ್ನು ಬಹಿರಂಗಪಡಿಸುತ್ತೇನೆ. ಪಾಕ್ನಲ್ಲಿ ಯಾವುದೇ ತಪ್ಪು ಸಂಭವಿಸುವುದನ್ನು ನಾನು ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ಅವರು ನನ್ನನ್ನು ಏನು ಬೇಕಾದರೂ ಮಾಡಿಕೊಳ್ಳಲಿ ಎಂದಿದ್ದಾರೆ. ನನಗೆ ಅತಿಹೆಚ್ಚು ಫಾಲೋವರ್ಸ್ ಇರುವುದನ್ನು ನೋಡಿ ಪಾಕ್ ಸೇನೆ ಸಹಿಸಿಕೊಳ್ಳುತ್ತಿಲ್ಲ. ಯುವಕ- ಯುವತಿಯನ್ನು ಒಟ್ಟುಗೂಡಿಸಿ ಎಲ್ಲಿ ಪಾಲಿಟಿಕಲ್ ಪಾರ್ಟಿ ಶುರು ಮಾಡಿಬಿಡುತ್ತೇನೋ ಎನ್ನುವ ಭಯ ಅವರಿಗೆ ಎಂದಿದ್ದಾರೆ ಶೋಯೆಬ್.
ಆದರೆ ಉಳಿದವರ ಸ್ಥಿತಿ ಏನಾಗಿದೆ ಎನ್ನುವುದು ತಿಳಿದಿಲ್ಲ. ಆದರೆ, ಈ ನಡುವೆಯೇ, ಗಲ್ಲಿಗೇರಿಸಿರುವ ಸುದ್ದಿಯನ್ನು ಪಾಕಿಸ್ತಾನಿ ಪತ್ರಕರ್ತೆ ಅರ್ಜೂ ಕಾಜ್ಮಿ ನಿರಾಕರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಇದು ಸುಳ್ಳು ಸುದ್ದಿ. ಯೂಟ್ಯೂಬರ್‌ಗಳನ್ನು ಗಲ್ಲಿಗೆ ಏರಿಸಿಲ್ಲ, ಬದಲಿಗೆ ಕಠಿಣ ಕ್ರಮ ಕೈಗೊಂಡಿದೆ ಅಷ್ಟೇ ಎಂದಿದ್ದಾರೆ. ತಮಗೂ ಹೀಗೆಯೇ ಕರೆ ಬಂದಿತ್ತು. ಜನವರಿ 1ರಂದು ಪಾಕಿಸ್ತಾನಿ ತನಿಖಾ ಸಂಸ್ಥೆ ಎಫ್‌ಐಎ ನನಗೆ ಕರೆ ಕೊಟ್ಟಿತ್ತು. ನನ್ನ ಮೇಲೆ ಅವರು ಭಯಂಕರ ಸಿಟ್ಟಾಗಿದ್ದಾರೆ ಎಂದು ತಿಳಿದಿತ್ತು. ಆದರೆ ವಿಷಯ ಮಾತ್ರ ಗೊತ್ತಿರಲಿಲ್ಲ. ನಾನೋರ್ವ ಪತ್ರಕರ್ತೆ. ಇರುವ ವಿಷಯವನ್ನು ಇದ್ದ ಹಾಗೆಯೇ ಹೇಳುತ್ತೇನೆ, ನಾನು ಸುದ್ದಿ ಆಧರಿತ ಕಾರ್ಯಕ್ರಮಗಳನ್ನು ಮಾತ್ರ ಮಾಡುವವಳು. ಆದರೆ ಪಾಕಿಸ್ತಾನ ಸರ್ಕಾರಕ್ಕೆ ನಮ್ಮ ಸತ್ಯ ಕಹಿ ಆಗುತ್ತಿದೆ ಎಂದಿದ್ದಾರೆ.
ನಿರ್ಮಾಪಕರಿಗಾಗಿ ಸ್ನಾನದ ವಿಡಿಯೋ ಲೀಕ್ ಮಾಡಿದ್ದೆ, ಆದ್ರೆ... ಊರ್ವಶಿ ರೌಟೇಲಾ ಶಾಕಿಂಗ್ ಸುದ್ದಿ ರಿವೀಲ್!

